ಶೇರ್
 
Comments
ಒಂದಡೆ ಸಶಸ್ತ್ರಪಡೆಗಳನ್ನು ಇನ್ನೂ ಬಲಿಷ್ಠಗೊಳಿಸಲು ಪ್ರಯತ್ನಿಸುತ್ತಿದೆ, ಆದರೆ ಇನ್ನೊಂದಡೆ ಕೆಲವರು ಸಶಸ್ತ್ರಪಡೆಗಳು ಬಲಿಷ್ಠವಾಗಿರುವುದನ್ನು ಬಯಸುವುದಿಲ್ಲ ಎಂದು ಪ್ರಧಾನಮಂತ್ರಿ ಅವರು ಹೇಳಿದರು
"ದೇಶದ ಸುರಕ್ಷಿತತೆಯ ವಿಷಯ ಬಂದಾಗ ಮತ್ತು ಸಶಸ್ತ್ರ ಪಡೆಗಳ ಅಗತ್ಯತೆ ಕಾಣಿಸಿದಾಗ, ಕೇಂದ್ರ ಸರಕಾರವು ಕೇವಲ ದೇಶದ ಹಿತದೃಷ್ಠಿಯನ್ನು ಮಾತ್ರ ಯೋಚಿಸುತ್ತದೆ :ಪ್ರಧಾನಮಂತ್ರಿ "
"ಯಾರೂ ಕೇವಲ ಸುಳ್ಳನ್ನೇ ಬಂಡವಾಳವಾಗಿಸಿಕೊಂಡು ವ್ಯವಹರಿಸುತ್ತಾರೋ, ಅವರು ವಿದೇಶದ ಸರಕಾರಗಳೂ ಸೇರಿದಂತೆ, ನಮ್ಮ ಸಶಸ್ತ್ರ ಪಡೆಗಳ, ಮತ್ತು ರಕ್ಷಣಾ ಸಚಿವಾಲಯದ ಆಶೋತ್ತರಗಳನ್ನು ಬಳಸಿಕೊಳ್ಳುತ್ತಾರೆ :ಪ್ರಧಾನಮಂತ್ರಿ "

ಉತ್ತರಪ್ರದೇಶಕ್ಕೆ ಒಂದು ದಿನದ ಭೇಟಿ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಯ್ ಬರೇಲಿಯ ಅತ್ಯಾಧುನಿಕ ಬೋಗಿ ನಿರ್ಮಾಣ ಕಾರ್ಖಾನೆ(ಮೊಡರ್ನ್ ಕೋಚ್ ಫ್ಯಾಕ್ಟರಿ)ಗೆ ಭೇಟಿ ನೀಡಿದರು. ಸಾರ್ವಜನಿಕ ಸಮಾರಂಭದಲ್ಲಿ ಹಂಸಫರ್ ರಾಕ್ ಮತ್ತು 900ನೇ ಕೋಚ್ ಗಳಿಗೆ ಅವರು ಹಸಿರು ನಿಶಾನೆ ತೋರಿದರು. ರಾಯ್ ಬರೇಲಿಯಲ್ಲಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳ ದೇಶಾರ್ಪಣೆ, ಉದ್ಘಾಟನೆ ಅಥವಾ ಶಂಕುಸ್ಥಾಪನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇಂದು ದೇಶಾರ್ಪಣೆ, ಉದ್ಘಾಟನೆ ಅಥವಾ ಶಂಕುಸ್ಥಾಪನೆಯಾಗಿರುವ ಯೋಜನೆಗಳು ಒಟ್ಟಾಗಿ ಸುಮಾರು 1000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ್ದಾಗಿವೆ ಎಂದು ಹೇಳಿದರು.

ಅತ್ಯಾಧುನಿಕ ಬೋಗಿ ನಿರ್ಮಾಣ ಕಾರ್ಖಾನೆ(ಮಾಡರ್ನ್ ಕೋಚ್ ಫ್ಯಾಕ್ಟರಿ) ಯುವಜನತೆಗೆ ಉದ್ಯೋಗ ಕಲ್ಪಿಸುತ್ತದೆ ಮತ್ತು ರಾಯ್ ಬರೇಲಿಯನ್ನು ರೈಲ್ವೇಕೋಚ್ ನಿರ್ಮಾಣದ ಜಾಗತಿಕ ಕೇಂದ್ರಸ್ಥಾನವನ್ನಾಗಿ ಮಾಡಲಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

1971ರ ಆ ಪ್ರಕ್ಷುಬ್ಧ ಪರಿಸ್ಥಿತಿಯ ದಿನಗಳನ್ನು ಪ್ರಧಾನಮಂತ್ರಿ ಅವರು ನೆನಪಿಸಿಕೊಂಡರು. ಅಂದಿನ ಶಾಸನೋಲ್ಲಂಘನೆ , ದೌರ್ಜನ್ಯತೆ ಮತ್ತು ಉಗ್ರತೆ ಮುಂತಾದವುಗಳನ್ನು ಭಾರತೀಯ ಸೇನೆ ಸೋಲಿಸಿದೆ. ಇಂದು ಸರಕಾರವು ಒಂದಡೆ ಸಶಸ್ತ್ರಪಡೆಗಳನ್ನು ಇನ್ನೂ ಬಲಿಷ್ಠಗೊಳಿಸಲು ಪ್ರಯತ್ನಿಸುತ್ತಿದೆ, ಆದರೆ ಇನ್ನೊಂದಡೆ ಕೆಲವರು ಸಶಸ್ತ್ರಪಡೆಗಳು ಬಲಿಷ್ಠವಾಗಿರುವುದನ್ನು ಬಯಸುವುದಿಲ್ಲ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಯಾರೂ ಕೇವಲ ಸುಳ್ಳನ್ನೇ ಬಂಡವಾಳವಾಗಿಸಿಕೊಂಡು ವ್ಯವಹರಿಸುತ್ತಾರೋ, ಅವರು ವಿದೇಶದ ಸರಕಾರಗಳೂ ಸೇರಿದಂತೆ, ನಮ್ಮ ಸಶಸ್ತ್ರ ಪಡೆಗಳ, ಮತ್ತು ರಕ್ಷಣಾ ಸಚಿವಾಲಯದ ಆಶೋತ್ತರಗಳನ್ನು ಬಳಸಿಕೊಳ್ಳುತ್ತಾರೆ. 

 

ಸುಳ್ಳಿನ ಕಂತೆಗಳನ್ನು ಸತ್ಯವು ಸದಾ ಮೆಟ್ಟಿನಿಲ್ಲುತ್ತದೆ. ದೇಶದ ಸುರಕ್ಷಿತತೆಯ ವಿಷಯ ಬಂದಾಗ ಮತ್ತು ಸಶಸ್ತ್ರ ಪಡೆಗಳ ಅಗತ್ಯತೆ ಕಾಣಿಸಿದಾಗ, ಕೇಂದ್ರ ಸರಕಾರವು ಕೇವಲ ದೇಶದ ಹಿತದೃಷ್ಠಿಯನ್ನು ಮಾತ್ರ ಯೋಚಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ರೈತರ ಆದಾಯ ಹೆಚ್ಚಳವಾಗುವಂತೆ ಮಾಡಲು ಕೇಂದ್ರ ಸರಕಾರ 22 ಬೆಳೆಗಳಿಗೆ ಈಗಾಗಲೇ ಕನಿಷ್ಠ ಬೆಂಬಲ ಬೆಲೆ(ಎಮ್.ಎಸ್.ಪಿ) ಯನ್ನು ಹೆಚ್ಚಿಸಿದೆ. ಕೇವಲ ಈ ಒಂದೇ ನಿರ್ಧಾರದಿಂದಾಗಿ ರೈತರಿಗೆ 60,000 ಕೋಟಿ ರೂಪಾಯಿ ಹೆಚ್ಚುವರಿಯಾಗಿ ದೊರೆಯಲಿದೆ. 

 

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಿಂದಾಗಿ ಮುಂಗಾಣದ ಅನಿರೀಕ್ಷತ ಕಾರಣಗಳಿಂದಾಗಿ ಬೆಳೆ ನಷ್ಟವಾದ ರೈತರಿಗೆ ಪ್ರಯೋಜನವಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

 

ಕೇಂದ್ರ ಸರಕಾರವು “ಎಲ್ಲರೊಂದಿಗೆ, ಎಲ್ಲರ ವಿಕಾಸಕ್ಕಾಗಿ ( ಸಬ್ಕಾ ಸಾತ್, ಸಬ್ಕಾ ವಿಕಾಸ್)” ಎಂಬ ತನ್ನ ಮಂತ್ರಕ್ಕೆ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

 

 

 

 

 

 

 

 

 

 

 

 

 

 

 

 

 

 

 

 

Click here to read full text speech

ದೇಣಿಗೆ
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
PM Modi named world’s most-admired Indian, Big B & SRK follow

Media Coverage

PM Modi named world’s most-admired Indian, Big B & SRK follow
...

Nm on the go

Always be the first to hear from the PM. Get the App Now!
...
Share your suggestions for PM Modi's Independence Day speech
July 18, 2019
ಶೇರ್
 
Comments

As India gears up to mark the Independence Day next month, here's an opportunity for you to be a part of the occasion and contribute towards nation building.

Share your innovative ideas and suggestions for the Prime Minister's speech. The PM may include some of the suggestions in his speech.

Share your thoughts in the comments section below.