ಒಲಿಂಪಿಕ್ ಫೆನ್ಸಿಂಗ್ ಪಂದ್ಯದಲ್ಲಿ ಮುಂದಿನ ಸುತ್ತಿನಿಂದ ಹೊರಹೋಗುವ ಮೊದಲು ಭಾರತದ ಪರ ಪ್ರಥಮ ಪಂದ್ಯದಲ್ಲಿ ಜಯ ದಾಖಲಿಸಿದ ಭಾರತದ ಫೆನ್ಸಿಂಗ್ ಆಟಗಾರ್ತಿ ಸಿ.ಎ. ಭವಾನಿ ದೇವಿ ಅವರ ಪ್ರಯತ್ನಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಲಿಂಪಿಕ್ ಆಟಗಾರ್ತಿಯ ಭಾವೋದ್ವೇಗದ ಟ್ವೀಟ್ ಗೆ ಸ್ಪಂದಿಸಿರುವ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದು: "ನೀವು ನಿಮ್ಮ ಅತ್ಯುತ್ತಮವಾದ್ದನ್ನು ನೀಡಿದ್ದೀರಿ. ಅದಷ್ಟೇ ಗಣನೆಗೆ ಬರುತ್ತದೆ.
ಸೋಲು ಮತ್ತು ಗೆಲುವು ಬದುಕಿನ ಭಾಗ.
ನಿಮ್ಮ ಕೊಡುಗೆಗೆ ಭಾರತ ಹೆಮ್ಮೆ ಪಡುತ್ತದೆ. ನೀವು ನಮ್ಮ ನಾಗರಿಕರಿಗೆ ಸ್ಫೂರ್ತಿಯಾಗಿದ್ದೀರಿ" ಎಂದು ತಿಳಿಸಿದ್ದಾರೆ.
You gave your best and that is all that counts.
— Narendra Modi (@narendramodi) July 26, 2021
Wins and losses are a part of life.
India is very proud of your contributions. You are an inspiration for our citizens. https://t.co/iGta4a3sbz


