ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಹೇಳಿದ್ದಾರೆ.

ನಾನಾಜಿ ದೇಶಮುಖ್ ಅವರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಶ್ಲ್ಯಾಘಿಸಿರುವ ಪ್ರಧಾನಮಂತ್ರಿ ಅವರು “ನಾನಾಜಿ ದೇಶಮುಖ್ ಅವರು ಗ್ರಾಮೀಣಾಭಿವೃದ್ದಿಗೆ ನೀಡಿರುವ ಪ್ರಕಾಶಿಸುವಂತಹ ಕೊಡುಗೆ ಹಳ್ಳಿಗಳಲ್ಲಿ, ಗ್ರಾಮಗಳಲ್ಲಿ ವಾಸಿಸುವವರನ್ನು ಸಶಕ್ತೀಕರಣಗೊಳಿಸುವ ನಿಟ್ಟಿನಲ್ಲಿ ಹೊಸ ಮಾದರಿಯನ್ನು ಒದಗಿಸಿದೆ . ನಮ್ರತೆಯನ್ನು, ಅನುಕಂಪವನ್ನು ವ್ಯಕ್ತೀಕರಿಸಿ , ತಳಮಟ್ಟದಲ್ಲಿರುವವರಿಗೆ ಸೇವೆಯನ್ನು ಒದಗಿಸಿದ ಅವರು ನಿಜಾರ್ಥದಲ್ಲಿಯೂ ಭಾರತರತ್ನ “ ಎಂದು ಬಣ್ಣಿಸಿದ್ದಾರೆ.

“ಭುಪೇನ್ ಹಜಾರಿಕಾ ಅವರ ಹಾಡುಗಳು ಮತ್ತು ಸಂಗೀತ ತಲೆಮಾರುಗಳಿಂದ ಜನತೆಯ ಮೆಚ್ಚುಗೆ ಪಡೆದಿವೆ. ಅವುಗಳ ಮೂಲಕ ನ್ಯಾಯ, ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶವನ್ನು ಸಾರಲಾಗಿದೆ. ಅವರು ಭಾರತೀಯ ಸಂಗೀತ ಪರಂಪರೆಯನ್ನು ಜಾಗತಿಕ ಮಟ್ತದಲ್ಲಿ ಜನಪ್ರಿಯಗೊಳಿದವರು. ಭುಪೇನ್ ದಾ ಅವರಿಗೆ ಭಾರತ ರತ್ನ ದೊರಕಿರುವುದು ಸಂತೋಷ ತಂದಿದೆ “ ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆ.

ಪ್ರಣವ್ ಮುಖರ್ಜಿಯವರ ಬಗ್ಗೆ ಮಾತನಾಡಿದ ಅವರು “ಪ್ರಣವ್ ಅವರು ನಮ್ಮ ಕಾಲದ ಶ್ರೇಷ್ಟ ರಾಜನೀತಿಜ್ಞ. ಅವರು ದಶಕಗಳಿಂದ ಸ್ವಾರ್ಥರಹಿತವಾಗಿ ಮತ್ತು ನಿರಂತರವಾಗಿ ದಣಿವಿಲ್ಲದೆ ದೇಶ ಸೇವೆ ಮಾಡಿದರು. ಆ ಮೂಲಕ ರಾಷ್ಟ್ರದ ಬೆಳವಣಿಗೆ ಪಥದ ಮೇಲೆ ಬಲಿಷ್ಟವಾದ ಛಾಪನ್ನು ಒತ್ತಿದರು. ಅವರ ವಿವೇಕ ಮತ್ತು ಬುದ್ದಿಮತ್ತೆಗೆ ಕೆಲವರಷ್ಟೇ ಪರ್ಯಾಯವಾಗಬಲ್ಲರು. ಅವರಿಗೆ ಭಾರತ ರತ್ನ ದೊರಕಿರುವುದು ನನಗೆ ಹರ್ಷ ತಂದಿದೆ “ ಎಂದಿದ್ದಾರೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Sheetal Devi signs special jersey with foot, gifts to PM Modi

Media Coverage

Sheetal Devi signs special jersey with foot, gifts to PM Modi
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಸೆಪ್ಟೆಂಬರ್ 2024
September 13, 2024

PM Modi’s Vision for India’s Growth and Prosperity Garners Appreciation from Across the Country