ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹ್ಯೂಸ್ಟನ್, ಟೆಕ್ಸಾಸ್ ನಲ್ಲಿ ಸಿಖ್ ಸಮುದಾಯದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಪ್ರಧಾನಮಂತ್ರಿಯವರಿಗೆ ಸಮುದಾಯದ ಸದಸ್ಯರು ಆತ್ಮೀಯ ಸ್ವಾಗತ ಕೋರಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹ್ಯೂಸ್ಟನ್, ಟೆಕ್ಸಾಸ್ ನಲ್ಲಿ ಸಿಖ್ ಸಮುದಾಯದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಪ್ರಧಾನಮಂತ್ರಿಯವರಿಗೆ ಸಮುದಾಯದ ಸದಸ್ಯರು ಆತ್ಮೀಯ ಸ್ವಾಗತ ಕೋರಿದರು.

ಈ ಸಂವಾದದ ವೇಳೆ, ಸಮುದಾಯದ ಸದಸ್ಯರು, ಸಿಖ್ ಸಮುದಾಯ ಮತ್ತು ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಭಾರತ ಸರ್ಕಾರ ಕೈಗೊಂಡಿರುವ ಮಹತ್ವದ ಹೆಜ್ಜೆಗಳಿಗಾಗಿ ಧನ್ಯವಾದ ಅರ್ಪಿಸಿದರು.

“ನಾನು ಹ್ಯೂಸ್ಟನ್ ನಲ್ಲಿ ಸಿಖ್ ಸಮುದಾಯದವರೊಂದಿಗೆ ಅದ್ಭುತವಾದ ಮಾತುಕತೆ ನಡೆಸಿದೆ. ಭಾರತದ ಅಭಿವೃದ್ಧಿಯ ಬಗ್ಗೆ ಅವರಿಗಿರುವ ಕಾಳಜಿ ನನಗೆ ಸಂತಸ ಉಂಟು ಮಾಡಿತು!”, ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹ್ಯೂಸ್ಟನ್, ಟೆಕ್ಸಾಸ್ ನಲ್ಲಿ ದಾವೂದಿ ಬೋಹ್ರಾ ಸಮುದಾಯದ ಸದಸ್ಯರನ್ನು ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸಿದರು.

ಹ್ಯೂಸ್ಟನ್ ನಲ್ಲಿ ಸಮುದಾಯದ ಸದಸ್ಯರು ಪ್ರಧಾನಮಂತ್ರಿಯವರಿಗೆ ಸನ್ಮಾನ ಮಾಡಿದರು. ಸಂವಾದದ ವೇಳೆ, ದಾವೂದಿ ಬೋಹ್ರಾ ಸಮುದಾಯದ ಸದಸ್ಯರು ಸೈದಾನಾ ಸಾಹೀಬ್ ಜೊತೆಗೆ ಪ್ರಧಾನಮಂತ್ರಿಯವರು ಹೊಂದಿರುವ ನಂಟನ್ನು ಪ್ರಸ್ತಾಪಿಸಿದರು. ಕಳೆದ ವರ್ಷ ತಮ್ಮ ಸಮುದಾಯದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಂದೋರ್ ಗೆ ನರೇಂದ್ರ ಮೋದಿ ಅವರು ಆಗಮಿಸಿದ್ದನ್ನು ಅವರು ಸ್ಮರಿಸಿದರು.

ಸಂವಾದದ ಬಳಿಕ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು, ದಾವೂದಿ ಬೋಹ್ರಾ ಸಮುದಾಯ ವಿಶ್ವಾದ್ಯಂತ ಗೌರವ ಹೊಂದಿದೆ. ಹ್ಯೂಸ್ಟನ್ ನಲ್ಲಿ ನನಗೆ ಅವರೊಂದಿಗೆ ಕೆಲ ಸಮಯ ಕಳೆಯುವ ಮತ್ತು ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಮಾತನಾಡುವ ಅವಕಾಶ ದೊರೆಯಿತು..”

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹ್ಯೂಸ್ಟನ್, ಟೆಕ್ಸಾಸ್ ನಲ್ಲಿ ಕಾಶ್ಮೀರಿ ಪಂಡಿತರ ನಿಯೋಗವನ್ನು ಭೇಟಿ ಮಾಡಿದರು.

ಈ ಸಂವಾದದ ವೇಳೆ, ಸಮದಾಯದ ಸದಸ್ಯರು, ಭಾರತದ ಪ್ರಗತಿಗೆ ಮತ್ತು ಪ್ರತಿಯೊಬ್ಬ ಭಾರತೀಯನ ಸಬಲೀಕರಣಕ್ಕೆ ಕೈಗೊಳ್ಳಲಾಗುತ್ತಿರುವ ಕ್ರಮಗಳಿಗೆ ಬೆಂಬಲ ವ್ಯಕ್ತಪಡಿಸಿದರು.

 

“ನಾನು ಕಾಶ್ಮೀರಿ ಪಂಡಿತರೊಂದಿಗೆ ಹ್ಯೂಸ್ಟನ್ ನಲ್ಲಿ ವಿಶೇಷವಾಗಿ ಸಂವಾದ ನಡೆಸಿದ್ದೇನೆ ಎಂದು ಸಂವಾದದ ಬಳಿಕ ಪ್ರಧಾನಿ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Year Ender 2025: Major Income Tax And GST Reforms Redefine India's Tax Landscape

Media Coverage

Year Ender 2025: Major Income Tax And GST Reforms Redefine India's Tax Landscape
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಡಿಸೆಂಬರ್ 2025
December 29, 2025

From Culture to Commerce: Appreciation for PM Modi’s Vision for a Globally Competitive India