ಶೇರ್
 
Comments
ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕೆಲಸಗಾರರಿಗೆ ಲಸಿಕೆ; ರಾಜ್ಯ ಸರ್ಕಾರಗಳು ಯಾವುದೇ ವೆಚ್ಚವನ್ನು ಭರಿಸಬೇಕಾಗಿಲ್ಲ
ಲಸಿಕಾ ಅಭಿಯಾನಕ್ಕೆ ನೆರವಾಗಲು ಮತ್ತು ಡಿಜಿಟಲ್ ಲಸಿಕಾ ಪ್ರಮಾಣಪತ್ರಗಳನ್ನು ನೀಡಲು ಕೋ-ವಿನ್ ಡಿಜಿಟಲ್ ಪ್ಲಾಟ್‌ಫಾರ್ಮ್
ಭಾರತ ಮುಂದಿನ ಕೆಲವು ತಿಂಗಳಲ್ಲಿ 30 ಕೋಟಿ ಜನರಿಗೆ ಲಸಿಕೆಯ ಗುರಿ
ಹಕ್ಕಿ ಜ್ವರವನ್ನು ನಿಭಾಯಿಸಲು ಯೋಜನೆ ರೂಪಿಸಲಾಗಿದೆ; ನಿರಂತರ ಜಾಗರೂಕತೆ ಪ್ರಮುಖ: ಪ್ರಧಾನಮಂತ್ರಿ

ನಾವು ಈಗಷ್ಟೇ ಭಾರತದಲ್ಲಿಯೇ ತಯಾರಿಸಲಾದ(ಮೇಡ್ ಇನ್ ಇಂಡಿಯಾ) ಕೊರೊನಾ ಲಸಿಕೆ ಮತ್ತು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನದ ಬಗ್ಗೆ ಚರ್ಚೆ ನಡೆಸಿದ್ದೇವೆ. ಹಲವು ಸಂಗತಿಗಳನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಗಿದೆ. ನಮ್ಮ ರಾಜ್ಯಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳೊಂದಿಗೆ ವಿಸ್ತೃತ ಚರ್ಚೆ ನಡೆಸಲಾಗಿದೆ ಮತ್ತು ಕೆಲವು ರಾಜ್ಯಗಳಿಂದ ಅತ್ತುತ್ತಮ ಸಲಹೆಗಳು ಕೇಳಿ ಬಂದಿವೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಈ ಸಂವಹನ ಮತ್ತು ಸಮನ್ವಯತೆ ಕೊರೊನಾ ವಿರುದ್ಧದ ಸಮರದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ. ಒಂದು ರೀತಿಯಲ್ಲಿ ಈ ಸಮರದಲ್ಲಿ ಒಕ್ಕೂಟ ವ್ಯವಸ್ಥೆಯ ಉತ್ತಮ ಉದಾಹರಣೆಯನ್ನು ಸಾದರಪಡಿಸಿದಂತಾಗಿದೆ.

ಮಿತ್ರರೇ,

ಇಂದು ನಮ್ಮ ದೇಶದ ಮೊದಲ ಪ್ರಧಾನಮಂತ್ರಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ವಾರ್ಷಿಕ ಪುಣ್ಯ ತಿಥಿ. ನಾನು ಅವರಿಗೆ ಗೌರವ ನಮನ ಸಲ್ಲಿಸಲು ಬಯಸುತ್ತೇನೆ. 1965ರಲ್ಲಿ ಶಾಸ್ತ್ರೀಜಿ ಅವರು ಆಡಳಿತಾಧಿಕಾರಿಗಳ ಸಮ್ಮೇಳನದಲ್ಲಿ ಅತ್ಯಂತ ಪ್ರಮುಖ ಸಂಗತಿಯನ್ನು ಪ್ರಸ್ತಾಪಿಸಿದ್ದರು. ನಾನು ಇಂದು ಆ ವಿಷಯವನ್ನು ಉಲ್ಲೇಖಿಸಲು ಬಯಸುತ್ತೇನೆ. ಅವರು “ನಾನು ನೋಡಿದಂತೆ ಆಡಳಿತದ ಮೂಲ ಕಲ್ಪನೆ ಎಂದರೆ, ಅದು ಸಮಾಜವನ್ನು ಒಗ್ಗೂಡಿಸುವಂತಿರಬೇಕು ಮತ್ತು ಆ ಮೂಲಕ ಅಭಿವೃದ್ಧಿ ಸಾಧಿಸಬೇಕು ಮತ್ತು ಕೆಲವು ಗುರಿಗಳನ್ನು ಮುಟ್ಟುವತ್ತ ಸಾಗಬೇಕು. ಸರ್ಕಾರದ ಕೆಲಸ ಎಂದರೆ ಈ ವಿಕಾಸಕ್ಕೆ ಅಥವಾ ಬೆಳವಣಿಗೆ ಪ್ರಕ್ರಿಯೆ ಪೂರಕ ನೆರವು ನೀಡುವುದು’’ ಎಂದು ಹೇಳಿದ್ದರು. ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ನಾವೆಲ್ಲಾ ಒಟ್ಟಾಗಿ ಕಾರ್ಯನಿರ್ವಹಿಸಿದೆವು ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರು ಕಲಿಸಿದ ಪಾಠಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿದೆವು ಎಂಬ ತೃಪ್ತಿ ನನಗಿದೆ. ಆ ಸಮಯದಲ್ಲಿ ಸೂಕ್ಷ್ಮತೆಗಳೊಂದಿಗೆ ತ್ವರಿತ ನಿರ್ಧಾರಗಳನ್ನು ಕೈಗೊಳ್ಳಲಾಯಿತು, ಅಗತ್ಯ ಸಂಪನ್ಮೂಲಗಳನ್ನು ಕ್ರೂಢೀಕರಿಸಲಾಯಿತು ಮತ್ತು ನಾವು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮುಂದುವರಿಸಿದೆವು, ಅದರ ಪರಿಣಾಮ, ಜಗತ್ತಿನ ಇತರೆ ರಾಷ್ಟ್ರಗಳಂತೆ ಭಾರತದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲಿಲ್ಲ. ಕಳೆದ 7-8 ತಿಂಗಳ ಹಿಂದೆ ದೇಶವಾಸಿಗಳಲ್ಲಿದ್ದ ಆತಂಕ ಮತ್ತು ಜನರು ಭಯದಿಂದ ಹೊರಬಂದಿದ್ದಾರೆ. ಇದೀಗ ಪರಿಸ್ಥಿತಿ ಸುಧಾರಿಸಿದೆ, ಅದರೂ ನಾವು ನಿರ್ಲಕ್ಷ್ಯ ಮಾಡಬಾರದು. ದೇಶವಾಸಿಗಳಲ್ಲಿ ವಿಶ್ವಾಸ ವೃದ್ಧಿಯಾಗುತ್ತಿರುವುದನ್ನು ಆರ್ಥಿಕ ಚಟುವಟಿಕೆಗಳಿಗೆ ಸಿಗುತ್ತಿರುವ ಪ್ರೋತ್ಸಾಹಗಳಿಂದ ಸಾಕಾರಾತ್ಮಕವಾಗಿ ಎಂಬುದನ್ನು ಕಾಣಬಹುದು, ನಿಮ್ಮ ರಾಜ್ಯಗಳಲ್ಲಿನ ಆಡಳಿತಶಾಹಿ ಹಗಲಿರುಳು ಶ್ರಮಿಸುತ್ತಿರುವುದಾಗಿ ನಾನು ಅವರ ಕಾರ್ಯವನ್ನು ಪ್ರಸಂಶಿಸುತ್ತೇನೆ,

ಮಿತ್ರರೇ,

ದೇಶ ಇದೀಗ ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಘಟ್ಟವನ್ನು ಪ್ರವೇಶಿಸುತ್ತಿದೆ. ಇದು ಲಸಿಕೀಕರಣದ ಘಟ್ಟ. ಈಗಾಗಲೇ ತಿಳಿಸಿದಂತೆ ಇದೇ ಜನವರಿ 16ರಿಂದ ವಿಶ್ವದ ಬೃಹತ್ ಲಸಿಕಾ ಅಭಿಯಾನವನ್ನು ನಾವು ಕೈಗೊಳ್ಳುತ್ತಿದ್ದೇವೆ. ಎರಡು ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದ್ದು, ಆ ಎರಡೂ ಲಸಿಕೆಗಳು ಭಾರತದಲ್ಲಿಯೇ ತಯಾರಿಸಲ್ಪಟ್ಟಿವೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಅಷ್ಟೇ, ನಾಲ್ಕು ಲಸಿಕೆಗಳ ಅಭಿವೃದ್ಧಿ ಅತ್ತ್ಯುತ್ತಮ ರೀತಿಯಲ್ಲಿ ಸಾಗಿವೆ. ಮೊದಲ ಸುತ್ತಿಲ ಲಸಿಕಾ ಅಭಿಯಾನ ಶೇ.60 ರಿಂದ 70 ರಷ್ಟು ಕಾರ್ಯ ಪೂರ್ಣಗೊಂಡ ಬಳಿಕ ನಾವು ಮತ್ತೊಮ್ಮೆ ಚರ್ಚೆ ನಡೆಸೋಣ ಎಂದು ನಾನು ಹೇಳಬಯಸುತ್ತೇನೆ. ಆನಂತರ ಹೆಚ್ಚು ಲಸಿಕೆಗಳು ಲಭ್ಯವಾಗಲಿವೆ ಮತ್ತು ನಾವು ಭವಿಷ್ಯದ ಯೋಜನೆಗಳನ್ನು ಸಿದ್ಧಪಡಿಸಲು ಉತ್ತಮ ಸ್ಥಿತಿಯಲ್ಲಿರುತ್ತೇವೆ. ಆದ್ದರಿಂದ ಆ ವೇಳೆಗೆ ಇನ್ನೂ ಹೆಚ್ಚಿನ ಲಸಿಕೆಗಳು ಲಭ್ಯವಾಗಲಿರುವ ಸಾಧ್ಯತೆ ಹಿನ್ನೆಲೆಯಲ್ಲಿ 2ನೇ ಹಂತದಲಲ್ಇ 50 ವರ್ಷ ಮೇಲ್ಪಟ್ಟವಿಗೆ ಲಸಿಕೆ ನೀಡುವ ಬಗ್ಗೆ ನಾವು ಪರಿಶೀಲನೆ ನಡೆಸಬಹುದು.

ಮಿತ್ರರೇ,

ದೇಶವಾಸಿಗಳಿಗೆ ಪರಿಣಾಮಕಾರಿ ಲಸಿಕೆಯನ್ನು ನೀಡಲು ನಮ್ಮ ತಜ್ಞರು ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದಾರೆ. ಮತ್ತು ಇದೀಗ ನಮಗೆ ವೈಜ್ಞಾನಿಕ ಸಮುದಾಯ ವಿವರವಾಗಿ ತಿಳಿಸಿಕೊಟ್ಟಿದೆ. ಮತ್ತು ನಿಮಗೆ ಗೊತ್ತಿದೆ, ನಾನು ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಏನು ಮಾತನಾಡಿದೆ ಎಂಬುದು, ನಾನು ಸದಾ ಯಾವುದೇ ನಿರ್ಧಾರ ಕೈಗೊಂಡರೂ ಸಹ ಅದು ವೈಜ್ಞಾನಿಕ ಸಮುದಾಯದ ಸಲಹೆಯನ್ನು ಆಧರಿಸಿರುತ್ತದೆ. ನಾವು ವೈಜ್ಞಾನಿಕ ಸಮುದಾಯದ ಮಾತನ್ನು ಅಂತಿಮ ಎಂದು ಪರಿಗಣಿಸುತ್ತೇವೆ ಮತ್ತು ಅದನ್ನೇ ಯಥಾವತ್ತಾಗಿ ಪಾಲಿಸುತ್ತೇವೆ. “ನೋಡಿ, ವಿಶ್ವದಲ್ಲಿ ಲಸಿಕೆ ಬಿಡುಗಡೆ ಮಾಡಲಾಗಿದೆ, ಆದರೆ ಭಾರತದ ಏನು ಮಾಡುತ್ತಿದೆ, ಭಾರತ ನಿದ್ರಿಸುತ್ತಿದೆ ಮತ್ತು ಸೋಂಕಿತರ ಸಂಖ್ಯೆ ಹಲವು ಲಕ್ಷಗಳನ್ನು ದಾಟಿದೆ ’’ಎಂದು ಹಲವು ಜನರು ಹೇಳುತ್ತಾರೆ, ಅದು ಕೂಗಾಟವಷ್ಟೇ, ಆದರೆ ನಮ್ಮ ನಿಲುವು ಏನೆಂದರೆ, ವೈಜ್ಞಾನಿಕ ಸಮುದಾಯದ ಸಲಹೆಗಳನ್ನು ಕಟ್ಟುನಿಟ್ಟಾಗಿ ಸೂಕ್ತ ರೀತಿಯಲ್ಲಿ ಪಾಲಿಸುವುದು ಮತ್ತು ಅತ್ಯಂತ ಜವಾಬ್ದಾರಿಯುತವಾಗಿ ಯಾವ ರೀತಿಯಲ್ಲಿ ನಾವು ಮುನ್ನಡೆಯುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದು. ನಾನು ಇಲ್ಲಿ ಮತ್ತೊಮ್ಮೆ ಪುನರುಚ್ಚರಿಸಲು ಬಯಸುವ ಪ್ರಮುಖ ಸಂಗತಿ ಎಂದರೆ, ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ಎರಡೂ ಲಸಿಕೆ ಅತಿ ಕಡಿಮೆ ದರದವು. ಕೊರೊನಾ ಲಸಿಕೆಗೆ ನಾವು ಸಂಪೂರ್ಣವಾಗಿ ವಿದೇಶಿ ಲಸಿಕೆಗಳನ್ನು ಅಲಂಬಿಸಿದ್ದರೆ ಭಾರತ ಖಂಡಿತಾ ತೀರಾ ಕಷ್ಟವನ್ನು ಎದುರಿಸಬೇಕಾಗಿತ್ತು.

ಭಾರತದ ಸ್ಥಿತಿಗತಿ ಮತ್ತು ಸಂದರ್ಭಗಳಿಗೆ ತಕ್ಕಂತೆ ಈ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ಲಸಕೀಕರಣದ ಅನುಭವವಿದೆ ಮತ್ತು ದೂರದ ಗುಡ್ಡಗಾಡು ಪ್ರದೇಶಗಳವರೆಗೆ ಅದನ್ನು ತಲುಪಿಸುವ ವ್ಯವಸ್ಥೆ ಇದೆ, ಇದು ಕೊರೊನಾ ಲಸಿಕೆ ಕಾರ್ಯಕ್ರಮಕ್ಕೆ ಅತ್ಯಂತ ಉಪಯುಕ್ತವಾಗಿದೆ.

ಮಿತ್ರರೇ,

ಲಸಿಕೆ ಅಭಿಯಾನ ಆರಂಭದಲ್ಲಿ ಯಾರಿಗೆಲ್ಲಾ ಆದ್ಯತೆ ನೀಡಬೇಕು ಎಂಬ ಬಗ್ಗೆ ರಾಜ್ಯಗಳೊಡನೆ ಸಮಾಲೋಚನೆ ನಡೆಸಿದ ನಂತರ ನಿರ್ಧರಿಸಲಾಗಿದೆ. ನಮ್ಮ ಪ್ರಯತ್ನವೆಂದರೆ, ದೇಶವಾಸಿಗಳ ಆರೋಗ್ಯ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿದ್ದಾರೋ ಅಂತಹವರಿಗೆ ಮೊದಲು ಕೊರೊನಾ ಲಸಿಕೆ ನೀಡಬೇಕೆಂಬುದು, ಮೊದಲ ಸುತ್ತಿನಲ್ಲಿ ನಮ್ಮ ಸರ್ಕಾರಿ ಅಥವಾ ಖಾಸಗಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗುವುದು. ಇದೇ ವೇಳೆ, ಮೊದಲ ಹಂತದಲ್ಲಿ ನಿರ್ಬಂಧಿತ ವಲಯ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳು, ಮತ್ತು ಮುಂಚೂಣಿ ಕೆಲಸಗಾರರಾದ ಮಿಲಿಟರಿ ಪಡೆ, ಪೊಲೀಸ್ ಮತ್ತು ಕೇಂದ್ರೀಯ ಪಡೆಗಳು, ಹೋಂ ಗಾರ್ಡ್ ಗಳು, ವಿಪತ್ತು ನಿರ್ವಹಣಾ ಸ್ವಯಂ ಸೇವಕರು, ಕಂದಾಯ ಸಿಬ್ಬಂದಿ ಎಲ್ಲ ನಾಗರಿಕ ರಕ್ಷಣಾ ಸಿಬ್ಬಂದಿ ಲಸಿಕೆ ನೀಡಲಾಗುವುದು. ದೇಶದ ನಾನಾ ರಾಜ್ಯಗಳ ಎಲ್ಲ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರ ಸಂಖ್ಯೆ ಸುಮಾರು 3 ಕೋಟಿ. ಮೊದಲ ಹಂತದಲ್ಲಿ ಈ ಮೂರು ಕೋಟಿ ಜನರಿಗೆ ಲಸಿಕೆ ಹಾಕಲು ತಗುಲುವ ವೆಚ್ಚವನ್ನು ಭಾರತ ಸರ್ಕಾರವೇ ಭರಿಸಲು ನಿರ್ಧರಿಸಿದೆ, ರಾಜ್ಯಗಳು ಹಣ ಪಾವತಿಸಬೇಕಿಲ್ಲ.

ಮಿತ್ರರೇ,

ಎರಡನೇ ಹಂತದ ಲಸಿಕೆ ಅಭಿಯಾನದಲ್ಲಿ, ಒಂದು ರೀತಿಯಲ್ಲಿ ಅದು ಮೂರನೇ ಹಂತ, ಆದರೆ ನಾವು ಮೂರು ಕೋಟಿ ಜನರನ್ನು ಒಂದು ಎಂದು ಪರಿಗಣಿಸಿದರೆ ಆಗ ಎರಡನೇ ಹಂತವಾಗುತ್ತದೆ. 50 ವರ್ಷ ಮೇಲ್ಪಟ್ಟ ಎಲ್ಲರೂ ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರು ಅಥವಾ ಸೋಂಕಿನ ಹೆಚ್ಚಿನ ಅಪಾಯವಿರುವವರಿಗೆ ಲಸಿಕೆ ನೀಡಲಾಗುವುದು. ನಿಮಗೆಲ್ಲಾ ತಿಳಿದಿದೆ, ಕಳೆದ ಕೆಲವು ವಾರಗಳಿಂದೀಚೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿರಂತರ ಸಭೆಗಳನ್ನು ನಡೆಸಿ, ಲಸಿಕೆ ಅಭಿಯಾನಕ್ಕೆ ಅಗತ್ಯ ಮೂಲಸೌಕರ್ಯ, ಸಾಗಾಣೆ ಮತ್ತು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ದೇಶದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಡ್ರೈ ರನ್ ಗಳನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಇಂತಹ ದೊಡ್ಡ ದೇಶದಲ್ಲಿ ಎಲ್ಲ ಜಿಲ್ಲೆಗಳಲ್ಲೂ ಡ್ರೈ ರನ್ ನಡೆಸುವ ಮೂಲಕ ನಾವು ಸಾಮರ್ಥ್ಯವನ್ನು ಪ್ರದರ್ಶಿಸಿದ್ದೇವೆ. ಇದೀಗ ನಮ್ಮ ಹಳೆಯ ಅನುಭವಗಳಿಂದ ಕೋವಿಡ್ ಮಾರ್ಗಸೂಚಿಗಳು ಮತ್ತು ಹೊಸ ಸಿದ್ಧತೆಗಳನ್ನು ಸಂಯೋಜಿಸಬೇಕಿದೆ. ಭಾರತದಲ್ಲಿ ಈಗಾಗಲೇ ಹಲವು ಸಾರ್ವತ್ರಿಕ ಲಸಿಕೆ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿವೆ. ಸಿಡಬು ಮತ್ತು ದಡಾರದಂತಹ ಕಾಯಿಲೆಗಳ ವಿರುದ್ಧ ನಾವು ಸಮಗ್ರ ಅಭಿಯಾನಗಳನ್ನು ನಡೆಸಿದ್ದೇವೆ. ಅಲ್ಲದೆ ನಾವು ದೇಶದ ಪ್ರತಿಯೊಂದು ಮೂಲೆ ಮೂಲೆಯಲ್ಲೂ ಮತದಾನಕ್ಕೆ ಸೌಕರ್ಯಗಳನ್ನು ಒದಗಿಸಿ ವಿಶ್ವದ ಅತಿ ದೊಡ್ಡ ಚುನಾವಣಾ ಪ್ರಕ್ರಿಯೆನ್ನು ನಡೆಸಿದ ಅತ್ಯುತ್ತಮ ಅನುಭವವನ್ನು ಹೊಂದಿದ್ದೇವೆ. ಈ ವಿಚಾರದಲ್ಲೂ ಸಹ ನಾವು ಬೂತ್ ಮಟ್ಟದ ಕಾರ್ಯತಂತ್ರವನ್ನು ನಾವು ಅನುಸರಿಸಬೇಕಿದೆ.

ಮಿತ್ರರೇ,

ಈ ಲಸಿಕಾ ಅಭಿಯಾನದಲ್ಲಿ ಅತ್ಯಂತ ಪ್ರಮುಖ ಸಂಗತಿ ಎಂದರೆ ಯಾರಿಗೆ ಲಸಿಕೆ ನೀಡಬೇಕು ಎಂದು ಗುರ್ತಿಸುವುದು ಮತ್ತು ಆನಂತರ ಮೇಲ್ವಿಚಾರಣೆ ನಡೆಸುವುದು. ಇದಕ್ಕಾಗಿ ಆಧುನಿಕ ತಂತ್ರಜ್ಞಾನದೊಂದಿಗೆ ಕೋ-ವಿನ್ ವೇದಿಕೆಯನ್ನು ಸೃಷ್ಟಿಸಲಾಗಿದೆ. ಆಧಾರ್ ಸಹಾಯದಿಂದ, ಫಲಾನುಭವಿಗಳನ್ನು ಗುರುತಿಸಲಾಗುವುದು ಮತ್ತು ಅವರಿಗೆ ಸಕಾಲದಲ್ಲಿ ಎರಡನೇ ಡೋಸ್ ಲಸಿಕೆ ಲಭ್ಯವಾಗುವುದನ್ನು ಖಾತ್ರಿಪಡಿಸಲಾಗುವುದು. ಸಕಾಲದಲ್ಲಿ ಲಸಿಕೀಕರಣದ ದತ್ತಾಂಶವನ್ನು ಕೋ-ವಿನ್ ನಲ್ಲಿ ಅಪ್ ಲೋಡ್ ಮಾಡಬೇಕು ಎಂದು ನಾನು ನಿಮ್ಮಲ್ಲಿ ವಿಶೇಷ ಮನವಿ ಮಾಡುತ್ತೇನೆ. ಒಂದು ಸಣ್ಣ ನಿರ್ಲಕ್ಷ್ಯ ಕೂಡ ನಮ್ಮ ಯೋಜನೆಯನ್ನು ಹಳಿತಪ್ಪಿಸಿಬಿಡಬಹುದು. ಮೊದಲ ಬಾರಿಗೆ ಲಸಿಕೆ ಪಡೆದ ನಂತರ ಕೋ-ವಿನ್ ಡಿಜಿಟಲ್ ಲಸಿಕೆ ಪ್ರಮಾಣಪತ್ರವನ್ನು ಸಿದ್ಧಪಡಿಸಲಿದೆ. ಲಸಿಕೆ ಹಾಕಿದ ತಕ್ಷಣ ಫಲಾನುಭವಿಗೆ ಲಸಿಕೆ ಪ್ರಮಾಣಪತ್ರವನ್ನು ನೀಡುವುದು ಅತ್ಯಗತ್ಯ, ಆ ಪ್ರಮಾಣಪತ್ರಕ್ಕಾಗಿ ಅವರು ಮತ್ತೆ ಬರುವ ಅಗತ್ಯವಿರಬಾರದು. ಈ ಪ್ರಮಾಣಪತ್ರ ಯಾರಿಗೆ ಲಸಿಕೆ ಹಾಕಲಾಗಿದೆ ಮತ್ತು ಎಂದು ಹಾಕಲಾಗಿದೆ ಮತ್ತು ಯಾವಾಗ ಎರಡನೇ ಡೋಸ್ ನೀಡಲಾಗುವುದು ಎಂಬೆಲ್ಲಾ ವಿವರಗಳನ್ನು ಒಳಗೊಂಡಿರಲಿದೆ. ಎರಡನೇ ಡೋಸ್ ನಂತರ ಅಂತಿಮ ಪ್ರಮಾಣಪತ್ರವನ್ನು ನೀಡಲಾಗುವುದು.

ಮಿತ್ರರೇ,

ಜಗತ್ತಿನ ಹಲವು ರಾಷ್ಟ್ರಗಳು ಭಾರತ ಹೇಗೆ ಈ ಲಸಿಕೆ ಅಭಿಯಾನವನ್ನು ನಡೆಸಲಿದೆ ಎಂದು ಕುತೂಹಲದಿಂದ ನೋಡುತ್ತಿವೆ ಮತ್ತು ಆದ್ದರಿಂದ ನಮ್ಮ ಮೇಲೆ ಅತಿದೊಡ್ಡ ಜವಾಬ್ದಾರಿ ಇದೆ. ನಾವು ಮತ್ತೊಂದು ಪ್ರಮುಖ ಸಂಗತಿಯನ್ನು ಗಮನಲ್ಲಿರಿಸಿಕೊಳ್ಳಲೇಬೇಕಾಗಿದೆ. ಜಗತ್ತಿನ 50 ರಾಷ್ಟ್ರಗಳಲ್ಲಿ ಲಸಿಕೆ ಕಾರ್ಯಕ್ರಮಗಳ ಕಳೆದ 3-4 ವಾರಗಳಿಂದ ನಡೆಯುತ್ತಿದೆ. ಒಂದು ತಿಂಗಳಿನಲ್ಲಿ ಸುಮಾರು 25 ಮಿಲಿಯನ್ ಜನರಿಗೆ ಲಸಿಕೆಯನ್ನು ಹಾಕಲಾಗಿದೆ. ಅವರು ಅವರದ್ದೇ ಆದ ಸಿದ್ಧತೆಗಳನ್ನು ಮಾಡಿಕೊಂಡಿದ್ದರು, ಅವರಿಗೆ ಅವರದ್ದೇ ಆದ ಅನುಭವಗಳಿವೆ ಮತ್ತು ಅವರಿಗೆ ಅವರದ್ದೇ ಆದ ಸಾಮರ್ಥ್ಯಗಳಿವೆ ಮತ್ತು ಅವರದ್ದೇ ಆದ ರೀತಿಯಲ್ಲಿ ಅವರು ಮಾಡುತ್ತಿದ್ದಾರೆ. ಆದರೆ ಇದೀಗ ಭಾರತದಲ್ಲಿ, ನಾವು ಮುಂದಿನ ಕೆಲವೇ ತಿಂಗಳಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡುವ ಗುರಿಯನ್ನು ಸಾಧಿಸಬೇಕಿದೆ, ಈ ಸವಾಲನ್ನು ನಿರೀಕ್ಷಿಸಿ ಕಳೆದ ಕೆಲವು ತಿಂಗಳಲ್ಲಿ ಭಾರತ ವ್ಯಾಪಕ ಸಿದ್ಧತೆಗಳನ್ನು ನಡೆಸಿದೆ. ಕೊರೊನಾ ಲಸಿಕೆಯಿಂದ ಯಾರಾದರೂ ಅಸ್ವಸ್ಥರಾದರೆ ಮತ್ತು ಸುಸ್ತಾದರೆ ಅದಕ್ಕಾಗಿ ವಿಶೇಷ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ನಾವು ನಮ್ಮದೇ ಆದ ಕಾರ್ಯತಂತ್ರವನ್ನು ಈಗಾಗಲೇ ಹೊಂದಿದ್ದೇವೆ. ಕೊರೊನಾ ಲಸಿಕೆಗಾಗಿ ಅದನ್ನು ಮತ್ತಷ್ಟು ಬಲವರ್ಧನೆಗೊಳಿಸಲಾಗಿದೆ.

ಮಿತ್ರರೇ,

ಈ ಲಸಿಕೆ ಮತ್ತು ಲಸಿಕೀಕರಣದ ನಡುವೆ, ನಾವು ಕೋವಿಡ್ ಸಂಬಂಧಿ ಶಿಷ್ಟಾಚಾರಗಳನ್ನು ನೆನಪಿಟ್ಟುಕೊಳ್ಳಬೇಕು ಮತ್ತು ಅವುಗಳನ್ನು ಇಡೀ ಪ್ರಕ್ರಿಯೆ ಪೂರ್ಣಗೊಳಿಸುವವರೆಗೆ ಪಾಲಿಸಬೇಕಿದೆ. ಒಂದು ಸಣ್ಣ ಅಲಕ್ಷ್ಯವೂ ಹಾನಿ ಮಾಡಬಹುದು. ಅಷ್ಟೇ ಅಲ್ಲ, ಯಾರಿಗೆ ಲಸಿಕೆ ಹಾಕಲಾಗುತ್ತದೆಯೋ ಅವರೂ ಸಹ ಅಗತ್ಯ ಮುಂಜಾಗ್ರತೆಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು ಮತ್ತು ಇಂಜಕ್ಷನ್ ತೆಗೆದುಕೊಳ್ಳದಂತೆ ನೋಡಿಕೊಳ್ಳಬೇಕು. ನಾವು ಗಂಭೀರವಾಗಿ ಕಾರ್ಯನಿರ್ವಹಿಸಬೇಕಾದ ಮತ್ತೊಂದು ಅಂಶವಿದೆ, ಅದೆಂದರೆ ಆದರೆ ಆಯಿತು, ಹೋದರೆ ಹೋಯಿತು ಎಂದುಕೊಳ್ಳುವಂತಿಲ್ಲ. ವಿಶ್ವದಲ್ಲಿನ ಹಾಗೂ ದೇಶದಲ್ಲಿನ ಹಲವು ಸ್ವಹಿತಾಸಕ್ತಿಯ ಜನರು ನಮ್ಮ ಅಭಿಯಾನಕ್ಕೆ ಅಡ್ಡಿಯುಂಟು ಮಾಡಬಹುದು. ಕೆಲವು ಕಾರ್ಪೋರೇಟ್ ಸ್ಪರ್ಧಿಗಳಿರಬಹುದು ಮತ್ತು ಕೆಲವರು ದೇಶದ ಹೆಮ್ಮೆಯನ್ನು ಬಳಸಿಕೊಂಡು ತಮ್ಮ ಸ್ವಂತ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಬಹುದು. ಯಾವ ಸಂಗತಿ ಬೇಕಾದರೂ ನಡೆಯಬಹುದು. ಆಂತಹ ಯಾವುದೇ ಪ್ರಯತ್ನಗಳು ಫಲಿಸದಂತೆ ನಾವು ದೇಶದ ಪ್ರತಿಯೊಬ್ಬ ಪ್ರಜೆಗೂ ನಿಖರ ಮಾಹತಿಯನ್ನು ಒದಗಿಸಬೇಕು. ಈ ಕಾರ್ಯಕ್ಕಾಗಿ ನಾವು ಎನ್ ವೈಕೆ, ಎನ್ ಎಸ್ ಎಸ್, ಸ್ವಯ ಸಹಾಯ ಗುಂಪುಗಳು, ವೃತ್ತಿಪರ ಸಂಸ್ಥೆಗಳು, ರೋಟರಿ, ಲಯನ್ಸ್ ಕ್ಲಬ್ ಗಳು ಮತ್ತು ರೆಡ್ ಕ್ರಾಸ್ ನಂತರ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳನ್ನು ಬಳಸಿಕೊಳ್ಳಬೇಕು. ಜೊತೆಗೆ ನಾವು ನಮ್ಮ ದೈನಂದಿನ ಆರೋಗ್ಯ ಸೇವೆಗಳು ಮತ್ತು ಲಸಿಕೆ ಕಾರ್ಯಕ್ರಮಗಳು ಸುಗಮವಾಗಿ ಎಂದಿನಂತೆ ಸಾಗುವುದನ್ನು ನೋಡಿಕೊಳ್ಳಬೇಕು ಎಂಬ ಅಂಶವನ್ನು ಗಮನದಲ್ಲಿರಿಸಿಕೊಳ್ಳಬೇಕು. ನಾವು ಕೊರೊನಾ ಲಸಿಕೆಯನ್ನು ಜನವರಿ 16ರಿಂದ ಆರಂಭಿಸುತ್ತಿದ್ದೇವೆ, ಆದರೆ ನಿರಂತರ ಲಸಿಕೆ ದಿನ ಅದರ ಮರುದಿನ, ಅಂದರೆ ಜನವರಿ 17ರಂದು ಇದ್ದರೆ ಅದು ಕೂಡ ಅಷ್ಟೇ ಸುಗಮ ರೀತಿಯಲ್ಲಿ ಸಾಗಬೇಕು.

ಕೊನೆಯದಾಗಿ, ನಾನು ಇತರೆ ಗಂಭೀರ ವಿಚಾರಗಳ ಬಗ್ಗೆಯೂ ಮಾತನಾಡಬೇಕಿದೆ. ಹಕ್ಕಿ ಜ್ವರ ದೇಶದ 9 ರಾಜ್ಯಗಳಲ್ಲಿ ದೃಢಪಟ್ಟಿದೆ. ಆ ರಾಜ್ಯಗಳೆಂದರೆ ಕೇರಳ, ರಾಜಸ್ಥಾನ, ಹಿಮಾಚಲಪ್ರದೇಶ, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರ. ಹಕ್ಕಿ ಜ್ವರ ನಿರ್ವಹಣೆಗೆ ಪಶು ಸಂಗೋಪನಾ ಸಚಿವಾಲಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ ಮತ್ತು ಅದಕ್ಕೂ ಕೂಡ ಹೆಚ್ಚಿನ ಗಮನಹರಿಸಬೇಕಾಗಿದೆ. ಜಿಲ್ಲಾಧಿಕಾರಿಗಳು ಇದರಲ್ಲಿ ಅತಿದೊಡ ಪಾತ್ರವಹಿಸಬೇಕಿದೆ. ಹಕ್ಕಿ ಜ್ವರ ಕಾಣಿಸಿಕೊಂಡಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ ನಾನು ಮನವಿ ಮಾಡುವುದೆಂದರೆ, ಮುಖ್ಯ ಕಾರ್ಯದರ್ಶಿಗಳ ಮೂಲಕ ಎಲ್ಲ ಜಿಲ್ಲಾ ದಂಡಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು.ಯಾವ ರಾಜ್ಯದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿಲ್ಲವೋ ಅಂತಹ ರಾಜ್ಯಗಳ ಸರ್ಕಾರಗಳು ಸಂಪೂರ್ಣ ನಿಗಾದಲ್ಲಿರಬೇಕು. ಎಲ್ಲ ರಾಜ್ಯಗಳು ಮತ್ತು ಸ್ಥಳೀಯ ಆಡಳಿತಗಳು ಜಲಮೂಲಗಳ ಸುತ್ತಮುತ್ತ, ಹಕ್ಕಿ ಮಾರುಕಟ್ಟೆಗಳು, ಮೃಗಾಲಯಗಳು, ಪೌಲ್ಟ್ರಿ ಫಾರ್ಮ್ ಮತ್ತಿತರ ಕಡೆ ನಿಗಾ ಇಡಬೇಕು ಮತ್ತು ಕಾಯಿಲೆ ಬಿದ್ದಿರುವ ಹಕ್ಕಿಗಳಿಗೆ ಆದ್ಯತೆ ಮೇರೆಗೆ ಚಿಕಿತ್ಸೆ ನೀಡಬೇಕು. ಹಕ್ಕಿ ಜ್ವರ ಪ್ರಯೋಗಾಲಯಗಳು ತಮಗೆ ಕಳುಹಿಸಿದ ಮಾದರಿಗಳನ್ನು ಸಕಾಲದಲ್ಲಿ ಪರೀಕ್ಷಿಸಿದರೆ, ಸ್ಥಳೀಯ ಆಡಳಿತ ಕ್ಷಿಪ್ರವಾಗಿ ಕಾರ್ಯೋನ್ಮುಖವಾಗಲು ಸಾಧ್ಯ. ಹಕ್ಕಿ ಜ್ವರ ತ್ವರಿತವಾಗಿ ಹರಡುವುದನ್ನು ನಿಯಂತ್ರಿಸಲು ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಮತ್ತು ಪಶು ಸಂಗೋಪನಾ ಇಲಾಖೆ ನಡುವೆ ಹೆಚ್ಚಿನ ಸಮನ್ವಯತೆ ಅಗತ್ಯವಿದೆ. ಹಕ್ಕಿ ಜ್ವರ ಕುರಿತಾದ ವದಂತಿಗಳು ಹರಡದಂತೆ ನಾವು ನೋಡಿಕೊಳ್ಳಬೇಕಿದೆ. ನಮ್ಮೆಲ್ಲರ ಸಂಘಟಿತ ಪ್ರಯತ್ನಗಳು ದೇಶವನ್ನು ಪ್ರತಿಯೊಂದು ಸವಾಲುಗಳಿಂದಲೂ ಹೊರತರುತ್ತದೆ ಎಂಬ ವಿಶ್ವಾಸ ನನಗಿದೆ.

ನಾನು ಮತ್ತೊಮ್ಮೆ ನಿಮಗೆಲ್ಲರಿಗೂ ಅಭಾರಿಯಾಗಿದ್ದೇನೆ ಎಂದು ಹೇಳಲು ಬಯಸುತ್ತೇನೆ ಮತ್ತು ಶೇ.60ರಷ್ಟು ಕಾರ್ಯ ಪೂರ್ಣಗೊಂಡ ನಂತರ ನಾವು ಮತ್ತೆ ಭೇಟಿ ಮಾಡಿ ಪರಿಶೀಲನೆ ನಡೆಸೋಣ. ಆಗ ಹೊಸ ಲಸಿಕೆಗಳನ್ನು ಹಾಕುವ ಈ ಕಾರ್ಯತಂತ್ರ ಹೇಗೆ ಫಲಿಸಿತು ಎಂಬ ಬಗ್ಗೆ ವಿವರವಾಗಿ ಚರ್ಚೆ ನಡೆಸೋಣ.

ನಿಮೆಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು..!

ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
PM Modi responds to passenger from Bihar boarding flight for first time with his father from Darbhanga airport

Media Coverage

PM Modi responds to passenger from Bihar boarding flight for first time with his father from Darbhanga airport
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಜುಲೈ 2021
July 24, 2021
ಶೇರ್
 
Comments

PM Modi addressed the nation on Ashadha Purnima-Dhamma Chakra Day

Nation’s progress is steadfast under the leadership of Modi Govt.