ಶೇರ್
 
Comments

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಆತ್ಮನಿರ್ಭರ ಭಾರತದ ಉದ್ದೇಶವನ್ನು ಸಾಧಿಸುವ ಸಲುವಾಗಿ ಸರ್ಕಾರಿ ಸರಕುಗಳನ್ನು ಆಮದು ಮಾಡಿಕೊಳ್ಳಲು ಸಚಿವಾಲಯಗಳು ಮತ್ತು ಸಿಪಿಎಸ್‌ಇಗಳು ಕರೆಯುವ ಜಾಗತಿಕ ಟೆಂಡರ್‌ಗಳಲ್ಲಿ ಭಾರತೀಯ ಹಡಗು ಕಂಪನಿಗಳಿಗೆ ಐದು ವರ್ಷಗಳಲ್ಲಿ 1624 ಕೋಟಿ ರೂ. ಸಹಾಯಧನ ಒದಗಿಸುವ ಯೋಜನೆಗೆ ಅನುಮೋದನೆ ನೀಡಿದೆ.

ವಿವರಗಳು ಹೀಗಿವೆ:

ಎ.        2021 ರ ಫೆಬ್ರವರಿ 1 ರ ನಂತರ ಭಾರತದಲ್ಲಿ ಫ್ಲ್ಯಾಗ್ (ಭಾರತದ ನೋಂದಣಿ) ಮಾಡಲಾದ ಮತ್ತು ಭಾರತದಲ್ಲಿ ಫ್ಲ್ಯಾಗ್ ಮಾಡುವ ಸಮಯದಲ್ಲಿ 10 ವರ್ಷಗಳಿಗಿಂತ ಕಡಿಮೆ ಇರುವ ಹಡಗಿಗೆ, ಸಬ್ಸಿಡಿ ಬೆಂಬಲವನ್ನು ಎಲ್ 1 ವಿದೇಶಿ ಹಡಗು ಕಂಪನಿ ನೀಡುವ ದರದ ಶೇ. 15 ರಷ್ಟು  ಅಥವಾ ಆರ್‌ಒಎಫ್‌ಆರ್ ಅನ್ನು ಚಲಾಯಿಸುವ ಭಾರತೀಯ ಧ್ವಜದ ಹಡಗು ನೀಡುವ ದರ ಮತ್ತು ಎಲ್ 1 ವಿದೇಶಿ ಹಡಗು ಕಂಪನಿ ನೀಡುವ ದರಗಳ ನಡುವಿ ನೈಜ ವ್ಯತ್ಯಾಸದಲ್ಲಿ ಯಾವುದು ಕಡಿಮೆಯೋ ಅದನ್ನು ನೀಡಲಾಗುವುದು. 2021 ರ ಫೆಬ್ರವರಿ 1 ರ ನಂತರ ಭಾರತದಲ್ಲಿ ಫ್ಲ್ಯಾಗ್ ಮಾಡಲಾದ ಮತ್ತು ಭಾರತದಲ್ಲಿ ಫ್ಲ್ಯಾಗ್ ಮಾಡುವ ಸಮಯದಲ್ಲಿ 10 ರಿಂದ 20 ವರ್ಷ ವಯಸ್ಸಿನ ಹಡಗಿಗೆ, ಸಬ್ಸಿಡಿ ಬೆಂಬಲವನ್ನು ಎಲ್ 1 ವಿದೇಶಿ ಹಡಗು ಕಂಪನಿ ನೀಡುವ ದರದ ಶೇ.10 ರಷ್ಟು ಅಥವಾ ವಿಸ್ತರಿಸಲಾಗುವುದು. ಆರ್‌ಒಎಫ್‌ಆರ್ ಅನ್ನು ಚಲಾಯಿಸುವ ಭಾರತೀಯ ಧ್ವಜ ಹಡಗು ನೀಡುವ ಉಲ್ಲೇಖ ಮತ್ತು ಎಲ್ 1 ವಿದೇಶಿ ಹಡಗು ಕಂಪನಿ ನೀಡುವ ದರದ ನಡುವಿನ ನಿಜವಾದ ವ್ಯತ್ಯಾಸದಲ್ಲಿ ಯಾವುದು ಕಡಿಮೆಯೋ ಅದನ್ನು ಒದಗಿಸಲಾಗುವುದು.

ಮೇಲೆ ತಿಳಿಸಿದ ಎರಡು ವರ್ಗದ ಹಡಗುಗಳಿಗೆ ಕ್ರಮವಾಗಿ ಶೇ.10 ಮತ್ತು ಶೇ.5 ಕ್ಕೆ ಇಳಿಯುವವರೆಗೆ ಮೇಲಿನ ಸಬ್ಸಿಡಿ ಬೆಂಬಲವನ್ನು ಪ್ರತಿ ವರ್ಷ ಶೇ.1 ರಷ್ಟು ಕಡಿಮೆಗೊಳಿಸಲಾಗುತ್ತದೆ.

ಬಿ..       1 ಫೆಬ್ರವರಿ 2021 ರಂದು ಈಗಾಗಲೇ ಫ್ಲ್ಯಾಗ್ ಮಾಡಲಾಗಿರುವ ಮತ್ತು 10 ವರ್ಷಕ್ಕಿಂತ ಕಡಿಮೆ ಹಳೆಯದಾದ ಅಸ್ತಿತ್ವದಲ್ಲಿರುವ ಭಾರತೀಯ ಧ್ವಜದ ಹಡಗಿಗೆ, ಸಬ್ಸಿಡಿ ಬೆಂಬಲವನ್ನು ಎಲ್ 1 ವಿದೇಶಿ ಹಡಗು ಕಂಪನಿ ನೀಡುವ ದರದ ಶೇ 10 ಅಥವಾ ಆರ್‌ಒಎಫ್‌ಆರ್ ಅನ್ನು ಚಲಾಯಿಸುವ ಭಾರತೀಯ ಧ್ವಜದ ಹಡಗು ನೀಡುವ ದರ ಮತ್ತು ಎಲ್ 1 ವಿದೇಶಿ ಹಡಗು ಕಂಪನಿ ನೀಡುವ ದರಗಳ ನಡುವಿ ನೈಜ ವ್ಯತ್ಯಾಸದಲ್ಲಿ ಯಾವುದು ಕಡಿಮೆಯೋ ಅದನ್ನು ನೀಡಲಾಗುವುದು. ಫೆಬ್ರವರಿ 1, 2021 ರಂದು ಈಗಾಗಲೇ ಫ್ಲ್ಯಾಗ್ ಮಾಡಿದ 10 ರಿಂದ 20 ವರ್ಷ ಹಳೆಯದಾದ ಅಸ್ತಿತ್ವದಲ್ಲಿರುವ ಭಾರತೀಯ ಧ್ವಜದ ಹಡಗಿಗೆ ಸಬ್ಸಿಡಿ ಬೆಂಬಲವನ್ನು ಎಲ್ 1 ವಿದೇಶಿ ಹಡಗು ಕಂಪನಿ ನೀಡುವ ದರದ ಶೇ 5% ಅಥವಾ ಆರ್‌ಒಎಫ್‌ಆರ್ ಅನ್ನು ಚಲಾಯಿಸುವ ಭಾರತೀಯ ಧ್ವಜದ ಹಡಗು ನೀಡುವ ದರ ಮತ್ತು ಎಲ್ 1 ವಿದೇಶಿ ಹಡಗು ಕಂಪನಿ ನೀಡುವ ದರಗಳ ನಡುವಿ ನೈಜ ವ್ಯತ್ಯಾಸದಲ್ಲಿ ಯಾವುದು ಕಡಿಮೆಯೋ ಅದನ್ನು ನೀಡಲಾಗುವುದು.

ಸಿ.        ಭಾರತೀಯ ಫ್ಲ್ಯಾಗ್ ಮಾಡಿದ ಹಡಗು ಎಲ್ 1 ಬಿಡ್ಡುದಾರನಾಗಿದ್ದರೆ ಈ ಸಬ್ಸಿಡಿ ಲಭ್ಯವಿರುವುದಿಲ್ಲ.

ಡಿ.        ಬಜೆಟ್ ಬೆಂಬಲವನ್ನು ನೇರವಾಗಿ ಸಂಬಂಧಪಟ್ಟ ಸಚಿವಾಲಯ / ಇಲಾಖೆಗೆ ನೀಡಲಾಗುವುದು.

ಇ.        ಯೋಜನೆಯ ಅನುಷ್ಠಾನದ ನಂತರ ಗುತ್ತಿಗೆಯನ್ನು ಪಡೆದ ಹಡಗುಗಳಿಗೆ ಮಾತ್ರ ಸಬ್ಸಿಡಿ ನೀಡಲಾಗುವುದು.

ಎಫ್.     ಯೋಜನೆಯ ವಿವಿಧ ಸಚಿವಾಲಯಗಳು / ಇಲಾಖೆಗಳಲ್ಲಿ ಖರ್ಚಿಗಾಗಿ ಹಣವನ್ನು ನಿಗದಿಪಡಿಸಲು ವರ್ಷದಿಂದ ವರ್ಷಕ್ಕೆ ಏರಿಳಿತಗಳಿಗೆ ಅವಕಾಶ

ಜಿ.        20 ವರ್ಷಕ್ಕಿಂತ ಹಳೆಯದಾದ ಹಡಗುಗಳು ಯೋಜನೆಯಡಿ ಯಾವುದೇ ಸಬ್ಸಿಡಿಗೆ ಅರ್ಹರಾಗಿರುವುದಿಲ್ಲ.

ಹೆಚ್.    ಯೋಜನೆಯ ವಿಸ್ತೃತ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಸಚಿವಾಲಯವು ಅಂತಹ ಹೆಚ್ಚುವರಿ ಹಣವನ್ನು ವೆಚ್ಚ ಇಲಾಖೆಯಿಂದ ಅಗತ್ಯವಿರುವಂತೆ ವಿನಿಯೋಗಿಸಲು ಪ್ರಯತ್ನಿಸುತ್ತದೆ.

ಜೆ.        ಯೋಜನೆಯನ್ನು 5 ವರ್ಷಗಳ ನಂತರ ಪರಿಶೀಲಿಸಲಾಗುತ್ತದೆ.

ವಿವರಗಳು:

ಎ)        ಭಾರತೀಯ ಧ್ವಜದ ಹಡಗುಗಳು ಅನುಭವಿಸುವ ವೆಚ್ಚದ ಅನಾನುಕೂಲತೆಯನ್ನು ಪರಿಹರಿಸಲು, ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ಫೆಬ್ರವರಿ 1, 2021 ರಂದು ತಮ್ಮ 2021-22 ರ ಬಜೆಟ್ ಭಾಷಣದಲ್ಲಿ, ಸಚಿವಾಲಯಗಳು ಮತ್ತು ಸಿಪಿಎಸ್ಇಗಳ ಕರೆಯುವ ತೇಲುತ್ತವೆ.ಜಾಗತಿಕ ಟೆಂಡರ್‌ಗಳಲ್ಲಿ ಭಾರತೀಯ ಹಡಗು ಕಂಪನಿಗಳಿಗೆ ಸಹಾಯಧನ ನೀಡುವ ಮೂಲಕ ಭಾರತದಲ್ಲಿ ವ್ಯಾಪಾರಿ ಹಡಗುಗಳನ್ನು ನೋಂದಣಿ ಮಾಡುವುದನ್ನು ಉತ್ತೇಜಿಸಲು ಐದು ವರ್ಷಗಳಲ್ಲಿ 1,624 ಕೋಟಿ ರೂ. ಮೊತ್ತವನ್ನು ನೀಡುವ ಯೋಜನೆಯನ್ನು ಪ್ರಕಟಿಸಿದ್ದರು.

ಬಿ)        ಐದು ವರ್ಷಗಳ ಸಬ್ಸಿಡಿಯ ಗರಿಷ್ಠ ಅಂದಾಜು 1624 ಕೋಟಿ ರೂ.ಗಳಾಗಿರುತ್ತದೆ.

ಸಿ)        ವಿಶ್ವದ ಅತ್ಯುತ್ತಮ ಹಡಗುಗಳ ನೋಂದಣಿಯಂತೆಯೇ 72 ಗಂಟೆಗಳ ಒಳಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಲಾಗುತ್ತದೆ. ಇದು ಭಾರತದಲ್ಲಿ ಹಡಗುಗಳನ್ನು ನೋಂದಾಯಿಸಲು ಸುಲಭ ಮತ್ತು ಆಕರ್ಷಕವಾಗಿಸುತ್ತದೆ ಮತ್ತು ಆ ಮೂಲಕ ಭಾರತದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಡಿ)        ಇದರ ಜೊತೆಗೆ, ಹಡಗಿನಲ್ಲಿರುವ ಸಿಬ್ಬಂದಿಯನ್ನು ಭಾರತೀಯ ಸಿಬ್ಬಂದಿಯೊಂದಿಗೆ ಬದಲಿಸಲು ಯಾವುದೇ ಹಡಗಿಗೆ 30 ದಿನಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.

ಇ) ಹಾಗೆಯೇ, ಹಡಗುಗಳಲ್ಲಿನ ಸಿಬ್ಬಂದಿ ಅವಶ್ಯಕತೆಗಳನ್ನು ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ಜೋಡಿಸುವ ಮೂಲಕ ತರ್ಕಬದ್ಧಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಎಫ್)    ಯೋಜನೆಯು ಒಂದು ಮೇಲ್ವಿಚಾರಣಾ ಚೌಕಟ್ಟನ್ನು ರೂಪಿಸಿದೆ, ಇದು ಯೋಜನೆಯ ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ಪರಿಶೀಲನೆಯನ್ನು ಒದಗಿಸುತ್ತದೆ. ಇದಕ್ಕಾಗಿ, 2-ಪದರದ ಮೇಲ್ವಿಚಾರಣಾ ವ್ಯವಸ್ಥೆಯನ್ನು ಈ ಕೆಳಗಿನಂತೆ ರೂಪಿಸಲಾಗಿದೆ :

( i) ಅಪೆಕ್ಸ್ ಪರಿಶೀಲನಾ ಸಮಿತಿ (ಎಆರ್ಸಿ) (ii) ಯೋಜನೆ ಪರಿಶೀಲನಾ ಸಮಿತಿ (ಎಸ್‌ಆರ್‌ಸಿ).

ಅನುಷ್ಠಾನ ತಂತ್ರ ಮತ್ತು ಗುರಿಗಳು:

ಎ)        ಅನುಷ್ಠಾನ ವೇಳಾಪಟ್ಟಿ ಮತ್ತು ಪ್ರತಿ ವರ್ಷದ ಶೇ.15 ರಷ್ಟು ವೆಚ್ಚವನ್ನು ಊಹಿಸಿಕೊಂಡು ಪಾವತಿಸಬೇಕಾದ ಅಂದಾಜು ಸಬ್ಸಿಡಿಯನ್ನು ಕೋಟಿ ರೂಪಾಯಿಗಳಲ್ಲಿ ಕೆಳಗೆ ನೀಡಲಾಗಿದೆ.

 

2021-22

2022-23

2023-24

2024-25

2025-26

ಒಟ್ಟು

ಕಚ್ಚಾ ತೈಲ

62.10

 

 

124.19

 

186.29

 

248.39

 

310.49

 

931.46

 

ಎಲ್ ಪಿ ಜಿ

34.72

 

 

69.43

 

104.15

 

138.87

 

173.59

 

520.76

 

ಕಲ್ಲಿದ್ದಲು

10.37

20.75

31.12

41.50

 

51.87

155.61

ರಸಗೊಬ್ಬರ

1.08

2.16

 

3.25

 

4.33

 

5.41

 

16.23

ಒಟ್ಟು

108.27

 

216.53

 

324.81

 

433.09

 

541,36

 

1624.06

 

(ಕೋ.ರೂ.ಗಳಲ್ಲಿ)

ಬಿ)        ಇದು ದೊಡ್ಡ ಮತ್ತು ಆರೋಗ್ಯಕರ ಭಾರತೀಯ ನೌಕೆಗಳಿಗೆ ಕಾರಣವಾಗುತ್ತದೆ, ಇದು ಭಾರತೀಯ ನಾವಿಕರಿಗೆ ಹೆಚ್ಚಿನ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಮತ್ತು ಜಾಗತಿಕ ಸಾಗಾಟದಲ್ಲಿ ಭಾರತೀಯ ಕಂಪನಿಗಳ ಪಾಲನ್ನು ಹೆಚ್ಚಿಸುತ್ತದೆ.

ಉದ್ಯೋಗ ಸೃಷ್ಟಿಯ ಸಾಮರ್ಥ್ಯ ಸೇರಿದಂತೆ ಪರಿಣಾಮ:

ಎ) ಈ ಯೋಜನೆಯು ಉದ್ಯೋಗವನ್ನು ಸೃಷ್ಟಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಭಾರತೀಯ ನೌಕೆಗಳ ಹೆಚ್ಚಳವು ಭಾರತೀಯ ನಾವಿಕರಿಗೆ ನೇರ ಉದ್ಯೋಗವನ್ನು ಒದಗಿಸುತ್ತದೆ. ಏಕೆಂದರೆ ಭಾರತೀಯ ಹಡಗುಗಳು ಭಾರತೀಯ ನಾವಿಕರನ್ನು ಮಾತ್ರ ನೇಮಿಸಿಕೊಳ್ಳಬೇಕಾಗುತ್ತದೆ.

ಬಿ)        ನಾವಿಕರಾಗಲು ಬಯಸುವ ಕೆಡೆಟ್‌ಗಳು ಹಡಗುಗಳಲ್ಲಿ ಆನ್-ಬೋರ್ಡ್ ತರಬೇತಿ ಪಡೆಯಬೇಕು. ಆದ್ದರಿಂದ ಭಾರತೀಯ ಹಡಗುಗಳು ಯುವ ಭಾರತೀಯ ಕೆಡೆಟ್ ಹುಡುಗರು ಮತ್ತು ಹುಡುಗಿಯರಿಗೆ ತರಬೇತಿ  ಒದಗಿಸಲಿವೆ.

ಸಿ)        ಇವೆರಡೂ ಜಾಗತಿಕ ಸಾಗಾಟದಲ್ಲಿ ಭಾರತೀಯ ನಾವಿಕರ ಪಾಲನ್ನು ಹೆಚ್ಚಿಸುತ್ತವೆ. ಹೀಗಾಗಿ ಜಾಗತಿಕವಾಗಿ ಭಾರತೀಯ ನಾವಿಕರ ಪೂರೈಕೆ ಹೆಚ್ಚಾಗುತ್ತದೆ.

ಡಿ)        ಇದಲ್ಲದೆ, ಭಾರತೀಯ ನಾವಿಕರ ಹೆಚ್ಚಳವು ಪೂರಕ ಕೈಗಾರಿಕೆಗಳಾದ ಹಡಗು ನಿರ್ಮಾಣ, ಹಡಗು ದುರಸ್ತಿ, ನೇಮಕಾತಿ, ಬ್ಯಾಂಕಿಂಗ್ ಇತ್ಯಾದಿಗಳ ಅಭಿವೃದ್ಧಿಯಲ್ಲಿ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಭಾರತದ ಜಿಡಿಪಿಗೆ ಕೊಡುಗೆ ನೀಡುತ್ತದೆ.

ಹಣಕಾಸಿನ ಪರಿಣಾಮಗಳು:

ಗರಿಷ್ಠ ಶೇ.15 ರಷ್ಟು ವೆಚ್ಚ ಊಹಿಸಿದರೆ, ಮುಂದಿನ ಐದು ವರ್ಷಗಳಲ್ಲಿ ಪಾವತಿಸಬೇಕಾದ ಅಂದಾಜು ಸಬ್ಸಿಡಿಯನ್ನು ಕೆಳಗೆ ನೀಡಲಾಗಿದೆ

ಸಚಿವಾಲಯ

2021-22

2022-23

2023-24

2024-25

2025-26

ಒಟ್ಟು

ಕಚ್ಚಾ ತೈಲ

62.10

 

 

124.19

 

186.29

 

248.39

 

310.49

 

931.46

 

ಎಲ್ ಪಿ ಜಿ

34.72

 

 

69.43

 

104.15

 

138.87

 

173.59

 

520.76

 

ಕಲ್ಲಿದ್ದಲು

10.37

20.75

31.12

41.50

 

51.87

155.61

ರಸಗೊಬ್ಬರ

1.08

2.16

 

3.25

 

4.33

 

5.41

 

16.23

ಒಟ್ಟು

108.27

 

216.53

 

324.81

 

433.09

 

541,36

 

1624.06

 

(ಕೋ.ರೂ.ಗಳಲ್ಲಿ)

ಯಾರಿಗೆ ಪ್ರಯೋಜನ:

ಎ)        ಎಲ್ಲಾ ಭಾರತೀಯ ನಾವಿಕರು

ಬಿ)        ಭಾರತೀಯ ಕೆಡೆಟ್‌ಗಳು ನಾವಿಕರಾಗಲು ಬಯಸುವವರು

ಸಿ)        ಅಸ್ತಿತ್ವದಲ್ಲಿರುವ ಎಲ್ಲಾ ಭಾರತೀಯ ಹಡಗು ಕಂಪನಿಗಳು.

ಡಿ)        ಭಾರತೀಯ ಕಂಪನಿಗಳನ್ನು ಸ್ಥಾಪಿಸಲು ಮತ್ತು ಭಾರತದಲ್ಲಿ ಹಡಗುಗಳನ್ನು ಫ್ಲ್ಯಾಗ್ ಮಾಡಲು ಆಸಕ್ತಿ ಹೊಂದಿರುವ ಎಲ್ಲಾ ಭಾರತೀಯ ಮತ್ತು ವಿದೇಶಿ ನಾಗರಿಕರು, ಕಂಪನಿಗಳು ಮತ್ತು ಕಾನೂನು ಘಟಕಗಳು.

ಇ)        ವಿದೇಶಿ ಧ್ವಜದ ಹಡಗುಗಳಲ್ಲಿ ವಿದೇಶಿ ವಿನಿಮಯದ ಹೊರಹರಿವಿನಲ್ಲಿ ಭಾರಿ ಉಳಿತಾಯದಿಂದಾಗಿ ಒಟ್ಟಾರೆ ಭಾರತದ ಆರ್ಥಿಕತೆಗೆ ಪ್ರಯೋಜನವಾಗಲಿದೆ.

ಹಿನ್ನೆಲೆ

ಎ)        7,500 ಕಿ.ಮೀ ಉದ್ದದ ಕರಾವಳಿಯನ್ನು ಹೊಂದಿದ್ದರೂ, ಮಹತ್ವದ ರಾಷ್ಟ್ರೀಯ ಎಕ್ಸಿಮ್ ವ್ಯಾಪಾರವು ವಾರ್ಷಿಕವಾಗಿ ಸ್ಥಿರವಾಗಿ ಬೆಳೆಯುತ್ತಿದೆ.  1997 ರಿಂದ ಸಾಗಾಟದಲ್ಲಿ ಶೇ.100 ಎಫ್‌ಡಿಐ ನೀತಿ ಮತ್ತು ಭಾರತೀಯ ಹಡಗು ಉದ್ಯಮ ಮತ್ತು ಭಾರತದ ರಾಷ್ಟ್ರೀಯ ಹಡಗುಗಳ ಸಂಖ್ಯೆಯು ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಚಿಕ್ಕದಾಗಿವೆ.

ಬಿ)        ಪ್ರಸ್ತುತ ಭಾರತವು ಸಾಮರ್ಥ್ಯದ ದೃಷ್ಟಿಯಿಂದ ಶೇ.1.2 ರಷ್ಟು ಕಳಪೆ ಹಡಗುಗಳನ್ನು ಒಳಗೊಂಡಿದೆ. ಭಾರತದ ಎಕ್ಸಿಮ್ ವ್ಯಾಪಾರದ ಸಾಗಣೆಯಲ್ಲಿ ಭಾರತೀಯ ಹಡಗುಗಳ ಪಾಲು 1987-88ರಲ್ಲಿ ಶೇ.40.7 ರಿಂದ 2018-19ರಲ್ಲಿ ಸುಮಾರು ಶೇ.7.8 ಕ್ಕೆ ತೀವ್ರವಾಗಿ ಕುಸಿದಿದೆ. ಇದು ವಿದೇಶಿ ಹಡಗು ಕಂಪನಿಗಳಿಗೆ ಸರಕು ಬಿಲ್ ಪಾವತಿಯ ಕಾರಣದಿಂದಾಗಿ ವಿದೇಶಿ ವಿನಿಮಯದ ಹೊರಹೋಗುವಿಕೆ ಹೆಚ್ಚಾಗಲು ಕಾರಣವಾಗಿದೆ, 2018-19ರಲ್ಲಿ ಸುಮಾರು 53 ಬಿಲಿಯನ್ ಡಾಲರ್ ಮತ್ತು ಕಳೆದ 13 ವರ್ಷಗಳಲ್ಲಿ ಸುಮಾರು 637 ಬಿಲಿಯನ್ ಡಾಲರ್ ಪಾವತಿ ಮಾಡಲಾಗಿದೆ.

ಸಿ)        ಭಾರತದ ನೋಂದಣಿ ಮಾಡಿದ ಹಡಗುಗಳು ಭಾರತೀಯ ಸಿಬ್ಬಂದಿಯನ್ನು ಕಡ್ಡಾಯವಾಗಿ ತೊಡಗಿಸಿಕೊಳ್ಳುತ್ತವೆ ಮತ್ತು ಭಾರತದ ತೆರಿಗೆ ಮತ್ತು ಕಾರ್ಪೊರೇಟ್ ಕಾನೂನುಗಳನ್ನು ಅನುಸರಿಸುತ್ತವೆ. ವಿದೇಶಿ ಹಡಗುಗಳಿಗೆ ಹೋಲಿಸಿದರೆ ಭಾರತೀಯ ಹಡಗುಗಳ ನಿರ್ವಹಣಾ ವೆಚ್ಚವು ತುಂಬಾ ಹೆಚ್ಚಾಗಿದೆ. ಭಾರತೀಯ ಹಡಗಿನ ಕಾರ್ಯಾಚರಣೆಯ ವೆಚ್ಚ ಸುಮಾರು ವಿದೆಶಿ ಹಡಗುಗಳಿಗೆ ಹೋಲಿಸಿದರೆ ಶೇ.20 ಹೆಚ್ಚಾಗಿದೆ. ಸಾಲದ ನಿಧಿಯ ಹೆಚ್ಚಿನ ವೆಚ್ಚಗಳು, ಸಾಲಗಳ ಕಡಿಮೆ ಅವಧಿ, ಭಾರತೀಯ ಹಡಗುಗಳಲ್ಲಿ ತೊಡಗಿರುವ ಭಾರತೀಯ ನಾವಿಕರ ವೇತನದ ಮೇಲಿನ ತೆರಿಗೆ, ಹಡಗುಗಳ ಆಮದಿನ ಮೇಲೆ ಐಜಿಎಸ್ಟಿ, ನಿರ್ಬಂಧಿತ ಜಿಎಸ್ಟಿ ತೆರಿಗೆ ಸಾಲಗಳು, ಎರಡು ಭಾರತೀಯ ಬಂದರುಗಳು ನಡುವೆ ಸೇವೆಗಳನ್ನು ಒದಗಿಸುವ ಭಾರತೀಯ ಹಡಗುಗಳಲ್ಲಿ ತಾರತಮ್ಯದ ಜಿಎಸ್ಟಿ ಕಾರಣದಿಂದಾಗಿ ನಿರ್ವಹಣಾ ವೆಚ್ಚಗಳಲ್ಲಿ ಈ ವ್ಯತ್ಯಾಸವು ಉದ್ಭವಿಸುತ್ತದೆ. ಇವೆಲ್ಲವೂ ಒಂದೇ ರೀತಿಯ ಸೇವೆಗಳನ್ನು ಒದಗಿಸುವ ವಿದೇಶಿ ಹಡಗುಗಳಿಗೆ ಅನ್ವಯಿಸುವುದಿಲ್ಲ. ಮತ್ತೊಂದೆಡೆ, ಸ್ಥಳೀಯ ಹಡಗು ಕಂಪನಿಯ ಸೇವೆಗಳನ್ನು ಪಡೆಯುವುದಕ್ಕಿಂತ ಭಾರತೀಯ ಚಾರ್ಟರ್ನಿಂದ ಹಡಗು ಸೇವೆಯನ್ನು ಆಮದು ಮಾಡಿಕೊಳ್ಳುವುದು ಅಗ್ಗವಾಗಿದೆ.

ಡಿ)        ಸರ್ಕಾರವು ಎಫ್‌ಒಬಿಯಲ್ಲಿ ಆಮದು ಮಾಡುವ ನೀತಿಯನ್ನು ಬೆಂಬಲಿಸುತ್ತದೆಯಾದರೂ, ವಾಸ್ತವದಲ್ಲಿ ಬೃಹತ್ ಆಮದುಗಳಾದ ರಸಗೊಬ್ಬರಗಳು ಮತ್ತು ಕಲ್ಲಿದ್ದಲಿನ ಜಿಐಎಫ್ ಆಧಾರದ ಮೇಲೆ ಆಮದು ಮಾಡಿಕೊಳ್ಳಲು ಅನುಮತಿ ಇದೆ. ಸುಮಾರು ಶೇ.35 ರಷ್ಟು ಕಚ್ಚಾ ತೈಲ ಆಮದು ಸಹ ಜಿಐಎಫ್ ಆಧಾರದ ಮೇಲೆ ನಡೆಯುತ್ತಿದೆ. ಇವೆಲ್ಲವೂ ಭಾರತೀಯ ಸರಕುಗಳನ್ನು ಸಾಗಿಸಲು ಮಾರುಕಟ್ಟೆಯಲ್ಲಿ ಭಾಗವಹಿಸುವ ಅವಕಾಶವನ್ನು ಕೈತಪ್ಪಲು ಕಾರಣವಾಗುತ್ತವೆ.

ಇ)        ವಿದೇಶಿ ಹಡಗುಗಳಿಗೆ ಹೋಲಿಸಿದರೆ ಭಾರತೀಯ ಹಡಗುಗಳು ಕಡಿಮೆ ಸ್ಪರ್ಧಾತ್ಮಕವಾಗಿರುವುದರಿಂದ, ಭಾರತೀಯ ಹಡಗುಗಳನ್ನು ಉತ್ತೇಜಿಸಲು ರೈಟ್ ಆಫ್ ಫಸ್ಟ್ ರೆಫ್ಯುಸಲ್ (ಆರ್‌ಒಎಫ್ಆರ್) ನೀತಿಗೆ ಸಾಧ್ಯವಾಗಲಿಲ್ಲ. ಭಾರತೀಯ ರಾಷ್ಟ್ರೀಯ ಹಡಗು ಮಾಲೀಕರ ಸಂಘದಿಂದ (ಐಎನ್‌ಎಸ್‌ಎ) ಸಂಗ್ರಹಿಸಿದ ಮಾಹಿತಿಯು ಆರ್‌ಒಎಫ್‌ಆರ್ ಕಾರ್ಯವಿಧಾನದ ಅಡಿಯಲ್ಲಿ ಶೇ.95 ಪ್ರಕರಣಗಳಲ್ಲಿ ಎನ್‌ಒಸಿಗಳನ್ನು ನೀಡಲಾಗಿದೆ  ಎಂದು ಹೇಳುತ್ತದೆ. ಇದಲ್ಲದೆ, ಆರ್‌ಒಎಫ್‌ಆರ್ ಬ್ಯಾಂಕಿಂಗ್ ದೀರ್ಘಕಾಲೀನ ಒಪ್ಪಂದಗಳನ್ನು ಖಚಿತಪಡಿಸುವುದಿಲ್ಲ ಮತ್ತು ಕಡಿಮೆ ನಿರ್ವಹಣಾ ವೆಚ್ಚದಿಂದಾಗಿ ಸ್ಪರ್ಧಾತ್ಮಕ ಲಾಭವನ್ನು ಪಡೆಯುವ ವಿದೇಶಿ ಹಡಗು ಕಂಪನಿಗಳು ಒದಗಿಸುವ ದರವನ್ನು ಹೊಂದಿಸಲು ಇದು ಕೇವಲ ಒಂದು ಅವಕಾಶವಾಗಿದೆ. ಭಾರತೀಯ ಹಡಗುಗಳನ್ನು ಸ್ಪರ್ಧಾತ್ಮಕವಾಗಿಸಿದರೆ ಮಾತ್ರ ಭಾರತೀಯ ಹಡಗುಗಳಿಗೆ ಆರ್‌ಒಎಫ್ಆರ್ ನೀತಿಯು ಪ್ರಯೋಜನಕಾರಿಯಾಗುತ್ತದೆ.

ಎಫ್)    ಭಾರತೀಯ ಹಡಗು ಉದ್ಯಮದ ಬೆಳವಣಿಗೆಯನ್ನು ಉತ್ತೇಜಿಸುವ ನೀತಿಯೂ ಅಗತ್ಯವಾಗಿದೆ. ಏಕೆಂದರೆ ದೊಡ್ಡ ರಾಷ್ಟ್ರೀಯ ಹಡಗು ಪಡೆಯು ಭಾರತಕ್ಕೆ ಆರ್ಥಿಕ, ವಾಣಿಜ್ಯ ಮತ್ತು ಕಾರ್ಯತಂತ್ರದ ಅನುಕೂಲಗಳನ್ನು ಒದಗಿಸುತ್ತದೆ. ಬಲವಾದ ಮತ್ತು ವೈವಿಧ್ಯಮಯ ಸ್ಥಳೀಯ ಹಡಗುಗಳು, ವಿದೇಶಿ ಹಡಗು ಕಂಪನಿಗಳಿಗೆ ನೀಡುವ ಸರಕು ಸಾಗಣೆ ಬಿಲ್ ಪಾವತಿಯನ್ನು ಕಡಿಮೆ ಮಾಡಿ ವಿದೇಶಿ ವಿನಿಮಯ ಉಳಿತಾಯಕ್ಕೆ ಕಾರಣವಾಗುವುದಲ್ಲದೆ, ಭಾರತದ ನಿರ್ಣಾಯಕ ಸರಕುಗಳನ್ನು ಸಾಗಿಸಲು ವಿದೇಶಿ ಹಡಗುಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಭಾರತೀಯ ನಾವಿಕರಿಗೆ ತರಬೇತಿ ಅವಕಾಶಗಳ ಹೆಚ್ಚಳ, ಭಾರತದ ಕಡಲತೀರದವರಿಗೆ ಉದ್ಯೋಗ ಹೆಚ್ಚಳ, ವಿವಿಧ ತೆರಿಗೆಗಳ ಸಂಗ್ರಹದಲ್ಲಿ ಹೆಚ್ಚಳ, ಪೂರಕ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಬ್ಯಾಂಕುಗಳಿಂದ ಹಣವನ್ನು ಎರವಲು ಪಡೆಯುವ ಸಾಮರ್ಥ್ಯದಲ್ಲಿ ಸುಧಾರಣೆ ಇತರ ಪ್ರಯೋಜನಗಳಾಗಿವೆ.

  1. g)        ಭಾರತೀಯಹಡಗು ಕಂಪನಿಗಳಿಗೆ ನೀಡಲು ಉದ್ದೇಶಿಸಿರುವ ಸಬ್ಸಿಡಿ ಬೆಂಬಲವು ಭಾರತೀಯ ಧ್ವಜದ ಹಡಗುಗಳಲ್ಲಿ ಹೆಚ್ಚಿನ ಸರ್ಕಾರಿ ಆಮದುಗಳನ್ನು ಸಾಗಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಇದು ಭಾರತ ನೋಂದಾಯಿತ ವ್ಯಾಪಾರಿ ಹಡಗುಗಳಿಗೆ ಹೆಚ್ಚು ಆಕರ್ಷಕವಾಗಿದೆ. ಏಕೆಂದರೆ ಅವುಗಳ ಪ್ರಸ್ತುತ ಹೆಚ್ಚಿನ ನಿರ್ವಹಣಾ ವೆಚ್ಚಗಳನ್ನು ಸಬ್ಸಿಡಿ ಮೂಲಕ ಸರಿದೂಗಿಸಲಾಗುತ್ತದೆ. ಇದು ನೋಂದಣಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಭಾರತೀಯ ಕಾರ್ಗೊ ಭಾರತದ ಹಡಗುಗಳಲ್ಲಿನ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ.

 

20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Prime Minister Modi lived up to the trust, the dream of making India a superpower is in safe hands: Rakesh Jhunjhunwala

Media Coverage

Prime Minister Modi lived up to the trust, the dream of making India a superpower is in safe hands: Rakesh Jhunjhunwala
...

Nm on the go

Always be the first to hear from the PM. Get the App Now!
...
ಸೋಶಿಯಲ್ ಮೀಡಿಯಾ ಕಾರ್ನರ್ 24 ಅಕ್ಟೋಬರ್ 2021
October 24, 2021
ಶೇರ್
 
Comments

Citizens across the country fee inspired by the stories of positivity shared by PM Modi on #MannKiBaat.

Modi Govt leaving no stone unturned to make India self-reliant