ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ‘ಮಹಿಳೆ ನಮ್ಮೆಲ್ಲರಿಗೂ ಸ್ಫೂರ್ತಿ’ ಅಭಿಯಾನದ ಭಾಗವಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನು ಕಲ್ಪನಾ ರಮೇಶ್ ಅವರಿಗೆ ನೀಡಿದ್ದರು. ಅವರು ನೀರಿನ ಕೊರತೆ ಮತ್ತು ಜಲ ಸಂರಕ್ಷಣೆಯಂತರ ಪ್ರಮುಖ ವಿಷಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಲ್ಪನಾ ರಮೇಶ್ ಓರ್ವ ‘ಜಲಯೋಧೆ’ ಆಕೆ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಜಲವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಆಕೆ ಸಣ್ಣ ಪ್ರಯತ್ನಗಳಿಂದಲೇ ಭಾರೀ ಪರಿಣಾಮವನ್ನು ಉಂಟುಮಾಡಬಹುದು ಎಂದು ನಂಬಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಟ್ವಿಟ್ಟರ್ ಖಾತೆಯಲ್ಲಿ ಕಲ್ಪನಾ ರಮೇಶ್ ಹೀಗೆ ಬರೆಯುತ್ತಾರೆ “ನೀರು ನಾವು ಪೂರ್ವಜರಿಂದ ಪಡೆದ ಅಮೂಲ್ಯ ವಸ್ತು, ಮುಂದಿನ ತಲೆಮಾರಿಗೆ ನಾವು ಅದನ್ನು ಇಲ್ಲದಂತೆ ಮಾಡುವುದು ಬೇಡ, ನೀರನ್ನು ಜವಾಬ್ದಾರಿಯುತವಾಗಿ ಬಳಕೆ ಮಾಡುವುದು, ಮಳೆನೀರು ಕೊಯ್ಲು, ಕೆರೆಗಳನ್ನು ಉಳಿಸುವುದು, ಬಳಕೆ ಮಾಡಿದ ನೀರಿನ ಸಂಸ್ಕರಣೆ ಮತ್ತು ಜಾಗೃತಿ ಮೂಡಿಸುವ ಮೂಲಕ ಎಲ್ಲರೂ ಜಲಸಂರಕ್ಷಣೆಗೆ ಕೊಡುಗೆ ನೀಡೋಣ” ಎಂದಿದ್ದಾರೆ.
ಕೆರೆಗೆ ಮತ್ತೆ ಪಕ್ಷಿಗಳನ್ನು ವಾಪಸ್ ಕರೆತರುತ್ತೇನೆ ಎಂದು ನಾನು ಖಂಡಿತ ಊಹಿಸಿರಲಿಲ್ಲ ಅಥವಾ ಪ್ರಧಾನಮಂತ್ರಿ ಅವರ ಖಾತೆಯಿಂದ ಟ್ವೀಟ್ ಮಾಡುತ್ತೇನೆ ಎಂದೂ ಸಹ. ದೃಢ ಸಂಕಲ್ಪದಿಂದ ಅಸಾಧ್ಯವಾದದ್ದನ್ನೂ ಸಹ ಸಾಧ್ಯವಾಗಿಸಬಹುದು ಎಂದು ಹೇಳಿದ ಅವರು, ನಾವು ಹೇಗೆ ಜಲಸಂಪನ್ಮೂಲಗಳನ್ನು ನಿರ್ವಹಿಸಬೇಕು ಎಂಬ ಬಗ್ಗೆ ಸಾಮೂಹಿಕ ಪ್ರಯತ್ನದ ಮೂಲಕ ಸಮುದಾಯಗಳಲ್ಲಿ ಬದಲಾವಣೆಗಳನ್ನು ತರಬಹುದಾಗಿದೆ ಎಂದರು. “ನಾವು ಸಮಸ್ಯೆಯನ್ನು ಪರಿಹರಿಸುವವರಾಗೋಣ” ಎಂದರು ಕಲ್ಪನಾ.
Be a warrior but of a different kind!
— Narendra Modi (@narendramodi) March 8, 2020
Be a water warrior.
Have you ever thought about water scarcity? Each one of us can collectively act to create a water secure future for our children
Here is how I am doing my bit. @kalpana_designs pic.twitter.com/wgQLqmdEEC


