ʻರಾಷ್ಟ್ರೀಯ ಬಾಹ್ಯಾಕಾಶ ದಿನʼವು ಭಾರತದ ಯುವಕರಿಗೆ ಉತ್ಸಾಹ ಮತ್ತು ಸ್ಫೂರ್ತಿಯ ಸಂದರ್ಭವಾಗಿದೆ, ಇದು ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ; ಈ ಸಂದರ್ಭದಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲರಿಗೂ - ವಿಜ್ಞಾನಿಗಳು ಮತ್ತು ಯುವ ನಾಗರಿಕರಿಗೆ ನಾನು ಶುಭ ಕೋರುತ್ತೇನೆ: ಪ್ರಧಾನಮಂತ್ರಿ
ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದರ ನಂತರ ಒಂದರಂತೆ ಮೈಲುಗಲ್ಲುಗಳನ್ನು ಸಾಧಿಸುವುದು ಈಗ ಭಾರತ ಮತ್ತು ಅದರ ವಿಜ್ಞಾನಿಗಳ ಸ್ವಾಭಾವಿಕ ಗುಣವಾಗಿದೆ: ಪ್ರಧಾನಮಂತ್ರಿ
ಸೆಮಿ-ಕ್ರಯೋಜೆನಿಕ್ ಎಂಜಿನ್ ಗಳು ಮತ್ತು ಎಲೆಕ್ಟ್ರಿಕ್ ಪ್ರೊಪಲ್ಷನ್ ನಂತಹ ಅದ್ಭುತ ತಂತ್ರಜ್ಞಾನಗಳಲ್ಲಿ ಭಾರತವು ವೇಗವಾಗಿ ಮುಂದುವರಿಯುತ್ತಿದೆ, ಮತ್ತು ಶೀಘ್ರದಲ್ಲೇ, ನಮ್ಮ ವಿಜ್ಞಾನಿಗಳ ಸಮರ್ಪಿತ ಪ್ರಯತ್ನಗಳೊಂದಿಗೆ, ಭಾರತವು ಗಗನಯಾನ ಮಿಷನ್ ಅನ್ನು ಪ್ರಾರಂಭಿಸಲಿದೆ; ಮತ್ತು ಮುಂಬರುವ ವರ್ಷಗಳಲ್ಲಿ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲಿದೆ: ಪ್ರಧಾನಮಂತ್ರಿ
ಬೆಳೆ ವಿಮಾ ಯೋಜನೆಗಳಲ್ಲಿ ಉಪಗ್ರಹ ಆಧಾರಿತ ಮೌಲ್ಯಮಾಪನಗಳಾಗಿರಲಿ, ಮೀನುಗಾರರಿಗೆ ಉಪಗ್ರಹ-ಶಕ್ತ ಮಾಹಿತಿಯಾಗಿರಲಿ ಮತ್ತು ಸುರಕ್ಷತೆ, ವಿಪತ್ತು ನಿರ್ವಹಣಾ ಪ್ರಯತ್ನಗಳು ಅಥವಾ ʻಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ʼನಲ್ಲಿ ಜಿಯೋಸ್ಪೇಷಿಯಲ್ ಡೇಟಾದ ಬಳಕೆಯಾಗಿರಲಿ ಹೀಗೆ ಬಾಹ್ಯಾಕಾಶ ತಂತ್ರ ಎಂಜಿನು ಭಾರತದಲ್ಲಿ ಆಡಳಿತದ ಒಂದು ಭಾಗವಾಗುತ್ತಿದೆ: ಪ್ರಧಾನಮಂತ್ರಿ
ಬಾಹ್ಯಾಕಾಶದಲ್ಲಿ ಭಾರತದ ಪ್ರಗತಿಯು ಈಗ ಸಾಮಾನ್ಯ ನಾಗರಿಕರ ಜೀವನವನ್ನು ಸುಲಭಗೊಳಿಸಲು ನೇರವಾಗಿ ಕೊಡುಗೆ ನೀಡುತ್ತಿದೆ: ಪ್ರಧಾನಮಂತ್ರಿ

ಸಂಪುಟ ಸಹೋದ್ಯೋಗಿಗಳೆ, ಇಸ್ರೋ ಮತ್ತು ಬಾಹ್ಯಾಕಾಶ ಕ್ಷೇತ್ರದ ಎಲ್ಲಾ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳೆ, ಮತ್ತು ನನ್ನ ಪ್ರೀತಿಯ ದೇಶವಾಸಿಗಳೆ!

ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ಈ ವರ್ಷದ ಬಾಹ್ಯಾಕಾಶ ದಿನದ ವಿಷಯ 'ಆರ್ಯಭಟದಿಂದ ಗಗನಯಾನಕ್ಕೆ: ಪ್ರಾಚೀನ ಜ್ಞಾನದಿಂದ ಅನಂತ ಸಾಧ್ಯತೆಗಳಿಗೆ'. ಇದು ಭೂತಕಾಲದ ವಿಶ್ವಾಸ ಮತ್ತು ಭವಿಷ್ಯದ ಸಂಕಲ್ಪವನ್ನು ಸಾಕಾರಗೊಳಿಸುತ್ತದೆ. ಇಂದು ಇಷ್ಟು ಕಡಿಮೆ ಅವಧಿಯಲ್ಲಿ, ರಾಷ್ಟ್ರೀಯ ಬಾಹ್ಯಾಕಾಶ ದಿನವು ನಮ್ಮ ಯುವಕರಿಗೆ ಉತ್ಸಾಹ ಮತ್ತು ಸ್ಫೂರ್ತಿಯ ಸೆಲೆಯಾಗಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಇದು ನಿಜಕ್ಕೂ ರಾಷ್ಟ್ರಕ್ಕೆ ಅಪಾರ ಹೆಮ್ಮೆ ತರುವ ವಿಷಯವಾಗಿದೆ. ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ಬಾಹ್ಯಾಕಾಶ ವಲಯದೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ, ನಮ್ಮ ವಿಜ್ಞಾನಿಗಳಿಗೆ ಮತ್ತು ಎಲ್ಲಾ ಯುವಕರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇತ್ತೀಚೆಗೆ ಭಾರತವು 'ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರದ ಅಂತಾರಾಷ್ಟ್ರೀಯ ಒಲಿಂಪಿಯಾಡ್' ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ, ವಿಶ್ವಾದ್ಯಂತದ 60ಕ್ಕೂ ಹೆಚ್ಚು ದೇಶಗಳಿಂದ ಸುಮಾರು 300 ಯುವ ಪ್ರತಿನಿಧಿಗಳು ಭಾಗವಹಿಸಿದ್ದರು. ನಮ್ಮ ಭಾರತೀಯ ಯುವಕರು ಸಹ ಪದಕಗಳನ್ನು ಗೆದ್ದಿದ್ದಾರೆ. ಈ ಒಲಿಂಪಿಯಾಡ್ ಬಾಹ್ಯಾಕಾಶ ವಲಯದಲ್ಲಿ ಭಾರತದ ಉದಯೋನ್ಮುಖ ನಾಯಕತ್ವದ ಸಂಕೇತವಾಗಿದೆ.

ಸ್ನೇಹಿತರೆ,

ನಮ್ಮ ಯುವಕರಲ್ಲಿ ಬಾಹ್ಯಾಕಾಶದ ಬಗ್ಗೆ ಹೆಚ್ಚಿನ ಆಸಕ್ತಿ ಹುಟ್ಟುಹಾಕಲು, ಇಸ್ರೋ ಇಂಡಿಯನ್ ಸ್ಪೇಸ್ ಹ್ಯಾಕಥಾನ್ ಮತ್ತು ರೊಬೊಟಿಕ್ಸ್ ಚಾಲೆಂಜ್‌ನಂತಹ ಉಪಕ್ರಮಗಳನ್ನು ಪ್ರಾರಂಭಿಸಿದೆ ಎಂಬ ವಿಷಯದಿಂದ ನನಗೆ ಸಂತೋಷವಾಗಿದೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಮತ್ತು ವಿಜೇತರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಸ್ನೇಹಿತರೆ,

ಬಾಹ್ಯಾಕಾಶ ವಲಯದಲ್ಲಿ, ಒಂದರ ನಂತರ ಒಂದರಂತೆ ಮೈಲಿಗಲ್ಲುಗಳನ್ನು ಸಾಧಿಸುವುದು ಈಗ ಭಾರತಕ್ಕೆ ಮತ್ತು ನಮ್ಮ ವಿಜ್ಞಾನಿಗಳಿಗೆ ಎರಡನೆಯ ಸ್ವಭಾವವಾಗಿದೆ. ಕೇವಲ 2 ವರ್ಷಗಳ ಹಿಂದೆ, ಭಾರತವು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಇತಿಹಾಸದಲ್ಲಿ ಮೊದಲ ದೇಶವಾಯಿತು. ಬಾಹ್ಯಾಕಾಶದಲ್ಲಿ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ 4ನೇ ದೇಶವೂ ನಮ್ಮದಾಗಿದೆ. ಕೇವಲ 3 ದಿನಗಳ ಹಿಂದೆ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ, ಅವರು ಪ್ರತಿಯೊಬ್ಬ ಭಾರತೀಯನನ್ನೂ ಹೆಮ್ಮೆಯಿಂದ ತುಂಬಿದರು. ಅವರು ನನಗೆ ಆ ತ್ರಿವರ್ಣ ಧ್ವಜ ತೋರಿಸಿದಾಗ, ಆ ಕ್ಷಣ, ಆ ಅನುಭವ, ಪದಗಳಿಗೆ ಮೀರಿದ್ದು. ಗ್ರೂಪ್ ಕ್ಯಾಪ್ಟನ್ ಶುಭಾಂಶು ಅವರೊಂದಿಗಿನ ನನ್ನ ಸಂಭಾಷಣೆಯಲ್ಲಿ, ನವ ಭಾರತದ ಯುವಕರ ಅಪರಿಮಿತ ಧೈರ್ಯ ಮತ್ತು ಅನಂತ ಕನಸುಗಳನ್ನು ನಾನು ನೋಡಿದೆ. ಈ ಕನಸುಗಳನ್ನು ಮುಂದಕ್ಕೆ ಕೊಂಡೊಯ್ಯಲು, ನಾವು ಭಾರತಕ್ಕಾಗಿ ಗಗನಯಾತ್ರಿಗಳ ಸಮೂಹವನ್ನು ಸಹ ಸಿದ್ಧಪಡಿಸುತ್ತಿದ್ದೇವೆ. ಈ ಬಾಹ್ಯಾಕಾಶ ದಿನದಂದು, ನನ್ನ ಯುವ ಸ್ನೇಹಿತರನ್ನು ಈ ಗಗನಯಾತ್ರಿಗಳ ಸಮೂಹಕ್ಕೆ ಸೇರಲು ಮತ್ತು ಭಾರತದ ಕನಸುಗಳಿಗೆ ರೆಕ್ಕೆಪುಕ್ಕ ನೀಡುವಂತೆಯೂ ನಾನು ಆಹ್ವಾನಿಸುತ್ತೇನೆ.

ಸ್ನೇಹಿತರೆ,

ಇಂದು ಭಾರತವು ಸೆಮಿ-ಕ್ರಯೋಜೆನಿಕ್ ಎಂಜಿನ್ ಮತ್ತು ವಿದ್ಯುತ್ ಪ್ರೊಪಲ್ಷನ್‌ನಂತಹ ಅದ್ಭುತ ತಂತ್ರಜ್ಞಾನಗಳಲ್ಲಿ ವೇಗವಾಗಿ ಮುನ್ನಡೆಯುತ್ತಿದೆ. ಶೀಘ್ರದಲ್ಲೇ, ನಮ್ಮ ಎಲ್ಲಾ ವಿಜ್ಞಾನಿಗಳ ಕಠಿಣ ಪರಿಶ್ರಮದ ಮೂಲಕ, ಭಾರತವು ಗಗನಯಾನವನ್ನು ಪ್ರಾರಂಭಿಸುತ್ತದೆ. ಮುಂಬರುವ ವರ್ಷಗಳಲ್ಲಿ, ಭಾರತವು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಸಹ ನಿರ್ಮಿಸುತ್ತದೆ. ನಾವು ಈಗಾಗಲೇ ಚಂದ್ರ ಮತ್ತು ಮಂಗಳವನ್ನು ತಲುಪಿದ್ದೇವೆ. ಈಗ ನಾವು ಮನುಕುಲದ ಭವಿಷ್ಯಕ್ಕಾಗಿ ಅನೇಕ ಪ್ರಮುಖ ರಹಸ್ಯಗಳನ್ನು ಮರೆಮಾಚಲಾಗಿರುವ ಬಾಹ್ಯಾಕಾಶದ ಆ ಪ್ರದೇಶಗಳನ್ನು ಆಳವಾಗಿ ಅಧ್ಯಯನ ಮಾಡಬೇಕು. ನಕ್ಷತ್ರ ಪುಂಜಗಳ ಆಚೆಗೂ ನಮ್ಮ ದಿಗಂತವಿದೆ!

ಸ್ನೇಹಿತರೆ,

ಬಾಹ್ಯಾಕಾಶದ ಅನಂತ ವಿಸ್ತಾರದ ಯಾವುದೇ ಮೈಲಿಗಲ್ಲು ಎಂದಿಗೂ ಅಂತಿಮ ಗಮ್ಯಸ್ಥಾನವಲ್ಲ ಎಂಬುದನ್ನು ನಮಗೆ ನಿರಂತರವಾಗಿ ನೆನಪಿಸುತ್ತದೆ. ಬಾಹ್ಯಾಕಾಶ ವಲಯದಲ್ಲೂ ಸಹ, ನೀತಿಯ ಮಟ್ಟದಲ್ಲಿ, ಎಂದಿಗೂ ಅಂತಿಮ ನಿಲುಗಡೆ/ಅಂತ್ಯ ಬಿಂದು ಇರಬಾರದು ಎಂದು ನಾನು ನಂಬುತ್ತೇನೆ. ಅದಕ್ಕಾಗಿಯೇ ನಾನು ಕೆಂಪು ಕೋಟೆಯಿಂದ ನಮ್ಮ ಮಾರ್ಗ 'ಸುಧಾರಣೆ, ಸಾಧನೆ ಮತ್ತು ಪರಿವರ್ತನೆ' ಎಂದು ಹೇಳಿದ್ದೆ. ಕಳೆದ 11 ವರ್ಷಗಳಲ್ಲಿ, ಭಾರತವು ಬಾಹ್ಯಾಕಾಶ ವಲಯದಲ್ಲಿ ಒಂದರ ನಂತರ ಒಂದರಂತೆ ಪ್ರಮುಖ ಸುಧಾರಣೆಗಳನ್ನು ಜಾರಿಗೆ ತಂದಿದೆ. ನಮ್ಮ ದೇಶದಲ್ಲಿ ಬಾಹ್ಯಾಕಾಶದಂತಹ ಭವಿಷ್ಯದ ಕ್ಷೇತ್ರಗಳು ಲೆಕ್ಕವಿಲ್ಲದಷ್ಟು ನಿರ್ಬಂಧಗಳೊಂದಿಗೆ ಸಂಕೋಲೆಯಲ್ಲಿದ್ದ ಸಮಯವಿತ್ತು. ನಾವು ಆ ಅಡೆತಡೆಗಳನ್ನು ಮುರಿದಿದ್ದೇವೆ. ನಾವು ಖಾಸಗಿ ವಲಯವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದೇವೆ. ಇಂದು, 350ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ನಾವೀನ್ಯತೆ ಮತ್ತು ವೇಗವರ್ಧನೆಯ ಎಂಜಿನ್‌ಗಳಾಗಿ ಹೊರಹೊಮ್ಮಿವೆ. ಈ ಘಟನೆಯಲ್ಲಿ ಅವರ ಬಲವಾದ ಉಪಸ್ಥಿತಿಯನ್ನು ಸಹ ಕಾಣಬಹುದು. ಶೀಘ್ರದಲ್ಲೇ, ನಮ್ಮ ಖಾಸಗಿ ವಲಯವು ನಿರ್ಮಿಸಿದ ಮೊದಲ ಪಿಎಸ್‌ಎಲ್‌ವಿ ರಾಕೆಟ್ ಉಡಾವಣೆ ಮಾಡಲಾಗುವುದು. ಭಾರತದ ಮೊದಲ ಖಾಸಗಿ ಸಂವಹನ ಉಪಗ್ರಹವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ, ಭೂ ವೀಕ್ಷಣಾ ಉಪಗ್ರಹ ನಕ್ಷತ್ರಪುಂಜವನ್ನು ಉಡಾವಣೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಭಾರತದ ಯುವಕರಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಎಷ್ಟು ವಿಫುಲ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂಬುದನ್ನು ನೀವೇ ಊಹಿಸಬಹುದು.

ಸ್ನೇಹಿತರೆ,

ಆಗಸ್ಟ್ 15ರಂದು ಕೆಂಪುಕೋಟೆ ಮೇಲಿಂದ ಭಾರತ ಸ್ವಾವಲಂಬಿಯಾಗಲು ಅಗತ್ಯವಾದ ಅನೇಕ ಕ್ಷೇತ್ರಗಳ ಬಗ್ಗೆ ನಾನು ಮಾತನಾಡಿದೆ. ಪ್ರತಿಯೊಂದು ವಲಯವೂ ತನ್ನದೇ ಆದ ಗುರಿಗಳನ್ನು ಹೊಂದಿಸಿಕೊಳ್ಳುವಂತೆ ನಾನು ಕೇಳಿದೆ. ಇಂದು ಬಾಹ್ಯಾಕಾಶ ದಿನದಂದು, ನಮ್ಮ ಬಾಹ್ಯಾಕಾಶ ಸ್ಟಾರ್ಟಪ್‌ಗಳಿಗೆ ನಾನು ಹೇಳಲು ಬಯಸುತ್ತೇನೆ: ಮುಂದಿನ 5 ವರ್ಷಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ 5 ಯುನಿಕಾರ್ನ್‌ಗಳನ್ನು ರಚಿಸುವ ಗುರಿಯನ್ನು ನಾವು ಹೊಂದಬಹುದೇ? ಪ್ರಸ್ತುತ, ನಾವು ಭಾರತೀಯ ಮಣ್ಣಿನಿಂದ ವಾರ್ಷಿಕವಾಗಿ ಸುಮಾರು 5-6 ಪ್ರಮುಖ ಉಡಾವಣೆಗಳನ್ನು ವೀಕ್ಷಿಸುತ್ತಿದ್ದೇವೆ. ಮುಂದಿನ 5 ವರ್ಷಗಳಲ್ಲಿ ನಾವು ಪ್ರತಿ ವರ್ಷ 50 ರಾಕೆಟ್‌ಗಳನ್ನು ಉಡಾಯಿಸುವ ಹಂತವನ್ನು ತಲುಪಲು ಖಾಸಗಿ ವಲಯವು ಮುನ್ನಡೆಸಬೇಕೆಂದು ನಾನು ಬಯಸುತ್ತೇನೆ. ಪ್ರತಿ ವಾಕ್ಕೆ ಒಂದು! ಇದಕ್ಕಾಗಿ, ರಾಷ್ಟ್ರಕ್ಕೆ ಅಗತ್ಯವಿರುವ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ತರುವ ಉದ್ದೇಶ ಮತ್ತು ಇಚ್ಛಾಶಕ್ತಿ ಎರಡನ್ನೂ ಸರ್ಕಾರ ಹೊಂದಿದೆ. ಸರ್ಕಾರವು ಪ್ರತಿ ಹಂತದಲ್ಲೂ ನಿಮ್ಮೊಂದಿಗೆ ನಿಲ್ಲುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ.

ಸ್ನೇಹಿತರೆ,

ಭಾರತವು ಬಾಹ್ಯಾಕಾಶ ತಂತ್ರಜ್ಞಾನವನ್ನು ವೈಜ್ಞಾನಿಕ ಪರಿಶೋಧನೆಯ ಮಾಧ್ಯಮವಾಗಿ ಮಾತ್ರವಲ್ಲದೆ, ಜೀವನ ಸುಲಭತೆಯ ಸಾಧನವಾಗಿಯೂ ಪರಿಗಣಿಸುತ್ತದೆ. ಇಂದು, ಬಾಹ್ಯಾಕಾಶ ತಂತ್ರಜ್ಞಾನವು ಭಾರತದಲ್ಲಿ ಆಡಳಿತದ ಅವಿಭಾಜ್ಯ ಅಂಗವಾಗುತ್ತಿದೆ. ಫಸಲ್ ಬಿಮಾ ಯೋಜನೆಯಲ್ಲಿ ಉಪಗ್ರಹ ಆಧಾರಿತ ಮೌಲ್ಯಮಾಪನವಾಗಲಿ, ಮೀನುಗಾರರಿಗೆ ಉಪಗ್ರಹಗಳ ಮೂಲಕ ಒದಗಿಸಲಾದ ಮಾಹಿತಿ ಮತ್ತು ಸುರಕ್ಷತೆಯಾಗಲಿ, ವಿಪತ್ತು ನಿರ್ವಹಣೆಯಾಗಲಿ ಅಥವಾ ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ನಲ್ಲಿ ಜಿಯೋಸ್ಪೇಷಿಯಲ್ ಡೇಟಾದ ಬಳಕೆಯಾಗಲಿ, ಬಾಹ್ಯಾಕಾಶದಲ್ಲಿ ಭಾರತದ ಪ್ರಗತಿಯು ಸಾಮಾನ್ಯ ನಾಗರಿಕರ ಜೀವನವನ್ನು ಸುಲಭಗೊಳಿಸುತ್ತಿದೆ. ಈ ದಿಕ್ಕಿನಲ್ಲಿ, ನಿನ್ನೆ ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಬಳಕೆಯನ್ನು ಹೆಚ್ಚಿಸಲು 'ರಾಷ್ಟ್ರೀಯ ಸಭೆ 2.0' ಆಯೋಜಿಸಲಾಗಿದೆ. ಭವಿಷ್ಯದಲ್ಲಿಯೂ ಇಂತಹ ಪ್ರಯತ್ನಗಳು ಮುಂದುವರಿಯಬೇಕೆಂದು ನಾನು ಬಯಸುತ್ತೇನೆ. ನಮ್ಮ ನಾಗರಿಕರ ಸೇವೆಗಾಗಿ ಹೊಸ ಪರಿಹಾರಗಳು ಮತ್ತು ನಾವೀನ್ಯತೆಗಳನ್ನು ರೂಪಿಸಲು ನಾನು ನಮ್ಮ ಬಾಹ್ಯಾಕಾಶ ನವೋದ್ಯಮಗಳನ್ನು ಒತ್ತಾಯಿಸುತ್ತೇನೆ. ಮುಂಬರುವ ದಿನಗಳಲ್ಲಿ, ಭಾರತದ ಬಾಹ್ಯಾಕಾಶ ಪ್ರಯಾಣವು ಹೊಸ ಎತ್ತರವನ್ನು ಮುಟ್ಟುತ್ತದೆ ಎಂದು ನನಗೆ ವಿಶ್ವಾಸವಿದೆ. ಈ ವಿಶ್ವಾಸದೊಂದಿಗೆ, ರಾಷ್ಟ್ರೀಯ ಬಾಹ್ಯಾಕಾಶ ದಿನದಂದು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.

ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
MSMEs’ contribution to GDP rises, exports triple, and NPA levels drop

Media Coverage

MSMEs’ contribution to GDP rises, exports triple, and NPA levels drop
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the importance of grasping the essence of knowledge
January 20, 2026

The Prime Minister, Shri Narendra Modi today shared a profound Sanskrit Subhashitam that underscores the timeless wisdom of focusing on the essence amid vast knowledge and limited time.

The sanskrit verse-
अनन्तशास्त्रं बहुलाश्च विद्याः अल्पश्च कालो बहुविघ्नता च।
यत्सारभूतं तदुपासनीयं हंसो यथा क्षीरमिवाम्बुमध्यात्॥

conveys that while there are innumerable scriptures and diverse branches of knowledge for attaining wisdom, human life is constrained by limited time and numerous obstacles. Therefore, one should emulate the swan, which is believed to separate milk from water, by discerning and grasping only the essence- the ultimate truth.

Shri Modi posted on X;

“अनन्तशास्त्रं बहुलाश्च विद्याः अल्पश्च कालो बहुविघ्नता च।

यत्सारभूतं तदुपासनीयं हंसो यथा क्षीरमिवाम्बुमध्यात्॥”