ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಭಾರತದ ಹತ್ತಿ ವಲಯದಲ್ಲಿನ ಅಡಚಣೆಗಳು, ಕ್ಷೀಣಿಸುತ್ತಿರುವ ಬೆಳವಣಿಗೆ ಮತ್ತು ಗುಣಮಟ್ಟದ ಕಾಳಜಿಗಳನ್ನು ಪರಿಹರಿಸಲು ರೂ.5659.22 ಕೋಟಿ ವೆಚ್ಚದಲ್ಲಿ "ಹತ್ತಿ ಉತ್ಪಾದಕತೆಗಾಗಿ ಮಿಷನ್" (2026–27 ರಿಂದ 2030–31) ಅನ್ನು  ರೂಪಿಸಲು ವಿಶೇಷ ಅನುದಾನವನ್ನು ಅನುಮೋದಿಸಿದೆ.

ಈ ಹತ್ತಿ ಉತ್ಪಾದಕತೆಯ ಮಿಷನ್, ಭಾರತ ಸರ್ಕಾರದ 5-ಎಫ್ ದೃಷ್ಟಿಕೋನಕ್ಕೆ (ಫಾರ್ಮ್ ಟು ಫೈಬರ್ ಟು ಫ್ಯಾಕ್ಟರಿ ಟು ಫ್ಯಾಷನ್ ಟು ಫಾರಿನ್) ಹೊಂದಿಕೆಯಾಗುತ್ತದೆ.  ರೋಗ ಮತ್ತು ಕೀಟಗಳಿಗೆ ನಿರೋಧಕವಾದ ಹೆಚ್ಚಿನ ಇಳುವರಿ ನೀಡುವ ತಳಿ (ಹೆಚ್.ವೈ.ವಿ.) ಬೀಜಗಳ ಅಭಿವೃದ್ಧಿ, ರಾಜ್ಯ ಸರ್ಕಾರಗಳು, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳ (ಎಸ್.ಎ.ಯು.) ಮೂಲಕ ಅಸ್ತಿತ್ವದಲ್ಲಿರುವ ಮತ್ತು ಇತ್ತೀಚಿನ ಬೆಳೆ ಉತ್ಪಾದನಾ ತಂತ್ರಜ್ಞಾನಗಳ ಹೆಚ್ಚಳ, ಇತ್ತೀಚಿನ ಬೆಳೆ ಉತ್ಪಾದನಾ ತಂತ್ರಜ್ಞಾನಗಳ ದೊಡ್ಡ ಪ್ರಮಾಣದ ಪ್ರಚಾರ ಮತ್ತು ಅಳವಡಿಕೆಯ ಮೂಲಕ ಉದ್ಯಮಕ್ಕೆ ಕನಿಷ್ಠ ಮಾಲಿನ್ಯಕಾರಕ ಹತ್ತಿ ಪೂರೈಕೆಯನ್ನು ಖಚಿತಪಡಿಸುತ್ತದೆ ಮತ್ತು ಈ ಕೆಳಗಿನ ಪ್ರಮುಖ ಅಂಶಗಳ ಮೇಲೆ ಕೇಂದ್ರೀಕರಿಸಿ ಉತ್ತಮ ಗುಣಮಟ್ಟದ ಹತ್ತಿ ರಫ್ತುಗಳನ್ನು ಉತ್ತೇಜಿಸುತ್ತದೆ:

  • ಹೆಚ್ಚಿನ ಇಳುವರಿ ನೀಡುವ, ಹವಾಮಾನ ನಿರೋಧಕ, ಕೀಟ-ನಿರೋಧಕ ಬೀಜಗಳ ಅಭಿವೃದ್ಧಿ ಮತ್ತು ಇತರ ಉತ್ಪಾದನೆ/ರಕ್ಷಣಾ ತಂತ್ರಜ್ಞಾನಗಳು
  • ಹೆಚ್ಚಿನ ಸಾಂದ್ರತೆಯ ನೆಟ್ಟ ವ್ಯವಸ್ಥೆ (ಹೆಚ್.ಡಿ.ಪಿ.ಎಸ್.), ಕ್ಲೋಸರ್ ಸ್ಪೇಸಿಂಗ್ (ಸಿಎಸ್), ಇಂಟಿಗ್ರೇಟೆಡ್ ಹತ್ತಿ ನಿರ್ವಹಣೆ ಮತ್ತು ಹೆಚ್ಚುವರಿ ಉದ್ದವಾದ ಸ್ಟೇಪಲ್ (ಇ.ಲ್.ಎಸ್.) ಹತ್ತಿಯ ಪ್ರಚಾರದಂತಹ ಸುಧಾರಿತ ಹತ್ತಿ ಉತ್ಪಾದನಾ ತಂತ್ರಜ್ಞಾನಗಳನ್ನು ಅಭಿವೃದ್ಧಿ ಮಾಡುವುದು
  • ಸಾಮರ್ಥ್ಯ ವೃದ್ಧಿಯ ಮೂಲಕ ಹತ್ತಿಯ ಗುಣಮಟ್ಟವನ್ನು ಹೆಚ್ಚಿಸುವುದು ಮತ್ತು ಉತ್ತಮ ಸಂಸ್ಕರಣಾ ಪದ್ಧತಿಗಳ ಅಳವಡಿಕೆ ಸೇರಿದಂತೆ ಜಿನ್ನಿಂಗ್ ಮತ್ತು ಸಂಸ್ಕರಣಾ ಕಾರ್ಖಾನೆಗಳ ಆಧುನೀಕರಣವನ್ನು ಉತ್ತೇಜಿಸುವುದು.
  • ವಿಶ್ವಾಸಾರ್ಹ ಗುಣಮಟ್ಟದ ಮೌಲ್ಯಮಾಪನ ಮತ್ತು ಜಾಗತಿಕ ಮಾನದಂಡವನ್ನು ಖಚಿತಪಡಿಸಿಕೊಳ್ಳಲು ಆಧುನಿಕ, ಪ್ರಮಾಣೀಕೃತ ಮತ್ತು ಮಾನ್ಯತೆ ಪಡೆದ ಸೌಲಭ್ಯಗಳೊಂದಿಗೆ ದೇಶಾದ್ಯಂತ ಹತ್ತಿ ಪರೀಕ್ಷಾ ಮೂಲಸೌಕರ್ಯವನ್ನು ಬಲಪಡಿಸುವುದು.
  •  ಭಾರತೀಯ ಹತ್ತಿಯನ್ನು ಪ್ರೀಮಿಯಂ, ಸುಸ್ಥಿರ ಮತ್ತು ಜಾಗತಿಕವಾಗಿ ವಿಶ್ವಾಸಾರ್ಹ ಉತ್ಪನ್ನವಾಗಿ ಇರಿಸಲು ಕಸ್ತೂರಿ ಕಾಟನ್ ಭಾರತ್ ಯೋಜನೆ ಅಡಿಯಲ್ಲಿ ಬಲವಾದ ಬ್ರ್ಯಾಂಡಿಂಗ್ ಮತ್ತು ಪತ್ತೆಹಚ್ಚುವಿಕೆ ಉಪಕ್ರಮಗಳನ್ನು ಅಳವಡಿಸುವುದು 
  • ಮಾರುಕಟ್ಟೆ ವಠಾರ/ಅಂಗಳ/ಪ್ರಾಂಗಣಗಳ (ಮಂಡಿಗಳು) ಡಿಜಿಟಲ್ ಏಕೀಕರಣದ ಮೂಲಕ ರೈತರನ್ನು ಸಬಲೀಕರಣಗೊಳಿಸುವುದು, ಪಾರದರ್ಶಕ ಬೆಲೆ ಆವಿಷ್ಕಾರ, ನೇರ ಮಾರುಕಟ್ಟೆ ಪ್ರವೇಶ ಮತ್ತು ಇ-ಪ್ಲಾಟ್‌ಫಾರ್ಮ್‌ಗಳ ಮೂಲಕ ಸುಧಾರಿತ ಸಾಕ್ಷಾತ್ಕಾರವನ್ನು ಸಕ್ರಿಯಗೊಳಿಸುವುದು
  • ಸಂಪನ್ಮೂಲ ದಕ್ಷತೆಯನ್ನು ಹೆಚ್ಚಿಸಲು, ಪರಿಸರ ಹೆಜ್ಜೆಗುರುತನ್ನು ಕಡಿಮೆ ಮಾಡಲು ಮತ್ತು ಉದ್ಯಮಕ್ಕೆ ಹೆಚ್ಚುವರಿ ಮೌಲ್ಯ ಹರಿವುಗಳನ್ನು ಉತ್ಪಾದಿಸಲು ಹತ್ತಿ ತ್ಯಾಜ್ಯ ಮರುಬಳಕೆ ಮತ್ತು ವೃತ್ತಾಕಾರದ ಆರ್ಥಿಕ ಅಭ್ಯಾಸಗಳ ಪ್ರಚಾರ ವ್ಯವಸ್ಥೆ ರೂಪಿಸುವುದು
  • ಅಗಸೆ, ರಾಮಿ, ಸೆಣಬು (ಕತ್ತಾಳೆ), ಮಿಲ್ಕ್‌ವೀಡ್, ಬಿದಿರು ಮತ್ತು ಬಾಳೆಹಣ್ಣಿನಂತಹ ನೈಸರ್ಗಿಕ ನಾರುಗಳನ್ನು ಸೇರಿಸುವ ಮೂಲಕ ಭಾರತದ ನಾರು ನೆಲೆಯ ವೈವಿಧ್ಯೀಕರಣ ಮತ್ತು ಪರಿಸರ ಸುಸ್ಥಿರ ಜವಳಿ ಉತ್ಪಾದನೆ ಮತ್ತು ನಾವೀನ್ಯತೆಗಳ ಪ್ರಗತಿ ಹಾಗೂ ಹತ್ತಿಗೆ ಪೂರಕವಾಗಿ ಮತ್ತು ಭಾರತದ ಜವಳಿ ವಲಯವನ್ನು ವಿಕಸಿಸುತ್ತಿರುವ ಜಾಗತಿಕ ಬೇಡಿಕೆ ಮಾದರಿಗಳೊಂದಿಗೆ ಜೋಡಿಸಲು ಇದರ ಕಾರ್ಯತಂತ್ರದ ಏಕೀಕರಣ ಮತ್ತು ಪ್ರಚಾರ ವ್ಯವಸ್ಥೆ ರೂಪಿಸುವುದು
  • ಈ ಮಿಷನ್ ಅನ್ನು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಮತ್ತು ಜವಳಿ ಸಚಿವಾಲಯವು ಜಾರಿಗೆ ತರಲಿದ್ದು, ಇದರಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಅಂಗವಾದ 10 ಸಂಸ್ಥೆಗಳು, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿ.ಎಸ್.ಐ.ಆರ್.) ಒಂದು ಸಂಸ್ಥೆ ಮತ್ತು ಹತ್ತಿಯ ಕುರಿತಾದ ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆಯ (ಎ.ಐ.ಸಿ.ಆರ್.ಪಿ) ಅಂಗವಾದ 10 ಕೇಂದ್ರಗಳು ಪ್ರಮುಖ ಹತ್ತಿ ಬೆಳೆಯುವ ರಾಜ್ಯಗಳ ವಿವಿಧ ರಾಜ್ಯ ಕೃಷಿ ವಿಶ್ವವಿದ್ಯಾಲಯಗಳಲ್ಲಿ (ಎಸ್.ಎ.ಯು.) ಕಾರ್ಯನಿರ್ವಹಿಸಲಿವೆ. ಆರಂಭದಲ್ಲಿ, 14 ರಾಜ್ಯಗಳಲ್ಲಿ 140 ಜಿಲ್ಲೆಗಳನ್ನು ರಾಜ್ಯ ಕೃಷಿ ಇಲಾಖೆ ಮತ್ತು ಐಕಾರ್ ಮೂಲಕ ತಂತ್ರಜ್ಞಾನಗಳನ್ನು ಮತ್ತು 2000 ಜಿನ್ನಿಂಗ್/ ಸಂಸ್ಕರಣಾ ಕಾರ್ಖಾನೆಗಳನ್ನು ಉನ್ನತೀಕರಿಸಲು ಕೇಂದ್ರೀಕರಿಸಲಾಗುತ್ತದೆ. ಹೆಚ್ಚಿನ ಇಳುವರಿ ನೀಡುವ ಹವಾಮಾನ ನಿರೋಧಕ ಮತ್ತು ಕೀಟ-ನಿರೋಧಕ ಬೀಜಗಳ ಅಭಿವೃದ್ಧಿ, ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ನಿಯೋಜಿಸುವುದು, ರೈತರ ತರಬೇತಿ, ಗುಣಮಟ್ಟ ಸುಧಾರಣೆ, ಪತ್ತೆಹಚ್ಚುವಿಕೆ ಮತ್ತು ಹತ್ತಿ ಮೌಲ್ಯ ಸರಪಳಿಯಾದ್ಯಂತ ಸುಸ್ಥಿರ ನಾರುಗಳು ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಮೂಲಕ ಮೂಲಸೌಕರ್ಯವನ್ನು ಬಲಪಡಿಸುವುದು ಯೋಜನೆಯಲ್ಲಿ ಸೇರಿದೆ 

2031ರ ವೇಳೆಗೆ ಹತ್ತಿಯ ಲಿಂಟ್ ಉತ್ಪಾದಕತೆಯನ್ನು 440 ಕೆಜಿ/ಹೆಕ್ಟೇರ್ ನಿಂದ 755 ಕೆಜಿ/ಹೆಕ್ಟೇರ್‌ಗೆ ಹೆಚ್ಚಿಸುವ ಮೂಲಕ 498 ಲಕ್ಷ ಬೇಲ್‌ ಗಳ (ತಲಾ 170 ಕೆಜಿ ಲಿಂಟ್) ಹತ್ತಿಯ ಉತ್ಪಾದನೆಯನ್ನು ಸಾಧಿಸುವುದು ಈ ಮಿಷನ್ ಉದ್ದೇಶವಾಗಿದೆ. ಸರಿಸುಮಾರು 32 ಲಕ್ಷ ರೈತರು ಇದರ ಲಾಭ ಪಡೆಯುತ್ತಾರೆ, ಇದು ಸ್ವಾವಲಂಬನೆಗೆ ಕಾರಣವಾಗುತ್ತದೆ. ಪತ್ತೆಹಚ್ಚುವಿಕೆ ಮತ್ತು ಪ್ರಮಾಣೀಕರಣಕ್ಕಾಗಿ ಕಸ್ತೂರಿ ಕಾಟನ್ ಭಾರತ್‌ ಯೋಜನೆಯ ಪ್ರಚಾರ, <2% ಕಸ ಕಡಿತವನ್ನು ಗುರಿಯಾಗಿಟ್ಟುಕೊಂಡು ಮತ್ತು ಅಗಸೆ, ರಾಮಿ, ಸೆಣಬು (ಕತ್ತಾಳೆ), ಮಿಲ್ಕ್‌ವೀಡ್, ಬಿದಿರು ಮತ್ತು ಬಾಳೆಹಣ್ಣಿನಂತಹ ನೈಸರ್ಗಿಕ ನಾರುಗಳ ಪ್ರಚಾರ ವ್ಯವಸ್ಥೆ ರೂಪಿಸುವುದು. ಹತ್ತಿ ವಲಯದಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಇದು ಒಂದು ಮೈಲಿಗಲ್ಲಾಗಲಿದೆ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
How India, Australia clinched Uranium deal

Media Coverage

How India, Australia clinched Uranium deal
NM on the go

Nm on the go

Always be the first to hear from the PM. Get the App Now!
...
Prime Minister expresses grief over loss of lives due to boat capsizing in South 24 Parganas district of West Bengal
July 13, 2026
Prime Minister announces ex-gratia

The Prime Minister, Shri Narendra Modi has expressed deep grief over the loss of lives due to the capsizing of a boat in the South 24 Parganas district of West Bengal.

The Prime Minister conveyed his thoughts to the bereaved families in this hour of grief and prayed for the speedy recovery of the injured.

The Prime Minister announced that an ex-gratia of Rs. 2 lakh from the Prime Minister’s National Relief Fund (PMNRF) would be given to the next of kin of each deceased. The injured would be given Rs. 50,000.

The Prime Minister’s Office posted on X;

“The loss of lives due to the capsizing of a boat in the South 24 Parganas district of West Bengal is deeply painful. My thoughts are with the bereaved families in this hour of grief. May the injured recover at the earliest.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi”