ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿದೇಶದಿಂದ ರಾಷ್ಟ್ರೀಯ ಪರಂಪರೆಯನ್ನು ಮರಳಿ ತರುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಕೇಂದ್ರ ಸಚಿವ ಶ್ರೀ ಜಿ.ಕಿಶನ್ ರೆಡ್ಡಿ, ಅರಿಯಲೂರು ಜಿಲ್ಲೆಯ ಪೊಟ್ಟವೇಲಿ ವೆಲ್ಲೂರಿನ ಶ್ರೀ ವರತರಾಜ ಪೆರುಮಾಳ್ ಅವರು ಚೋಳರ ಕಾಲಕ್ಕೆ (14-15 ನೇ ಶತಮಾನ) ಸೇರಿದ ಶ್ರೀ ವರತರಾಜ ಪೆರುಮಾಳ್ ಅವರ ಲೋಹದ ವಿಗ್ರಹವನ್ನು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿರುವ ಟ್ವೀಟ್ ಗೆ ಪ್ರತಿಯಾಗಿ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.
ಇಲ್ಲಿಯವರೆಗೆ 251 ಪ್ರಾಚೀನ ವಸ್ತುಗಳನ್ನು ವಿವಿಧ ದೇಶಗಳಿಂದ ಮರಳಿ ಪಡೆಯಲಾಗಿದೆ, ಅದರಲ್ಲಿ 238 ವಸ್ತುಗಳನ್ನು 2014 ರಿಂದ ಮರಳಿ ತರಲಾಗಿದೆ ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ:
"ನಮ್ಮ ಅಮೂಲ್ಯವಾದ ಪರಂಪರೆ ತಾಯ್ನಾಡಿಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ನಾವು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ," ಎಂದು ಪ್ರಧಾನಿ ಹೇಳಿದ್ದಾರೆ.
We are constantly working towards ensuring our prized heritage comes back home. https://t.co/35nK2dCW8R
— Narendra Modi (@narendramodi) April 25, 2023


