ಶೇರ್
 
Comments

 

1.        73 ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾ ಬಂಧನದ ಶುಭ ಹಬ್ಬದ ದಿನದಂದು ಎಲ್ಲಾ ದೇಶವಾಸಿಗಳು, ಸಹೋದರ ಸಹೋದರಿಯರಿಗೆ ನಾನು ಆತ್ಮೀಯ ಶುಭಾಶಯಗಳನ್ನು ಅರ್ಪಿಸುತ್ತೇನೆ.
 
2.        ದೇಶವು ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವಾಗ, ದೇಶದ ಹಲವಾರು ಭಾಗಗಳಲ್ಲಿ ಜನರು ಪ್ರವಾಹದಿಂದಾಗಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಕೇಂದ್ರ, ರಾಜ್ಯಗಳು ಮತ್ತು ಇತರ ಸಂಸ್ಥೆಗಳು ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರಲು ಶ್ರಮಿಸುತ್ತಿವೆ.
 
3.        ಹೊಸ ಸರ್ಕಾರ ರಚನೆಯಾದ 10 ವಾರಗಳಲ್ಲಿ 370 ಮತ್ತು 35 ಎ ವಿಧಿಯನ್ನು ಹಿಂತೆಗೆದುಕೊಂಡಿದ್ದು ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಕನಸನ್ನು ಈಡೇರಿಸುವ ಮಹತ್ವದ ಹೆಜ್ಜೆಯಾಗಿದೆ. ಕಳೆದ 70 ವರ್ಷಗಳಲ್ಲಿ ಮಾಡದ ಕೆಲಸವನ್ನು 70 ದಿನಗಳಲ್ಲಿ ಪೂರೈಸಲಾಗಿದೆ. 370 ಮತ್ತು 35 ಎ ವಿಧಿ ರದ್ದುಗೊಳಿಸುವಿಕೆಯನ್ನು ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕರಿಸಲಾಯಿತು.
 
4.        ನಾವು ಸತಿ ಪದ್ಧತಿಯನ್ನು ನಿರ್ಮೂಲನೆ ಮಾಡಲು, ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಕಠಿಣ ಕಾನೂನುಗಳನ್ನು ಮಾಡಲು ಮತ್ತು ಬಾಲ್ಯವಿವಾಹ ಮತ್ತು ವರದಕ್ಷಿಣೆ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಾದರೆ, ನಾವು ತ್ರಿವಳಿ  ತಲಾಖ್ ವಿರುದ್ಧವೂ ಧ್ವನಿ ಎತ್ತಬಹುದು. ಅದೇ ರೀತಿ ನಮ್ಮ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿಗೊಳಿಸಿದ್ದೇವೆ.
 
5.        ಭಯೋತ್ಪಾದನೆಗೆ ಸಂಬಂಧಿಸಿದ ಕಾನೂನುಗಳಲ್ಲಿ ಆಮೂಲಾಗ್ರ ತಿದ್ದುಪಡಿಗಳನ್ನು ಮಾಡಲಾಯಿತು ಮತ್ತು ಅವುಗಳನ್ನು ಹೆಚ್ಚು ಕಠಿಣ ಮತ್ತು ಶಕ್ತಿಯುತವಾಗಿ ಮಾಡಲಾಯಿತು.
 
6.        ಮಹತ್ವದ ಹೆಜ್ಜೆಯಲ್ಲಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ಸುಮಾರು 90,000 ಕೋಟಿ ರೂ.ಗಳನ್ನು ತುಂಬುವ ಕೆಲಸ ಪ್ರಗತಿಯಲ್ಲಿದೆ.
 
7.        ರೈತರು ಮತ್ತು ಸಣ್ಣ ಉದ್ಯಮಿಗಳಿಗೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದನ್ನು ಹಿಂದೆಂದೂ ಊಹಿಸಿರಲಿಲ್ಲ.
 
8.        ನೀರಿನ ಬಿಕ್ಕಟ್ಟಿನ ಸವಾಲುಗಳನ್ನು ಎದುರಿಸಲು, ಅದಕ್ಕೆಂದೇ ಮೀಸಲಾದ ನೂತನ ಜಲಶಕ್ತಿ ಸಚಿವಾಲಯವನ್ನು ರಚಿಸಲಾಗಿದೆ.
 
9.        ಮುಂದಿನ ದಿನಗಳಲ್ಲಿ, ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಜಲ-ಜೀವನ್ ಅಭಿಯಾನವನ್ನು ಮುಂದುವರಿಸಲಿವೆ.  ಇದಕ್ಕಾಗಿ 3.5 ಲಕ್ಷ ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.
 
10.      ದೇಶದಲ್ಲಿ ವೈದ್ಯರು, ಆರೋಗ್ಯ ಸೌಲಭ್ಯಗಳು ಮತ್ತು ವ್ಯವಸ್ಥೆಗಳ ಅವಶ್ಯಕತೆಯಿದೆ. ವೈದ್ಯಕೀಯ ಶಿಕ್ಷಣವನ್ನು ಪಾರದರ್ಶಕವಾಗಿಸಲು, ಪ್ರಮುಖ ಕಾನೂನುಗಳನ್ನು ಜಾರಿಗೆ ತರಲಾಗಿದೆ.
 
11.      ಮಕ್ಕಳ ರಕ್ಷಣೆಗಾಗಿ ದೇಶವು ಬಲವಾದ ಕಾನೂನುಗಳನ್ನು ರೂಪಿಸಿದೆ.
 
12.      2014-2019 ಅಗತ್ಯಗಳನ್ನು ಪೂರೈಸುವ ಯುಗವಾಗಿದ್ದರೆ, 2019 ರ ನಂತರದ ಅವಧಿಯು ಆಕಾಂಕ್ಷೆಗಳು ಮತ್ತು ಕನಸುಗಳ ಈಡೇರಿಕೆಯ ಯುಗವಾಗಿರುತ್ತದೆ.
 
13.      ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ನಾಗರಿಕರ ಆಕಾಂಕ್ಷೆಗಳು ಈಡೇರಿವೆ ಮತ್ತು ಅಲ್ಲಿ ವಾಸಿಸುವ ದಲಿತರು ದೇಶದ ಉಳಿದ ದಲಿತರು ಅನುಭವಿಸಿದಂತೆ ಸಮಾನ ಹಕ್ಕುಗಳನ್ನು ಪಡೆಯಬೇಕು ಎಂಬುದು ನಮ್ಮ ಜವಾಬ್ದಾರಿಯಾಗಿದೆ. ಅದೇ ರೀತಿ ಗುಜ್ಜರ್‌ಗಳು, ಬಕರ್‌ವಾಲ್‌ಗಳು, ಗಡ್ಡೀಸ್, ಸಿಪ್ಪೀಸ್ ಅಥವಾ ಬಾಲ್ಟಿಗಳಂತಹ ಸಮುದಾಯಗಳು ರಾಜಕೀಯ ಹಕ್ಕುಗಳನ್ನು ಪಡೆಯಬೇಕು. ವಿಭಜನೆಯ ನಂತರ, ಸ್ಥಳಾಂತರಗೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿದ ಲಕ್ಷಾಂತರ ಜನರು ಮೂಲಭೂತ ಮಾನವ ಹಕ್ಕುಗಳು ಮತ್ತು ಪೌರತ್ವ ಹಕ್ಕುಗಳಿಂದ ವಂಚಿತರಾಗಿದ್ದರು.
 
14.      ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಶಾಂತಿ ಮತ್ತು ಸಮೃದ್ಧಿಗೆ  ಆದರ್ಶವಾಗಬಹುದು ಮತ್ತು ಭಾರತದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಬಹುದು. ಭಾರತದ ಅಭಿವೃದ್ಧಿಗೆ ರಾಜ್ಯವು ಹೆಚ್ಚಿನ ಕೊಡುಗೆ ನೀಡಬಲ್ಲದು. ಇಂದು ಪ್ರತಿಯೊಬ್ಬ ಭಾರತೀಯನು ಹೆಮ್ಮೆಯಿಂದ ‘ಒಂದು ರಾಷ್ಟ್ರ, ಒಂದು ಸಂವಿಧಾನ’ಎಂದು ಹೇಳಬಹುದು.
 
15.       ‘ಒಂದು ರಾಷ್ಟ್ರ, ಒಂದು ತೆರಿಗೆ’ಯ  ಎಂಬ ಕನಸನ್ನು ಜಿ ಎಸ್ ಟಿ ಸಾಧಿಸಿತು. ನಾವು ವಿದ್ಯುತ್ ಕ್ಷೇತ್ರದಲ್ಲಿ ‘ಒಂದು ರಾಷ್ಟ್ರ, ಒಂದು ಗ್ರಿಡ್’ಅನ್ನು ಯಶಸ್ವಿಯಾಗಿ ಸಾಧಿಸಿದ್ದೇವೆ. ನಾವು ‘ಒನ್ ನೇಷನ್, ಒನ್ ಮೊಬಿಲಿಟಿ ಕಾರ್ಡ್’ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸಿದ್ದೇವೆ ಮತ್ತು ಇಂದು ದೇಶದಲ್ಲಿ ‘ಒಂದು ದೇಶ ,ಒಂದು ಚುನಾವಣೆ’ ಕುರಿತು ಚರ್ಚೆ ನಡೆಯುತ್ತಿದೆ ಮತ್ತು ಅದು ಪ್ರಜಾಪ್ರಭುತ್ವ ರೀತಿಯಲ್ಲೇ ಆಗಬೇಕು.
 
16. ಜನಸಂಖ್ಯಾ ಸ್ಫೋಟವು ವಿಶೇಷವಾಗಿ ಭವಿಷ್ಯದ ಪೀಳಿಗೆಗೆ ಹೊಸ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದರೆ ಈ ಸವಾಲಿನ ಬಗ್ಗೆ ತಿಳಿದಿರುವ ಸಮಾಜದ ಪ್ರಬುದ್ಧ ವಿಭಾಗವೂ ಇದೆ. ಸಮಾಜದ ಎಲ್ಲಾ ವರ್ಗಗಳನ್ನು ಜೊತೆಯಾಗಿ ತೆಗೆದುಕೊಂಡು ಈ ವಿಷಯದ ಬಗ್ಗೆ ನಾವು ಆಲೋಚಿಸಬೇಕಾಗಿದೆ.
 
17.      ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವು ಕಲ್ಪನೆಗೆ ಮೀರಿ ದೇಶಕ್ಕೆ ಹಾನಿ ಮಾಡಿದೆ. ಇದರ ವಿರುದ್ಧ ಹೋರಾಡಲು ನಾವು ತಂತ್ರಜ್ಞಾನದ ಆಧಾರಿತ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ.
 
18.      ಸುಲಭವಾಗಿ ಜೀವನ ನಡೆಸುವುದು ಸ್ವತಂತ್ರ ಭಾರತದ ಅವಶ್ಯಕತೆಯಾಗಿದೆ. ದೈನಂದಿನ ಜೀವನದಲ್ಲಿ ಸರ್ಕಾರದ ಹಸ್ತಕ್ಷೇಪ ಕಡಿಮೆ ಮಾಡುವ ವ್ಯವಸ್ಥೆಯೊಂದನ್ನು ನಾವು ನಿರ್ಮಿಸಬೇಕು.
 
19.      ದೇಶವು ಇನ್ನು ಮುಂದೆ ಅಂಬೆಗಾಲು  ಪ್ರಗತಿಗಾಗಿ ಕಾಯಲು ಸಾಧ್ಯವಿಲ್ಲ. ಬದಲಿಗೆ ದಾಪುಗಾಲು ಹಾಕಲು ಪ್ರಯತ್ನಿಸಬೇಕು.
 
20.      ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ 100 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಇದು ಜೀವನ ಮಟ್ಟವನ್ನು ಸುಧಾರಿಸುವುದರ ಜೊತೆಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
 
21.      ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸು ಕಾಣುತ್ತಿದೆ. ಸ್ವಾತಂತ್ರ್ಯದ 70 ವರ್ಷಗಳಲ್ಲಿ, ದೇಶವು 2 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಯಿತು ಆದರೆ ಕಳೆದ 5 ವರ್ಷಗಳಲ್ಲಿ ನಾವು ಇದನ್ನು 3 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಿದ್ದೇವೆ ಮತ್ತು ಈ ವೇಗದಲ್ಲಿ ನಾವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬಹುದು.
 
22.      ಸ್ವಾತಂತ್ರ್ಯದ 75 ನೇ ವರ್ಷದ ವೇಳೆಗೆ, ರೈತರ ಆದಾಯ ದ್ವಿಗುಣಗೊಳ್ಳಬೇಕು. ಪ್ರತಿ ಬಡವರಿಗೂ ಪಕ್ಕಾ ಮನೆ ಸಿಗಬೇಕು. ಪ್ರತಿ ಕುಟುಂಬಕ್ಕೂ ವಿದ್ಯುತ್ ಸಂಪರ್ಕ ಸಿಗಬೇಕು ಮತ್ತು ಪ್ರತಿ ಹಳ್ಳಿಯೂ ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ಮತ್ತು ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಹೊಂದಿರಬೇಕು ಮತ್ತು ದೂರ ಶಿಕ್ಷಣದ ಸೌಲಭ್ಯವೂ ಇರಬೇಕು.
 
23.      ನಾವು ನೀಲಿ ಆರ್ಥಿಕತೆ (ಸಾಗರ ಸಂಪನ್ಮೂಲಗಳು) ಮೇಲೆ ಗಮನಹರಿಸಬೇಕು. ನಮ್ಮ ರೈತರು ರಫ್ತುದಾರರಾಗಬೇಕು ಮತ್ತು ದೇಶದ ಪ್ರತಿಯೊಂದು ಜಿಲ್ಲೆಯು ರಫ್ತು ಕೇಂದ್ರವಾಗಿರಬೇಕು. ಪ್ರತಿ ಜಿಲ್ಲೆಯಿಂದ ಮೌಲ್ಯವರ್ಧಿತ ಸರಕುಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪಬೇಕು.
 
24.      ಪ್ರವಾಸಿಗರಿಗೆ ಭಾರತವು ಜಗತ್ತಿನಲ್ಲಿ ಅದ್ಭುತ ತಾಣವಾಗಬಹುದು. ಎಲ್ಲಾ ಭಾರತೀಯರು ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು. ಏಕೆಂದರೆ ಪ್ರವಾಸೋದ್ಯಮ ಕ್ಷೇತ್ರವು ಕಡಿಮೆ ಹೂಡಿಕೆಯೊಂದಿಗೆ ಹೆಚ್ಚಿನ ಉದ್ಯೋಗಗಳನ್ನು ಒದಗಿಸುತ್ತದೆ ಮತ್ತು ಆರ್ಥಿಕತೆಯನ್ನು ಬಲಪಡಿಸುತ್ತದೆ.
 
25.      ಸ್ಥಿರ ಸರ್ಕಾರವು ನೀತಿ ನಿರೂಪಣೆಗಳಿಗೆ ಕಾರಣವಾಗುತ್ತದೆ. ಸ್ಥಿರ ವ್ಯವಸ್ಥೆಯು ಅಂತರರಾಷ್ಟ್ರೀಯ ವಿಶ್ವಾಸವನ್ನು ಸೃಷ್ಟಿಸುತ್ತದೆ. ಜಗತ್ತು ಭಾರತವನ್ನು ತನ್ನ ರಾಜಕೀಯ ಸ್ಥಿರತೆಗಾಗಿ ಮೆಚ್ಚುಗೆಯಿಂದ  ನೋಡುತ್ತಿದೆ.
 
26.      ಬೆಲೆ ಏರಿಕೆಯನ್ನು ಹತೋಟಿಯಲ್ಲಿಟ್ಟುಕೊಂಡು ನಾವು ಹೆಚ್ಚಿನ ಬೆಳವಣಿಗೆಯ ದರದಲ್ಲಿ ಪ್ರಗತಿ ಸಾಧಿಸುತ್ತಿರುವುದು ಭಾರತಕ್ಕೆ ಹೆಮ್ಮೆಯ ವಿಷಯ.
 
27.      ನಮ್ಮ ಆರ್ಥಿಕತೆಯ ಮೂಲಭೂತ ಅಂಶಗಳು ಬಹಳ ಪ್ರಬಲವಾಗಿವೆ ಮತ್ತು ಜಿಎಸ್ಟಿ ಮತ್ತು ಐಬಿಸಿಯಂತಹ ಸುಧಾರಣೆಗಳು ವ್ಯವಸ್ಥೆಯಲ್ಲಿ ಹೊಸ ನಂಬಿಕೆಯನ್ನು ಸೃಷ್ಟಿಸಿವೆ. ನಮ್ಮ ಹೂಡಿಕೆದಾರರು ಹೆಚ್ಚು ಹೂಡಿಕೆ ಮಾಡಬೇಕು, ಹೆಚ್ಚು ಸಂಪಾದಿಸಬೇಕು ಮತ್ತು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬೇಕು. ನಮ್ಮ ಸಂಪತ್ತಿನ ಸೃಷ್ಟಿಕರ್ತರನ್ನು ನಾವು ಅನುಮಾನದಿಂದ ನೋಡುವುದನ್ನು ನಿಲ್ಲಿಸಬೇಕು. ಅವರು ಹೆಚ್ಚಿನ ಗೌರವಕ್ಕೆ ಅರ್ಹರು. ಹೆಚ್ಚು ಸಂಪತ್ತಿನ ಸೃಷ್ಟಿ ಹೆಚ್ಚಿನ ವಿತರಣೆ ಮತ್ತು ಬಡ ಜನರ ಕಲ್ಯಾಣಕ್ಕೆ ಸಹಾಯವಾಗುತ್ತದೆ.
 
28.      ಭಯೋತ್ಪಾದನೆಯನ್ನು ಹರಡುವ ಶಕ್ತಿಗಳ ವಿರುದ್ಧ ಭಾರತ ಬಲವಾಗಿ ಹೋರಾಡುತ್ತಿದೆ. ವಿಶ್ವದ ಇತರ ರಾಷ್ಟ್ರಗಳೊಂದಿಗೆ ಸೇರಿ ಭಾರತವು ಭಯೋತ್ಪಾದನೆಗೆ ಆಶ್ರಯ ನೀಡುವ, ಉತ್ತೇಜಿಸುವ ಮತ್ತು ರಫ್ತು ಮಾಡುವವರನ್ನು ಬಹಿರಂಗಪಡಿಸುತ್ತದೆ. ಭಯೋತ್ಪಾದನೆಯ ನಿರ್ಮೂಲಗೊಳಿಸಲು ನಮ್ಮ ಭದ್ರತಾ ಪಡೆಗಳು ಮತ್ತು ಸುರಕ್ಷತಾ ಸಂಸ್ಥೆಗಳು ಆದರ್ಶಪ್ರಾಯವಾದ ಪಾತ್ರವನ್ನು ವಹಿಸಿವೆ ಮತ್ತು ನಾನು ಅವರಿಗೆ ವಂದಿಸುತ್ತೇನೆ.
 
29.      ಭಾರತದ ನೆರೆಯ ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಭಯೋತ್ಪಾದನೆಯಿಂದ ಬಳಲುತ್ತಿವೆ. ನಮ್ಮ ನೆರೆಯ ಉತ್ತಮ ಸ್ನೇಹಿತ – ಅಫ್ಘಾನಿಸ್ತಾನವು ಇನ್ನು ನಾಲ್ಕು ದಿನಗಳಲ್ಲಿ ತನ್ನ 100 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. ಕೆಂಪು ಕೋಟೆಯ ಪ್ರಾಕಾರದಿಂದ, 100 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವ ಅಫ್ಘಾನಿಸ್ತಾನದ ಜನರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
 
30.      ನಾನು 2014 ರಲ್ಲಿ ಕೆಂಪು ಕೋಟೆಯ ಪ್ರಾಕಾರದಿಂದ ಸ್ವಚ್ಚತಾ ಆಂದೋಲನಕ್ಕೆ ಚಾಲನೆ ನೀಡಿದ್ದೆ. ಇನ್ನು ಕೆಲವೇ ವಾರಗಳಲ್ಲಿ ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿಯವರ 150 ನೇ ಜನ್ಮದಿನದಂದು ಭಾರತವು ಬಯಲು ಮಲವಿಸರ್ಜನೆ ಮುಕ್ತ ರಾಷ್ಟ್ರವಾಗಲಿದೆ.
 
31.      ಸಶಸ್ತ್ರ ಪಡೆಗಳಲ್ಲಿನ ಸುಧಾರಣೆಗಳು ಮತ್ತು ಅನೇಕ ಆಯೋಗಗಳ ಬಗ್ಗೆ ನಮ್ಮ ದೇಶವು ದೀರ್ಘಕಾಲದಿಂದ ಚರ್ಚಿಸುತ್ತಿದೆ ಮತ್ತು ಅವರ ವರದಿಗಳು ಇದನ್ನೇ  ಒತ್ತಿಹೇಳುತ್ತಿವೆ. ಪಡೆಗಳ ನಡುವಿನ ಸಮನ್ವಯವನ್ನು ಇನ್ನಷ್ಟು ತೀಕ್ಷ್ಣಗೊಳಿಸಲು, ಭಾರತವು ರಕ್ಣಣಾ ಪಡೆಗಳ ಮುಖ್ಯಸ್ಥರನ್ನು ಹೊಂದಲಿದೆ. ಇದು ಪಡೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುತ್ತದೆ.
 
32.      ಅಕ್ಟೋಬರ್ 2 ರೊಳಗೆ ಭಾರತವನ್ನು ಪ್ಲಾಸ್ಟಿಕ್‌ ಬಳಕೆಯಿಂದ ಮುಕ್ತಗೊಳಿಸುವುದಾಗಿ ದೇಶವಾಸಿಗಳು ಪ್ರತಿಜ್ಞೆ ಮಾಡಬೇಕೆಂದು ನಾನು ಬಯಸುತ್ತೇನೆ. ಇದಕ್ಕಾಗಿ ಪ್ರತಿಯೊಬ್ಬ ನಾಗರಿಕರು, ಪುರಸಭೆಗಳು ಮತ್ತು ಗ್ರಾಮ ಪಂಚಾಯಿತಿಗಳು ಒಟ್ಟಾಗಬೇಕು.
 
33.      ನಮ್ಮ ಆದ್ಯತೆಯು ‘ಮೇಡ್ ಇನ್ ಇಂಡಿಯಾ’ ಉತ್ಪನ್ನಕ್ಕಿರಬೇಕು. ಉತ್ತಮ ನಾಳೆಗಾಗಿ, ಸ್ಥಳೀಯ ಉತ್ಪನ್ನಗಳನ್ನು ಬಳಸುವ ಬಗ್ಗೆ ಗ್ರಾಮೀಣ ಆರ್ಥಿಕತೆ ಮತ್ತು ಎಂಎಸ್‌ಎಂಇ ವಲಯವನ್ನು ಸುಧಾರಿಸಲು ಸಹಾಯ ಮಾಡುವ ಬಗ್ಗೆ ನಾವು ಯೋಚಿಸಬೇಕು.
 
34.      ನಮ್ಮ ಡಿಜಿಟಲ್ ಪಾವತಿ ವೇದಿಕೆಗಳು ಬಲವಾಗಿ ವಿಕಸನಗೊಳ್ಳುತ್ತಿವೆ. ನಮ್ಮ ಹಳ್ಳಿಯ ಅಂಗಡಿಗಳು, ಸಣ್ಣ ಮಳಿಗೆಗಳು ಮತ್ತು ಸಣ್ಣ ನಗರಗಳ ಮಾಲ್‌ಗಳಲ್ಲಿ ಡಿಜಿಟಲ್ ಪಾವತಿಗಳಿಗೆ ನಾವು ಒತ್ತು ನೀಡಬೇಕು.
 
35.      ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ನಾವು ಮಣ್ಣಿನ ಆರೋಗ್ಯವನ್ನು ಹಾಳು ಮಾಡುತ್ತಿದ್ದೇವೆ. ಗಾಂಧೀಜಿಯವರು ಈಗಾಗಲೇ ನಮಗೆ ತೋರಿಸಿರುವ ಮಾರ್ಗದಂತೆ ನಾವು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಶೇ.10, ಶೇ.20  ಅಥವಾ ಶೇ.25 ರಷ್ಟು ಕಡಿಮೆ ಮಾಡಲು ಸಾಧ್ಯವಿಲ್ಲವೇ? ನಮ್ಮ ರೈತರು ನನ್ನ ಆಶಯವನ್ನು ಪಾಲಿಸುತ್ತಾರೆ ಎಂದು ನನಗೆ ಖಾತ್ರಿಯಿದೆ.
 
36.      ಭಾರತೀಯ ವೃತ್ತಿಪರರು ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದಾರೆ. ನಮ್ಮವಿಜ್ಞಾನಿಗಳು ಚಂದ್ರಯಾನದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
 
37.      ಮುಂಬರುವ ದಿನಗಳಲ್ಲಿ ಹಳ್ಳಿಗಳಲ್ಲಿ 1.5 ಲಕ್ಷ ಕ್ಷೇಮ ಕೇಂದ್ರಗಳನ್ನು ಆರಂಭಿಸಲಾಗುವುದು. ಮೂರು ಲೋಕಸಭಾ ಕ್ಷೇತ್ರಗಳಿಗೆ ಒಂದು ವೈದ್ಯಕೀಯ ಕಾಲೇಜು, ಎರಡು ಕೋಟಿ ಬಡವರಿಗೆ ವಸತಿ, 15 ಕೋಟಿ ಗ್ರಾಮೀಣ ಮನೆಗಳಲ್ಲಿ ಕುಡಿಯುವ ನೀರು ಸರಬರಾಜು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 1.25 ಲಕ್ಷ ಕಿ.ಮೀ ರಸ್ತೆಗಳು, ಜೊತೆಗೆ ಪ್ರತಿ ಗ್ರಾಮವನ್ನು ಬ್ರಾಡ್‌ಬ್ಯಾಂಡ್ ಮತ್ತು ಆಪ್ಟಿಕಲ್ ಫೈಬರ್ ನೆಟ್‌ವರ್ಕ್‌ನೊಂದಿಗೆ ಸಂಪರ್ಕಿಸುವುದು ಹೀಗೆ  ಕೆಲವು ಸಾಧಿಸಬೇಕಾದ ಗುರಿಗಳಿವೆ. 50,000 ಕ್ಕೂ ಹೆಚ್ಚು ಹೊಸ ಸ್ಟಾರ್ಟ್ ಅಪ್‌ಗಳ ಬಗ್ಗೆಯೂ ಯೋಜನೆಯಿದೆ.
 
38.      ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಾದ ಭಾರತೀಯ ಸಂವಿಧಾನವು 70 ವರ್ಷಗಳನ್ನು ಪೂರೈಸುತ್ತಿದೆ. ಹಾಗೆಯೇ ಈ ವರ್ಷ ಗುರುನಾನಕ್ ದೇವ್ ಅವರ 550 ನೇ ಜನ್ಮದಿನಾಚರಣೆಯಿಂದಾಗಿ ಮುಖ್ಯವಾಗಿದೆ. ಉತ್ತಮ ಸಮಾಜ ಮತ್ತು ಉತ್ತಮ ದೇಶಕ್ಕಾಗಿ ಬಾಬಾ ಸಾಹೇಬ್ ಮತ್ತು ಗುರುನಾನಕ್ ದೇವ್ ಅವರ ಬೋಧನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ಮುಂದುವರಿಯೋಣ.
ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
India's core sector output in June grows 8.9% year-on-year: Govt

Media Coverage

India's core sector output in June grows 8.9% year-on-year: Govt
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 31 ಜುಲೈ 2021
July 31, 2021
ಶೇರ್
 
Comments

PM Modi inspires IPS probationers at Sardar Vallabhbhai Patel National Police Academy today

Citizens praise Modi Govt’s resolve to deliver Maximum Governance