1. ಭಾರತ ಗಣರಾಜ್ಯದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀ ರಾಮ್ ನಾಥ್ ಕೋವಿಂದ್ ಮತ್ತು ಶ್ರೀಮತಿ ಸವಿತಾ ಕೋವಿಂದ್ ಅವರ ಆಹ್ವಾನದ ಮೇರೆಗೆ, ಮ್ಯಾನ್ಮಾರ್ ಗಣರಾಜ್ಯದ  ಗೌರವಾನ್ವಿತ ಅಧ್ಯಕ್ಷರಾದ  ಯು ವಿನ್ ಮಿಂಟ್, ಮತ್ತು ಪ್ರಥಮ ಮಹಿಳೆ  ಡಾ ಚೋ ಚೋ, 2020 ರ ಫೆಬ್ರವರಿ 26 ರಿಂದ 29 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡುತ್ತಿದ್ದಾರೆ.   ಅಧ್ಯಕ್ಷ ಯು ವಿನ್ ಮಿಂಟ್ ಮತ್ತು ಮ್ಯಾನ್ಮಾರ್ ನಿಯೋಗದ ಸದಸ್ಯರು  ಬೋಧ್ ಗಯಾ ಮತ್ತು ಆಗ್ರಾ ಸೇರಿದಂತೆ ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ  ಮಹತ್ವವಾಗಿರುವ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ . ಈ ಭೇಟಿಯು ಉನ್ನತ ಮಟ್ಟದ ಸಂವಹನಗಳ ಸಂಪ್ರದಾಯವನ್ನು ಬಲಪಡಿಸಿತು ಮತ್ತು  ಇದು ಎರಡು ನೆರೆಹೊರೆಯವರ ನಡುವೆ ಇರುವ ಬಲವಾದ ಸ್ನೇಹ ಸಂಬಂಧಗಳ ಸಂಕೇತವಾಗಿದೆ.
  2. ಫೆಬ್ರವರಿ 27, 2020 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅಧ್ಯಕ್ಷ ಯು ವಿನ್ ಮಿಂಟ್ ಮತ್ತು ಪ್ರಥಮ ಮಹಿಳೆ ಡಾ ಚೋ ಚೋ ಅವರನ್ನು ವಿಧ್ಯುಕ್ತವಾಗಿ  ಸ್ವಾಗತಿಸಲಾಯಿತು.   ಭೇಟಿ ನೀಡಿದ ಗಣ್ಯರ ಗೌರವಾರ್ಥ  ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು ಔತಣಕೂಟವನ್ನು ಆಯೋಜಿಸಿದರು.   ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿಯವರು ಅಧ್ಯಕ್ಷ ಯು ವಿನ್ ಮಿಂಟ್ ಅವರನ್ನು ಭೇಟಿಯಾಗಿ ಆತಿಥ್ಯ ವಹಿಸಿದ್ದರು.  ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಅವರು ಅಧ್ಯಕ್ಷ ಯು ವಿನ್ ಮಿಂಟ್ ಅವರನ್ನು ಭೇಟಿ ಮಾಡಿದರು. ಭೇಟಿಯ ಸಂದರ್ಭದಲ್ಲಿ  ಹತ್ತು  ಒಡಂಬಡಿಕೆ/ ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
  3. ಸಂವಾದದಲ್ಲಿ, ಉಭಯ ನಾಯಕರು ಸಾಮಾನ್ಯ ಆಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಿದರು. ನಿಯಮಿತ ಉನ್ನತ ಮಟ್ಟದ ಸಂವಹನಗಳು ದ್ವಿಪಕ್ಷೀಯ ಸಂಬಂಧಗಳಿಗೆ ಆವೇಗವನ್ನು ನೀಡಿವೆ ಎಂದು ಒತ್ತಿ ಹೇಳಿದರು.  ಅವರು ಮ್ಯಾನ್ಮಾರ್‌ನ ಸ್ವತಂತ್ರ, ಸಕ್ರಿಯ ಮತ್ತು ಅಲಿಪ್ತ ವಿದೇಶಾಂಗ ನೀತಿ ಮತ್ತು ಭಾರತದ  'ಆಕ್ಟ್ ಈಸ್ಟ್' ಮತ್ತು 'ನೇಬರ್ ಹುಡ್ ಫರ್ಸ್ಟ್ ‘ (ನೆರೆಹೊರೆಯವರು ಮೊದಲು) ನೀತಿಗಳ ನಡುವಿನ  ಸಾಮರಸ್ಯವನ್ನು ಸ್ವಾಗತಿಸಿದರು, ಎರಡೂ ದೇಶಗಳ ಮತ್ತು ಜನರ  ಪ್ರಯೋಜನಕ್ಕಾಗಿ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ತಮ್ಮ ಬದ್ಧತೆಗಳನ್ನು ಪುನರುಚ್ಚರಿಸಿದರು  ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸುವ ಸಲುವಾಗಿ ಸಹಕಾರದ ಹೊಸ ಮಾರ್ಗಗಳನ್ನು ಅನ್ವೇಷಿಸಿದರು.
  4. ಉಭಯ ದೇಶಗಳ ಗಡಿಯಲ್ಲಿ ಈಗಾಗಲೇ ಗುರುತಿಸಲಾಗಿರುವ ಭಾಗವನ್ನು ಪರಸ್ಪರ ಮಾನ್ಯ ಮಾಡುವ ಬಗ್ಗೆ ಪುನರುಚ್ಚರಿಸಿದವು ಮತ್ತು ಜಂಟಿ ಗಡಿ ಕಾರ್ಯ ಸಮೂಹ ಸಭೆಯಂತಹ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಕಾರ್ಯವಿಧಾನಗಳ ಮೂಲಕ ಬಾಕಿ ಇರುವ ಸಮಸ್ಯೆಗಳನ್ನು ಬಗೆಹರಿಸುವ ಬದ್ಧತೆಯನ್ನು ದೃಢಪಡಿಸಿದವು.
  5. ಎರಡೂ ಕಡೆಯವರು ತಮ್ಮ ಸಂಬಂಧದಲ್ಲಿ ಇರಬೇಕಾದ ಸಂಪರ್ಕದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು ಮತ್ತು ಮ್ಯಾನ್ಮಾರ್‌ನ ನಿರಂತರ ಬೆಂಬಲ ಮತ್ತು ಕಾರ್ಯನಿರ್ವಹಣೆಗೆ ಅನುಕೂಲ ಮಾಡಿಕೊಡುವುದರಿಂದ  ಪ್ರಸ್ತುತ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಭಾರತ-ಅನುದಾನಿತ ವಿವಿಧ ಯೋಜನೆಗಳ ಪೂರ್ಣಗೊಳಿಸುವಿಕೆಯನ್ನು  ತ್ವರಿತಗೊಳಿಸುವ ತಮ್ಮ ಬದ್ಧತೆಗಳನ್ನು ಪುನರುಚ್ಚರಿಸಿದರು,
  6. ತಮು-ಮೊರೆಹ್ ಮತ್ತು ರಿಹ್ಖಾವ್ಡರ್ – ಜೊಕಾವ್ತರ್ ನಲ್ಲಿ ಎರಡು ಗಡಿ ದಾಟುವ ಸ್ಥಳಗಳನ್ನು ಅಂತರರಾಷ್ಟ್ರೀಯ ಗಡಿ ದ್ವಾರಗಳಾಗಿ ತೆರೆಯುವುದನ್ನು ಸ್ವಾಗತಿಸಿದ ಅವರು, ಕಾರ್ಯವಿಧಾನಗಳನ್ನು ಸುವ್ಯವಸ್ಥಿತಗೊಳಿಸುವ ಮೂಲಕ ಮತ್ತು ಮೂಲಸೌಕರ್ಯಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸುವ ಮೂಲಕ ಪ್ರಯಾಣಿಕರ ಮತ್ತು ಸರಕು ಸಂಚಾರವನ್ನು ಸುಲಭವಾಗಿ ಸುವ ಅಗತ್ಯವನ್ನು ಗಮನಿಸಿದರು.  ಮ್ಯಾನ್ಮಾರ್‌ನ ತಮುನಲ್ಲಿ ಹಂತ -1 ರಂತೆ ಆಧುನಿಕ ಏಕೀಕೃತ ಚೆಕ್ ಪೋಸ್ಟ್ ನಿರ್ಮಾಣದ ಬಗೆಗಿನ ಬದ್ಧತೆಯನ್ನು ಭಾರತದ ಕಡೆಯವರು ಪುನರುಚ್ಚರಿಸಿದರು. ಯೋಜನೆಯ ತ್ವರಿತ ಪ್ರಾರಂಭಕ್ಕಾಗಿ ಎರಡೂ ಕಡೆಯವರು ಒಟ್ಟಾಗಿ ಕೆಲಸ ಮಾಡಲು ಒಪ್ಪಿದರು.  ವಾಹನಗಳ ಗಡಿಯಾಚೆಗಿನ ಸಂಚಾರಕ್ಕೆ ಅನುಕೂಲವಾಗುವಂತೆ ಬಾಕಿ ಇರುವ ದ್ವಿಪಕ್ಷೀಯ ಮೋಟಾರು ವಾಹನಗಳ ಒಪ್ಪಂದದ ಚರ್ಚೆಯ ತ್ವರಿತ ತೀರ್ಮಾನಕ್ಕೆ ಎರಡೂ ಕಡೆಯವರು ಬದ್ಧರಾಗಿದ್ದಾರೆ.  ಈ ಹಿನ್ನೆಲೆಯಲ್ಲಿ, ಏಪ್ರಿಲ್ 7, 2020 ರ ವೇಳೆಗೆ ಇಂಫಾಲ್ ಮತ್ತು ಮಾಂಡಲೆ ನಡುವೆ ಸಮನ್ವಯದ ಬಸ್ ಸೇವೆಯನ್ನು ಪ್ರಾರಂಭಿಸಲು ಎರಡೂ ಕಡೆಯವರು ತಮ್ಮ ಖಾಸಗಿ ನಿರ್ವಾಹಕರ ನಡುವಿನ ಒಪ್ಪಂದವನ್ನು ಸ್ವಾಗತಿಸಿದರು.
  7. ಉಭಯ ದೇಶಗಳ ಗಡಿಯುದ್ದಕ್ಕೂ ಇರುವ ಪ್ರದೇಶಗಳಲ್ಲಿನ ಜನರ ಯೋಗಕ್ಷೇಮವನ್ನು ಉತ್ತೇಜಿಸುವ ಮಹತ್ವಕ್ಕೆ ಒತ್ತು ನೀಡುತ್ತಾ, ಗಡಿ ಮಾರುಕಟ್ಟೆಗಳ ಸ್ಥಾಪನೆಯನ್ನು ಪ್ರಾರಂಭಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಇದಕ್ಕಾಗಿ  ಈ ಹಿಂದೆ 2012 ರಲ್ಲಿ ಸಹಿ ಹಾಕಿದ ಒಪ್ಪಂದದ ಪ್ರಕಾರ ಆದ್ಯತೆಯ ಮೇರೆಗೆ ಪ್ರಾಯೋಗಿಕ ಯೋಜನೆಯನ್ನು ಕೈಗೊಳ್ಳಲು  ಒಪ್ಪಿಕೊಂಡರು.  ಪರಸ್ಪರ ಒಪ್ಪಿದ ಕಾರ್ಯಾಚರಣೆಯ ಕ್ರಮವನ್ನು ಅಂತಿಮಗೊಳಿಸಿದ ನಂತರ  ಗಡಿ ಮಾರುಕಟ್ಟೆಗಳನ್ನು ಸ್ಥಾಪಿಸಲು ಎರಡೂ ಕಡೆಯವರು ಎದುರು ನೋಡುತ್ತಿರುವರು.
  8. ಭಾರತದ ಅನುದಾನಿತ ಯೋಜನೆಗಳ ಮೂಲಕ ಚಿನ್ ರಾಜ್ಯ ಮತ್ತು ನಾಗಾ ವಲಯ ಪ್ರದೇಶಗಳಲ್ಲಿ ಮೂಲಸೌಕರ್ಯ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಒದಗಿಸುವಲ್ಲಿ ಮ್ಯಾನ್ಮಾರ್-ಭಾರತ ಗಡಿ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮಗಳ ಯಶಸ್ಸಿನ ಬಗ್ಗೆ ಎರಡೂ ಕಡೆಯವರು ತೃಪ್ತಿ ವ್ಯಕ್ತಪಡಿಸಿದರು.  ಈ ಯೋಜನೆಗಳ ಅಡಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಈ ಪ್ರದೇಶಗಳಲ್ಲಿ  43 ಶಾಲೆಗಳು, 18 ಆರೋಗ್ಯ ಕೇಂದ್ರಗಳು ಮತ್ತು 51 ಸೇತುವೆಗಳು ಮತ್ತು ರಸ್ತೆಗಳನ್ನು ನಿರ್ಮಿಸಲಾಗಿದೆ.  4 ನೇ ವರ್ಷದ 5 ದಶಲಕ್ಷ ಯುಎಸ್ ಡಾಲರ್ ನ ನೆರವಿನಡಿಯಲ್ಲಿ 29 ಹೆಚ್ಚುವರಿ ಯೋಜನೆಗಳನ್ನು 2020-21ರಲ್ಲಿ ಜಾರಿಗೆ ತರಲಾಗುವುದು ಎಂದು ಎರಡೂ ಕಡೆಯವರು ತೃಪ್ತಿಯಿಂದ ಒಪ್ಪಿಕೊಂಡಿದ್ದಾರೆ.   
  9. ಸಿಟ್ವೆ ಬಂದರು ಮತ್ತು ಕಲಾದನ್ ಮಲ್ಟಿ ಮೋಡಲ್ ಟ್ರಾನ್ಸಿಟ್ ಟ್ರಾನ್ಸ್ಪೋರ್ಟ್ ಪ್ರಾಜೆಕ್ಟ್ ಗೆ ಸಂಬಂಧಿಸಿದ ಸಕಾರಾತ್ಮಕ ಬೆಳವಣಿಗೆಗಳನ್ನು ಉಭಯ ನಾಯಕರು ಗಮನಿಸಿದರು.  ಸಿಟ್ವೆ ಬಂದರು ಮತ್ತು ಪ್ಯಾಲೆಟ್ವಾ ಒಳನಾಡಿನ ಜಲ ಸಾರಿಗೆ ಟರ್ಮಿನಲ್ ಮತ್ತು ಅದಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಫೆಬ್ರವರಿ 1, 2020 ರಿಂದ ನಡೆಸಲು ಮತ್ತು ನಿರ್ವಹಿಸಲು ಪೋರ್ಟ್ ಆಪರೇಟರ್ ಗಳ ನೇಮಕವನ್ನು ಅವರು ಸ್ವಾಗತಿಸಿದರು. ಕಾರ್ಯರೂಪಕ್ಕೆ ಬಂದ ನಂತರ, ಈ ಬಂದರು ಪ್ರದೇಶವಯ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಮತ್ತು ಸ್ಥಳೀಯ ಜನರಿಗೆ ಅನುಕೂಲವಾಗುತ್ತದೆ. ಕಲಡಾನ್ ಯೋಜನೆಯ ಅಂತಿಮ ಹಂತವಾದ ಪ್ಯಾಲೆಟ್ವಾ-ಜೋರಿನ್‌ಪುಯಿ ರಸ್ತೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಬಗ್ಗೆ ಎರಡೂ ಕಡೆಯವರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಪೂರ್ಣಗೊಂಡ ನಂತರ, ರಸ್ತೆ ಸಿಟ್ವೆ ಬಂದರನ್ನು ಈಶಾನ್ಯ ಭಾರತಕ್ಕೆ ಸಂಪರ್ಕಿಸುತ್ತದೆ, ಇದು ಬಂದರಿಗೆ ಹೆಚ್ಚಿನ  ವಹಿವಾಟನ್ನು ನೀಡುತ್ತದೆ.  ಮಿಜೋರಾಂ ಗಡಿಯುದ್ದಕ್ಕೂ ಜೋರಿನ್‌ಪುಯಿ ಮೂಲಕ ದಕ್ಷಿಣಕ್ಕೆ ಪ್ಯಾಲೆಟ್ವಾ ಕಡೆಗೆ ಕಲಾದನ್ ಮಲ್ಟಿ ಮೋಡಲ್ ಟ್ರಾನ್ಸಿಟ್ ಟ್ರಾನ್ಸ್‌ಪೋರ್ಟ್ ಪ್ರಾಜೆಕ್ಟ್‌ನ ರಸ್ತೆ ಘಟಕದ ನಿರ್ಮಾಣಕ್ಕಾಗಿ ಯೋಜನಾ ಸಿಬ್ಬಂದಿ, ನಿರ್ಮಾಣ ಸಾಮಗ್ರಿಗಳು ಮತ್ತು ಸಲಕರಣೆಗಳ ಚಲನೆಗೆ ಅನುಕೂಲವಾಗುವಂತೆ  ಮಾಡುವಲ್ಲಿನ ಮ್ಯಾನ್ಮಾರ್‌ನ ಸಹಕಾರವನ್ನು  ಭಾರತವು ಶ್ಲಾಘಿಸಿದೆ.  
  10. ತ್ರಿಪಕ್ಷೀಯ ಹೆದ್ದಾರಿಯ ಕಲೇವಾ – ಯಾರ್ಗಿ ರಸ್ತೆ ವಿಭಾಗದ ಪ್ರಗತಿಯ ಬಗ್ಗೆ ಉಭಯ ನಾಯಕರು ಸಕಾರಾತ್ಮಕವಾಗಿ ಗಮನ ಹರಿಸಿದರು, ಈ ಕಾರ್ಯವು 2021 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ತ್ರಿಪಕ್ಷೀಯ ಹೆದ್ದಾರಿಯಲ್ಲಿರುವ 69 ಸೇತುವೆಗಳ ಶೀಘ್ರ ನವೀಕರಣಕ್ಕೆ ಭಾರತ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು. ಮ್ಯಾನ್ಮಾರ್ ಇದಕ್ಕಾಗಿ ಅನುಕೂಲ ಕಲ್ಪಿಸಲು  ಒಪ್ಪಿಕೊಂಡಿದೆ.
  11. ಸಾಮರ್ಥ್ಯ ವೃದ್ಧಿ ಮತ್ತು ತರಬೇತಿಯ ಕ್ಷೇತ್ರದಲ್ಲಿ ಭಾರತದ ಸಹಾಯವನ್ನು ಮ್ಯಾನ್ಮಾರ್ ಶ್ಲಾಘಿಸಿದೆ. ಮ್ಯಾನ್ಮಾರ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಅಂಡ್ ಟೆಕ್ನಾಲಜಿ (ಎಂಐಐಟಿ) ಮತ್ತು ಅಡ್ವಾನ್ಸ್ಡ್ ಸೆಂಟರ್ ಫಾರ್ ಅಗ್ರಿಕಲ್ಚರಲ್ ರಿಸರ್ಚ್ ಅಂಡ್ ಎಜುಕೇಶನ್ (ಎಸಿಎಆರ್ಇ) ನಂತಹ ಪ್ರಮುಖ ಯೋಜನೆಗಳನ್ನು ಜಂಟಿಯಾಗಿ ದೀರ್ಘಾವಧಿಯಲ್ಲಿ ಸುಸ್ಥಿರಗೊಳಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಯೋಜನೆಯ ವಿಧಾನಗಳನ್ನು ಅಂತಿಮಗೊಳಿಸಿದ ನಂತರ ಯಮೆಥಿನ್‌ನಲ್ಲಿರುವ ಮಹಿಳಾ ಪೊಲೀಸ್ ತರಬೇತಿ ಕೇಂದ್ರದ ಶೀಘ್ರ ನವೀಕರಣಕ್ಕಾಗಿ ಉಭಯ ನಾಯಕರು ಎದುರು ನೋಡುತ್ತಿದ್ದರು.  ಪಕೋಕ್ಕು ಮತ್ತು ಮೈಯಿಂಗ್ಯಾನ್‌ನಲ್ಲಿನ ಭಾರತದ ಅನುದಾನದ ಸಹಾಯದಿಂದ ಸ್ಥಾಪಿಸಲ್ಪಟ್ಟಿರುವ ಮ್ಯಾನ್ಮಾರ್-ಭಾರತ ಕೈಗಾರಿಕಾ ತರಬೇತಿ ಕೇಂದ್ರಗಳು ಮ್ಯಾನ್ಮಾರ್ ಯುವಕರಿಗೆ ತಮ್ಮ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲು ಕೌಶಲ್ಯಗಳನ್ನು ನೀಡುವಲ್ಲಿ ಯಶಸ್ಸಿನ ಪಾತ್ರವಹಿಸುತ್ತಿವೆ ಎನ್ನುವುದನ್ನು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ.   ಮೊನಿವಾ ಮತ್ತು ಥಾಟನ್‌ನಲ್ಲಿ ಎರಡು ಹೊಸ ಕೇಂದ್ರಗಳನ್ನು ನಿರ್ಮಿಸುವ ಪ್ರಯತ್ನಗಳ ಪ್ರಗತಿಯು ಉತ್ತಮವಾಗಿವೆ ಎಂದು ಅವರು ಗಮನಿಸಿದರು. 
  12. ರಾಖೈನ್ ರಾಜ್ಯ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ರಾಖೈನ್ ರಾಜ್ಯದಲ್ಲಿ ಶಾಂತಿ, ಸ್ಥಿರತೆ ಮತ್ತು ಸಾಮಾಜಿಕ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಮ್ಯಾನ್ಮಾರ್‌ನ ಪ್ರಯತ್ನಗಳನ್ನು ಬೆಂಬಲಿಸುವ ಬದ್ಧತೆಯನ್ನು ಭಾರತ ಪುನರುಚ್ಚರಿಸಿತು. 2019 ರಲ್ಲಿ ಉತ್ತರ ರಾಖೈನ್‌ನಲ್ಲಿ ಸ್ಥಳಾಂತರಗೊಂಡ ಜನರಿಗೆ 250 ಪೂರ್ವ ನಿರ್ಮಿತ ಮನೆಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ಭಾರತ ಒದಗಿಸಿರುವುದನ್ನು ಮ್ಯಾನ್ಮಾರ್ ಶ್ಲಾಘಿಸಿದೆ.  .  ಮೆಕಾಂಗ್-ಗಂಗಾ ಸಹಕಾರ ಕಾರ್ಯವಿಧಾನದ ಅಡಿಯಲ್ಲಿ ಹೆಚ್ಚಿನ ಪರಿಣಾಮದ ಸಮುದಾಯ ಅಭಿವೃದ್ಧಿ ಯೋಜನೆಗಳು ಮತ್ತು ತ್ವರಿತ ಪರಿಣಾಮ ಯೋಜನೆಗಳ ಚೌಕಟ್ಟಿನೊಳಗೆ ಅಭಿವೃದ್ಧಿ ಸಹಕಾರದೊಂದಿಗೆ ರಾಖೈನ್ ರಾಜ್ಯ ಅಭಿವೃದ್ಧಿ ಕಾರ್ಯಕ್ರಮದ ಎರಡನೇ ಹಂತದಲ್ಲಿ 12 ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸಲು ಮತ್ತು ಅವುಗಳನ್ನು ಮತ್ತಷ್ಟು ಬಲಪಡಿಸಲು ಎರಡೂ ಕಡೆಯವರು ಒಪ್ಪಿಕೊಂಡರು.  ಈ ನಿಟ್ಟಿನಲ್ಲಿ, ಅಧಿಕೃತ ಭೇಟಿಯ ಸಮಯದಲ್ಲಿ ತ್ವರಿತ ಪರಿಣಾಮ ಯೋಜನೆಗಳ ಅನುಷ್ಠಾನಕ್ಕೆ (ಕ್ಯೂಐಪಿ) ಭಾರತೀಯ ಅನುದಾನ ಸಹಾಯದ ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ಅವರು ಸ್ವಾಗತಿಸಿದರು.  
  13. ಉತ್ತರ ರಾಖೈನ್‌ನಲ್ಲಿನ ಸವಾಲುಗಳನ್ನು ಎದುರಿಸಲು ಮ್ಯಾನ್ಮಾರ್ ಸರ್ಕಾರ ಇತ್ತೀಚೆಗೆ ಕೈಗೊಂಡ ಕ್ರಮಗಳಿಗೆ ಭಾರತ ತನ್ನ ಬೆಂಬಲವನ್ನು ಪುನರುಚ್ಚರಿಸಿತು. ರಾಖೈನ್ ರಾಜ್ಯದಿಂದ ಸ್ಥಳಾಂತರಗೊಂಡವರನ್ನು ವಾಪಾಸು  ಕಳುಹಿಸಲು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ನಡುವೆ ಸಹಿ ಹಾಕಿದ ದ್ವಿಪಕ್ಷೀಯ ಒಪ್ಪಂದಗಳಿಗೆ ಭಾರತ ಬೆಂಬಲ ವ್ಯಕ್ತಪಡಿಸಿತು ಮತ್ತು ಪ್ರಸ್ತುತ  ಕಾಕ್ಸ್ ಬಜಾರ್‌ನಲ್ಲಿರುವ ಸ್ಥಳಾಂತರಗೊಂಡ ಜನರು ಸ್ವಯಂಪ್ರೇರಿತ, ಸುಸ್ಥಿರ ಮತ್ತು ಶೀಘ್ರವಾಗಿ ವಾಪಸಾಗಿಸಲು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸಲಿದೆ ಎಂದು ಆಶಿಸಿದರು.  ಅವರ ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಸಾರವಾಗಿ ಬಾಂಗ್ಲಾದೇಶದ ಪ್ರದೇಶದಿಂದ ಮ್ಯಾನ್ಮಾರ್‌ಗೆ.  ಮ್ಯಾನ್ಮಾರ್ ನವರು ಈ ಸಮಸ್ಯೆಯ ಸಂಕೀರ್ಣತೆಯನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಮತ್ತು ಮ್ಯಾನ್ಮಾರ್‌ಗೆ ನೀಡಿದ ಎಲ್ಲ ಬೆಂಬಲಕ್ಕಾಗಿ ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
  14. ದ್ವಿಪಕ್ಷೀಯ ವ್ಯಾಪಾರ ಮತ್ತು ಆರ್ಥಿಕ ಒಪ್ಪಂದವನ್ನು ತಮ್ಮ ಪೂರ್ಣ ಸಾಮರ್ಥ್ಯದ ಮಟ್ಟಕ್ಕೆ ಹೆಚ್ಚಿಸುವ ಪ್ರಯತ್ನಗಳನ್ನು ಮಾಡುವ ಅಗತ್ಯವನ್ನು ಎರಡೂ ಕಡೆಯವರು ಗಮನಿಸಿದರು. ಸಂಪರ್ಕವನ್ನು ಸುಧಾರಿಸುವುದು, ಮಾರುಕಟ್ಟೆ ಪ್ರವೇಶ, ಹಣಕಾಸಿನ ವಹಿವಾಟುಗಳನ್ನು ಸರಾಗಗೊಳಿಸುವಿಕೆ, ವ್ಯವಹಾರದಿಂದ ವ್ಯವಹಾರಕ್ಕೆ ಸಂಪರ್ಕ ಕಲ್ಪಿಸುವುದು ಮತ್ತು ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವ್ಯಾಪಾರ ಒಪ್ಪಂದಗಳನ್ನು ಸಕ್ರಿಯಗೊಳಿಸುವುದು ಮುಂತಾದ ಕ್ರಮಗಳು ಎರಡೂ ಕಡೆಯ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತವೆ ಎಂದು ಅವರು ಗಮನಿಸಿದರು. 
  15. ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಸಂಸ್ಥೆಯು ಮ್ಯಾನ್ಮಾರ್ ಕಾನೂನು ಮತ್ತು ನಿಬಂಧನೆಗಳಡಿಯಲ್ಲಿ ಮ್ಯಾನ್ಮಾರ್‌ನಲ್ಲಿ ಭಾರತದ ರುಪೇ ಕಾರ್ಡ್ ಅನ್ನು ಶೀಘ್ರವಾಗಿ ಪ್ರಾರಂಭಿಸಲು ಎರಡೂ ಕಡೆಯವರು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡರು. ಇದು ಮ್ಯಾನ್ಮಾರ್ ನ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಮತ್ತು ಭಾರತದಿಂದ ಪ್ರವಾಸೋದ್ಯಮ ಮತ್ತು ವ್ಯವಹಾರಕ್ಕೆ ಅನುಕೂಲವಾಗಲಿದೆ.  
  16. ಭಾರತ-ಮ್ಯಾನ್ಮಾರ್ ಡಿಜಿಟಲ್ ಪಾವತಿ ಗೇಟ್‌ವೇ ರಚನೆಯನ್ನು ಅನ್ವೇಷಿಸಲು ಎರಡೂ ಕಡೆಯವರು ಒಪ್ಪಿಕೊಂಡರು, ಇದು ಉಭಯ ದೇಶಗಳ ನಡುವಿನ ಹಣದ ರವಾನೆಗಾಗಿ ಹಚ್ಚು ಆಯ್ಕೆಗಳನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.  ಗಡಿಯಾಚೆಗಿನ ವ್ಯಾಪಾರವನ್ನು ಹೆಚ್ಚಿಸುವ ಉದ್ದೇಶದಿಂದ ಸ್ಥಳೀಯ ಕರೆನ್ಸಿಯಲ್ಲಿ ಪಾವತಿಸಲು ಮತ್ತು ದ್ವಿಪಕ್ಷೀಯ ಕಾರ್ಯವಿಧಾನವನ್ನು ಅನ್ವೇಷಿಸಲು ಅವರು ಆಸಕ್ತಿ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ, ಅಸ್ತಿತ್ವದಲ್ಲಿರುವ ಕಾರ್ಯವಿಧಾನದ ಭಾರತ-ಮ್ಯಾನ್ಮಾರ್ ಜಂಟಿ ವ್ಯಾಪಾರ ಸಮಿತಿ ಸಭೆಗಳನ್ನು ತ್ವರಿತವಾಗಿ ಕರೆಯಲು ಎರಡೂ ಕಡೆಯವರು ಒಪ್ಪಿಕೊಂಡರು. 
  17. ಉಭಯ ದೇಶಗಳ ನಡುವಿನ ಇಂಧನ ಕ್ಷೇತ್ರದಲ್ಲಿ ಹೆಚ್ಚಿನ ಏಕೀಕರಣದ ಪರಸ್ಪರ ಲಾಭವನ್ನು ಎರಡೂ ಕಡೆಯವರು ಗುರುತಿಸಿದ್ದಾರೆ. ಭಾರತ ಮತ್ತು ಮ್ಯಾನ್ಮಾರ್ , ಸರ್ಕಾರದಿಂದ ಸರ್ಕಾರಕ್ಕೆ ತಿಳುವಳಿಕೆ ಪತ್ರದ ಮೂಲಕ ಸಂಸ್ಕರಣೆ, ದಾಸ್ತಾನು, ಮಿಶ್ರಣ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಸಹಕಾರಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳ ಕ್ಷೇತ್ರದಲ್ಲಿ ಸಹಕರಿಸಲು ಒಪ್ಪಿಕೊಂಡಿತು.  ಈ ಕ್ಷೇತ್ರದಲ್ಲಿ ವ್ಯಾಪಾರ ಮತ್ತು ಹೂಡಿಕೆಗಳನ್ನು ಹೆಚ್ಚಿಸುವುದು ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ಅಭಿವೃದ್ಧಿಗೆ ಭಾರತ ಮತ್ತು ಮ್ಯಾನ್ಮಾರ್‌ನ ತೈಲ ಮತ್ತು ಅನಿಲ ಕಂಪನಿಗಳ ನಡುವೆ ಸಹಕಾರವನ್ನು ಉತ್ತೇಜಿಸಲು ಮತ್ತು ಸುಗಮಗೊಳಿಸಲು ಎರಡೂ ಕಡೆಯವರು ಒಪ್ಪಿಕೊಂಡರು.  ಮ್ಯಾನ್ಮಾರ್‌ನ ತೈಲ ವಲಯದಲ್ಲಿ ಭಾರತೀಯ ತೈಲ ಮತ್ತು ಅನಿಲ ಸಾರ್ವಜನಿಕ ವಲಯದ ಉದ್ಯಮಗಳ  (ಪಿಎಸ್‌ಯು) ಹೂಡಿಕೆಗಳನ್ನು ಎರಡೂ ಕಡೆಯವರು ಸ್ವಾಗತಿಸಿದರು ಮತ್ತು ಹೂಡಿಕೆಗಳನ್ನು ಮಾಡಿದ ಅಂತಹ ಯೋಜನೆಗಳಿಂದ ಉತ್ಪಾದನೆಯ ಒಂದು ಭಾಗವನ್ನು ಭಾರತಕ್ಕೆ ರಫ್ತು ಮಾಡುವ ಅವಕಾಶಗಳನ್ನು ಅನ್ವೇಷಿಸಲು ಪ್ರಯತ್ನಿಸಲಾಗುವುದು ಎಂದು ಒಪ್ಪಿಕೊಂಡರು.
  18. ರಕ್ಷಣಾ ಮತ್ತು ಭದ್ರತಾ ಸಹಕಾರವು ಮ್ಯಾನ್ಮಾರ್-ಭಾರತ ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದಾಗಿದೆ ಎಂದು ಎರಡೂ ಕಡೆಯವರು ಪುನರುಚ್ಚರಿಸಿದರು. ರಕ್ಷಣಾ ಸಿಬ್ಬಂದಿಯ ವಿನಿಮಯ ಭೇಟಿಗಳನ್ನು ಮಾಡಿಕೊಳ್ಳುವಲ್ಲಿರುವ  ಸಕಾರಾತ್ಮಕ ಆವೇಗವನ್ನು ಶ್ಲಾಘಿಸಿದರು. ಜುಲೈ 2019 ರಲ್ಲಿ ಸಹಿ ಹಾಕಿದ ರಕ್ಷಣಾ ಸಹಕಾರ ಒಪ್ಪಂದದ ಒಪ್ಪಂದವು ಹೆಚ್ಚಿನ ಸಹಕಾರಕ್ಕೆ ದಾರಿ ಮಾಡಿಕೊಟ್ಟಿತು  ಎನ್ನುವುದನ್ನು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ. ಮ್ಯಾನ್ಮಾರ್ ರಕ್ಷಣಾ ಸೇವೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಪರಸ್ಪರ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲು ಸಹಕಾರವನ್ನು ಹೆಚ್ಚಿಸಲು ಮ್ಯಾನ್ಮಾರ್ ದೇಶಕ್ಕೆ ಸಹಾಯ ಮಾಡುವ ಬದ್ಧತೆಯನ್ನು ಭಾರತೀಯ ಕಡೆಯವರು ಪುನರುಚ್ಚರಿಸಿದರು.  ಸ್ಥಳೀಯ ಜನರು, ಉಭಯ ದೇಶಗಳು ಮತ್ತು ಪ್ರದೇಶದ ಸಮೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಗೆ ತಮ್ಮ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. ಯಾವುದೇ ಋಣಾತ್ಮಕ ಅಂಶಗಳು ತಮ್ಮ ನೆಲವನ್ನು ಇನ್ನೊಬ್ಬರ ವಿರುದ್ಧ ಪ್ರತಿಕೂಲ ಚಟುವಟಿಕೆಗಳಿಗೆ ಬಳಸಲು  ಅನುವು ಮಾಡಿಕೊಡದಿರುವ  ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
  19. ಉಭಯ ದೇಶಗಳ ನಡುವಿನ ಕಡಲ ಸಹಕಾರವನ್ನು ಉಭಯ ನಾಯಕರು ಸ್ವಾಗತಿಸಿದರು. ಕಡಲ ಸವಾಲುಗಳನ್ನು ಎದುರಿಸುವ ಮತ್ತು ಕಡಲ ಸುರಕ್ಷತೆಯನ್ನು ಬಲಪಡಿಸುವ ಮಹತ್ವವನ್ನು ಅವರು ಗುರುತಿಸಿದ್ದಾರೆ. ಕಡಲ ಭದ್ರತಾ ಸಹಕಾರ (ಎಂಎಸ್‌ಸಿ) ಕುರಿತು ಒಪ್ಪಂದಕ್ಕೆ ಸಹಿ ಹಾಕಿರುವುದನ್ನು , ಸೆಪ್ಟೆಂಬರ್ 2019 ರಲ್ಲಿ ಜಂಟಿ ಕಾರ್ಯ ಸಮೂಹದ (ಜೆಡಬ್ಲ್ಯುಜಿ) ಮೊದಲ ಸಭೆ ನಡೆಸಿರುವುದನ್ನು ಮತ್ತು ವ್ಯಾಪಾರಿ ಹಡಗು ಗಳ ಸಂಚಾರದ ಪೂರ್ವ ಮಾಹಿತಿ ವಿವರಗಳ ದತ್ತಾಂಶಗಳ ವಿನಿಮಯವನ್ನು ಈ ಕ್ಷೇತ್ರದ  ಪ್ರಮುಖ ಹಂತಗಳು ಎನ್ನುವುದನ್ನು  ಉಭಯ ನಾಯಕರು ಒಪ್ಪಿಕೊಂಡಿದ್ದಾರೆ.
  20. ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಇರುವ ಪರಸ್ಪರ ಸಮಸ್ಯೆಯನ್ನು ಬಗೆಹರಿಸಲು ಸಮಗ್ರ ಕಾನೂನು ಚೌಕಟ್ಟನ್ನು ನಿರ್ಮಿಸುವ ಮಹತ್ವವನ್ನು ಒತ್ತಿಹೇಳುತ್ತಾ, ನಾಗರಿಕ ಮತ್ತು ವಾಣಿಜ್ಯ ವಿಷಯಗಳ ಬಗ್ಗೆ ಪರಸ್ಪರ ಕಾನೂನು ನೆರವು ಒಪ್ಪಂದ ಮತ್ತು ಹಸ್ತಾಂತರದ ಒಪ್ಪಂದದಂತಹ ಬಾಕಿ ಉಳಿದಿರುವ ವಿವಿಧ ಒಪ್ಪಂದಗಳ ಕುರಿತು ಮಾತುಕತೆಗಳನ್ನು ಮುಂದುವರಿಸಲು ಉಭಯ ಪಕ್ಷಗಳು ಒಪ್ಪಿಕೊಂಡಿವೆ. ಇವುಗಳ ಶೀಘ್ರ ತೀರ್ಮಾನಕ್ಕಾಗಿ ಅವರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಮ್ಯಾನ್ಮಾರ್‌ನಲ್ಲಿ ಭಾರತೀಯ ನಾಗರಿಕರಿಗೆ ಆಗಮನದಂದು ನೀಡುವ ಪ್ರವಾಸಿ ವೀಸಾದ ಅನುಕೂಲವನ್ನು ಡಿಸೆಂಬರ್ 2020 ರವರೆಗೆ ವಿಸ್ತರಿಸುವ ನಿರ್ಧಾರವನ್ನು ಭಾರತ ಸ್ವಾಗತಿಸಿತು.
  21. ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ "ಭಾಭಾಟ್ರಾನ್ -2" ವೈದ್ಯಕೀಯ ವಿಕಿರಣ ಸಾಧನಗಳನ್ನು ಒದಗಿಸುವ ಭಾರತದ ಪ್ರಸ್ತಾಪವನ್ನು ಮ್ಯಾನ್ಮಾರ್ ಕಡೆಯವರು ಶ್ಲಾಘಿಸಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಎರಡೂ ಕಡೆಯವರು ಒಪ್ಪಿದರು. 
  22. ರಾಷ್ಟ್ರೀಯ ಸಾಮರಸ್ಯ, ಶಾಂತಿ ಪ್ರಕ್ರಿಯೆ ಮತ್ತು ಪ್ರಜಾಪ್ರಭುತ್ವ ಸಂಯುಕ್ತ ಒಕ್ಕೂಟವನ್ನು ಸ್ಥಾಪಿಸಲು ಮ್ಯಾನ್ಮಾರ್‌ನ ಪ್ರಯತ್ನಗಳಿಗೆ ಭಾರತ ತನ್ನ ಬೆಂಬಲವನ್ನು ಪುನರುಚ್ಚರಿಸಿತು. ಮ್ಯಾನ್ಮಾರ್ ನ ಕೆಲಸಗಾರರು, ಕ್ರೀಡಾಪಟುಗಳು, ಸಂಸದರು, ನ್ಯಾಯಾಂಗ ಮತ್ತು ಚುನಾವಣಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗೆ ಭಾರತ ನೀಡುವ ವಿವಿಧ ತರಬೇತಿಗಳು, ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು, ಭೇಟಿಗಳು ಮತ್ತು ಉಪನ್ಯಾಸ ಸರಣಿಗಳ ಬಗ್ಗೆ ಉಭಯ ಕಡೆಯವರು ತೃಪ್ತಿ ವ್ಯಕ್ತಪಡಿಸಿದರು.  ಭಾರತವು ತನ್ನ ರಾಷ್ಟ್ರೀಯ ಜ್ಞಾನ ಜಾಲವನ್ನು (ಎನ್‌ಕೆಎನ್) ಮ್ಯಾನ್ಮಾರ್ ವಿಶ್ವವಿದ್ಯಾಲಯಗಳಿಗೆ ವಿಸ್ತರಿಸುವುದಾಗಿ ಘೋಷಿಸಿತು.  ಮ್ಯಾನ್ಮಾರ್ ಡಿಪ್ಲೊಮ್ಯಾಟಿಕ್ ಅಕಾಡೆಮಿ ಸ್ಥಾಪನೆಯಲ್ಲಿ ಮ್ಯಾನ್ಮಾರ್ ಅನ್ನು ಬೆಂಬಲಿಸುವ ಸಿದ್ಧತೆಯನ್ನು ಭಾರತೀಯ ಕಡೆಯವರು ಪುನರುಚ್ಚರಿಸಿದರು.  ಭಾರತದ "ಆಧಾರ್" ಯೋಜನೆಯ ಆಧಾರದ ಮೇಲೆ ಮ್ಯಾನ್ಮಾರ್‌ನ ರಾಷ್ಟ್ರೀಯ ಐಡಿ ಯೋಜನೆಗೆ ತಾಂತ್ರಿಕ ನೆರವು ನೀಡುವ ಭಾರತದ ಪ್ರಸ್ತಾಪವನ್ನು ಮ್ಯಾನ್ಮಾರ್  ಕೃತಜ್ಞತೆಯಿಂದ ಸ್ಮರಿಸಿತು.
  23. ಪ್ರಜಾಪ್ರಭುತ್ವ ಫೆಡರಲ್ ಒಕ್ಕೂಟವನ್ನು ಸ್ಥಾಪಿಸಲು ರಾಷ್ಟ್ರೀಯ ಸಾಮರಸ್ಯ ಮತ್ತು ಪ್ರಜಾಪ್ರಭುತ್ವದ ಪರಿವರ್ತನೆಯತ್ತ ಮ್ಯಾನ್ಮಾರ್‌ನ ಪ್ರಯತ್ನಗಳಿಗೆ ಭಾರತ ತನ್ನ ಬೆಂಬಲವನ್ನು ಪುನರುಚ್ಚರಿಸಿತು. ರಾಷ್ಟ್ರವ್ಯಾಪಿ ಕದನ ವಿರಾಮ ಒಪ್ಪಂದದ ಚೌಕಟ್ಟಿನಡಿಯಲ್ಲಿ ಸರ್ಕಾರ, ಮಿಲಿಟರಿ ಮತ್ತು ಜನಾಂಗೀಯ ಸಶಸ್ತ್ರ ಗುಂಪುಗಳ ನಡುವಿನ ಸಂವಾದದ ಮೂಲಕ ಅನುಸರಿಸುತ್ತಿರುವ ಮ್ಯಾನ್ಮಾರ್‌ನ ಶಾಂತಿ ಪ್ರಕ್ರಿಯೆಗೆ ಭಾರತದ ಪ್ರಧಾನಮಂತ್ರಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಈ ಪ್ರದೇಶದ ಅಭಿವೃದ್ಧಿಯ ಹಂಚಿಕೊಂಡ ರಾಷ್ಟ್ರೀಯ ಗುರಿಯನ್ನು ಸಾಧಿಸುವಲ್ಲಿ ಸ್ಥಿರತೆ ಮತ್ತು ಶಾಂತಿಯ ಮಹತ್ವವನ್ನು ಉಭಯ ನಾಯಕರು ಒತ್ತಿಹೇಳಿದ್ದಾರೆ. 
  24. ಭಯೋತ್ಪಾದನೆಯಿಂದ ಉಂಟಾಗುವ ಅಪಾಯನ್ನು ಗುರುತಿಸಿದ ಎರಡೂ ಕಡೆಯವರು ಭಯೋತ್ಪಾದಕ ಗುಂಪುಗಳನ್ನು ಮತ್ತು ಅವರ ಕಾರ್ಯಗಳನ್ನು ಎದುರಿಸಲು ಸಹಕರಿಸಲು ಒಪ್ಪಿದರು. ಎರಡೂ ಕಡೆಯವರು ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಖಂಡಿಸಿದರು ಮತ್ತು ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದವನ್ನು ಎದುರಿಸುವಲ್ಲಿ ಬಲವಾದ ಅಂತರರಾಷ್ಟ್ರೀಯ ಸಹಭಾಗಿತ್ವದ ಅಗತ್ಯವನ್ನು ಒತ್ತಿಹೇಳಿದರು. ಈ ನಿಟ್ಟಿನಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಅವರು ಒಪ್ಪಿದರು. 
  25. ಇದಲ್ಲದೆ, ವಿಶ್ವಸಂಸ್ಥೆ (ಯುಎನ್) ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳಂತಹ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ತಮ್ಮ ನಿಕಟ ಸಹಕಾರವನ್ನು ಮುಂದುವರಿಸಲು ಉಭಯ ಪಕ್ಷಗಳು ಒಪ್ಪಿಕೊಂಡಿವೆ . ಆಸಿಯಾನ್, ಬಿಮ್ಸ್ಟೆಕ್, ಮೆಕಾಂಗ್-ಗಂಗಾ ಸಹಕಾರದಂತಹ ಇತರ ಪ್ರಾದೇಶಿಕ ಕಾರ್ಯಗಳಲ್ಲಿ ಸಹಕರಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ವಿಸ್ತೃತ ಮತ್ತು ಸುಧಾರಿತ ಯುಎನ್‌ಎಸ್‌ಸಿಯಲ್ಲಿ ಖಾಯಂ ಸದಸ್ಯರಾಗಲು ಭಾರತದ ಪ್ರಯತ್ನಗಳನ್ನು ಮ್ಯಾನ್ಮಾರ್ ಬೆಂಬಲಿಸಿತು. ಶಾಂತಿಯುತ ಗಡಿಯನ್ನು ಕಾಪಾಡಿಕೊಳ್ಳಲು ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತತೆ, ಅಂತರ್ಗತತೆ, ಪಾರದರ್ಶಕತೆ, ಅಂತರರಾಷ್ಟ್ರೀಯ ಕಾನೂನಿನ ಗೌರವ ಮತ್ತು ಆಸಿಯಾನ್ ಕೇಂದ್ರೀಕರಣದ ತತ್ವಗಳನ್ನು ಉತ್ತೇಜಿಸುವ ಉಭಯ ಪಕ್ಷಗಳು ತಮ್ಮ ಬದ್ಧತೆಗಳನ್ನು ಪುನರುಚ್ಚರಿಸಿದೆ, ಇದು ಪ್ರಗತಿ ಮತ್ತು ಸಮೃದ್ಧಿಯ ಸಾಮಾನ್ಯ ಅನ್ವೇಷಣೆಯಲ್ಲಿ ಎಲ್ಲವನ್ನೂ ಒಳಗೊಂಡಿರುತ್ತದೆ.  ಅಸ್ತಿತ್ವದಲ್ಲಿರುವ ಸ್ನೇಹ ಸಂಬಂಧಗಳು ಮತ್ತು ಉತ್ತಮ ನೆರೆಹೊರೆಯ ಆಧಾರದ ಮೇಲೆ 200 ನಾಟಿಕಲ್ ಮೈಲುಗಳಷ್ಟು ಮೀರಿದ ಭೂಖಂಡದ ಮಿತಿಗೆ  ಸಂಬಂಧಿಸಿದಂತೆ ದ್ವಿಪಕ್ಷೀಯ ತಾಂತ್ರಿಕ ಮಟ್ಟದ ಮಾತುಕತೆಗಳನ್ನು ಮುಂದುವರಿಸಲು ಎರಡೂ ಕಡೆಯವರು ಎದುರು ನೋಡುತ್ತಿದ್ದಾರೆ. 
  26. ಎಲ್ಲಾ ಯುಎನ್ ಸದಸ್ಯ ರಾಷ್ಟ್ರಗಳು ಐಎಸ್ಎಗೆ ಸೇರಲು ಮತ್ತು ಸೌರ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸಲು ಅನುವು ಮಾಡಿಕೊಡುವ ಪ್ರಯತ್ನದ ಭಾಗವಾಗಿ, ಅಂತರರಾಷ್ಟ್ರೀಯ ಸೌರ ಒಕ್ಕೂಟದ (ಐಎಸ್ಎ) ಒಪ್ಪಂದದ ತಿದ್ದುಪಡಿಯನ್ನು ಶೀಘ್ರದಲ್ಲಿಯೇ ಅಂಗೀಕರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮ್ಯಾನ್ಮಾರ್ ಬದ್ಧವಾಗಿದೆ. ಇದಲ್ಲದೆ, ಭಾರತ ಮತ್ತು ಮ್ಯಾನ್ಮಾರ್‌ನಂತಹ ವಿಪತ್ತು ಪೀಡಿತ ರಾಷ್ಟ್ರಗಳಿಗೆ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ (ಸಿಡಿಆರ್‌ಐ) ದ ಪ್ರಸ್ತುತತೆಯನ್ನು ಭಾರತ ಪುನರುಚ್ಚರಿಸಿತು ಮತ್ತು ಸಿಡಿಆರ್‌ಐಗೆ ಸೇರ್ಪಡೆಯಾಗುವುದನ್ನು  ಪರಿಗಣಿಸಲು ಮ್ಯಾನ್ಮಾರ್‌ಗೆ ಉತ್ತೇಜನ ನೀಡಿತು. 
  27. ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಬಗಾನ್ ಸೇರ್ಪಡೆಗೊಳ್ಳುವುದನ್ನು ಭಾರತ ಸ್ವಾಗತಿಸಿತು. ಉಭಯ ರಾಷ್ಟ್ರಗಳೂ   ಬಗಾನ್‌ನಲ್ಲಿ 92 ಭೂಕಂಪ-ಹಾನಿಗೊಳಗಾದ ಪಗೋಡಾಗಳನ್ನು ಪುನಃಸ್ಥಾಪಿಸಲು ಮತ್ತು ಸಂರಕ್ಷಿಸುವ ಯೋಜನೆಯ ಮೊದಲ ಹಂತದ ಅಡಿಯಲ್ಲಿ 12 ಪಗೋಡಾಗಳನ್ನು ಪುನಃಸ್ಥಾಪಿಸಲು ಮತ್ತು ಸಂರಕ್ಷಿಸಲು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ) ಮೊದಲ ಹಂತದ ಕೆಲಸ ಪ್ರಾರಂಭವಾಗಿರುವುದನ್ನು ಸ್ವಾಗತಿಸಿವೆ. . ಈ ಸಂರಕ್ಷಣಾ ಕಾರ್ಯವನ್ನು ಕೈಗೊಳ್ಳಲು ಎಎಸ್ಐ ತಂಡಕ್ಕೆ ಅಗತ್ಯವಾದ ಎಲ್ಲಾ ಬೆಂಬಲವನ್ನು ನೀಡಲು ಮ್ಯಾನ್ಮಾರ್ ಒಪ್ಪಿಕೊಂಡಿತು.
  28. ಉಭಯ ದೇಶಗಳ ನಡುವಿನ ಸ್ನೇಹಪರ ಮತ್ತು ಸೌಹಾರ್ದಯುತ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ದೃ ಧೃಡವಾದ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು ಮತ್ತು ಎಲ್ಲಾ ಹಂತಗಳಲ್ಲಿ ಭಾಗವಹಿಸುವಿಕೆಯನ್ನು ತೀವ್ರಗೊಳಿಸಲು ಒಪ್ಪಿದರು.
  29. ಭಾರತದ ಭೇಟಿಯ ಸಂದರ್ಭದಲ್ಲಿ ಮ್ಯಾನ್ಮಾರ್ ನಿಯೋಗಕ್ಕೆ ಮತ್ತು ತಮಗೆ ನೀಡಿದ ಅಸಾಧಾರಣ ಆತಿಥ್ಯ ಸತ್ಕಾರಕ್ಕಾಗಿ ಅಧ್ಯಕ್ಷ ಯು ವಿನ್ ಮಿಂಟ್ ಮತ್ತು ಪ್ರಥಮ ಮಹಿಳೆ ಡಾ ಚೋ ಚೋ ರವರು ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಮತ್ತು ಅವರ ಪತ್ನಿ ಶ್ರೀಮತಿ. ಸವಿತಾ ಕೋವಿಂದ್  ರವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Chronic therapies power 11% growth in Indian pharma market in May

Media Coverage

Chronic therapies power 11% growth in Indian pharma market in May
NM on the go

Nm on the go

Always be the first to hear from the PM. Get the App Now!
...
World Leaders Congratulate Prime Minister Shri Narendra Modi on Becoming India’s Longest-Serving Elected Prime Minister
June 09, 2026

Prime Minister Shri Narendra Modi received warm congratulations from world leaders on the eve of his becoming the longest-serving elected Prime Minister of India. World leaders from across the globe paid tribute to Prime Minister’s transformative governance, his advocacy for the Global South, and his vision of an inclusive and economically dynamic India.

H.E. Anura Kumara Disanayaka, the President of Sri Lanka, in a letter dated 8 June 2026 addressed to the Prime Minister, conveyed the warm congratulations of the Government and people of Sri Lanka to him, stating: “This milestone is a testament not only to your years in office, but also to the trust and confidence that the people of the world’s largest democracy have repeatedly placed in your leadership.” The President also highlighted India’s remarkable economic and social transformation and noted that Prime Minister Modi’s vision has inspired many beyond India’s borders, including Sri Lanka. Prime Minister Modi visited Sri Lanka from 4–6 April 2025, his fourth visit to the island nation, during which he was conferred the Mitra Vibhushana, Sri Lanka’s highest civilian honour accorded to a foreign dignitary. The visit reaffirmed India’s Neighbourhood First policy, with Sri Lanka among the closest beneficiaries of India’s steadfast partnership, including India’s pivotal support during Sri Lanka’s economic difficulties in 2022.

H.E. James Marape, the Prime Minister of Papua New Guinea, in a personal video message, described Prime Minister Modi as “a role model and an example of leadership”. He also stated - “Lifting over 200 million people out of poverty to good life today is an amazing feat.” Prime Minister Marape expressed Papua New Guinea’s warm friendship and its desire to further consolidate bilateral ties. Prime Minister Modi’s historic visit to Papua New Guinea in May 2023, the first-ever by an Indian Prime Minister, for the Third Forum for India–Pacific Islands Cooperation (FIPIC-III) Summit was a landmark moment in India’s engagement with the Pacific Island nations. The visit underscored India’s role as a committed partner of the Global South.

H.E. Kamla Persad-Bissessar, the Prime Minister of Trinidad and Tobago, congratulated Prime Minister Modi on this occassion, noting that “under the leadership of Prime Minister Modi, India has evolved as a leading voice on global matters.” She highlighted Prime Minister Modi’s journey from humble beginnings to leading a nation of 1.4 billion people across three terms, and underscored India’s significant achievements in foreign policy, economic growth, infrastructure, and socio-economic development. Prime Minister Modi paid a landmark visit to Trinidad and Tobago from 3–4 July 2025, the first bilateral visit by an Indian Prime Minister in 26 years, coinciding with the 180th anniversary of the arrival of Indian immigrants to Trinidad and Tobago.