ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ನಮಸ್ಕಾರ ! ಕೆಮ್ ಚೋ? ವಣಕ್ಕಂ! ಸತ್ ಶ್ರೀ ಅಕಾಲ್! ಜಿನ್ ಡೊಬ್ರೆ!

ಈ ನೋಟ ನಿಜಕ್ಕೂ ಅದ್ಭುತ. ಮತ್ತು ನಿಮ್ಮ ಉತ್ಸಾಹವೂ ಅದ್ಭುತವಾಗಿದೆ. ನಾನು ಇಲ್ಲಿಗೆ ಕಾಲಿಟ್ಟ ಕ್ಷಣದಿಂದ, ನೀವು ದಣಿದಿಲ್ಲ. ನೀವೆಲ್ಲರೂ ಪೋಲೆಂಡ್ ನ ವಿವಿಧ ಭಾಗಗಳಿಂದ, ವಿಭಿನ್ನ ಭಾಷೆಗಳು, ಉಪಭಾಷೆಗಳು ಮತ್ತು ಪಾಕಪದ್ಧತಿಗಳ ಹಿನ್ನೆಲೆಯಿಂದ ಬಂದಿದ್ದೀರಿ. ಆದರೆ ಪ್ರತಿಯೊಬ್ಬರೂ ಭಾರತೀಯತೆಯ ಪ್ರಜ್ಞೆಯಿಂದ ಪರಸ್ಪರ ಸಂಪರ್ಕ ಹೊಂದಿದ್ದೀರಿ. ನೀವು ಇಲ್ಲಿ ನನಗೆ ಅದ್ಭುತ ಸ್ವಾಗತವನ್ನು ನೀಡಿದ್ದೀರಿ, ಇದಕ್ಕಾಗಿ ನಾನು ನಿಮ್ಮೆಲ್ಲರಿಗೂ ಮತ್ತು ಪೋಲೆಂಡ್ ಜನರಿಗೆ ಈ ಸ್ವಾಗತಕ್ಕಾಗಿ ತುಂಬಾ ಕೃತಜ್ಞನಾಗಿದ್ದೇನೆ.

ಸ್ನೇಹಿತರೇ,

ಕಳೆದ ಒಂದು ವಾರದಿಂದ, ನೀವೆಲ್ಲರೂ ಭಾರತೀಯ ಮಾಧ್ಯಮಗಳ ಕೇಂದ್ರಬಿಂದುವಾಗಿದ್ದೀರಿ. ಪೋಲೆಂಡ್ ಜನರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ, ಮತ್ತು ಪೋಲೆಂಡ್ ಬಗ್ಗೆಯೂ ಸಾಕಷ್ಟು ಹಂಚಿಕೊಳ್ಳಲಾಗಿದೆ. 45 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್ ಗೆ ಬಂದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅನೇಕ ಒಳ್ಳೆಯ ವಿಷಯಗಳು ನನಗೆ ಅದೃಷ್ಟದಂತೆ ಒದಗಿ ಬಂದಿವೆ. ಕೆಲವು ತಿಂಗಳ ಹಿಂದೆ, ನಾನು ಆಸ್ಟ್ರಿಯಾಕ್ಕೆ ಹೋಗಿದ್ದೆ, ಅಲ್ಲಿ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡಿ ನಾಲ್ಕು ದಶಕಗಳು ಕಳೆದಿವೆ. ದಶಕಗಳಿಂದ ಯಾವುದೇ ಭಾರತೀಯ ಪ್ರಧಾನಿ ಭೇಟಿ ನೀಡದ ಇಂತಹ ಅನೇಕ ದೇಶಗಳಿವೆ. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ದಶಕಗಳಿಂದ, ಭಾರತದ ನೀತಿಯು ಎಲ್ಲಾ ದೇಶಗಳಿಂದ ಸಮಾನ ಅಂತರವನ್ನು ಕಾಯ್ದುಕೊಳ್ಳುವುದಾಗಿತ್ತು. ಇಂದಿನ ಭಾರತದ ನೀತಿಯು ಎಲ್ಲಾ ದೇಶಗಳೊಂದಿಗೆ ಸಮಾನ ಸಾಮೀಪ್ಯವನ್ನು ಕಾಪಾಡಿಕೊಳ್ಳುವುದು. ಇಂದಿನ ಭಾರತವು ಎಲ್ಲರೊಂದಿಗೂ ಸಂಪರ್ಕ ಸಾಧಿಸಲು ಬಯಸುತ್ತದೆ, ಇಂದಿನ ಭಾರತವು ಎಲ್ಲರ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತದೆ, ಇಂದಿನ ಭಾರತವು ಎಲ್ಲರೊಂದಿಗೂ ನಿಲ್ಲುತ್ತದೆ ಮತ್ತು ಎಲ್ಲರ ಹಿತಾಸಕ್ತಿಗಳ ಬಗ್ಗೆ ಯೋಚಿಸುತ್ತದೆ. ಇಂದು ಜಗತ್ತು ಭಾರತವನ್ನು 'ವಿಶ್ವ ಬಂಧು' (ಜಾಗತಿಕ ಸ್ನೇಹಿತ) ಎಂದು ಗೌರವಿಸುತ್ತಿದೆ ಎಂದು ನಾವು ಹೆಮ್ಮೆಪಡುವ ಸ್ಥಿತಿಯಲ್ಲಿದ್ದೇವೆ. ನೀವು ಸಹ ಇದನ್ನು ಇಲ್ಲಿ ಅನುಭವಿಸುತ್ತಿದ್ದೀರಿ, ಅಲ್ಲವೇ? ನನ್ನ ಮಾಹಿತಿ ಸರಿಯಾಗಿದೆ, ಅಲ್ಲವೇ?

 

ಸ್ನೇಹಿತರೇ,

ಇದು ಭೌಗೋಳಿಕ ರಾಜಕೀಯದ ಬಗ್ಗೆ ಅಲ್ಲ, ಆದರೆ ಮೌಲ್ಯಗಳು ಮತ್ತು ಸಂಪ್ರದಾಯಗಳ ಬಗ್ಗೆ,  ಅವುಗಳ ಜೊತೆ ನಾವಿದ್ದೇವೆ. ಬೇರೆಲ್ಲಿಯೂ ಸ್ಥಾನವಿಲ್ಲದವರಿಗೆ, ಭಾರತವು ತನ್ನ ಹೃದಯದಲ್ಲಿ ಮತ್ತು ತನ್ನ ಭೂಮಿಯಲ್ಲಿ ಸ್ಥಾನವನ್ನು ನೀಡಿತು. ಇದು ನಮ್ಮ ಪರಂಪರೆ, ಇದರ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುತ್ತಾನೆ. ಭಾರತದ ಈ ಶಾಶ್ವತ ಚೈತನ್ಯಕ್ಕೆ ಪೋಲೆಂಡ್ ಸಾಕ್ಷಿಯಾಗಿದೆ. ಇಂದಿಗೂ, ಪೋಲೆಂಡ್ ನ ಪ್ರತಿಯೊಬ್ಬರೂ ನಮ್ಮ ಜಾಮ್ ಸಾಹೇಬರನ್ನು 'ದೋಬ್ರೆ' ಅಥವಾ ಉತ್ತಮ ಮಹಾರಾಜ ಎಂದು ತಿಳಿದಿದ್ದಾರೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಪೋಲೆಂಡ್ ತೊಂದರೆಗಳಿಂದ ಸುತ್ತುವರಿದಾಗ, ಸಾವಿರಾರು ಪೋಲಿಷ್ ಮಹಿಳೆಯರು ಮತ್ತು ಮಕ್ಕಳು ಆಶ್ರಯಕ್ಕಾಗಿ ಅಲೆದಾಡುತ್ತಿದ್ದಾಗ, ಜಾಮ್ ಸಾಹೇಬ್, ದಿಗ್ವಿಜಯ್ ಸಿಂಗ್ ರಂಜಿತ್ ಸಿಂಗ್ ಜಡೇಜಾ ಮುಂದೆ ಬಂದರು. ಅವರು ಪೋಲಿಷ್ ಮಹಿಳೆಯರು ಮತ್ತು ಮಕ್ಕಳಿಗಾಗಿ ವಿಶೇಷ ಶಿಬಿರವನ್ನು ಸ್ಥಾಪಿಸಿದರು. ಶಿಬಿರದಲ್ಲಿ ಪೋಲಿಷ್ ಮಕ್ಕಳಿಗೆ ಜಾಮ್ ಸಾಹೇಬ್ ಹೇಳಿದರು, ನವನಗರದ ಜನರು ನನ್ನನ್ನು 'ಬಾಪು' (ತಂದೆ) ಎಂದು ಕರೆಯುವಂತೆ, ನಾನು ನಿಮ್ಮ 'ಬಾಪು' ಕೂಡ.

ಸ್ನೇಹಿತರೇ,

ನಾನು ಜಾಮ್ ಸಾಹೇಬ್ ಅವರ ಕುಟುಂಬದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದೇನೆ, ಮತ್ತು ಅವರು ನನ್ನ ಬಗ್ಗೆ ಅಪಾರ ಪ್ರೀತಿಯನ್ನು ತೋರಿಸಿದ್ದಾರೆ. ಕೆಲವು ತಿಂಗಳ ಹಿಂದೆಯೂ ನಾನು ಈಗಿನ ಜಾಮ್ ಸಾಹೇಬರನ್ನು ಭೇಟಿಯಾಗಲು ಹೋಗಿದ್ದೆ. ಅವರ ಕೋಣೆಯಲ್ಲಿ ಪೋಲೆಂಡ್ ಗೆ ಸಂಬಂಧಿಸಿದ ಚಿತ್ರ ಇನ್ನೂ ಇದೆ. ಜಾಮ್ ಸಾಹೇಬರು ಹಾಕಿಕೊಟ್ಟ ಮಾರ್ಗವನ್ನು ಪೋಲೆಂಡ್ ಜೀವಂತವಾಗಿರಿಸಿದೆ ಎಂಬುದನ್ನು ನೋಡಿ ನನಗೆ ಸಂತೋಷವಾಗುತ್ತದೆ. ಎರಡು ದಶಕಗಳ ಹಿಂದೆ ಜಾಮ್ನಗರ್ ಸೇರಿದಂತೆ ಗುಜರಾತ್ನಲ್ಲಿ ವಿನಾಶಕಾರಿ ಭೂಕಂಪ ಸಂಭವಿಸಿದಾಗ, ಸಹಾಯ ಮಾಡಲು ಮುಂದೆ ಬಂದ ಮೊದಲ ದೇಶಗಳಲ್ಲಿ ಪೋಲೆಂಡ್ ಒಂದಾಗಿದೆ. ಪೋಲೆಂಡ್ ನ ಜನರು ಜಾಮ್ ಸಾಹೇಬ್ ಮತ್ತು ಅವರ ಕುಟುಂಬಕ್ಕೆ ಹೆಚ್ಚಿನ ಗೌರವವನ್ನು ನೀಡಿದ್ದಾರೆ. ವಾರ್ಸಾದ 'ಗುಡ್ ಮಹಾರಾಜ ಸ್ಕ್ವೇರ್'ನಲ್ಲಿ ಈ ಪ್ರೀತಿ ಸ್ಪಷ್ಟವಾಗಿ ಗೋಚರಿಸುತ್ತದೆ. ಸ್ವಲ್ಪ ಸಮಯದ ಹಿಂದೆ, ದೊಬ್ರೆ ಮಹಾರಾಜ ಸ್ಮಾರಕ ಮತ್ತು ಕೊಲ್ಹಾಪುರ ಸ್ಮಾರಕಕ್ಕೂ ಭೇಟಿ ನೀಡುವ ಸೌಭಾಗ್ಯವೂ ನನಗೆ ಸಿಕ್ಕಿತ್ತು. ಈ ಅವಿಸ್ಮರಣೀಯ ಕ್ಷಣದಲ್ಲಿ, ನಾನು ನಿಮ್ಮೊಂದಿಗೆ ಕೆಲವು ಮಾಹಿತಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಭಾರತವು ಜಾಮ್ ಸಾಹೇಬ್ ಸ್ಮಾರಕ ಯುವ ವಿನಿಮಯ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ. ಈ ಕಾರ್ಯಕ್ರಮದ ಅಡಿಯಲ್ಲಿ, ಪ್ರತಿ ವರ್ಷ 20 ಪೋಲಿಷ್ ಯುವಕರನ್ನು ಭಾರತಕ್ಕೆ ಆಹ್ವಾನಿಸಲಾಗುವುದು. ಇದು ಪೋಲಿಷ್ ಯುವಕರಿಗೆ ಭಾರತವನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ.

ಸ್ನೇಹಿತರೇ,

ಇಲ್ಲಿರುವ ಕೊಲ್ಹಾಪುರ ಸ್ಮಾರಕವು ಕೊಲ್ಹಾಪುರದ ಮಹಾನ್ ರಾಜಮನೆತನಕ್ಕೆ ಪೋಲೆಂಡ್ ಜನರು ಸಲ್ಲಿಸುವ ಗೌರವವಾಗಿದೆ. ಇದು ಮಹಾರಾಷ್ಟ್ರದ ನಾಗರಿಕರಿಗೆ ಮತ್ತು ಮರಾಠಿ ಸಂಸ್ಕೃತಿಯ ಬಗ್ಗೆ ಪೋಲೆಂಡ್ ಜನರು ವ್ಯಕ್ತಪಡಿಸಿದ ಗೌರವವಾಗಿದೆ. ಮರಾಠಿ ಸಂಸ್ಕೃತಿಯಲ್ಲಿ, ಮಾನವೀಯತೆಯ ಅನುಸರಣೆಯು ಹೆಚ್ಚಿನ ಆದ್ಯತೆಯನ್ನು ಹೊಂದಿದೆ. ಛತ್ರಪತಿ ಶಿವಾಜಿ ಮಹಾರಾಜರಿಂದ ಪ್ರೇರಿತರಾಗಿ, ಕೊಲ್ಹಾಪುರದ ರಾಜಮನೆತನವು ಪೋಲಿಷ್ ಮಹಿಳೆಯರು ಮತ್ತು ಮಕ್ಕಳಿಗೆ ವಾಲಿವಾಡೆಯಲ್ಲಿ ಆಶ್ರಯ ನೀಡಿತು. ಅಲ್ಲಿ ಒಂದು ದೊಡ್ಡ ಶಿಬಿರವನ್ನು ಸಹ ಸ್ಥಾಪಿಸಲಾಯಿತು. ಪೋಲಿಷ್ ಮಹಿಳೆಯರು ಮತ್ತು ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಮಹಾರಾಷ್ಟ್ರದ ಜನರು ಹಗಲು ರಾತ್ರಿ ಕೆಲಸ ಮಾಡಿದರು.

 

ಸ್ನೇಹಿತರೇ,

ಇಂದು, ಮಾಂಟೆ ಕ್ಯಾಸಿನೊ ಸ್ಮಾರಕದಲ್ಲಿ ಗೌರವ ಸಲ್ಲಿಸುವ ಅವಕಾಶವೂ ನನಗೆ ಸಿಕ್ಕಿತು. ಈ ಸ್ಮಾರಕವು ಸಾವಿರಾರು ಭಾರತೀಯ ಸೈನಿಕರ ತ್ಯಾಗವನ್ನು ನೆನಪಿಸುತ್ತದೆ. ವಿಶ್ವದ ಮೂಲೆ ಮೂಲೆಯಲ್ಲೂ ಭಾರತೀಯರು ತಮ್ಮ ಕರ್ತವ್ಯಗಳನ್ನು ಹೇಗೆ ಪೂರೈಸಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಸ್ನೇಹಿತರೇ,

21 ನೇ ಶತಮಾನದ ಭಾರತವು ತನ್ನ ಪ್ರಾಚೀನ ಮೌಲ್ಯಗಳು ಮತ್ತು ಪರಂಪರೆಯ ಬಗ್ಗೆ ಹೆಮ್ಮೆಪಡುತ್ತದೆ, ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಮುಂದುವರಿಯುತ್ತಿದೆ. ಇಂದು, ಭಾರತೀಯರು ಜಗತ್ತಿಗೆ ಸಾಬೀತುಪಡಿಸಿದ ಗುಣಗಳಿಗಾಗಿ ಜಗತ್ತು ಭಾರತವನ್ನು ಗುರುತಿಸುತ್ತದೆ. ನಾವು ಭಾರತೀಯರು ನಮ್ಮ ಪ್ರಯತ್ನಗಳು, ಉತ್ಕೃಷ್ಟತೆ ಮತ್ತು ಅನುಭೂತಿಗೆ ಹೆಸರುವಾಸಿಯಾಗಿದ್ದೇವೆ. ನಾವು ಜಗತ್ತಿನಲ್ಲಿ ಎಲ್ಲಿಗೆ ಹೋದರೂ, ನಾವು ಭಾರತೀಯರು ಗರಿಷ್ಠ ಪ್ರಯತ್ನಗಳನ್ನು ಮಾಡುವುದನ್ನು ಕಾಣಬಹುದು. ಅದು ಉದ್ಯಮಶೀಲತೆ, ಆರೈಕೆದಾರರು ಅಥವಾ ನಮ್ಮ ಸೇವಾ ವಲಯವಾಗಿರಲಿ, ಭಾರತೀಯರು ತಮ್ಮ ಪ್ರಯತ್ನಗಳಿಂದ ತಮಗಾಗಿ ಹೆಸರು ಮಾಡುತ್ತಿದ್ದಾರೆ ಮತ್ತು ತಮ್ಮ ದೇಶಕ್ಕೆ ಹೆಸರು ತರುತ್ತಿದ್ದಾರೆ. ನಾನು ನಿಮ್ಮ ಬಗ್ಗೆ ಮಾತನಾಡುತ್ತಿದ್ದೇನೆ. ನಾನು ಮೂರನೇ ದೇಶದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ನೀವು ಭಾವಿಸಬಹುದು. ಭಾರತೀಯರು ವಿಶ್ವದಾದ್ಯಂತ ತಮ್ಮ ಶ್ರೇಷ್ಠತೆಗಾಗಿ ಗುರುತಿಸಲ್ಪಟ್ಟಿದ್ದಾರೆ. ಅದು ಐಟಿ ಕ್ಷೇತ್ರವಾಗಿರಲಿ ಅಥವಾ ಭಾರತೀಯ ವೈದ್ಯರಾಗಿರಲಿ, ಎಲ್ಲರೂ ತಮ್ಮ ಉತ್ಕೃಷ್ಟತೆಯಿಂದ ಹೊಳೆಯುತ್ತಿದ್ದಾರೆ. ಮತ್ತು ಅಂತಹ ಒಂದು ದೊಡ್ಡ ಗುಂಪು ನನ್ನ ಮುಂದೆಯೇ ಇದೆ.

ಸ್ನೇಹಿತರೇ,

ಭಾರತೀಯರ ಮತ್ತೊಂದು ಗುರುತು ಎಂದರೆ ಅದು ನಮ್ಮ ಅನುಭೂತಿ. ಯಾವುದೇ ದೇಶದಲ್ಲಿ ಬಿಕ್ಕಟ್ಟು ಉದ್ಭವಿಸಿದಾಗ, ಸಹಾಯ ಹಸ್ತ ಚಾಚುವ ಮೊದಲ ದೇಶ ಭಾರತ. 100 ವರ್ಷಗಳಲ್ಲಿಯೇ ಅತಿದೊಡ್ಡ ವಿಪತ್ತು ಕೋವಿಡ್ ಸಂಭವಿಸಿದಾಗ, ಭಾರತ 'ಮಾನವೀಯತೆ ಮೊದಲು' ಎಂದು ಹೇಳಿತು. ನಾವು 150 ಕ್ಕೂ ಹೆಚ್ಚು ದೇಶಗಳಿಗೆ ಔಷಧಿಗಳು ಮತ್ತು ಲಸಿಕೆಗಳನ್ನು ಕಳುಹಿಸಿದ್ದೇವೆ. ವಿಶ್ವದ ಯಾವುದೇ ಭಾಗದಲ್ಲಿ ಭೂಕಂಪ ಸಂಭವಿಸಿದಾಗ ಅಥವಾ ನೈಸರ್ಗಿಕ ವಿಪತ್ತು ಸಂಭವಿಸಿದಾಗ, ಭಾರತದ ಮಂತ್ರ 'ಮಾನವೀಯತೆ ಮೊದಲು'. ಅದು ಯುದ್ಧವಾಗಿರಲಿ, ಭಾರತವು 'ಮಾನವೀಯತೆ ಮೊದಲು' ಎಂದು ಹೇಳುತ್ತದೆ ಮತ್ತು ಈ ಸ್ಫೂರ್ತಿಯೊಂದಿಗೆ, ಭಾರತವು ಪ್ರಪಂಚದಾದ್ಯಂತದ ಜನರಿಗೆ ಸಹಾಯ ಮಾಡುತ್ತದೆ. ಭಾರತವು ಯಾವಾಗಲೂ ಮೊದಲ ಪ್ರತಿಕ್ರಿಯೆಯಾಗಿ ನಿಲ್ಲುತ್ತದೆ.

ಸ್ನೇಹಿತರೇ,

ಭಾರತವು ಬುದ್ಧನ ಪರಂಪರೆಯ ಭೂಮಿ. ಮತ್ತು ಬುದ್ಧನ ವಿಷಯಕ್ಕೆ ಬಂದಾಗ, ಅದು ಶಾಂತಿಯ ಬಗ್ಗೆಯೇ ಹೊರತು, ಯುದ್ಧದ ಬಗ್ಗೆ ಅಲ್ಲ. ಆದ್ದರಿಂದ, ಭಾರತವು ಈ ಪ್ರದೇಶದಲ್ಲಿ ಶಾಶ್ವತ ಶಾಂತಿಯನ್ನು ಬಲವಾಗಿ ಪ್ರತಿಪಾದಿಸುವ ರಾಷ್ಟ್ರವಾಗಿದೆ. ಭಾರತದ ನಿಲುವು ಬಹಳ ಸ್ಪಷ್ಟವಾಗಿದೆ - ಇದು ಯುದ್ಧದ ಯುಗವಲ್ಲ. ಮಾನವೀಯತೆಗೆ ಅತಿದೊಡ್ಡ ಬೆದರಿಕೆಗಳನ್ನು ಎದುರಿಸಲು ಒಗ್ಗೂಡುವ ಸಮಯ ಇದು. ಆದ್ದರಿಂದ, ಭಾರತವು ರಾಜತಾಂತ್ರಿಕತೆ ಮತ್ತು ಸಂವಾದಕ್ಕೆ ಒತ್ತು ನೀಡುತ್ತದೆ.

ಸ್ನೇಹಿತರೇ,

ಉಕ್ರೇನ್ ನಲ್ಲಿ ಸಿಲುಕಿರುವ ನಮ್ಮ ಮಕ್ಕಳಿಗೆ ನೀವು ಸಹಾಯ ಮಾಡಿದ ರೀತಿಯನ್ನು ನಾವೆಲ್ಲರೂ ನೋಡಿದ್ದೇವೆ. ನೀವು ಅವರಿಗೆ ಉತ್ತಮವಾಗಿ ಸೇವೆ ಸಲ್ಲಿಸಿದ್ದೀರಿ. ನೀವು ಲಂಗರ್ ಗಳನ್ನು ಸ್ಥಾಪಿಸಿದಿರಿ, ನಿಮ್ಮ ಮನೆಗಳನ್ನು ತೆರೆದಿಟ್ಟಿರಿ ಮತ್ತು ನಿಮ್ಮ ರೆಸ್ಟೋರೆಂಟ್ ಗಳನ್ನು ಸಹ ತೆರೆದಿಟ್ಟಿರಿ. ಪೋಲಿಷ್ ಸರ್ಕಾರವು ನಮ್ಮ ವಿದ್ಯಾರ್ಥಿಗಳಿಗೆ ವೀಸಾ ನಿರ್ಬಂಧಗಳನ್ನು ಸಹ ಮನ್ನಾ ಮಾಡಿತು. ಪೋಲೆಂಡ್ ನಮ್ಮ ಮಕ್ಕಳಿಗಾಗಿ ತನ್ನ ಬಾಗಿಲುಗಳನ್ನು ಪೂರ್ಣ ಹೃದಯದಿಂದ ತೆರೆಯಿತು. ಇಂದಿಗೂ, ನಾನು ಉಕ್ರೇನ್ ನಿಂದ ಹಿಂದಿರುಗಿದ ಮಕ್ಕಳನ್ನು ಭೇಟಿಯಾದಾಗ, ಅವರು ಪೋಲೆಂಡ್ ಜನರನ್ನು ಮತ್ತು ನಿಮ್ಮನ್ನು ತುಂಬಾ ಹೊಗಳುತ್ತಾರೆ. ಆದ್ದರಿಂದ, ಇಂದು ನಾನು ನಿಮ್ಮೆಲ್ಲರನ್ನೂ ಮತ್ತು ಪೋಲೆಂಡ್ ನ ಜನರನ್ನು 140 ಕೋಟಿ ಭಾರತೀಯರ ಪರವಾಗಿ ಪ್ರಶಂಸಿಸುತ್ತೇನೆ. ನಾನು ನಿಮಗೆ ನಮಸ್ಕರಿಸುತ್ತೇನೆ.

 

ಸ್ನೇಹಿತರೇ,

ಭಾರತ ಮತ್ತು ಪೋಲೆಂಡ್ ಸಮಾಜಗಳ ನಡುವೆ ಅನೇಕ ಹೋಲಿಕೆಗಳಿವೆ. ಒಂದು ಪ್ರಮುಖ ಹೋಲಿಕೆ ನಮ್ಮ ಪ್ರಜಾಪ್ರಭುತ್ವ. ಭಾರತವು ಪ್ರಜಾಪ್ರಭುತ್ವದ ತಾಯಿ ಮಾತ್ರವಲ್ಲ, ಭಾಗವಹಿಸುವ ಮತ್ತು ರೋಮಾಂಚಕ ಪ್ರಜಾಪ್ರಭುತ್ವವಾಗಿದೆ. ಭಾರತದ ಜನರಿಗೆ ಪ್ರಜಾಪ್ರಭುತ್ವದಲ್ಲಿ ಅಚಲ ನಂಬಿಕೆ ಇದೆ. ಇತ್ತೀಚಿನ ಚುನಾವಣೆಗಳಲ್ಲಿ ನಾವು ಈ ನಂಬಿಕೆಯನ್ನು ನೋಡಿದ್ದೇವೆ. ಇವು ಇತಿಹಾಸದಲ್ಲೇ ಅತಿ ದೊಡ್ಡ ಚುನಾವಣೆಗಳಾಗಿದ್ದವು. ಇತ್ತೀಚೆಗೆ, ಯುರೋಪಿಯನ್ ಯೂನಿಯನ್ ಕೂಡ ಚುನಾವಣೆಗಳನ್ನು ನಡೆಸಿತು, ಅಲ್ಲಿ ಸುಮಾರು 180 ಮಿಲಿಯನ್ ಮತದಾರರು ತಮ್ಮ ಮತಗಳನ್ನು ಚಲಾಯಿಸಿದರು. ಭಾರತದಲ್ಲಿ, ಸುಮಾರು 640 ಮಿಲಿಯನ್ ಮತದಾರರು, ಅಂದರೆ ಅದಕ್ಕಿಂತ ಮೂರು ಪಟ್ಟು ಹೆಚ್ಚು ಜನರು ಭಾಗವಹಿಸಿದ್ದರು. ಭಾರತದಲ್ಲಿ ಈ ಚುನಾವಣೆಗಳಲ್ಲಿ ಸಾವಿರಾರು ರಾಜಕೀಯ ಪಕ್ಷಗಳು ಭಾಗವಹಿಸಿದ್ದವು. ಸುಮಾರು 8,000 ಅಭ್ಯರ್ಥಿಗಳು ಕಣದಲ್ಲಿದ್ದರು. 5 ದಶಲಕ್ಷಕ್ಕೂ ಹೆಚ್ಚು ಮತದಾನ ಯಂತ್ರಗಳು, 1 ದಶಲಕ್ಷಕ್ಕೂ ಹೆಚ್ಚು ಮತದಾನ ಕೇಂದ್ರಗಳು ಮತ್ತು 15 ದಶಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಈ ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ವಹಣೆ, ದಕ್ಷತೆ ಮತ್ತು ವಿಶ್ವಾಸದ ಪ್ರಮಾಣವು ಭಾರತದ ಅತಿದೊಡ್ಡ ಶಕ್ತಿಯಾಗಿದೆ. ಪ್ರಪಂಚದಾದ್ಯಂತದ ಜನರು ಈ ಅಂಕೆ ಸಂಖ್ಯೆಗಳನ್ನು ಕೇಳಿದಾಗ, ಅವರು ಆಶ್ಚರ್ಯಚಕಿತರಾಗುತ್ತಾರೆ.

ಸ್ನೇಹಿತರೇ,

ನಾವು ಭಾರತೀಯರು ವೈವಿಧ್ಯತೆಯೊಂದಿಗೆ ಹೇಗೆ ಬದುಕಬೇಕು ಮತ್ತು ಅದನ್ನು ಹೇಗೆ ಸಂಭ್ರಮಿಸಬೇಕು ಎಂದು ತಿಳಿದಿದ್ದೇವೆ. ಅದಕ್ಕಾಗಿಯೇ ನಾವು ಯಾವುದೇ ಸಮಾಜದೊಂದಿಗೆ ಸುಲಭವಾಗಿ ಬೆರೆಯುತ್ತೇವೆ. ಪೋಲೆಂಡ್ ನಲ್ಲಿ, ಭಾರತದ ಬಗ್ಗೆ ಕಲಿಯುವ ಮತ್ತು ಅರ್ಥಮಾಡಿಕೊಳ್ಳುವ ದೀರ್ಘಕಾಲದ ಸಂಪ್ರದಾಯವಿದೆ. ಇದು ಇಲ್ಲಿನ ವಿಶ್ವವಿದ್ಯಾಲಯಗಳಲ್ಲಿಯೂ ಸ್ಪಷ್ಟವಾಗಿದೆ. ನಿಮ್ಮಲ್ಲಿ ಅನೇಕರು ವಾರ್ಸಾ ವಿಶ್ವವಿದ್ಯಾಲಯದ ಮುಖ್ಯ  ಗ್ರಂಥಾಲಯಕ್ಕೆ ಭೇಟಿ ನೀಡಿರಬಹುದು. ಅಲ್ಲಿ, ಭಗವದ್ಗೀತೆ ಮತ್ತು ಉಪನಿಷತ್ತುಗಳ ಉಲ್ಲೇಖಗಳು ನಮ್ಮೆಲ್ಲರನ್ನೂ ಸ್ವಾಗತಿಸುತ್ತವೆ. ತಮಿಳು ಮತ್ತು ಸಂಸ್ಕೃತದಂತಹ ಭಾರತೀಯ ಭಾಷೆಗಳನ್ನು ಅಧ್ಯಯನ ಮಾಡುವ ಅನೇಕ ಜನರು ಇಲ್ಲಿದ್ದಾರೆ. ಇಲ್ಲಿನ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ಅಧ್ಯಯನಕ್ಕೆ ಸಂಬಂಧಿಸಿದ ಪೀಠಗಳಿವೆ. ಪೋಲೆಂಡ್ ಮತ್ತು ಭಾರತೀಯರು ಸಹ ಕಬಡ್ಡಿಯ ಮೂಲಕ ಸಂಪರ್ಕ ಹೊಂದಿದ್ದಾರೆ. ಭಾರತದ ಪ್ರತಿಯೊಂದು ಹಳ್ಳಿಯಲ್ಲೂ ಕಬಡ್ಡಿ ಆಡಲಾಗುತ್ತದೆ ಎಂಬುದು ನಿಮಗೆ ತಿಳಿದಿದೆ. ಈ ಆಟವು ಭಾರತದಿಂದ ಪೋಲೆಂಡ್ ತಲುಪಿತು, ಮತ್ತು ಪೋಲೆಂಡ್ ಜನರು ಕಬಡ್ಡಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಪೋಲೆಂಡ್ ಸತತ ಎರಡು ವರ್ಷಗಳ ಕಾಲ ಯುರೋಪಿಯನ್ ಕಬಡ್ಡಿ ಚಾಂಪಿಯನ್ ಆಗಿದೆ. ಆಗಸ್ಟ್ 24 ರಿಂದ ಮತ್ತೆ ಕಬಡ್ಡಿ ಚಾಂಪಿಯನ್ ಶಿಪ್ ನಡೆಯಲಿದೆ ಮತ್ತು ಮೊದಲ ಬಾರಿಗೆ ಪೋಲೆಂಡ್ ಆತಿಥ್ಯ ವಹಿಸುತ್ತಿದೆ ಎಂದು ನನಗೆ ತಿಳಿಸಲಾಗಿದೆ. ನಿಮ್ಮ ಮೂಲಕ ಪೋಲಿಷ್ ಕಬಡ್ಡಿ ತಂಡಕ್ಕೆ ನನ್ನ ಶುಭ ಹಾರೈಕೆಗಳನ್ನು ತಿಳಿಸಲು ಬಯಸುತ್ತೇನೆ.

ಸ್ನೇಹಿತರೇ,

ನೀವು ಇತ್ತೀಚೆಗೆ ಇಲ್ಲಿ ಸ್ವಾತಂತ್ರ್ಯದ ಹಬ್ಬವನ್ನು ಆಚರಿಸಿದ್ದೀರಿ. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಸಮೃದ್ಧ ಭಾರತದ ಕನಸು ಕಂಡಿದ್ದರು. ಇಂದು, ಪ್ರತಿಯೊಬ್ಬ ಭಾರತೀಯರೂ ಆ ಕನಸನ್ನು ಈಡೇರಿಸಲು ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ಭಾರತವು 2047 ರ ವೇಳೆಗೆ 'ವಿಕ್ಷಿತ್ ಭಾರತ್' (ಅಭಿವೃದ್ಧಿ ಹೊಂದಿದ ಭಾರತ) ಆಗುವ ಗುರಿಯನ್ನು ಹೊಂದಿದೆ. ನಮ್ಮ ದೇಶ ಆ ದಿಕ್ಕಿನಲ್ಲಿ ಸಾಗುತ್ತಿದೆ. ಆದ್ದರಿಂದ, ಇಂದಿನ ಭಾರತವು ಅಭೂತಪೂರ್ವ ಪ್ರಮಾಣದಲ್ಲಿ, ವೇಗದಲ್ಲಿ ಮತ್ತು ಪರಿಹಾರಗಳನ್ನು ಹುಡುಕುವಲ್ಲಿ ಕಾರ್ಯತತ್ಪರವಾಗಿದೆ. ಭಾರತದಲ್ಲಿ ಯಾವ ವೇಗದಲ್ಲಿ ಮತ್ತು ಪ್ರಮಾಣದಲ್ಲಿ ಪರಿವರ್ತನೆಯಾಗುತ್ತಿದೆ  ಎಂದರೆ ಅದರ ವೇಗವು ನಿಮಗೆ ಹೆಮ್ಮೆ ತರುತ್ತದೆ. ನಾನು ನಿಮಗೆ ವಿವರಿಸಿ ಹೇಳಬೇಕೇ? ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ 250 ಮಿಲಿಯನ್ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ. ಮತ್ತು 250 ಮಿಲಿಯನ್ ಫ್ರಾನ್ಸ್, ಜರ್ಮನಿ ಮತ್ತು ಯುಕೆಯ ಒಟ್ಟು ಜನಸಂಖ್ಯೆಗಿಂತ ಹೆಚ್ಚಾಗಿದೆ. 10 ವರ್ಷಗಳಲ್ಲಿ, ಬಡವರಿಗಾಗಿ 40 ಮಿಲಿಯನ್ ದೃಢವಾದ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ, ಮತ್ತು ನಾವು ಇನ್ನೂ 30 ಮಿಲಿಯನ್ ಮನೆಗಳನ್ನು ನಿರ್ಮಿಸಲಿದ್ದೇವೆ. ಮತ್ತು ಪೋಲೆಂಡ್ ಇಂದು 14 ಮಿಲಿಯನ್ ಮನೆಗಳನ್ನು ಹೊಂದಿದ್ದರೆ, ನಾವು ಕೇವಲ ಒಂದು ದಶಕದಲ್ಲಿ ಸುಮಾರು ಮೂರು ಹೊಸ ಪೋಲೆಂಡ್ ಗಳಿಗೆ ಸಮನಾದ ಮನೆಗಳನ್ನು ನಿರ್ಮಿಸಿದ್ದೇವೆ. ನಾವು ಆರ್ಥಿಕ ಸೇರ್ಪಡೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದೇವೆ. 10 ವರ್ಷಗಳಲ್ಲಿ ಭಾರತದಲ್ಲಿ 500 ಮಿಲಿಯನ್ ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆದಿದ್ದೇವೆ. ಈ ಸಂಖ್ಯೆಯು ಯುರೋಪಿಯನ್ ಒಕ್ಕೂಟದ ಒಟ್ಟು ಜನಸಂಖ್ಯೆಗಿಂತ ಹೆಚ್ಚಾಗಿದೆ. ಯುಪಿಐ ಮೂಲಕ ಭಾರತದಲ್ಲಿ ದೈನಂದಿನ ಡಿಜಿಟಲ್ ವಹಿವಾಟುಗಳು ಯುರೋಪಿಯನ್ ಒಕ್ಕೂಟದ ಜನಸಂಖ್ಯೆಗೆ ಸಮಾನವಾಗಿವೆ. ಯುರೋಪಿಯನ್ ಒಕ್ಕೂಟದ ಒಟ್ಟು ಜನಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಸರ್ಕಾರದಿಂದ 5,00,000 ರೂಪಾಯಿಗಳ ಉಚಿತ ಆರೋಗ್ಯ ವಿಮೆಯನ್ನು ಪಡೆಯುತ್ತಾರೆ. ಕಳೆದ ದಶಕದಲ್ಲಿ, ಭಾರತದಲ್ಲಿ ಬ್ರಾಡ್ಬ್ಯಾಂಡ್ ಬಳಕೆದಾರರ ಸಂಖ್ಯೆ 60 ಮಿಲಿಯನ್ನಿಂದ  940 ಮಿಲಿಯನ್ ಗೆ ಏರಿದೆ. ನೀವು ಯುರೋಪ್ ಮತ್ತು ಯುಎಸ್ಎ ಜನಸಂಖ್ಯೆಯನ್ನು ಒಟ್ಟುಗೂಡಿಸಿದರೆ, ಅದು ಇಂದು ಭಾರತದಲ್ಲಿ ಬ್ರಾಡ್ಬ್ಯಾಂಡ್ ಬಳಸುವ ಜನರ ಸಂಖ್ಯೆಗೆ ಸಮೀಪದಲ್ಲಿರುತ್ತದೆ. ಕಳೆದ ದಶಕದಲ್ಲಿ, ಸುಮಾರು 7,00,000 ಕಿಲೋಮೀಟರ್ ಆಪ್ಟಿಕಲ್ ಫೈಬರ್ ಹಾಕಲಾಗಿದೆ. ಭೂಮಿಯನ್ನು ಎಪ್ಪತ್ತು ಬಾರಿ ಸುತ್ತಲು ಇದು ಸಾಕು. ಭಾರತ್ ಎರಡು ವರ್ಷಗಳಲ್ಲಿ ಪ್ರತಿ ಜಿಲ್ಲೆಗೆ 5 ಜಿ ನೆಟ್ ವರ್ಕ್ ಗಳನ್ನು ತಂದಿದೆ. ಈಗ, ನಾವು ಮೇಡ್ ಇನ್ ಇಂಡಿಯಾ 6 ಜಿ ನೆಟ್ ವರ್ಕ್ ಗಾಗಿ ಕಾರ್ಯತತ್ಪರರಾಗಿದ್ದೇವೆ.  

 

ಸ್ನೇಹಿತರೇ,

ಭಾರತದಲ್ಲಿ ಪರಿವರ್ತನೆಯ ಪ್ರಮಾಣವು ಸಾರ್ವಜನಿಕ ಸಾರಿಗೆಯಲ್ಲೂ ಸ್ಪಷ್ಟವಾಗಿ ಗೋಚರಿಸತೊಡಗಿದೆ. 2014 ರಲ್ಲಿ ಭಾರತದ 5 ನಗರಗಳಲ್ಲಿ ಕಾರ್ಯಾಚರಿಸುತ್ತಿರುವ ಮೆಟ್ರೋಗಳು ಇದ್ದವು. ಇಂದು, 20 ನಗರಗಳಲ್ಲಿ ಕಾರ್ಯಾಚರಿಸುತ್ತಿರುವ ಮೆಟ್ರೋಗಳಿವೆ. ಭಾರತದಲ್ಲಿ ಪ್ರತಿದಿನ ಮೆಟ್ರೋದಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಪೋಲೆಂಡ್ ನ ಜನಸಂಖ್ಯೆಯ ಮೂರನೇ ಒಂದು ಭಾಗಕ್ಕೆ ಸಮನಾಗಿದೆ.

ಸ್ನೇಹಿತರೇ,

ಭಾರತವು ಏನೇ ಮಾಡಿದರೂ, ಅದು ಹೊಸ ದಾಖಲೆಯನ್ನು ನಿರ್ಮಿಸುತ್ತದೆ, ಅದು ಇತಿಹಾಸವನ್ನು ಸೃಷ್ಟಿಸುತ್ತದೆ. ಭಾರತವು ಏಕಕಾಲದಲ್ಲಿ 100 ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಿರುವುದನ್ನು ನೀವು ನೋಡಿದ್ದೀರಿ, ಇದು ಸ್ವತಃ ಒಂದು ದಾಖಲೆಯಾಗಿದೆ. ಇನ್ನು ಎರಡು ದಿನಗಳ ನಂತರ, ಆಗಸ್ಟ್ 23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನ. ನಿಮಗೂ ಅದು ತಿಳಿದಿದೆ, ಅಲ್ಲವೇ? ನಿಮಗೆ ನೆನಪಿದೆಯೇ? ಇದೇ ದಿನ, ಭಾರತವು ತನ್ನ ಚಂದ್ರಯಾನವನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಿತು. ಬೇರೆ ಯಾವುದೇ ದೇಶವು ತಲುಪದ ಸ್ಥಳವನ್ನು ಭಾರತ ತಲುಪಿದೆ. ಮತ್ತು ಆ ಸ್ಥಳಕ್ಕೆ ಶಿವ ಶಕ್ತಿ ಎಂದು ಹೆಸರಿಡಲಾಗಿದೆ. ಆ ಸ್ಥಳಕ್ಕೆ ಶಿವಶಕ್ತಿ ಎಂದು ಹೆಸರಿಡಲಾಗಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿದೆ.

ಸ್ನೇಹಿತರೇ,

ವಿಶ್ವದ ಜನಸಂಖ್ಯೆಯಲ್ಲಿ ಭಾರತದ ಪಾಲು ಸುಮಾರು 16-17 ಪ್ರತಿಶತದಷ್ಟಿದೆ, ಆದರೆ ಜನಸಂಖ್ಯೆಯ ದೃಷ್ಟಿಯಿಂದ ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಪಾಲು ಗಮನಾರ್ಹವಾಗಿರಲಿಲ್ಲ. ಈಗ, ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ. ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಪಾಲು 2023 ರಲ್ಲಿ ಶೇಕಡಾ 16 ಕ್ಕಿಂತ ಹೆಚ್ಚಾಗಿದೆ. ಇಂದು, ಪ್ರತಿಯೊಂದು ಜಾಗತಿಕ ಸಂಸ್ಥೆ ಮತ್ತು ಏಜೆನ್ಸಿಗಳು ಭಾರತಕ್ಕೆ ಉಜ್ವಲ ಭವಿಷ್ಯವನ್ನು ಊಹಿಸುತ್ತಿವೆ, ಮತ್ತು ಇವರು ಜ್ಯೋತಿಷಿಗಳಲ್ಲ; ಅವರ ಲೆಕ್ಕಾಚಾರಗಳು ಅಂಕಿಅಂಶಗಳು ಮತ್ತು ನೆಲದ ವಾಸ್ತವಗಳನ್ನು ಆಧರಿಸಿವೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ದಿನ  ದೂರವಿಲ್ಲ. ನನ್ನ ಮೂರನೇ ಅವಧಿಯಲ್ಲಿ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ನಾನು ನನ್ನ ದೇಶದ ಜನರಿಗೆ ಭರವಸೆ ನೀಡಿದ್ದೇನೆ. ಮುಂಬರುವ ವರ್ಷಗಳಲ್ಲಿ, ಜಗತ್ತು ಭಾರತದ ಪ್ರಚಂಡ ಆರ್ಥಿಕ ಪ್ರಗತಿಗೆ ಸಾಕ್ಷಿಯಾಗಲಿದೆ. ಡಿಜಿಟಲ್ ಮೂಲಸೌಕರ್ಯದಿಂದಾಗಿ ಈ ದಶಕದ ಅಂತ್ಯದ ವೇಳೆಗೆ ಭಾರತವು 8 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ನಾಸ್ಕಾಮ್ ಅಂದಾಜಿಸಿದೆ. ನಾಸ್ಕಾಮ್ ಮತ್ತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಅಂದಾಜಿನ ಪ್ರಕಾರ ಮುಂದಿನ 3-4 ವರ್ಷಗಳಲ್ಲಿ ಭಾರತದ ಎಐ ಮಾರುಕಟ್ಟೆ 30-35 ಪ್ರತಿಶತದಷ್ಟು ವೇಗದಲ್ಲಿ ಬೆಳೆಯುತ್ತದೆ. ಎಲ್ಲೆಡೆ ಭಾರತದ ಬಗ್ಗೆ ಅಭೂತಪೂರ್ವ ಸಕಾರಾತ್ಮಕತೆ ಇದೆ. ಇಂದು, ಭಾರತವು ಸೆಮಿಕಂಡಕ್ಟರ್ ಮಿಷನ್, ಡೀಪ್ ಓಷನ್ ಮಿಷನ್, ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್, ನ್ಯಾಷನಲ್ ಕ್ವಾಂಟಮ್ ಮಿಷನ್ ಮತ್ತು ಎಐ ಮಿಷನ್ನಲ್ಲಿ ಕೆಲಸ ಮಾಡುತ್ತಿದೆ. ಭಾರತವು ಮುಂದಿನ ದಿನಗಳಲ್ಲಿ ತನ್ನ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಲು ತಯಾರಿ ನಡೆಸುತ್ತಿದೆ. ಮೇಡ್ ಇನ್ ಇಂಡಿಯಾ ಗಗನಯಾನದಲ್ಲಿ ಭಾರತೀಯ ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಪ್ರಯಾಣಿಸುವ ದಿನ ದೂರವಿಲ್ಲ.

ಸ್ನೇಹಿತರೇ,

ಭಾರತ ಇಂದು ಗುಣಮಟ್ಟದ ಉತ್ಪಾದನೆ ಮತ್ತು ಗುಣಮಟ್ಟದ ಮಾನವಶಕ್ತಿಯ ಮೇಲೆ ಸಂಪೂರ್ಣ ಗಮನ ಹರಿಸಿದೆ. ಜಾಗತಿಕ ಪೂರೈಕೆ ಸರಪಳಿಗೆ ಇವು ಬಹಳ ಅವಶ್ಯಕವಾದ ಎರಡು ವಿಷಯಗಳು. ಇತ್ತೀಚಿನ ಬಜೆಟ್ ನಲ್ಲಿ ನಾವು ನಮ್ಮ ಯುವಜನರಿಗೆ ಕೌಶಲ್ಯ ಕಲಿಸುವುದಕ್ಕೆ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಿದ್ದೇವೆ. ನಮ್ಮ ಹೆಚ್ಚಿನ ಸಂಖ್ಯೆಯ ಯುವಜನರು ಶಿಕ್ಷಣಕ್ಕಾಗಿ ಇಲ್ಲಿಗೆ ಬಂದಿದ್ದಾರೆ. ಭಾರತವನ್ನು ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಯ ಪ್ರಮುಖ ಕೇಂದ್ರವನ್ನಾಗಿ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ.

ಸ್ನೇಹಿತರೇ,

ತಂತ್ರಜ್ಞಾನ, ವೈದ್ಯಕೀಯ ಆರೈಕೆ ಅಥವಾ ಶಿಕ್ಷಣ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಜಗತ್ತಿಗೆ ನುರಿತ ಮಾನವಶಕ್ತಿಯನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಭಾರತ ವಹಿಸಿಕೊಂಡಿದೆ. ಆರೋಗ್ಯ ಕ್ಷೇತ್ರದ ಒಂದು ಉದಾಹರಣೆಯನ್ನು ನಾನು ನಿಮಗೆ ನೀಡುತ್ತೇನೆ. ಕಳೆದ 10 ವರ್ಷಗಳಲ್ಲಿ, ನಾವು ಭಾರತದಲ್ಲಿ 300 ಕ್ಕೂ ಹೆಚ್ಚು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದ್ದೇವೆ. ಕಳೆದ 10 ವರ್ಷಗಳಲ್ಲಿ, ಭಾರತದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆ ದ್ವಿಗುಣಗೊಂಡಿದೆ. 10 ವರ್ಷಗಳಲ್ಲಿ ದ್ವಿಗುಣ! ಈ 10 ವರ್ಷಗಳಲ್ಲಿ, ನಾವು ನಮ್ಮ ವೈದ್ಯಕೀಯ ವ್ಯವಸ್ಥೆಗೆ 75,000 ಹೊಸ ಸೀಟುಗಳನ್ನು ಸೇರಿಸಿದ್ದೇವೆ. ಈಗ, ಮುಂದಿನ ಐದು ವರ್ಷಗಳಲ್ಲಿ ಇನ್ನೂ 75,000 ವೈದ್ಯಕೀಯ ಸೀಟುಗಳನ್ನು ಸೇರಿಸುವ ಗುರಿ ಹೊಂದಿದ್ದೇವೆ. ಇದು ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ಭಾರತದ ಪಾತ್ರವನ್ನು ಬಲಪಡಿಸುತ್ತದೆ. ಮತ್ತು ನಾವು ಜಗತ್ತಿಗೆ ಸಾರಲು ಒಂದೇ ಒಂದು ಸಂದೇಶವನ್ನು ಹೊಂದಿದ್ದೇವೆ – ಮತ್ತು ಶೀಘ್ರದಲ್ಲೇ ನಾವು ಹೇಳುತ್ತೇವೆ "ಭಾರತದಲ್ಲಿ ಗುಣವಾಗುತ್ತದೆ" ಎಂದು. ಅದಕ್ಕಾಗಿ ನಾವು ತಯಾರಿ ನಡೆಸುತ್ತಿದ್ದೇವೆ.

 

ಸ್ನೇಹಿತರೇ,

ನಾವೀನ್ಯತೆ ಮತ್ತು ಯುವಜನತೆ -ಭಾರತ ಮತ್ತು ಪೋಲೆಂಡ್ ಇವೆರಡರ ಅಭಿವೃದ್ಧಿಯ ಹಿಂದಿನ ಶಕ್ತಿಯಾಗಿದ್ದಾರೆ. ಇಂದು, ನಾನು ಬಹಳ ಒಳ್ಳೆಯ ಸುದ್ದಿಯೊಂದಿಗೆ ನಿಮ್ಮ ಬಳಿಗೆ ಬಂದಿದ್ದೇನೆ. ಭಾರತ ಮತ್ತು ಪೋಲೆಂಡ್ ಸಾಮಾಜಿಕ ಭದ್ರತಾ ಒಪ್ಪಂದಕ್ಕೆ ಒಪ್ಪಿಕೊಂಡಿವೆ, ಇದು ನಿಮ್ಮಂತಹ ಸ್ನೇಹಿತರಿಗೆ ಪ್ರಯೋಜನವನ್ನು ನೀಡುತ್ತದೆ.

ಸ್ನೇಹಿತರೇ,

ಭಾರತದ ಜ್ಞಾನ ಜಾಗತಿಕವಾಗಿದೆ, ಭಾರತದ ದೃಷ್ಟಿಕೋನವು/ಚಿಂತನೆಯೂ  ಜಾಗತಿಕ ಆಯಾಮದ್ದಾಗಿದೆ. ಭಾರತದ ಸಂಸ್ಕೃತಿ ಜಾಗತಿಕವಾಗಿದೆ, ಭಾರತದ ಕಾಳಜಿ ಮತ್ತು ಸಹಾನುಭೂತಿ ಜಾಗತಿಕವಾಗಿದೆ. ನಮ್ಮ ಪೂರ್ವಜರು ನಮಗೆ "ವಸುದೈವ ಕುಟುಂಬಕಂ" (ಜಗತ್ತು ಒಂದು ಕುಟುಂಬ) ಎಂಬ ಮಂತ್ರವನ್ನು ನೀಡಿದ್ದಾರೆ. ನಾವು ಯಾವಾಗಲೂ ಇಡೀ ಜಗತ್ತನ್ನು ಒಂದು ಕುಟುಂಬವೆಂದು ಪರಿಗಣಿಸಿದ್ದೇವೆ. ಮತ್ತು ಇದು ಇಂದು ಭಾರತದ ನೀತಿಗಳು ಮತ್ತು ನಿರ್ಧಾರಗಳಲ್ಲಿ ಪ್ರತಿಬಿಂಬಿತವಾಗಿದೆ. ಜಿ-20 ಶೃಂಗಸಭೆಯಲ್ಲಿ ಭಾರತವು ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯಕ್ಕೆ ಕರೆ ನೀಡಿತು. ಈ ಮನೋಭಾವವು 21 ನೇ ಶತಮಾನದ ಜಗತ್ತಿಗೆ ಉತ್ತಮ ಭವಿಷ್ಯವನ್ನು ಖಾತರಿಪಡಿಸುತ್ತದೆ. ಭಾರತವು ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ ಪರಿಕಲ್ಪನೆಯೊಂದಿಗೆ ಜಗತ್ತನ್ನು ಸಂಪರ್ಕಿಸಲು ಬಯಸುತ್ತದೆ. ಭಾರತವು ಒಂದು ಭೂಮಿ, ಒಂದು ಆರೋಗ್ಯವನ್ನು ಆರೋಗ್ಯಕರ ಪ್ರಪಂಚದ ಖಾತರಿಯಾಗಿ ನೋಡುತ್ತದೆ. ಒಂದು ಆರೋಗ್ಯ ಎಂದರೆ ಸಮಗ್ರ ಯೋಗಕ್ಷೇಮದ ವಿಧಾನ, ಇದು ನಮ್ಮ ಪ್ರಾಣಿಗಳು, ಸಸ್ಯಗಳು ಮತ್ತು ಪ್ರತಿಯೊಬ್ಬರ ಆರೋಗ್ಯವನ್ನು ಒಳಗೊಂಡಿರಬೇಕು. ಪ್ರಸ್ತುತ ಜಾಗತಿಕ ಪರಿಸ್ಥಿತಿಯನ್ನು ಗಮನಿಸಿದರೆ, ಒಂದು ಆರೋಗ್ಯ ತತ್ವವು ಇನ್ನಷ್ಟು ನಿರ್ಣಾಯಕವಾಗಿದೆ. ಭಾರತವು ಮಿಷನ್ ಲೈಫ್ - ಲೈಫ್ಸ್ಟೈಲ್ ಫಾರ್ ಎನ್ವಿರಾನ್ಮೆಂಟ್ ಮಾದರಿಯನ್ನು ಜಗತ್ತಿಗೆ ಪ್ರಸ್ತುತಪಡಿಸಿದೆ. ಭಾರತದಲ್ಲಿ ನಡೆಯುತ್ತಿರುವ ಒಂದು ಪ್ರಮುಖ ಅಭಿಯಾನದ ಬಗ್ಗೆ ನೀವು ಕೇಳಿರಬಹುದು. ಅದು - ಏಕ್ ಪೆಡ್ ಮಾ ಕೆ ನಾಮ್ (ತಾಯಿಯ ಹೆಸರಿನಲ್ಲಿ ಗಿಡವನ್ನು ನೆಡುವ ಅಭಿಯಾನ). ಲಕ್ಷಾಂತರ ಭಾರತೀಯರು ತಮ್ಮ ತಾಯಂದಿರ ಹೆಸರಿನಲ್ಲಿ ಗಿಡಗಳನ್ನು ನೆಡುತ್ತಿದ್ದಾರೆ, ಇದು ಭೂಮಾತೆಯನ್ನು ರಕ್ಷಿಸುತ್ತಿದೆ.

ಸ್ನೇಹಿತರೇ,

ಆರ್ಥಿಕತೆ ಮತ್ತು ಪರಿಸರ ವಿಜ್ಞಾನವನ್ನು ಸಮತೋಲನಗೊಳಿಸುವುದು ಇಂದು ಭಾರತಕ್ಕೆ ಆದ್ಯತೆಯಾಗಿದೆ. ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರ ಮತ್ತು ನಿವ್ವಳ ಶೂನ್ಯ ರಾಷ್ಟ್ರ ಎಂಬ ಸಂಕಲ್ಪದೊಂದಿಗೆ ಮುಂದುವರಿಯುತ್ತಿದೆ. ಹಸಿರು ಭವಿಷ್ಯಕ್ಕಾಗಿ ಭಾರತವು 360 ಡಿಗ್ರಿ ವಿಧಾನದಲ್ಲಿ ಕೆಲಸ ಮಾಡುತ್ತಿದೆ. ಹಸಿರು ಚಲನಶೀಲತೆ ಇದಕ್ಕೆ ಪ್ರಮುಖ ಉದಾಹರಣೆಯಾಗಿದೆ. ಪೆಟ್ರೋಲ್ ನಲ್ಲಿ ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಣವನ್ನು ಸಾಧಿಸುವ ನಿಟ್ಟಿನಲ್ಲಿ ನಾವು ಬಹಳ ಹತ್ತಿರದಲ್ಲಿದ್ದೇವೆ. ಭಾರತವು ಎಲೆಕ್ಟ್ರಿಕ್ ಚಲನಶೀಲತೆಯನ್ನು ವೇಗವಾಗಿ ವಿಸ್ತರಿಸುತ್ತಿದೆ. ಇಂದು, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಪ್ರತಿವರ್ಷ ಬಹಳ  ವೇಗವಾಗಿ ಹೆಚ್ಚುತ್ತಿದೆ. ಕಳೆದ ವರ್ಷ, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಶೇಕಡಾ 40 ಕ್ಕಿಂತ ಹೆಚ್ಚಾಗಿದೆ. ಭಾರತವು ಇವಿ ಉತ್ಪಾದನೆ ಮತ್ತು ನಾವೀನ್ಯತೆಯ ಜಾಗತಿಕ ಕೇಂದ್ರವಾಗುವ ದಿನ ದೂರವಿಲ್ಲ. ಮುಂದಿನ ದಿನಗಳಲ್ಲಿ ಭಾರತವು ಹಸಿರು ಹೈಡ್ರೋಜನ್ ನ ಪ್ರಮುಖ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುವುದನ್ನು ನೀವು ನೋಡುತ್ತೀರಿ.

ಸ್ನೇಹಿತರೇ,

ಭಾರತ ಮತ್ತು ಪೋಲೆಂಡ್ ನಡುವಿನ ಸಹಭಾಗಿತ್ವವು ಹೊಸ ತಂತ್ರಜ್ಞಾನ ಮತ್ತು ಶುದ್ಧ ಇಂಧನದಂತಹ ಕ್ಷೇತ್ರಗಳಲ್ಲಿ ನಿರಂತರವಾಗಿ ಬೆಳೆಯುತ್ತಿದೆ ಎಂಬುದಕ್ಕೆ  ನನಗೆ ಸಂತೋಷವಾಗಿದೆ. ಅನೇಕ ಭಾರತೀಯ ಕಂಪನಿಗಳು ಇಲ್ಲಿ ಹೂಡಿಕೆ ಮಾಡಿ ಉದ್ಯೋಗಗಳನ್ನು ಸೃಷ್ಟಿಸಿವೆ. ಅನೇಕ ಪೋಲಿಷ್ ಕಂಪನಿಗಳು ಭಾರತದಲ್ಲಿ ಅವಕಾಶಗಳನ್ನು ಸೃಷ್ಟಿಸಿವೆ. ನಾಳೆ, ನಾನು ಅಧ್ಯಕ್ಷ ಡುಡಾ ಮತ್ತು ಪ್ರಧಾನಿ ಟಸ್ಕ್ ಅವರನ್ನು ಭೇಟಿಯಾಗಲಿದ್ದೇನೆ. ಈ ಸಭೆಗಳು ಭಾರತ ಮತ್ತು ಪೋಲೆಂಡ್ ನಡುವಿನ ಅತ್ಯುತ್ತಮ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತವೆ. ಪ್ರಧಾನಿ ಟಸ್ಕ್ ಅವರು ಭಾರತದ ಉತ್ತಮ ಸ್ನೇಹಿತ. ಅವರು ಯುರೋಪಿಯನ್ ಕೌನ್ಸಿಲಿನ ಅಧ್ಯಕ್ಷರಾಗಿದ್ದಾಗ, ನಾನು ಅವರನ್ನು ಹಲವಾರು ಬಾರಿ ಭೇಟಿಯಾಗಿದ್ದೆ.

ಸ್ನೇಹಿತರೇ,

ಇಂದಿನ ಭಾರತವು ಅಭಿವೃದ್ಧಿ ಹೊಂದಿದ ಭವಿಷ್ಯವನ್ನು ಬರೆಯಲು ಒಂದೇ ಧ್ವನಿ ಮತ್ತು ಒಂದೇ ಭಾವನೆಯೊಂದಿಗೆ ಕೆಲಸ ಮಾಡುತ್ತಿದೆ. ಇಂದು, ಭಾರತವು ಅವಕಾಶಗಳ ಭೂಮಿಯಾಗಿದೆ. ನೀವೂ ಸಹ ಭಾರತದ ಬೆಳವಣಿಗೆಯ ಕಥೆಯೊಂದಿಗೆ ಹೆಚ್ಚು ಹೆಚ್ಚು ಸಂಪರ್ಕ ಹೊಂದಬೇಕು. ಮತ್ತು ನೀವು ಭಾರತದ ಪ್ರವಾಸೋದ್ಯಮದ ಬ್ರಾಂಡ್ ಅಂಬಾಸಿಡರ್ ಗಳಾಗಬೇಕು. ಅದರರ್ಥ ಏನು? ಇದರರ್ಥ ನೀವು ತಾಜ್ ಮಹಲ್ ಮುಂದೆ ಕುಳಿತು ನಿಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಬೇಕು. ಬ್ರಾಂಡ್ ಅಂಬಾಸಿಡರ್ ಆಗಿರುವುದು ಎಂದರೆ ನೀವು ಪ್ರತಿ ವರ್ಷ ಕನಿಷ್ಠ ಐದು ಪೋಲಿಷ್ ಕುಟುಂಬಗಳನ್ನು ಭಾರತಕ್ಕೆ ಭೇಟಿ ನೀಡಲು ಕಳುಹಿಸಬೇಕು. ನೀವು ಇದನ್ನು ಮಾಡುವಿರಾ? ನಾನು ನಿಮಗೆ ಕನಿಷ್ಠ ಇಷ್ಟು ಹೋಮ್ ವರ್ಕ್ (ಮನೆಕೆಲಸವನ್ನು) ನೀಡಬೇಕು, ಸರಿಯೇ? ನಿಮ್ಮ ಪ್ರತಿಯೊಂದು ಪ್ರಯತ್ನವೂ ನಿಮ್ಮ ಭಾರತವನ್ನು 'ವಿಕ್ಷಿತ ಭಾರತ'ವನ್ನಾಗಿ ಮಾಡಲು ಸಹಾಯ ಮಾಡುತ್ತದೆ.

ಸ್ನೇಹಿತರೇ,

ಮತ್ತೊಮ್ಮೆ, ಇಲ್ಲಿಗೆ ಬಂದಿದ್ದಕ್ಕಾಗಿ ಮತ್ತು ಈ ಅದ್ಭುತ ಸ್ವಾಗತಕ್ಕಾಗಿ ನಾನು ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ನನ್ನೊಂದಿಗೆ ಹೇಳಿ:

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ತುಂಬ ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
IIT Delhi tops India in QS Rankings 2027; 52 Indian institutions feature

Media Coverage

IIT Delhi tops India in QS Rankings 2027; 52 Indian institutions feature
NM on the go

Nm on the go

Always be the first to hear from the PM. Get the App Now!
...
Text of Prime Minister addresses the Indian Community in Paris
June 18, 2026

नमस्ते!

बों जू!

ऐसा लग रहा है, आप सब छुट्टी के मूड में हैं।

साथियों,

ये पेरिस शहर, Lights का शहर है, रंगों का शहर है, यहां Art है, Ideas हैं, और innovation की प्रेरणा भी है। इस शहर को भारत के अलग-अलग राज्यों से आए आप सभी लोग और भी खूबसूरत बना देते हैं। नए नए रंगों से भर देते हैं।

कोई तमिल है, कोई पंजाबी है, कोई गुजराती है, तो कोई मराठी है, और कोई बंगाली है। भारत के हर कोने का प्रतिनिधित्व यहां दिखाई देता है।

साथियों,

मैं जब 14 जून को नीस पहुंचा था तो सबसे पहले भारत इनोवेट्स कार्यक्रम में शामिल हुआ था। आज जब मैं फ्रांस से वापसी की तैयारी में हूं तो लग रहा है जैसे भारत कनेक्ट्स कार्यक्रम में आ गया हूं।

फ्रांस में रहने वाले आप लोगों ने 21वीं सदी के भारत-फ्रांस रिश्तों को जिस तरह कनेक्ट किया है, वो हमारी Strategic Partnership की बहुत बड़ी ताकत बन रही है। मैं आप सभी के लिए भारत से 140 करोड़ देशवासियों की शुभकामनाएं लेकर आया हूं। इस आत्मीय स्वागत के लिए, मैं आप सभी का हृदय से आभार व्यक्त करता हूं।

साथियों,

आज मैं ऐसे समय में फ्रांस आया हूं जब कुछ ही दिन पहले हमारी सरकार के 12 वर्ष पूरे हुए हैं। चुने हुए प्रधानमंत्री के रूप निरंतर 12 साल तक देश की सेवा करना मेरे जीवन का बहुत बड़ा सौभाग्य रहा है। यह भारत के लोकतंत्र की शक्ति है जिसने एक चायवाले को यहां तक पहुंचा दिया।

साथियों,

बीते 12 वर्ष, 140 करोड़ भारतीयों के अद्भुत सामर्थ्य के रहे हैं। 12 साल के इस कालखंड में भारत का GDP दोगुना हुआ है। Airports की संख्या दोगुनी हुई है। Universities की संख्या भी दोगुनी हो गई है। Highway Construction की स्पीड तीन गुना बढ़ गई। और Metro Network, चार गुणा बड़ा हो गया है।

मैं आपको कुछ और फैक्ट्स दूंगा, उससे आप अंदाजा लगा पाएंगे कि भारत किस स्पीड और कितने बड़े स्केल पर काम कर रहा है। पिछले 12 वर्षों में भारत का Defence Export 35 गुणा यानि Thirty Five Times बढ़ गया है।

औऱ एक फैक्ट सुनिए भारत में मोबाइल मैन्यूफैक्टरिंग यूनिट्स में, 100 गुणा की बढ़ोतरी हुई है। 100 times. भारत अब दुनिया का दूसरा सबसे बड़ा mobile phone manufacturer है। इसी गति, इसी प्रगति का नतीजा है कि आज भारत दुनिया की Fastest Growing Major Economy है।

साथियों,

आज भारत की कहानी सिर्फ Economic Progress की कहानी नहीं है। सिर्फ यहाँ अटक नहीं जाती है। ये Social Transformation की भी कहानी है।

पिछले 12 साल में देश में 25 करोड़ लोग गरीबी से बाहर निकले हैं। यानि एक ऐसी प्रगति जिसका लाभ समाज के अंतिम व्यक्ति तक पहुंच रहा है। फ्रांस में जितने घर हैं, उससे भी अधिक पक्के घर बीते 12 वर्ष में हमने जरूरतमंदों के लिए बनाए हैं।

अब हर परिवार के पास, गरीब से गरीब क्यों न हो, Bank Account है। Financial Inclusion एक सरकारी कार्यक्रम नहीं, बल्कि सामाजिक परिवर्तन का अभियान बना है।

साथियों,

इन 12 वर्षों की उपलब्धियों में, एक उपलब्धि ऐसी भी है जिसे किसी आंकड़े से, या अंकों से, नहीं मापा जा सकता। वह है 140 करोड़ भारतीयों का आत्मविश्वास।

आज का भारत और आज के भारत का युवा बहुत बड़े सपने देख रहा है। भारत का किसान नई संभावनाओं के साथ आगे बढ़ रहा है। भारत की महिलाएं नए नेतृत्व का परिचय दे रही हैं। इसलिए ये सिर्फ Achievements के 12 साल नहीं हैं, ये भारत की एस्पिरेशन्स को नई बुलंदी देने का कालखंड रहा है।

साथियों,

एक समय था जब दूर-दराज के गांवों तक आधुनिक सुविधाएं पहुंचाना वाकई बहुत मुश्किल भरा था। आज उन्हीं गांवों में बिजली भी है, इंटरनेट भी है, और डिजिटल सेवाओं की पूरी दुनिया भी है। आज एक क्लिक पर, कभी भी, कहीं भी बैंकिंग सेवाएं उपलब्ध हैं।

आज मोबाइल फोन, भारत के नागरिकों को अनेक सुविधाओं से कनेक्ट कर रहा है। हमारे किसान, हमारे मछुआरे, हमारे dairy farmers, हमारी महिलाएं, हमारे स्टूडेंट्स, सभी टेक्नोलॉजी के माध्यम से सशक्त हो रहे हैं, और अपने लिए नए अवसर बना रहे हैं।

साथियों,

आपने 125 करोड़ से अधिक Aadhaar IDs के बारे में सुना है। लेकिन आज भारत सिर्फ पहचान को डिजिटल नहीं बना रहा। आज करीब 90 करोड़ भारतीयों की Unique Digital Health IDs बनाई जा चुकी हैं। जिससे मेडिकल रिकॉर्ड सुरक्षित और accessible बन गए हैं। इससे हेल्थकेयर डिलीवरी और अधिक आसान और efficient हो रही है।

साथियों,

इन उपलब्धियों की सबसे बड़ी विशेषता यह है कि इनमें से अधिकांश चीजें कुछ वर्ष पहले तक कल्पना जैसी लगती थीं। कौन सोच सकता था कि गांव-गांव तक हाई-स्पीड इंटरनेट पहुंचेगा ? कौन सोच सकता था कि दूर-सुदूर के गांवों में भी QR code जीवन का हिस्सा बन जायेगा ? गांव में कोई बहन, ड्रोन से खेती करने में मदद करेगी, ये भी असंभव लगता था।

लेकिन आज यह सब, भारत के करोड़ों लोगों के जीवन का सामान्य हिस्सा बनता जा रहा है। और आपको गर्व होगा साथियों, यही नए भारत की पहचान है।

जो कभी सपना था, वह आज सच्चाई है। जो कभी नामुमकिन लगता था, वो आज मुमकिन हुआ है, औऱ ये करने के पीछे सबसे बड़ी ताकत क्या है? किसकी वजह से ये सब संभव हुआ है? यह मोदी के कारण नहीं, वो ताकत है- भारत का लोकतंत्र, भारत की डेमोक्रेसी। इस डेमोक्रेसी में सबका साथ है, सबका विकास है।

साथियों,

आज से 50 या 100 साल बाद जब भारत के इस कालखंड की समीक्षा होगी, तो ये बात उभरकर सामने आएगी कि इस कालखंड को भारत की Aspirations ने ड्राइव किया। यह भारत के एस्पिरेशन्स का नया युग है।

जहां बिजली पहुंची है, वहां लोग सिर्फ बिजली नहीं चाहते, वे Smart Living चाहते हैं। जहां ट्रेन पहुंची है, वहां लोग High-Speed Connectivity चाहते हैं। जहां हाईवे बने हैं, वहां लोग World-Class Expressways चाहते हैं। जहां इंटरनेट पहुंचा है, वहां लोग AI और Digital Innovation में नेतृत्व चाहते हैं।

यानि आज भारत के लोग अपने जीवन को भी Next Level पर ले जाना चाहते हैं, और भारत को भी Next Level पर ले जाना उनका मकसद है, उनका संकल्प है, उनके सपने है।

और साथियों,

यही Aspirations आज भारत की विकास यात्रा की सबसे बड़ी शक्ति हैं। मैं आपको भारत की Space Journey का उदाहरण दूंगा।

भारत ने चंद्रयान को चंद्रमा के South Pole पर उतारा। दुनिया ने इसे एक बहुत बड़ी उपलब्धि माना। लेकिन भारत इसे अपनी मंजिल मानकर रुका नहीं। आज देश गगनयान की तैयारी कर रहा है। भारत अंतरिक्ष में अपना Space Station बनाने की दिशा में आगे बढ़ रहा है।

हमारे Space Startups Global Space Economy में अपनी जगह बनाने के लिए पुरजोश काम कर रहे हैं, आगे बढ़ रहे हैं।

साथियों,

Green Energy के क्षेत्र में भी भारत की यही एस्पिरेशंस दिखाई देती है। Solar Power में भारत की उपलब्धियों की दुनिया भर में लगातार चर्चा हो रही हैं। लेकिन भारत अगली छलांग की तैयारी कर रहा है।

Green Hydrogen में बड़े निवेश हो रहे हैं। Advanced Nuclear Energy पर तेजी से काम हो रहा है। आपने भारत के Fast Breeder nuclear Reactor से जुड़ी प्रोग्रेस के बारे में भी सुना ज़रूर होगा। ये भारत के न्यूक्लियर एनर्जी लैंडस्केप में क्रांतिकारी परिवर्तन करने का बहुत बड़ा अचीवमेंट हमारे सीसेन्टिस्टों ने किया है।

साथियों,

आज का भारत भविष्य का पूरा Ecosystem बना रहा है। भारत एक साथ हर उस क्षेत्र में निवेश कर रहा है, जो आने वाले दशकों की दिशा तय करेगा।

अभी आपने कुछ दिन पहले ही देखा है नीस में भारत इनोवेट्स का एक आयोजन किया। ये इवेंट भारत के डीप टेक सामर्थ्य को दुनिया तक पहुंचाने का एक और माध्यम था। इसमें भारत के 120 Deep-Tech Startups उपस्थित थे। Bharat Innovates में करीब एक हजार चार सौ B2B Meetings हुईं है। कई Startups के लिए Investment Commitments आगे बढ़ीं, Commercial Orders के लिए रास्ते खुले। French और European Universities तथा Incubators के साथ Engagements बढ़ रही हैं।

Student Exchanges, Joint Research, और Innovation Support के नए रास्ते बने। इसलिए Bharat Innovates सिर्फ एक Summit नहीं रहा। यह Innovation Diplomacy का एक नया मॉडल बना है।

और आज ही पेरिस में VivaTech इवेंट के जरिए, इस यात्रा को हमने और आगे बढ़ाया। नीस में हमने Ideas को Capital से जोड़ा और पेरिस में Indian Innovation को Global Scale से जोड़ा। आज दुनिया देख रही है भारत केवल भविष्य के लिए तैयार नहीं हो रहा है। भारत भविष्य को आकार दे रहा है।

साथियों,

एक समय था, जब देशों के बीच रिश्ते केवल व्यापार से तय होते थे। आज व्यापार के साथ-साथ Trust यानि भरोसा भी उतना ही महत्वपूर्ण हो गया है।

हर देश Reliable Supply Chains चाहता है। हर देश Stable Partnerships चाहता है। हर देश ऐसे साथियों की तलाश में है, जिन पर लंबे समय तक भरोसा किया जा सके। और ऐसे समय में, भारत विश्व में एक Trusted Partner के रूप में उभर रहा है।

एवियां में G7 बैठक के दौरान मैंने trust based partnerships बनाने पर ज़ोर दिया। ग्लोबल साउथ के देशों के साथ equal पार्टनर्स के रूप में आगे बढ़ने का आह्वान किया। भारत का G7 समिट में संदेश था Global Governance तभी प्रभावी होगी जब वह Inclusive होगी। Global Growth तभी Sustainable होगी जब वह शेयर्ड होगी। और Global Technology तभी मानवता के लिए उपयोगी होगी जब वह Trusted होगी।

साथियों,

भारत और दुनिया के बीच व्यापारिक रिश्तों में नई ऊर्जा नज़र आ रही है। फ्रांस के साथ भारत का ट्रेड लगतार बढ़ रहा है। पिछले कुछ वर्षों में भारत ने दुनिया के अनेक देशों के साथ Free Trade Agreements किए हैं। यूरोपियन यूनियन हो, यूनाइटेड किंगडम हो दुनिया के हर देश, हर रीजन के साथ भारत समझौते कर रहा है।

अगले महीने से भारत और UK के बीच ट्रेड एग्रीमेंट भी लागू हो जाएगा। यह एग्रीमेंट भारत के farmers, workers और innovators को अनेक नए अवसर प्रदान करेगा।

साथियों,

आज दुनिया Uncertainty और Disruption के दौर से गुजर रही है। ऐसे समय में भारत और फ्रांस की साझेदारी विश्वास, स्थिरता और सहयोग का एक मजबूत स्तंभ बन रहा है।

इस वर्ष हमने भारत और फ्रांस के संबंधों को Special Global Strategic Partnership का दर्जा दिया था। नीस में मेरे मित्र President Macron और मैंने हमारे संबंधों को force for global good बनाने पर चर्चा की। Defence से लेकर space और नुक्लियर तक AI और क्रिटीकल मिनरल्स से लेकर high speed railway तक, हर क्षेत्र में हम मिलकर आगे बढ़ेंगे।

साथियों,

Solar energy हो, या AI के क्षेत्र में सहयोग हो, भारत और फ्रांस मिलकर ऐसे समाधान विकसित कर रहे हैं जो पूरी मानवता के हित में हैं। पिछले वर्ष पेरिस में और इस वर्ष दिल्ली में हमने AI Summit को Co-chair किया।

अब हम साथ मिलकर अगले वर्ष “तृष्णा” satellite को लॉन्च करने जा रहें हैं। यह “तृष्णा” satellite जो विश्व में फूड और वाटर सिक्युरिटी सुनिश्चित करने में योगदान देगा।

और साथियों,

यह सभी गवर्नमेंट टू गवर्नमेंट पहलो में आप सभी का योगदान बहुत महत्वपूर्ण है। ये आप हैं जो भारत और यूरोप के बीच सबसे मजबूत सेतु हैं। आप दोनों समाजों को समझते हैं। दोनों बाजारों को समझते हैं। आने वाले समय में Talent, Trade, Technology, Tourism और Investment के नए अवसरों को आगे बढ़ाने में आपकी भूमिका लगातार बढ़ने वाली हैं।

साथियों,

भारत और फ्रांस के रिश्तों को साझा इतिहास, साझा मूल्यों और साझा विश्वास ने आगे बढ़ाया है। विश्व युद्धों के दौरान फ्रांस की धरती पर बलिदान देने वाले भारतीय सैनिकों की स्मृतियां आज भी हमें जोड़ती हैं।

मुझे पहले नव शापेल में श्रद्धांजलि देने का अवसर मिला, पिछले वर्ष प्रेसिडेंट मैक्रों के साथ मार्सेय के वॉर मेमोरियल जाने का अवसर भी मिला। ये हमारी साझा विरासत है।

फ्रांस, भारतीयों के योगदान को संजोता भी है और सराहता भी है। भारतीय मूल की नूर इनायत खान हों, जिन्होंने फ्रांस की Resistance के लिए अपना जीवन बलिदान किया, या महाराजा रणजीत सिंह के साथ काम करने वाले जनरल जां फ्रांस्वा अलार हों ये सभी भारत और फ्रांस की साझा विरासत के प्रतीक हैं।

भारत के राज्य पुडुचेरी में भी फ्रेंच विरासत की झलक दिखाई देती है। वहां का Architecture, वहां की कला-संस्कृति और खान-पान सभी में हमारे संबंधों की महेक है।

साथियों,

इस समय फ्रांस समेत पूरी दुनिया में International Yoga Day की तैयारी भी चल रही है। इस अवसर पर मैं, फ्रांस में योग को आगे बढ़ाने वाले श्रीमान महेश घाट्राड्याल जी को भी आदरपूर्वक श्रद्धांजलि देता हूं। मैं पद्म पुरस्कार से सम्मानित, शार्लोत शोपां जी को भी प्रणाम करता हूं। जिन्होंने सौ वर्ष की आयु में भी, योग के माध्यम से फ़्रांस को भारत की विरासत से जोड़ा है। उनका जीवन यह सिद्ध करता है: Yoga does not add years to life, it adds life to years.

साथियों,

मैं फ्रेद नेग्री जी को भी आदरपूर्वक श्रद्धापूर्वक याद करता हूं। भारतीय विरासत को संरक्षित करने में उनका योगदान अतुल्य रहा है।

साथियों,

भारत और फ्रांस को कनेक्ट करने वाली एक और चीज है, और वो है फुटबॉल। इस वक्त यहां फुटबॉल फीवर पूरे जोर पर है। फ्रांस में इसकी दीवानगी, चप्पे-चप्पे पर दिखती है। लेकिन भारत में भी फुटबॉल का क्रेज़ सिर चढ़कर बोलता है।

खासतौर पर फ्रांस की टीम के फैन्स भारत में बहुत अधिक हैं। फ़्रांस ने इस वर्ल्ड कप की शुरुआत एक जोरदार जीत से शुरू की है। मैं फ्रांस की टीम को बहुत-बहुत शुभकामनाएं देता हूं।

साथियों,

जाने से पहले, आप सभी के लिए कुछ और अच्छी खबरें भी लेकर के आया हूँ। वो आपके लिए हैं। पिछले वर्ष, मार्सेय में कॉन्सुलेट खोला गया, इससे काफी अधिक सुविधा मिल रही है। कुछ हफ्ते पहले, Indian Nationals के लिए French Airports पर Visa-free Transit की व्यवस्था शुरू हो गई है।

Students और Professionals की Mobility बढ़ाना हो, या Educational Qualifications की Mutual Recognition की बात हो, या फिर French Universities के भारत में Campus खोलना हो, इन सभी पर हम मिलकर आगे बढ़ रहें हैं।

अब फ्रांस में UPI के उपयोग का दायरा भी और बढ़ने जा रहा है। यानि भारत-फ्रांस कनेक्ट भी Instant और आपसी Payment भी Instant!

साथियों,

इन सभी पहलों से, हम भारत और फ़्रांस को और करीब ला रहें हैं। और मैं फिर कहूंगा इस साझेदारी की नींव, इस रिश्ते की असली ताकत आप सभी हैं। आप सब मेरे देशवासी हैं।

आज जब भारत तेज़ी से विकसित भारत के लक्ष्य की ओर बढ़ रहा है, तो मैं आप सभी से भारत के साथ और गहराई से जुडने का आग्रह करूंगा। इससे भारत की विकास यात्रा को नई शक्ति मिलेगी, और आपको अपनी पुरखों की धरती की सेवा करने का अवसर भी मिलेगा।

इन्हीं शब्दों के साथ आप सभी के प्रेम आपके उत्साह और इस आत्मीय स्वागत के लिए मैं एक बार फिर आप सभी का आभार व्यक्त करता हूं।

भारत माता की जय!

बहुत बहुत धन्यवाद।