ಅಮರಾವತಿ ವಿಮಾನ ನಿಲ್ದಾಣದ ಉದ್ಘಾಟನೆಯನ್ನು ಮಹಾರಾಷ್ಟ್ರಕ್ಕೆ, ವಿಶೇಷವಾಗಿ ವಿದರ್ಭ ಪ್ರದೇಶಕ್ಕೆ ಉತ್ತಮ ಸುದ್ದಿಯಾಗಿದೆ ಎಂದು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು. ಅಮರಾವತಿಯಲ್ಲಿ ಸಕ್ರಿಯ ವಿಮಾನ ನಿಲ್ದಾಣವು ವಾಣಿಜ್ಯ ಮತ್ತು ಸಂಪರ್ಕವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ರಾಮ್ ಮೋಹನ್ ನಾಯ್ಡು ಕಿಂಜರಾಪು ಅವರು ಎಕ್ಸ್ ತಾಣದಲ್ಲಿ ಹಾಕಿದ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಹೇಳಿದ್ದಾರೆ:
"ಮಹಾರಾಷ್ಟ್ರಕ್ಕೆ, ವಿಶೇಷವಾಗಿ ವಿದರ್ಭ ಪ್ರದೇಶಕ್ಕೆ ಉತ್ತಮ ಸುದ್ದಿ. ಅಮರಾವತಿಯಲ್ಲಿ ಸಕ್ರಿಯ ವಿಮಾನ ನಿಲ್ದಾಣವು ವಾಣಿಜ್ಯ ಮತ್ತು ಸಂಪರ್ಕವನ್ನು ಹೆಚ್ಚಿಸುತ್ತದೆ."
Great news for Maharashtra, especially Vidarbha region. An active airport in Amravati will boost commerce and connectivity. https://t.co/WAq9PzCTZW
— Narendra Modi (@narendramodi) April 16, 2025


