QuoteThe Centre and state government must work together for the growth of Bihar: PM Modi
QuotePM Modi lays the foundation stone for Namami Gange and National Highways project in Mokama
QuoteWe always launch a scheme and make sure that we prepare a roadmap to fulfill it too, says PM Modi
QuoteProjects whose foundation stones are being laid will give impetus to Bihar's development: PM

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಬಿಹಾರದ ಮೋಕಾಮಾದಲ್ಲಿ ನಮಾಮಿ ಗಂಗೆ ಕಾರ್ಯಕ್ರಮದ ಅಡಿಯಲ್ಲಿ ನಾಲ್ಕು ಒಳಚರಂಡಿ; ಮತ್ತು ನಾಲ್ಕು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳ ಒಟ್ಟು ಅಂದಾಜು 3700 ಕೋಟಿ ರೂಪಾಯಿ ಆಗಿದೆ. ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಶ್ರೇಷ್ಠ ಕವಿ, ರಾಮಧಾರಿ ಸಿಂಗ್ ದಿನಕರ್ ಅವರು ನಿಕಟ ಸಂಪರ್ಕ ಹೊಂದಿದ್ದ ನಾಡಿಗೆ ಆಗಮಿಸಿರುವುದಕ್ಕೆ ತಮಗೆ ಅತೀವ ಸಂತಸವಾಗಿದೆ ಎಂದರು. ಬಿಹಾರದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ಏನೇನು ಸಾಧ್ಯವೋ ಅದೆಲ್ಲವನ್ನೂ ಮಾಡಲಿವೆ ಎಂದು ಪ್ರತಿಯೊಬ್ಬರಿಗೂ ಭರವಸೆ ನೀಡಿದರು.

|

ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸಲು ಅವಿಶ್ರಾಂತವಾಗಿ ಶ್ರಮಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಇಂದು ಶಂಕುಸ್ಥಾಪನೆ ನೆರವೇರಿಸಲಾದ ಯೋಜನೆಗಳು ಬಿಹಾರದ ಅಭಿವೃದ್ಧಿಗೆ ಇಂಬು ನೀಡಲಿವೆ ಎಂದು ಹೇಳಿದರು.

 

|

ರಸ್ತೆ ನಿರ್ಮಾಣದ ವೇಗವನ್ನು ಹೆಚ್ಚಿಸಲು ಸರ್ಕಾರ ಗಮನಹರಿಸಿದೆ. ನಮಾಮಿ ಗಂಗೆ ಕಾರ್ಯಕ್ರಮ ಗಂಗಾನದಿಯನ್ನು ಸಂರಕ್ಷಿಸಲು ನೆರವಾಗಲಿದೆ ಎಂದು ಹೇಳಿದರು.

|

ಇತ್ತೀಚೆಗೆ ಆರಂಭಿಸಲಾದ ಅಂತ್ಯೋದಯ ಎಕ್ಸ್ ಪ್ರೆಸ್ ಪ್ರಸ್ತಾಪಿಸಿದ ಪ್ರಧಾನಿ, ಇದು ಬಿಹಾರ್, ಪೂರ್ವ ಭಾರತ ಮತ್ತು ದೇಶದ ಇತರ ಭಾಗಗಳನ್ನು ಸಂಪರ್ಕಿಸಲಿದೆ ಎಂದರು. ಉತ್ತಮ ಸಂಪರ್ಕ ಹೆಚ್ಚಿನ ಅಭಿವೃದ್ಧಿಗೆ ಇಂಬು ನೀಡಲಿದೆ ಎಂದು ಹೇಳಿದ ಪ್ರಧಾನಿ, ರಸ್ತೆ, ರೈಲು ಮತ್ತು ಜಲ ಮಾರ್ಗಗಳಿಗೆ ಒತ್ತು ನೀಡಲಾಗಿದೆ ಎಂದರು.

|

ಇಂದು ಶಂಕುಸ್ಥಾಪನೆ ನೆರವೇರಿಸಲಾದ ನಾಲ್ಕು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಈ ಕೆಳಕಂಡವುಗಳನ್ನು ಒಳಗೊಂಡಿವೆ:

 

.
|

 ಔಂತ - ಸಿಮರಿಯಾ ವಿಭಾಗದ ರಾ.ಹೆ 31ರಲ್ಲಿನಾಲ್ಕು ಪಥಮತ್ತು ಷಟ್ ಪಥದ ಗಂಗಾ ಸೇತು ನಿರ್ಮಾಣ.
ರಾ.ಹೆ.. 31ರ ಭಕ್ತಿಯಾಪುರ್ - ಮೋಕಾಮಾ ವಿಭಾಗದಲ್ಲಿ ಚತುಷ್ಪಥ ನಿರ್ಮಾಣ
ರಾ.ಹೆ.107ರ ಮಹೇಶ್ಕುಂತ್ - ಸಹಸ್ರಾ - ಪುರ್ನಿಯಾ ವಿಭಾಗದಲ್ಲಿ ದ್ವಿಪಥ ನಿರ್ಮಾಣ.
ರಾ.ಹೆ.82ರ ಬಿಹಾರ್ ಷರೀಫ್ - ಬರ್ಬಿಗಾ - ಮೋಕಾಮಾ ವಿಭಾಗದಲ್ಲಿ ದ್ವಿಪಥ ನಿರ್ಮಾಣ.

|

ನಾಲ್ಕು ಒಳಚರಂಡಿ ಯೋಜನೆಗಳಲ್ಲಿ ಬೇವೂರ್ ತ್ಯಾಜ್ಯ ಜಲ ಶುದ್ಧೀಕರಣ ಘಟಕ, ಬೇವೂರಿನಲ್ಲಿ ಒಳಚರಂಡಿ ಜಾಲ ಸೇರಿದಂತೆ ಒಳಚರಂಡಿ ವ್ಯವಸ್ಥೆ,ಕರ್ಮಲಿಚಕ್ ತ್ಯಾಜ್ಯ ಜಲ ಸಂಸ್ಕರಣಾ ಘಟಕ ಮತ್ತು ಎಸ್.ಟಿ.ಪಿ. ಮತ್ತು ಸೈದ್ ಪುರದ ಒಳಚರಂಡಿ ಜಾಲವೂ ಸೇರಿದೆ. ಈ ಯೋಜನೆಗಳು ಒಟ್ಟಾರೆಯಾಗಿ 120 ಎಂ.ಎಲ್.ಡಿ. ಸಾಮರ್ಥ್ಯದ ಹೊಸ ಎಸ್.ಟಿ.ಪಿ. ರೂಪಿಸಲಿದೆ ಮತ್ತು ಹಾಲಿ ಬೇವೂರಿನ 20 ಎಂ.ಎಲ್.ಡಿ.ಯನ್ನು ಮೇಲ್ದರ್ಜೆಗೇರಿಸಲಿದೆ.

 

|
|

Click here to read the full text speech

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
India emerges as a global mobile manufacturing powerhouse, says CDS study

Media Coverage

India emerges as a global mobile manufacturing powerhouse, says CDS study
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಜುಲೈ 2025
July 24, 2025

Global Pride- How PM Modi’s Leadership Unites India and the World