ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ತೆಲಂಗಾಣದಲ್ಲಿ ಒಟ್ಟು 190.76 ಕಿಲೋಮೀಟರ್ ಉದ್ದದ ಮತ್ತು 7597.16 ಕೋಟಿ ರೂಪಾಯಿಗಳ ಒಟ್ಟು ಯೋಜನಾ ವೆಚ್ಚದೊಂದಿಗೆ, ಮೂರು ಕಾಮಗಾರಿ ಪ್ಯಾಕೇಜ್‌ಗಳ ಅಡಿಯಲ್ಲಿ ಪ್ರಸ್ತುತ ಇರುವ ಅರ್ಮೂರ್-ಜಗತ್ಯಾಲ್-ಮಂಚೇರಿಯಲ್ ರಾಷ್ಟ್ರೀಯ ಹೆದ್ದಾರಿ (ಎನ್‌ ಎಚ್)-63 ರ ಭಾಗವನ್ನು ಹೈಬ್ರಿಡ್ ಅನ್ಯೂಯಿಟಿ ಮಾಡೆಲ್ (ಎಚ್‌ ಎ ಎಂ) ಆಧಾರದ ಮೇಲೆ ಮತ್ತು ಜಗತ್ಯಾಲ್-ಕರೀಂನಗರ ರಾಷ್ಟ್ರೀಯ ಹೆದ್ದಾರಿ (ಎನ್‌ ಎಚ್)-563 ರ ಭಾಗವನ್ನು ನಿರ್ಮಾಣ-ನಿರ್ವಹಣೆ-ವರ್ಗಾವಣೆ (ಬಿಒಟಿ ಟೋಲ್) ಆಧಾರದ ಮೇಲೆ  ಚತುಷ್ಪಥ ದರ್ಜೆಗೆ (4-ಲೇನ್)ವಿಸ್ತರಿಸಲು ಅನುಮೋದನೆ ನೀಡಿದೆ.

ಅರ್ಮೂರ್-ಜಗತ್ಯಾಲ್-ಮಂಚೇರಿಯಲ್ ಯೋಜನಾ ವಿಭಾಗವು ತೆಲಂಗಾಣದ ನಿಜಾಮಾಬಾದ್, ಜಗತ್ಯಾಲ್ ಮತ್ತು ಮಂಚೇರಿಯಲ್ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಪ್ರಸ್ತುತ ಈ ಹೆದ್ದಾರಿಯುದ್ದಕ್ಕೂ ಇರುವ ಅಂಕ್ಸಾಪುರ್, ಕೊರುಟ್ಲಾ, ಜಗತ್ಯಾಲ್, ಧರ್ಮಪುರಿ, ಲಕ್ಷೆಟ್ಟಿಪೇಟೆ ಮತ್ತು ಮಂಚೇರಿಯಲ್ ನಂತಹ ಹಲವಾರು ಜನನಿಬಿಡ ಪ್ರದೇಶಗಳಿಂದಾಗಿ ತೀವ್ರ ಸಂಚಾರ ದಟ್ಟಣೆಯನ್ನು ಎದುರಿಸುತ್ತಿದೆ. ಅದೇ ರೀತಿ, ಜಗತ್ಯಾಲ್-ಕರೀಂನಗರ ಭಾಗವು ಜಗತ್ಯಾಲ್, ಪೋಥಾರಾಮ್, ಗಂಗಾಧರ ಮತ್ತು ಕರೀಂನಗರದಂತಹ ತೀವ್ರ ಸಂಚಾರ ದಟ್ಟಣೆ ಹಾಗೂ ಹೆಚ್ಚು ಜನವಸತಿ ಇರುವ ಪ್ರದೇಶಗಳ ಮೂಲಕ ಹಾದುಹೋಗುತ್ತದೆ.

ಈ ತ್ವರಿತ ಪ್ರಸ್ತಾವಿತ ಯೋಜನೆಗಳು ಜನನಿಬಿಡ ಪ್ರದೇಶಗಳಿಗೆ ಬೈಪಾಸ್‌ ಗಳೊಂದಿಗೆ  ಮುಕ್ತ ಟೋಲಿಂಗ್ ವ್ಯವಸ್ಥೆಯನ್ನು ಹೊಂದಿರುವ ಚತುಷ್ಪಥ (4-ಲೇನ್) ವಿನ್ಯಾಸವನ್ನು ಒಳಗೊಂಡಿರುತ್ತವೆ. ಇದು ಗಂಟೆಗೆ 100 ಕಿಮೀ ವೇಗದ ಚಲನೆಗೆ ವಿನ್ಯಾಸಗೊಂಡಿದ್ದು, ತೆಲಂಗಾಣ ರಾಜ್ಯದ ನಿಜಾಮಾಬಾದ್, ಜಗತ್ಯಾಲ್, ಮಂಚೇರಿಯಲ್ ಮತ್ತು ಕರೀಂನಗರ ಜಿಲ್ಲೆಗಳಾದ್ಯಂತ ಪ್ರಯಾಣದ ದಕ್ಷತೆಯನ್ನು ಸುಧಾರಿಸುತ್ತದೆ. ಈ ಯೋಜನೆಯು ಆ ಪ್ರದೇಶಗಳ ಸಂಚಾರವನ್ನು ಹೆಚ್ಚಿಸಲಿದೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲಿದೆ.

ಈ ಯೋಜನೆಗಳು ಪಿಎಂ ಗತಿಶಕ್ತಿ ತತ್ವಗಳಿಗೆ ಅನುಗುಣವಾಗಿದ್ದು, ಐದು ಆರ್ಥಿಕ ಕೇಂದ್ರಗಳು, ಏಳು ಸಾಮಾಜಿಕ ಕೇಂದ್ರಗಳು ಮತ್ತು ಹತ್ತು ಲಾಜಿಸ್ಟಿಕ್ (ಸಾರಿಗೆ) ಕೇಂದ್ರಗಳನ್ನು ಸಂಪರ್ಕಿಸಲಿವೆ. ಇದು ದೇಶದ ಲಾಜಿಸ್ಟಿಕ್ ಕಾರ್ಯಕ್ಷಮತೆ ಸೂಚ್ಯಂಕದ (ಎಲ್‌ ಪಿ ಐ - ಲಾಜಿಸ್ಟಿಕ್ ಪರ್ಫಾರ್ಮೆನ್ಸ್ ಇಂಡೆಕ್ಸ್) ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.

ಯೋಜನೆ ಪೂರ್ಣಗೊಂಡ ನಂತರ, ಅರ್ಮೂರ್ ಮತ್ತು ಮಂಚೇರಿಯಲ್ ನಡುವಿನ ಪ್ರಯಾಣದ ಸಮಯ ಸುಮಾರು 1 ಗಂಟೆ 30 ನಿಮಿಷಗಳಷ್ಟು ಹಾಗೂ ಜಗತ್ಯಾಲ್ ಮತ್ತು ಕರೀಂನಗರ ನಡುವಿನ ಪ್ರಯಾಣದ ಸಮಯ ಸುಮಾರು 45 ನಿಮಿಷಗಳಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಜೊತೆಗೆ ಇದು ಪ್ರಯಾಣಿಕರು ಮತ್ತು ಸರಕು ಸಾಗಣೆ ಎರಡಕ್ಕೂ ಸುರಕ್ಷಿತ, ವೇಗದ ಮತ್ತು ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಈ ಯೋಜನೆಯು ಇಂಧನ ಬಳಕೆ, ಇಂಗಾಲದ ಹೊರಸೂಸುವಿಕೆ ಮತ್ತು ವಾಹನ ಕಾರ್ಯಾಚರಣೆ ವೆಚ್ಚಗಳನ್ನು (ವಿಒಸಿ) ಗಣನೀಯವಾಗಿ ಕಡಿಮೆ ಮಾಡುತ್ತದೆ.

ಕಾರಿಡಾರ್‌ ನಕ್ಷೆ

ಅನುಬಂಧ - I: ಯೋಜನೆಯ ವಿವರಗಳು

ವಿವರಣೆ

ಅರ್ಮೂರ್-ಜಗತ್ಯಾಲ್ ಭಾಗ (ಎನ್‌ ಎಚ್-63)

ಜಗತ್ಯಾಲ್-ಮಂಚೇರಿಯಲ್ ಭಾಗ (ಎನ್‌ ಎಚ್ -63)

ಜಗತ್ಯಾಲ್-ಕರೀಂನಗರ ಭಾಗ (ಎನ್‌ ಎಚ್ -563)

ಉದ್ದ (ಕಿಮೀ)

63.600

68.295

58.866

ಬ್ರೌನ್‌ಫೀಲ್ಡ್ ಉದ್ದ (ಕಿಮೀ)

17.95

2.05

24.14

ಗ್ರೀನ್‌ಫೀಲ್ಡ್ ಉದ್ದ (ಕಿಮೀ)

45.65

66.10

34.96

ಒಟ್ಟು ಸಿವಿಲ್ ವೆಚ್ಚ (ರೂ. ಕೋಟಿಗಳಲ್ಲಿ)

1266.58

1477.17

1455.01

ಭೂಸ್ವಾಧೀನ ಮತ್ತು ಇತರ ಪೂರ್ವ-ನಿರ್ಮಾಣ ವೆಚ್ಚ
(ರೂ. ಕೋಟಿಗಳಲ್ಲಿ)

504.26

436.93

394.53

ಒಟ್ಟು ಬಂಡವಾಳ ವೆಚ್ಚ
(ರೂ. ಕೋಟಿಗಳಲ್ಲಿ)

2471.76

2730.72

2394.68

ಮಾದರಿ  

ಹೈಬ್ರಿಡ್ ಅನ್ಯೂಯಿಟಿ ಮಾಡೆಲ್ (ಎಚ್‌ ಎ ಎಂ)

ಹೈಬ್ರಿಡ್ ಅನ್ಯೂಯಿಟಿ ಮಾಡೆಲ್ (ಎಚ್‌ ಎ ಎಂ)

ನಿರ್ಮಾಣ-ನಿರ್ವಹಣೆ-ವರ್ಗಾವಣೆ (ಟೋಲ್)  

ಒಟ್ಟು ರಿಯಾಯಿತಿ ಅವಧಿ  

17.5 ವರ್ಷಗಳು (2.5 ವರ್ಷಗಳ ನಿರ್ಮಾಣ + 15 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ (ಒ&ಎಂ)

17.5 ವರ್ಷಗಳು (2.5 ವರ್ಷಗಳ ನಿರ್ಮಾಣ + 15 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ (ಒ&ಎಂ)

20 ವರ್ಷಗಳು (2.5 ವರ್ಷಗಳ ನಿರ್ಮಾಣ ಸೇರಿದಂತೆ)

ಆರ್ಥಿಕ / ಸಾಮಾಜಿಕ ಕೇಂದ್ರಗಳು

ಆರ್ಥಿಕ ಕೇಂದ್ರಗಳು: 2 ಎಸ್‌ ಇಜೆಡ್ - ಸಿದ್ದಿಪೇಟೆ, ವಾರಂಗಲ್ ನಗರ ಪ್ರದೇಶ; ಮೆಗಾ ಫುಡ್ ಪಾರ್ಕ್‌ಗಳು- ನಿಜಾಮಾಬಾದ್, ಸಿದ್ದಿಪೇಟೆ; ಮೀನುಗಾರಿಕೆ ಮತ್ತು ಸೀಫುಡ್ ಕ್ಲಸ್ಟರ್- ರಾಜನ್ನ ಸಿರಿಸಿಲ್ಲಾ.

ಸಾಮಾಜಿಕ ಕೇಂದ್ರಗಳು: ವೇಮುಲವಾಡ, ಕೊಂಡಗಟ್ಟು, ನಗುನೂರು ಕೋಟೆ, ಧರ್ಮಪುರಿ, ಕಾಳೇಶ್ವರಂ, ಲೋಯರ್ ಮಾನೇರ್ ಅಣೆಕಟ್ಟು, ಕ್ವಿಲಾ ಕೋಟೆ.

 

ಸಾಗಾಣಿಕೆ (ಲಾಜಿಸ್ಟಿಕ್) ಕೇಂದ್ರಗಳು 

ರೈಲ್ವೆ ನಿಲ್ದಾಣಗಳು: ನಿಜಾಮಾಬಾದ್, ಲಿಂಗಂಪೇಟ್/ಜಗತ್ಯಾಲ್, ಪೆದ್ದಪಲ್ಲಿ, ಕೊರುಟ್ಲಾ, ಮಂಚೇರಿಯಲ್.

ರೈಲ್ವೆ ನಿಲ್ದಾಣಗಳು: ಲಿಂಗಂಪೇಟ್/ಜಗತ್ಯಾಲ್, ಪೊದ್ದೂರು, ಗಂಗಾಧರ, ಕರೀಂನಗರ.

ಉದ್ಯೋಗ ಸೃಷ್ಟಿ ಸಾಮರ್ಥ್ಯ

34.43 ಲಕ್ಷ ಮಾನವ-ದಿನಗಳು (ನೇರ) ಮತ್ತು 42.7 ಲಕ್ಷ ಮಾನವ-

ದಿನಗಳು (ಪರೋಕ್ಷ)

ವಾರ್ಷಿಕ ಸರಾಸರಿ ದೈನಂದಿನ ಸಂಚಾರ (ಎಎಡಿಟಿ) ಹಣಕಾಸು ವರ್ಷ-2024-25 ರಲ್ಲಿ

14,949 ವಾಹನಗಳು/ದಿನ

12,084 ವಾಹನಗಳು /ದಿನ

20,446 ವಾಹನಗಳು /ದಿನ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Foreign traveller calls India's Vande Bharat sleeper a “Five-Star Hotel on Rails”; and the Internet agrees

Media Coverage

Foreign traveller calls India's Vande Bharat sleeper a “Five-Star Hotel on Rails”; and the Internet agrees
NM on the go

Nm on the go

Always be the first to hear from the PM. Get the App Now!
...
Eminent industry leader Shri Ravi Kant meets the Prime Minister
July 18, 2026

Eminent industry leader Shri Ravi Kant met Prime Minister, Shri Narendra Modi earlier today and presented a copy of his book 'Leading from the Back - To Achieve the Impossible'.

The Prime Minister posted on X;

Eminent industry leader Shri Ravi Kant met PM @narendramodi earlier today and presented a copy of his book 'Leading from the Back - To Achieve the Impossible'.