Government is pushing growth and development of every individual and the country: PM Modi
Both the eastern and western dedicated freight corridors are being seen as a game changer for 21st century India: PM Modi
Dedicated Freight Corridors will help in the development of new growth centres in different parts of the country: PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 306 ಕಿ.ಮೀ. ಉದ್ದ ರೇವಾರಿ- ಮಾದಾರ್ ವಿಭಾಗದ ಪಶ್ಚಿಮ ಸಮರ್ಪಿತ ಸರಕು ಕಾರಿಡಾರ್ (ಡಬ್ಲ್ಯು.ಡಿ.ಎಫ್.ಸಿ.) ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶಕ್ಕೆ ಸಮರ್ಪಿಸಿದರು. ಇದೇ ವೇಳೆ ಅವರು ಎರಡು ಅಂತಸ್ತಿನ ಉದ್ದನೆಯ ಕಂಟೈನರ್ ರೈಲಿಗೆ ಈ ಮಾರ್ಗದಲ್ಲಿ ಚಾಲನೆ ನೀಡಿದರು. ರಾಜಾಸ್ಥಾನ ಮತ್ತು ಹರಿಯಾಣ ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯೆಲ್, ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಶ್ರೀ ಅರ್ಜುನ್ ರಾಮ್ ಮೇಘಾವಾಲ್, ಶ್ರೀ ಕೈಲಾಶ್ ಚೌಧರಿ, ಶ್ರೀ ರಾವ್ ಇಂದ್ರಜಿತ್ ಸಿಂಗ್, ಶ್ರೀ ರತನ್ ಲಾಲ್ ಕಟಾರಿಯಾ, ಶ್ರೀ ಕೃಷ್ಣನ್ ಪಾಲ್ ಗುರ್ಜಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ದೇಶದ ಮೂಲಸೌಕರ್ಯವನ್ನು ಆಧುನೀಕರಿಸುವ ಮಹಾ ಯಜ್ಞಕ್ಕೆ ಇಂದು ವೇಗ ದೊರೆತಿದೆ ಎಂದರು. ಕಳೆದ 12 ದಿನಗಳಲ್ಲಿ ದೇಶದ ಆಧುನೀಕರಣಕ್ಕೆ ಸರ್ಕಾರ, ರೈತರಿಗೆ ಡಿಬಿಟಿ, ವಿಮಾನ ನಿಲ್ದಾಣ ಎಕ್ಸ್ ಪ್ರೆಸ್ ಮಾರ್ಗದಲ್ಲಿ ರಾಷ್ಟ್ರೀಯ ಸಾರಿಗೆ ಕಾರ್ಡ್, ರಾಜಕೋಟ್ ಏಮ್ಸ್ ಉದ್ಘಾಟನೆ, ಐಐಎಂ ಸಂಬಾಲ್ ಪುರ, ಆರು ನಗರಗಳಲ್ಲಿ ಲೈಟ್ ಹೌಸ್ ಯೋಜನೆ, ರಾಷ್ಟ್ರೀಯ ಆಣ್ವಯಿಕ ಕಾಲಮಾನ ಮತ್ತು ಭಾರತೀಯ ನಿರ್ದೇಶಕ ದ್ರವ್ಯ, ರಾಷ್ಟ್ರೀಯ ಪರಿಸರ ಮಾನದಂಡ ಪ್ರಯೋಗಾಲಯ, ಕೋಚ್ಚಿ – ಮಂಗಳೂರು ಅನಿಲು ಕೊಳವೆ ಮಾರ್ಗ, 100ನೇ ಕಿಸಾನ್ ರೈಲು, ಪೂರ್ವ ಸಮರ್ಪಿತ ಸರಕು ಕಾರಿಡಾರ್ಗಳನ್ನು ಆರಂಭಿಸಿದೆ ಎಂದು ಯೋಜನೆಗಳ ಪಟ್ಟಿ ಮಾಡಿದರು. ಕೊರೊನಾ ಸಮಯದಲ್ಲೂ ದೇಶವನ್ನು ಆಧುನೀಕರಣಗೊಳಿಸಲು ಈ ಯೋಜನೆ ಆರಂಭಿಸಲಾಗಿದೆ ಎಂದರು.

 

ಭಾರತದಲ್ಲಿ ತಯಾರಾದ ಕೊರೊನಾ ಲಸಿಕೆಗೆ ಕೆಲವೇ ದಿನಗಳ ಹಿಂದೆ ಅನುಮೋದನೆ ದೊರೆತಿದ್ದು, ಜನರಲ್ಲಿ ಹೊಸ ಭರವಸೆ ಮೂಡಿಸಿದೆ ಎಂದರು. ಸಮರ್ಪಿತ ಸರಕು ಕಾರಿಡಾರ್ 21ನೇ ಶತಮಾನದಲ್ಲಿ ದೇಶಕ್ಕೆ ಮಹತ್ವಪೂರ್ಣವಾಗಲಿದೆ ಎಂದರು. ಹೊಸ ಭೌಪುರ್ - ಹೊಸ ಖುರ್ಜಾ ವಿಭಾಗವನ್ನು ಪ್ರಾರಂಭಿಸಿದಾಗಿನಿಂದ ಸರಕು ರೈಲಿನ ಸರಾಸರಿ ವೇಗವು ಆ ನಿರ್ದಿಷ್ಟ ವಿಭಾಗದಲ್ಲಿ ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ಹರಿಯಾಣದ ನ್ಯೂ ಅತೆಲಿಯಿಂದ ರಾಜಸ್ಥಾನದ ಹೊಸ ಕಿಶನ್‌ ಗಂಜ್ ವರೆಗಿನ ಮೊದಲ ಮಹಡಿ ಕಂಟೈನರ್ ಸರಕು ಸಾಗಣೆ ರೈಲಿನ ಸಂಚಾರಕ್ಕೆ ಹಸಿರು ನಿಶಾನೋ ತೋರುವುದರೊಂದಿಗೆ, ಭಾರತವು ವಿಶ್ವದ ಆಯ್ದ ರಾಷ್ಟ್ರಗಳ ಸಾಲಿಗೆ ಸೇರಿದೆ ಎಂದು ಅವರು ಹೇಳಿದರು. ಈ ಹೆಮ್ಮೆಯ ಸಾಧನೆಗಾಗಿ ಎಂಜಿನಿಯರ್‌ ಗಳು ಮತ್ತು ಅವರ ತಂಡದ ಪ್ರಯತ್ನವನ್ನು ಅವರು ಶ್ಲಾಘಿಸಿದರು.ಈ ಸಮರ್ಪಿತ ಸರಕು ಕಾರಿಡಾರ್ ಎಲ್ಲರಿಗೂ ಅದರಲ್ಲೂ ರಾಜಾಸ್ಥಾನದ ರೈತರಿಗೆ, ಉದ್ಯಮಿಗಳಿಗೆ ಮತ್ತು ವ್ಯಾಪಾರಸ್ಥರಿಗೆ ಹೊಸ ಭರವಸೆ ಮತ್ತು ಹೊಸ ಅವಕಾಶಗಳನ್ನು ತರಲಿದೆ ಎಂದರು. ಸಮರ್ಪಿತ ಸರಕು ಕಾರಿಡಾರ್ ಆಧುನಿಕ ಸರಕು ರೈಲುಗಳ ಮಾರ್ಗವಷ್ಟೇ ಅಲ್ಲ, ದೇಶದ ತ್ವರಿತ ಅಭಿವೃದ್ಧಿಯ ಕಾರಿಡಾರ್ ಕೂಡ ಆಗಲಿದೆ ಎಂದರು. ಈ ಕಾರಿಡಾರ್ ಗಳು ದೇಶದ ವಿವಿಧ ನಗರಗಳಲ್ಲಿ ಹೊಸ ಬೆಳವಣಿಗೆಯ ಕೇಂದ್ರಗಳು ಮತ್ತು ಬೆಳವಣಿಗೆಯ ಬಿಂದುಗಳ ಅಭಿವೃದ್ಧಿಗೆ ಆಧಾರವಾಗುತ್ತವೆ ಎಂದು ಅವರು ಹೇಳಿದರು.

ಪೂರ್ವ ಸರಕು ಕಾರಿಡಾರ್ ಸಹ ದೇಶದ ವಿವಿಧ ಭಾಗಗಳ ಶಕ್ತಿಯನ್ನು ಹೇಗೆ ಹೆಚ್ಚಿಸುತ್ತಿದೆ ಎಂಬುದನ್ನು ತೋರಿಸಲಾರಂಭಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪಶ್ಚಿಮ ಸರಕು ಕಾರಿಡಾರ್ ಹರಿಯಾಣ ಮತ್ತು ರಾಜಸ್ಥಾನದಲ್ಲಿ ಕೃಷಿ ಮತ್ತು ಸಂಬಂಧಿತ ವ್ಯವಹಾರವನ್ನು ಸುಲಭಗೊಳಿಸುತ್ತದೆ ಮತ್ತು ಮಹೇಂದ್ರಗಢ, ಜೈಪುರ, ಅಜ್ಮೀರ್ ಮತ್ತು ಸಿಕಾರ್‌ ನಂತಹ ನಗರಗಳಿಗೆ ಹೊಸ ಚೈತನ್ಯವನ್ನು ನೀಡುತ್ತದೆ ಎಂದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ವೇಗವಾದ ಪ್ರವೇಶವು ಈ ರಾಜ್ಯಗಳ ಉತ್ಪಾದನಾ ಘಟಕಗಳು ಮತ್ತು ಉದ್ಯಮಿಗಳಿಗೆ ಕಡಿಮೆ ವೆಚ್ಚದಲ್ಲಿ ಮುಕ್ತವಾಗುತ್ತದೆ. ಗುಜರಾತ್ ಮತ್ತು ಮಹಾರಾಷ್ಟ್ರ ಬಂದರುಗಳಿಗೆ ವೇಗವಾಗಿ ಮತ್ತು ಅಗ್ಗದ ದರದ ಸಂಪರ್ಕ ದೊರೆತು ಈ ಪ್ರದೇಶದಲ್ಲಿ ಹೊಸ ಹೂಡಿಕೆಯ ಅವಕಾಶಗಳನ್ನು ಹೆಚ್ಚಿಸುತ್ತದೆ ಎಂದರು.

 

ಆಧುನಿಕ ಮೂಲಸೌಕರ್ಯಗಳ ನಿರ್ಣಾಣ ಜೀವನ ಮತ್ತು ವ್ಯವಹಾರದಲ್ಲಿ ಹೊಸ ವ್ಯವಸ್ಥೆಗಳಿಗೆ ಕಾರಣವಾಗುತ್ತದೆ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯಗಳನ್ನು ವೇಗಗೊಳಿಸುವುದಲ್ಲದೆ ಆರ್ಥಿಕತೆಯ ಹಲವಾರು ಚಾಲಕ ಶಕ್ತಿಗಳನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಾರಿಡಾರ್ ನಿರ್ಮಾಣ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಿಮೆಂಟ್, ಉಕ್ಕು ಮತ್ತು ಸಾರಿಗೆಯಂತಹ ಇತರ ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿಸುತ್ತದೆ ಎಂದು ಅವರು ಹೇಳಿದರು. ಸಮರ್ಪಿತ ಸರಕು ಕಾರಿಡಾರ್‌ ನ ಪ್ರಯೋಜನವನ್ನು ವಿವರಿಸಿದ ಪ್ರಧಾನಮಂತ್ರಿಯವರು, ಇದು 9 ರಾಜ್ಯಗಳಲ್ಲಿ 133 ರೈಲ್ವೆ ನಿಲ್ದಾಣಗಳನ್ನು ಒಳಗೊಂಡಿದೆ. ಈ ನಿಲ್ದಾಣಗಳಲ್ಲಿ, ಬಹು ಮಾದರಿ ಸಾರಿಗೆ ಪಾರ್ಕ್ ಗಳು, ಸರಕು ಸಾಗಣೆ ಟರ್ಮಿನಲ್, ಕಂಟೈನರ್ ಡಿಪೋ, ಕಂಟೈನರ್ ಟರ್ಮಿನಲ್, ಪಾರ್ಸೆಲ್ ತಾಣ ಇರುತ್ತದೆ. ಇದರಿಂದ ರೈತರು, ಸಣ್ಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು ಮತ್ತು ದೊಡ್ಡ ಉತ್ಪಾದಕರಿಗೆ ಪ್ರಯೋಜನವಾಗಲಿದೆ ಎಂದರು.

ರೈಲ್ವೆ ಹಳಿಗಳ ಸಾಮ್ಯತೆಯನ್ನು ಬಳಸಿಕೊಂಡು, ಇಂದು ಭಾರತ ಏಕಕಾಲದಲ್ಲಿ ಎರಡು ಹಳಿಗಳ ಮೇಲೆ ಮೂಲಸೌಕರ್ಯ ಕಾಮಗಾರಿಯನ್ನು ನಡೆಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೇಶದ ವೈಯಕ್ತಿಕ ಮತ್ತು ಬೆಳವಣಿಗೆಯ ಎಂಜಿನ್ ಇದೆ. ವೈಯಕ್ತಿಕ ಮಟ್ಟದಲ್ಲಿ, ವಸತಿ, ನೈರ್ಮಲ್ಯ, ವಿದ್ಯುತ್, ಎಲ್‌.ಪಿ.ಜಿ, ರಸ್ತೆ ಮತ್ತು ಇಂಟರ್ನೆಟ್ ಸಂಪರ್ಕದಲ್ಲಿನ ಸುಧಾರಣೆಗಳನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ಇಂತಹ ಹಲವು ಯೋಜನೆಗಳಿಂದ ಕೋಟ್ಯಂತರ ಭಾರತೀಯರು ಲಾಭ ಪಡೆಯುತ್ತಿದ್ದಾರೆ. ಇನ್ನೊಂದು ಹಾದಿಯಲ್ಲಿ, ಹೆದ್ದಾರಿ, ರೈಲ್ವೆ, ವಾಯುಮಾರ್ಗ, ಜಲಮಾರ್ಗ ಮತ್ತು ಬಹು-ಮಾದರಿ ಬಂದರು ಸಂಪರ್ಕವನ್ನು ಶೀಘ್ರವಾಗಿ ಅನುಷ್ಠಾನಗೊಳಿಸುತ್ತಿರುವುದರಿಂದ ಉದ್ಯಮ, ಮತ್ತು ಉದ್ಯಮಿಗಳು ಬೆಳವಣಿಗೆಯ ಎಂಜಿನ್‌ ಪ್ರಯೋಜನ ಪಡೆಯುತ್ತಿದ್ದಾರೆ. ಸರಕು ಸಾಗಣೆ ಕಾರಿಡಾರ್‌ ಗಳಂತೆ, ಆರ್ಥಿಕ ಕಾರಿಡಾರ್‌ ಗಳು, ರಕ್ಷಣಾ ಕಾರಿಡಾರ್‌ ಗಳು, ಟೆಕ್ ಕ್ಲಸ್ಟರ್‌ ಗಳನ್ನು ಉದ್ಯಮಕ್ಕೆ ಒದಗಿಸಲಾಗುತ್ತಿದೆ. ಈ ವೈಯಕ್ತಿಕ ಮತ್ತು ಕೈಗಾರಿಕಾ ಮೂಲಸೌಕರ್ಯವು ಭಾರತದ ಧನಾತ್ಮಕ ಚಿತ್ರಣವನ್ನು ಸೃಷ್ಟಿಸುತ್ತಿದೆ, ಇದು ಹೆಚ್ಚುತ್ತಿರುವ ವಿದೇಶಿ ವಿನಿಮಯ ಸಂಗ್ರಹ ಮತ್ತು ಭಾರತದ ಮೇಲಿನ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದರು

 

ಈ ಯೋಜನೆಗೆ ನೀಡಿದ ಹಣಕಾಸು ಮತ್ತು ತಾಂತ್ರಿಕ ನೆರವಿಗೆ ಜಪಾನ್ ಜನರಿಗೆ ಪ್ರಧಾನಮಂತ್ರಿ ಧನ್ಯವಾದ ಅರ್ಪಿಸಿದರು.

ಭಾರತೀಯ ರೈಲ್ವೆಯ ಆಧುನೀಕರಣಕ್ಕಾಗಿ ವ್ಯಕ್ತಿ, ಕೈಗಾರಿಕೆ ಮತ್ತು ಹೂಡಿಕೆಯ ನಡುವಿನ ಸಮನ್ವಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಹಿಂದಿನ ಕಾಲದಲ್ಲಿ ಪ್ರಯಾಣಿಕರ ಸಂಕಷ್ಟಗಳನ್ನು ಸ್ಮರಿಸಿದ ಪ್ರಧಾನಮಂತ್ರಿಗಳು, ಸ್ವಚ್ಛತೆ, ಸಕಾಲ, ಉತ್ತಮ ಸೇವೆ, ಟಿಕೆಟ್ ಮಾರಾಟ, ಸೌಲಭ್ಯಗಳು ಮತ್ತು ಸುರಕ್ಷತೆ ಕ್ಷೇತ್ರಗಳಲ್ಲಿ ಮಹತ್ವದ ಕಾರ್ಯಗಳು ನಡೆದಿವೆ ಎಂದು ಹೇಳಿದರು. ನಿಲ್ದಾಣಗಳು ಮತ್ತು ವಿಭಾಗಗಳ ಸ್ವಚ್ಛತೆ, ಜೈವಿಕ ವಿಘಟನೀಯ ಶೌಚಾಲಯಗಳು, ಅಡುಗೆ, ಆಧುನಿಕ ಟಿಕೆಟ್ ಸೌಲಭ್ಯ ಮತ್ತು ಮಾದರಿ ರೈಲುಗಳಾದ ತೇಜಸ್ ಅಥವಾ ವಂದೇ ಭಾರತ್ ಎಕ್ಸ್‌ ಪ್ರೆಸ್, ವಿಸ್ಟಾ-ಡೋಮ್ ಬೋಗಿಗಳ ಉದಾಹರಣೆಗಳನ್ನು ನೀಡಿದರು. ವಿಶಾಲ ಮಾಪನ ಮತ್ತು ವಿದ್ಯುದೀಕರಣದಲ್ಲಿ ಅಭೂತಪೂರ್ವ ಹೂಡಿಕೆಯನ್ನು ಅವರು ಒತ್ತಿ ಹೇಳಿದರು, ಇದು ರೈಲ್ವೆಯ ವ್ಯಾಪ್ತಿ ಮತ್ತು ವೇಗವನ್ನು ಹೆಚ್ಚಿಸಲು ಕಾರಣವಾಗಿದೆ. ಸೆಮಿ ಹೈಸ್ಪೀಡ್ ರೈಲುಗಳು, ಹಳಿಗಳನ್ನು ಹಾಕುವ ಆಧುನಿಕ ತಂತ್ರಜ್ಞಾನದ ಕುರಿತು ಮಾತನಾಡಿದ ಅವರು, ಈಶಾನ್ಯ ರಾಜ್ಯದ ಪ್ರತಿಯೊಂದು ರಾಜಧಾನಿಯನ್ನೂ ರೈಲ್ವೆಗೆ ಸಂಪರ್ಕಿಸುವ ಭರವಸೆ ನೀಡಿದರು.

ಕೊರೊನಾ ಸಂಕಷ್ಟದ ಕಾಲದಲ್ಲಿ ರೈಲ್ವೆ ನೀಡಿದ ಅದ್ಭುತ ಕೊಡುಗೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕಾರ್ಮಿಕರನ್ನು ಅವರ ಸ್ಥಳ ತಲುಪಿಸುವ ನಿಟ್ಟಿನಲ್ಲಿ ಅದರ ಪಾತ್ರಕ್ಕಾಗಿ ಅಭಿನಂದನೆ ಸಲ್ಲಿಸಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s Defence Exports Explode: ₹40,000 Crore Milestone Signals a New Manufacturing Era

Media Coverage

India’s Defence Exports Explode: ₹40,000 Crore Milestone Signals a New Manufacturing Era
NM on the go

Nm on the go

Always be the first to hear from the PM. Get the App Now!
...
Prime Minister shares moments from his metro journey to and from the SRCC programme
September 05, 2026

Prime Minister Shri Narendra Modi today shared glimpses of his metro journey while traveling to and from the SRCC programme.

In a post on X, the Prime Minister shared:

"Metro moments…

On the way to the SRCC programme and back."