Releases a commemorative postage stamp celebrating 100 years of Hindustan Times
The power that has shaped India's destiny, shown direction to India, is the wisdom and capability of the common man of India: PM Modi
Progress of the people,Progress by the people,Progress for the people is our Mantra for New and Developed India:PM Modi
Today, India is filled with unprecedented aspirations and we have made these aspirations a cornerstone of our policies:PM Modi
Our government has provided citizens with a unique combination, of Employment through Investment, Dignity through Development:PM Modi
The approach of our government is Spend Big For The People,Save Big For The People:PM Modi
This century will be India's century:PM Modi

ನಿಮ್ಮೆಲ್ಲರಿಗೂ ನಮಸ್ಕಾರ!

100 ವರ್ಷಗಳ ಹಿಂದೆ, ಹಿಂದೂಸ್ತಾನ್ ಟೈಮ್ಸ್ ಅನ್ನು ಪೂಜ್ಯ ಬಾಪು ಉದ್ಘಾಟಿಸಿದರು ... ಅವರು ಗುಜರಾತಿ ಭಾಷಣಕಾರರಾಗಿದ್ದರು, ಮತ್ತು ನೀವು 100 ವರ್ಷಗಳ ನಂತರ ಇನ್ನೊಬ್ಬ ಗುಜರಾತಿಯನ್ನು ಆಹ್ವಾನಿಸಿದ್ದೀರಿ. ನಾನು, ಹಿಂದೂಸ್ತಾನ್ ಟೈಮ್ಸ್ ಮತ್ತು ಕಳೆದ 100 ವರ್ಷಗಳಲ್ಲಿ ಈ ಐತಿಹಾಸಿಕ ಪ್ರಯಾಣದೊಂದಿಗೆ ಸಂಬಂಧ ಹೊಂದಿರುವವರು, ಅದನ್ನು ಪೋಷಿಸಲು ಕೊಡುಗೆ ನೀಡಿದವರು, ಹೋರಾಡಿದ ಮತ್ತು ಸವಾಲುಗಳನ್ನು ಎದುರಿಸಿದ ಆದರೆ ದೃಢವಾಗಿ ನಿಂತ ಎಲ್ಲರನ್ನೂ ಅಭಿನಂದಿಸುತ್ತೇನೆ. ಅವರೆಲ್ಲರೂ ಇಂದು ಅಭಿನಂದನೆಗೆ ಅರ್ಹರು ಮತ್ತು ಗೌರವಕ್ಕೆ ಅರ್ಹರು. 100 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸುವುದು ನಿಜಕ್ಕೂ ಮಹತ್ವದ್ದಾಗಿದೆ. ನೀವೆಲ್ಲರೂ ಈ ಮನ್ನಣೆಗೆ ಅರ್ಹರು, ಮತ್ತು ಭವಿಷ್ಯಕ್ಕಾಗಿ ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ. ನಾನು ಇಲ್ಲಿಗೆ ಬಂದಾಗ, ನಾನು ಕುಟುಂಬದ ಸದಸ್ಯರನ್ನು ಭೇಟಿಯಾದೆ ಮತ್ತು ಹಿಂದೂಸ್ತಾನ್ ಟೈಮ್ಸ್ ನ 100 ವರ್ಷಗಳ ಪ್ರಯಾಣವನ್ನು ಪ್ರದರ್ಶಿಸುವ ಗಮನಾರ್ಹ ಪ್ರದರ್ಶನವನ್ನು ವೀಕ್ಷಿಸುವ ಅವಕಾಶ ಸಿಕ್ಕಿತು. ನಿಮಗೆ ಸಮಯವಿದ್ದರೆ ಹೊರಡುವ ಮೊದಲು ಅಲ್ಲಿಗೆ ಭೇಟಿ ನೀಡಿ ಸ್ವಲ್ಪ ಸಮಯ ಕಳೆಯಲು ನಾನು ನಿಮ್ಮೆಲ್ಲರನ್ನೂ ಪ್ರೋತ್ಸಾಹಿಸುತ್ತೇನೆ. ಇದು ಕೇವಲ ಪ್ರದರ್ಶನವಲ್ಲ, ಆದರೆ ಒಂದು ಅನುಭವ. 100 ವರ್ಷಗಳ ಇತಿಹಾಸ ನನ್ನ ಕಣ್ಣ ಮುಂದೆ ಹಾದುಹೋದಂತೆ ಭಾಸವಾಯಿತು. ದೇಶ ಸ್ವಾತಂತ್ರ್ಯ ಪಡೆದ ದಿನದಿಂದ ಮತ್ತು ಸಂವಿಧಾನವನ್ನು ಜಾರಿಗೆ ತಂದ ದಿನದಿಂದ ನಾನು ಪತ್ರಿಕೆಗಳನ್ನು ನೋಡಿದೆ. ಮಾರ್ಟಿನ್ ಲೂಥರ್ ಕಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಡಾ.ಎಂ.ಎಸ್.ಸ್ವಾಮಿನಾಥನ್ ಅವರಂತಹ ಪ್ರಸಿದ್ಧ ಮತ್ತು ಪ್ರಖ್ಯಾತ ವ್ಯಕ್ತಿಗಳು ಹಿಂದೂಸ್ತಾನ್ ಟೈಮ್ಸ್ ಗೆ  ಬರೆಯುತ್ತಿದ್ದರು. ಅವರ ಬರಹಗಳು ಪತ್ರಿಕೆಯನ್ನು ಅಪಾರವಾಗಿ ಶ್ರೀಮಂತಗೊಳಿಸಿದವು. ನಿಜವಾಗಿಯೂ, ನಾವು ಬಹಳ ದೂರ ಸಾಗಿದ್ದೇವೆ. ಸ್ವಾತಂತ್ರ್ಯಕ್ಕಾಗಿ ಹೋರಾಡುವುದರಿಂದ ಹಿಡಿದು ಸ್ವಾತಂತ್ರ್ಯದ ನಂತರ ಮಿತಿಯಿಲ್ಲದ ಭರವಸೆಯ ಅಲೆಗಳ ಮೇಲೆ ಸವಾರಿ ಮಾಡುವವರೆಗೆ, ಈ ಪ್ರಯಾಣವು ಅಸಾಧಾರಣ ಮತ್ತು ನಂಬಲಾಗದಂತಹದ್ದಾಗಿದೆ. ನಿಮ್ಮ ಪತ್ರಿಕೆಯಲ್ಲಿ, 1947 ರ ಅಕ್ಟೋಬರ್ ನಲ್ಲಿ ಕಾಶ್ಮೀರದ ಸೇರ್ಪಡೆಯ ನಂತರ ಇದ್ದ ಉತ್ಸಾಹವನ್ನು ನಾನು ಗ್ರಹಿಸಿದೆ, ಅದನ್ನು ಪ್ರತಿಯೊಬ್ಬ ನಾಗರಿಕರೂ ಅನುಭವಿಸಿದ್ದಾರೆ. ಆ ಕ್ಷಣದಲ್ಲಿ, ನಿರ್ಧಾರ ತೆಗೆದುಕೊಳ್ಳದಿರುವಿಕೆಯು ಕಾಶ್ಮೀರವನ್ನು ಏಳು ದಶಕಗಳ ಕಾಲ ಹಿಂಸಾಚಾರದಲ್ಲಿ ಮುಳುಗಿಸಿತು ಎಂಬುದನ್ನು ನಾನು ಅರಿತುಕೊಂಡೆ. ಇಂದು, ನಿಮ್ಮ ಪತ್ರಿಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲೆಯ ಮತದಾನದ ಸುದ್ದಿಗಳನ್ನು ವರದಿ ಮಾಡುತ್ತದೆ, ಇದು ಹಿಂದಿನದಕ್ಕೆ ತೀವ್ರವಾಗಿ ವ್ಯತಿರಿಕ್ತವಾಗಿದೆ. ಮತ್ತೊಂದು ಪತ್ರಿಕೆಯ ಪುಟವು ಗಮನ ಸೆಳೆಯುತ್ತದೆ ಮತ್ತು ಓದುಗರನ್ನು ಆಕರ್ಷಿಸುತ್ತದೆ. ಒಂದು ವಿಭಾಗವು ಅಸ್ಸಾಂ ಪ್ರಕ್ಷುಬ್ಧ ಪ್ರದೇಶವೆಂದು ಘೋಷಿಸಲಾಗಿದೆ ಎಂದು ವರದಿ ಮಾಡಿದರೆ, ಇನ್ನೊಂದು ವಿಭಾಗವು ಅಟಲ್ ಜಿ ಬಿಜೆಪಿಗೆ ಅಡಿಪಾಯ ಹಾಕಿದ ಬಗ್ಗೆ ಮಾತನಾಡಿತು. ಇಂದು ಅಸ್ಸಾಂನಲ್ಲಿ ಶಾಶ್ವತ ಶಾಂತಿಯನ್ನು ತರುವಲ್ಲಿ ಬಿಜೆಪಿ ಪ್ರಮುಖ ಪಾತ್ರ ವಹಿಸುತ್ತಿರುವುದು ಆಹ್ಲಾದಕರ ಕಾಕತಾಳೀಯವಾದ ಸಂಗತಿಯಾಗಿದೆ.

ನಿನ್ನೆಯಷ್ಟೇ, ನಾನು ಬೋಡೋ ಪ್ರದೇಶದ ಜನರೊಂದಿಗೆ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ, ಮತ್ತು ದಿಲ್ಲಿಯ ಮಾಧ್ಯಮಗಳು ಈ ಮಹತ್ವದ ಕಾರ್ಯಕ್ರಮವನ್ನು ತಪ್ಪಿಸಿಕೊಂಡಿರುವುದು ನನಗೆ ಆಶ್ಚರ್ಯವನ್ನುಂಟು ಮಾಡಿದೆ. ಐದು ದಶಕಗಳ ನಂತರ, ಯುವ ಬೋಡೋ ಜನರು ಈಗ ಹಿಂಸಾಚಾರ, ಬಾಂಬ್ ಗಳು ಮತ್ತು ಬಂದೂಕುಗಳನ್ನು ಬಿಟ್ಟು ದಿಲ್ಲಿಯಲ್ಲಿ ಸಾಂಸ್ಕೃತಿಕ ಉತ್ಸವವನ್ನು ಆಚರಿಸುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ. ಇದು ಒಂದು ಪ್ರಮುಖ ಐತಿಹಾಸಿಕ ಘಟನೆಯಾಗಿದೆ. ನಾನು ನಿನ್ನೆ ಅಲ್ಲಿದ್ದೆ, ಮತ್ತು ನಾನು ಅದನ್ನು ಆಳವಾಗಿ ಅನುಭವಿಸಿದೆ. ಬೋಡೋ ಶಾಂತಿ ಒಪ್ಪಂದವು ಈ ಜನರ ಜೀವನವನ್ನು ಪರಿವರ್ತಿಸಿದೆ. ಪ್ರದರ್ಶನದ ಸಮಯದಲ್ಲಿ, ನಾನು 26/11 ಮುಂಬೈ ದಾಳಿಯ ವರದಿಗಳನ್ನು ಸಹ ನೋಡಿದೆ. ನೆರೆಯ ರಾಷ್ಟ್ರದ ಭಯೋತ್ಪಾದಕ ಕೃತ್ಯಗಳಿಂದಾಗಿ ನಮ್ಮ ಜನರು ತಮ್ಮ ಸ್ವಂತ ಮನೆಗಳು ಮತ್ತು ನಗರಗಳಲ್ಲಿಯೂ ಅಸುರಕ್ಷಿತ ಎಂದು ಭಾವಿಸಿದ ಸಮಯ ಅದು. ಆದರೆ ಈಗ, ಪರಿಸ್ಥಿತಿ ಬದಲಾಗಿದೆ, ಮತ್ತು ಆ ದೇಶದ ಭಯೋತ್ಪಾದಕರು ಅವರ ಮನೆಯಲ್ಲಿ ಕೂಡಾ ಸುರಕ್ಷಿತವಾಗಿಲ್ಲ.

ಸ್ನೇಹಿತರೇ,

ಹಿಂದೂಸ್ತಾನ್ ಟೈಮ್ಸ್ ತನ್ನ 100 ವರ್ಷಗಳ ಪ್ರಯಾಣದಲ್ಲಿ 25 ವರ್ಷಗಳ ವಸಾಹತುಶಾಹಿ ಆಳ್ವಿಕೆ ಮತ್ತು 75 ವರ್ಷಗಳ ಸ್ವಾತಂತ್ರ್ಯಕ್ಕೆ ಸಾಕ್ಷಿಯಾಗಿದೆ. ಸಾಮಾನ್ಯ ಭಾರತೀಯನ ಬುದ್ಧಿವಂತಿಕೆ ಮತ್ತು ಸಾಮರ್ಥ್ಯ ಈ 100 ವರ್ಷಗಳಲ್ಲಿ ಭಾರತದ ಹಣೆಬರಹವನ್ನು ರೂಪಿಸಿದ ಮತ್ತು ನಿರ್ದೇಶನವನ್ನು ನೀಡಿದ ಶಕ್ತಿ. ಹಲವಾರು ತಜ್ಞರು ಸಾಮಾನ್ಯವಾಗಿ ಸಾಮಾನ್ಯ ಭಾರತೀಯನ ಶಕ್ತಿಯನ್ನು ಕೀಳಂದಾಜು ಮಾಡಿದ್ದಾರೆ. ಬ್ರಿಟಿಷರು ಭಾರತವನ್ನು ತೊರೆದಾಗ, ದೇಶವು ಒಡೆಯುತ್ತದೆ ಮತ್ತು ಭವಿಷ್ಯವಿಲ್ಲ ಎಂದು ಹೇಳಲಾಗುತ್ತಿತ್ತು. ತುರ್ತು ಪರಿಸ್ಥಿತಿಯ ಸಮಯದಲ್ಲಿ, ಅದು ಶಾಶ್ವತವಾಗುತ್ತದೆ ಮತ್ತು ಪ್ರಜಾಪ್ರಭುತ್ವವು ಕಳೆದುಹೋಗುತ್ತದೆ ಎಂದು ಕೆಲವರು ನಂಬಿದ್ದರು. ಕೆಲವು ಜನರು ಮತ್ತು ಸಂಸ್ಥೆಗಳು ತುರ್ತು ಪರಿಸ್ಥಿತಿಯನ್ನು ಹೇರಿದವರ ಪರವಾಗಿ ನಿಂತವು. ಆದರೂ, ಭಾರತದ ನಾಗರಿಕರು ಎದ್ದು ನಿಂತರು, ಮತ್ತು ತುರ್ತು ಪರಿಸ್ಥಿತಿಯನ್ನು ಕಿತ್ತೊಗೆಯಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಭಾರತವು ಜಾಗತಿಕ ಸಮುದಾಯಕ್ಕೆ ಹೊರೆಯಾಗುತ್ತದೆ ಎಂದು ಜಗತ್ತು ನಿರೀಕ್ಷಿಸಿದ್ದ ಕೊರೋನದ ಸವಾಲಿನ ಸಮಯವನ್ನು ಹಿಂತಿರುಗಿ ಯೋಚಿಸಿ. ಆದರೆ ಭಾರತದ ನಾಗರಿಕರು ಪ್ರತಿಯಾಗಿ ಹೋರಾಡಿದರು ಮತ್ತು ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದರು.

 

ಸ್ನೇಹಿತರೇ,

1990ರ ದಶಕದಲ್ಲಿ ಭಾರತವು 10 ವರ್ಷಗಳಲ್ಲಿ ಐದು ಚುನಾವಣೆಗಳನ್ನು ಎದುರಿಸಿದ್ದು ನಿಮಗೆ ನೆನಪಿರಬಹುದು. ಇಷ್ಟು ದೊಡ್ಡ ದೇಶದಲ್ಲಿ 10 ವರ್ಷಗಳಲ್ಲಿ ಐದು ಚುನಾವಣೆಗಳು! ಅಂತಹ ಅಸ್ಥಿರತೆಯು ಅನೇಕ ತಜ್ಞರು ಮತ್ತು ಪತ್ರಿಕೆ ಅಂಕಣಕಾರರು ಭಾರತವು ಯಾವಾಗಲೂ ಹೀಗೆಯೇ ಇರುತ್ತದೆ ಎಂದು ಊಹಿಸಲು ಕಾರಣವಾಯಿತು. ಆದರೂ, ಭಾರತದ ಜನರು ಆ ತಜ್ಞರು ತಪ್ಪು  ಅಂದಾಜು ಮಾಡಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಇಂದು, ಜಗತ್ತು ಅನಿಶ್ಚಿತತೆ ಮತ್ತು ಅಸ್ಥಿರತೆಯನ್ನು ಎದುರಿಸುತ್ತಿದೆ. ಪ್ರತಿ ಚುನಾವಣೆಯಲ್ಲೂ ಸರ್ಕಾರಗಳು ಬದಲಾಗುತ್ತಿರುವಂತಹ ಅನೇಕ ದೇಶಗಳು ವಿಶ್ವದಲ್ಲಿವೆ, ಆದರೆ, ಭಾರತವು ಸತತ ಮೂರನೇ ಅವಧಿಗೆ ಒಂದೇ ಸರ್ಕಾರವನ್ನು ಆಯ್ಕೆ ಮಾಡುವ ಮೂಲಕ ಪ್ರತ್ಯೇಕವಾಗಿ ಎದ್ದು ಕಾಣುತ್ತದೆ.

ಸ್ನೇಹಿತರೇ,

ನಿಮ್ಮಲ್ಲಿ ಅನೇಕರು ಭಾರತದ ರಾಜಕೀಯ ಮತ್ತು ನೀತಿಗಳನ್ನು ಬಹಳ ಸಮಯದಿಂದ ಗಮನಿಸಿದ್ದೀರಿ. "ಉತ್ತಮ ಅರ್ಥಶಾಸ್ತ್ರವು ಕೆಟ್ಟ ರಾಜಕೀಯ" ಎಂಬ ನುಡಿಗಟ್ಟು ಆಗಾಗ್ಗೆ ಕೇಳಿಬರುತ್ತಿತ್ತು. ತಜ್ಞರು ಎಂದು ಕರೆಯಲ್ಪಡುವವರು ಈ ಕಲ್ಪನೆಯನ್ನು ಉತ್ತೇಜಿಸಿದರು, ಹಿಂದಿನ ಸರ್ಕಾರಗಳಿಗೆ ಏನೂ ಮಾಡದೇ ಇರಲು ಈ  ಒಂದು ನೆಪವನ್ನು ನೀಡಿದರು. ಒಂದು ರೀತಿಯಲ್ಲಿ, ಇದು ಅದಕ್ಷತೆ ಮತ್ತು ಕಳಪೆ ಆಡಳಿತವನ್ನು ಮರೆಮಾಚುವ ಮಾರ್ಗವಾಯಿತು. ಈ ಹಿಂದೆ, ಸರ್ಕಾರಗಳು ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಮಾತ್ರ ಓಡುತ್ತಿದ್ದವು. ವೋಟ್ ಬ್ಯಾಂಕ್ ಗಳನ್ನು ರಚಿಸಲಾಗುತ್ತಿತ್ತು ಮತ್ತು ಆ ಮತ ಬ್ಯಾಂಕ್ ಗಳನ್ನು ಸಂತೋಷವಾಗಿಡಲು ನೀತಿಗಳನ್ನು ರೂಪಿಸಲಾಗುತ್ತಿತ್ತು. ಈ ರೀತಿಯ ರಾಜಕೀಯದಿಂದ ಉಂಟಾದ ದೊಡ್ಡ ಹಾನಿಯೆಂದರೆ ಅದು ದೇಶದಲ್ಲಿ ಅಸಮಾನತೆ ಮತ್ತು ಅಸಮತೋಲನವನ್ನು ಬಹಳವಾಗಿ ಹೆಚ್ಚಿಸಿತು. ಅಭಿವೃದ್ಧಿಯನ್ನು ಘೋಷಿಸಲಾಯಿತು ಆದರೆ ಅದು ಬಹಳ ವಿರಳವಾಗಿ ಕಾಣತೊಡಗಿತು. ಈ ಮಾದರಿಯು ಸರ್ಕಾರದ ಮೇಲಿನ ನಂಬಿಕೆಯನ್ನು ನಾಶಪಡಿಸಿತು. ವೋಟ್ ಬ್ಯಾಂಕ್ ರಾಜಕೀಯದಿಂದ ಸಾವಿರಾರು ಮೈಲಿ ದೂರದಲ್ಲಿರುವ ಸ್ಪಷ್ಟ ಉದ್ದೇಶದೊಂದಿಗೆ ನಾವು ಈ ನಂಬಿಕೆಯನ್ನು ಪುನಃಸ್ಥಾಪಿಸಿದ್ದೇವೆ. ನಮ್ಮ ಸರ್ಕಾರದ ಉದ್ದೇಶ ಭವ್ಯ ಮತ್ತು ಸಮಗ್ರವಾಗಿದೆ: ನಾವು 'ಜನರ ಪ್ರಗತಿ, ಜನರಿಂದ ಪ್ರಗತಿ ಮತ್ತು ಜನರಿಗಾಗಿ ಪ್ರಗತಿ' ಮಂತ್ರವನ್ನು ಅನುಸರಿಸುತ್ತಿದ್ದೇವೆ. ನಮ್ಮ ಗುರಿ ಹೊಸ ಭಾರತ, ವಿಕ್ಷಿತ್ ಭಾರತ್ (ಅಭಿವೃದ್ಧಿ ಹೊಂದಿದ ಭಾರತ) ನಿರ್ಮಿಸುವುದು. ಮತ್ತು ನಾವು ಈ ಬೃಹತ್ ಗುರಿಯೊಂದಿಗೆ ಹೊರಟಾಗ, ಭಾರತದ ಜನರು ತಮ್ಮ ನಂಬಿಕೆಯ ಬಂಡವಾಳವನ್ನು ನಮಗೆ ವಹಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಈ ಯುಗದಲ್ಲಿ ತಪ್ಪು ಮಾಹಿತಿ ಮತ್ತು ಸತ್ಯಾಂಶವಿರದ ಮಾಹಿತಿ ಎಷ್ಟೊಂದು ವ್ಯಾಪಕವಾಗಿದೆ ಎಂಬುದನ್ನು  ನೀವು ಊಹಿಸಬಹುದು. ಹಲವಾರು ಪತ್ರಿಕೆಗಳು ಮತ್ತು ಚಾನೆಲ್ ಗಳಿವೆ, ಆದರೂ ಭಾರತದ ನಾಗರಿಕರು ನಮ್ಮನ್ನು ಮತ್ತು ನಮ್ಮ ಸರ್ಕಾರವನ್ನು ನಂಬುತ್ತಾರೆ.

ಸ್ನೇಹಿತರೇ,

ಸಾರ್ವಜನಿಕ ನಂಬಿಕೆ ಮತ್ತು ಆತ್ಮವಿಶ್ವಾಸ ಬೆಳೆದಾಗ, ಅದು ರಾಷ್ಟ್ರದ ಅಭಿವೃದ್ಧಿಯ ಮೇಲೆ ವಿಶಿಷ್ಟ ಪರಿಣಾಮ ಬೀರುತ್ತದೆ. ಪ್ರಾಚೀನ ಅಭಿವೃದ್ಧಿ ಹೊಂದಿದ ನಾಗರಿಕತೆಗಳಿಂದ ಇಂದಿನ ಅಭಿವೃದ್ಧಿ ಹೊಂದಿದ ದೇಶಗಳವರೆಗೆ, ಅಪಾಯವನ್ನು ಎದುರಿಸುವ ಸಂಸ್ಕೃತಿಯು ಒಂದು ಸಾಮಾನ್ಯ ಲಕ್ಷಣವಾಗಿದೆ ಎಂದು ನಿಮಗೆ ತಿಳಿದಿದೆ. ಒಂದು ಕಾಲದಲ್ಲಿ ನಮ್ಮ ದೇಶವು ವಾಣಿಜ್ಯ ಮತ್ತು ಸಂಸ್ಕೃತಿಯ ಹಾಟ್ ಸ್ಪಾಟ್ ಆಗಿತ್ತು. ಒಂದೆಡೆ, ನಮ್ಮ ವ್ಯಾಪಾರಿಗಳು ಮತ್ತು ಮಾರಾಟಗಾರರು ಆಗ್ನೇಯ ಏಷ್ಯಾದಲ್ಲಿ ಸಕ್ರಿಯರಾಗಿದ್ದರು, ಮತ್ತೊಂದೆಡೆ, ಅವರು ಅರಬ್ ಜಗತ್ತು, ಆಫ್ರಿಕಾ ಮತ್ತು ರೋಮನ್ ಸಾಮ್ರಾಜ್ಯದೊಂದಿಗೆ ಆಳವಾದ ಸಂಬಂಧಗಳನ್ನು ಹೊಂದಿದ್ದರು. ಅವರು ಅಪಾಯಗಳನ್ನು ತೆಗೆದುಕೊಂಡು ಎದುರಿಸಿದ್ದರಿಂದ ಇದು ಸಾಧ್ಯವಾಯಿತು, ಭಾರತದ ಉತ್ಪನ್ನಗಳು ಮತ್ತು ಸೇವೆಗಳು ದೂರದ ತೀರಗಳನ್ನು ತಲುಪಲು ಅನುವು ಮಾಡಿಕೊಟ್ಟಿತು. ಸ್ವಾತಂತ್ರ್ಯದ ನಂತರ, ನಾವು ಈ ಅಪಾಯವನ್ನು ತೆಗೆದುಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗಿತ್ತು, ಆದರೆ ಹಿಂದಿನ ಸರ್ಕಾರಗಳು ನಾಗರಿಕರಲ್ಲಿ ಆ ವಿಶ್ವಾಸವನ್ನು ಮೂಡಿಸಲಿಲ್ಲ. ಇದರ ಪರಿಣಾಮವಾಗಿ, ತಲೆಮಾರುಗಳು ಒಂದು ಹೆಜ್ಜೆ ಮುಂದೆ ಮತ್ತು ಎರಡು ಹೆಜ್ಜೆ ಹಿಂದೆ ಇಡುವುದರಲ್ಲಿಯೇ ಸಮಯವನ್ನು ಕಳೆದವು. ಕಳೆದ ದಶಕದಲ್ಲಿ, ದೇಶದಲ್ಲಿನ ಬದಲಾವಣೆಗಳು ಭಾರತೀಯರಲ್ಲಿ ಈ ಅಪಾಯವನ್ನು ತೆಗೆದುಕೊಳ್ಳುವ ಮನೋಭಾವವನ್ನು ಪುನರುಜ್ಜೀವನಗೊಳಿಸಿವೆ. ಇಂದು, ನಮ್ಮ ಯುವಜನರು ವಿವಿಧ ಕ್ಷೇತ್ರಗಳಲ್ಲಿ ಅಪಾಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಕಂಪನಿಯನ್ನು ಪ್ರಾರಂಭಿಸುವುದು ಅಪಾಯಕಾರಿ ಎಂದು ಪರಿಗಣಿಸಲಾಗಿತ್ತು, ಮತ್ತು ಹತ್ತು ವರ್ಷಗಳ ಹಿಂದೆಯೂ ಸ್ಟಾರ್ಟ್ ಅಪ್ (ನವೋದ್ಯಮ) ಕಥೆಗಳು ಅಪರೂಪವಾಗಿದ್ದವು. ಈಗ, ದೇಶದಲ್ಲಿ 125,000 ಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟ್ ಅಪ್ ಗಳಿವೆ. ಕ್ರೀಡೆ ಮತ್ತು ಕ್ರೀಡೆಯನ್ನು ವೃತ್ತಿಯಾಗಿ ಅಳವಡಿಸಿಕೊಳ್ಳುವುದು ಅಪಾಯಕಾರಿ ವೃತ್ತಿಜೀವನದ ಆಯ್ಕೆಗಳಾಗಿ ನೋಡುತ್ತಿದ್ದ ಸಮಯವಿತ್ತು, ಆದರೆ ಇಂದು ನಮ್ಮ ಸಣ್ಣ ಪಟ್ಟಣಗಳ ಯುವಜನರು ಸಹ ಈ ಅಪಾಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಮತ್ತು ದೇಶಕ್ಕೆ ಕೀರ್ತಿ ತರುತ್ತಿದ್ದಾರೆ. ಸ್ವಸಹಾಯ ಗುಂಪುಗಳಲ್ಲಿ ತೊಡಗಿರುವ ಮಹಿಳೆಯರು ಮತ್ತೊಂದು ಉದಾಹರಣೆ. ಇಂದು, ಸುಮಾರು ಒಂದು ಕೋಟಿ ಮಹಿಳೆಯರು 'ಲಖ್ಪತಿ ದೀದಿ'ಗಳಾಗಿದ್ದಾರೆ, ತಮ್ಮ ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಮತ್ತು ಹಳ್ಳಿಗಳಲ್ಲಿ ಉದ್ಯಮಶೀಲತೆಯನ್ನು ಮುನ್ನಡೆಸುತ್ತಿದ್ದಾರೆ. ನಾನು ಇತ್ತೀಚೆಗೆ ಗ್ರಾಮೀಣ ಮಹಿಳೆಯೊಂದಿಗೆ ಮಾತನಾಡಿದ್ದೇನೆ, ಅವರು ಟ್ರ್ಯಾಕ್ಟರನ್ನು ಹೇಗೆ ಖರೀದಿಸಿದರು ಮತ್ತು ಅವರ ಕುಟುಂಬದ ಆದಾಯವನ್ನು ಹೇಗೆ ಹೆಚ್ಚಿಸಿದರು ಎಂಬುದನ್ನು ಹಂಚಿಕೊಂಡರು. ಒಬ್ಬ ಮಹಿಳೆ ಅಪಾಯವನ್ನು ತೆಗೆದುಕೊಂಡು ತನ್ನ ಕುಟುಂಬದ ಜೀವನವನ್ನು ಪರಿವರ್ತಿಸಿದಳು. ಬಡವರು ಮತ್ತು ಮಧ್ಯಮ ವರ್ಗದವರು ಅಪಾಯಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ನಿಜವಾದ ಬದಲಾವಣೆ ಗೋಚರಿಸುತ್ತದೆ. ಇದನ್ನೇ ನಾವು ಇಂದು ಭಾರತದಲ್ಲಿ ನೋಡುತ್ತಿದ್ದೇವೆ.

 

ಸ್ನೇಹಿತರೇ,

ಭಾರತದ ಸಮಾಜವು ಈಗ ಅಭೂತಪೂರ್ವ ಆಕಾಂಕ್ಷೆಗಳಿಂದ ತುಂಬಿದೆ, ಅದನ್ನು ನಾವು ನಮ್ಮ ನೀತಿಗಳಿಗೆ ಅಡಿಪಾಯವನ್ನಾಗಿ ಮಾಡಿದ್ದೇವೆ. ನಮ್ಮ ಸರ್ಕಾರವು ನಾಗರಿಕರಿಗೆ ಹೂಡಿಕೆಯ ವಿಶಿಷ್ಟ ಸಂಯೋಜನೆಯನ್ನು ಒದಗಿಸಿದೆ, ಅದು ಘನತೆಯನ್ನು ಖಚಿತಪಡಿಸುವ ಉದ್ಯೋಗ ಮತ್ತು ಅಭಿವೃದ್ಧಿಗೆ ಕಾರಣವಾಗುತ್ತದೆ. ನಾವು ಹೂಡಿಕೆಯನ್ನು ಸೃಷ್ಟಿಸುವ, ಉದ್ಯೋಗವನ್ನು ಸೃಷ್ಟಿಸುವ ಮತ್ತು ಭಾರತೀಯ ನಾಗರಿಕರ ಘನತೆಯನ್ನು ಹೆಚ್ಚಿಸುವ ಅಭಿವೃದ್ಧಿ ಮಾದರಿಯನ್ನು ಉತ್ತೇಜಿಸುತ್ತಿದ್ದೇವೆ. ಉದಾಹರಣೆಗೆ, ಇದು ದೇಶದಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಬಗ್ಗೆ. ನಾನು ಸಣ್ಣದಾಗಿ ತೋರುವ ಆದರೆ ಗಮನಾರ್ಹ ಮೌಲ್ಯವನ್ನು ಹೊಂದಿರುವ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೇನೆ. ನಾನು ಅದನ್ನು ಒಂದು ಉದಾಹರಣೆಯ ಮೂಲಕ ವಿವರಿಸುತ್ತೇನೆ. ಶೌಚಾಲಯಗಳನ್ನು ನಿರ್ಮಿಸುವ ನಮ್ಮ ಧ್ಯೇಯವು ಕೇವಲ ಸೌಲಭ್ಯಗಳನ್ನು ಒದಗಿಸುವುದು ಮಾತ್ರವಲ್ಲ, ದೊಡ್ಡ ಜನಸಂಖ್ಯೆಯ ಸುರಕ್ಷತೆ ಮತ್ತು ಘನತೆಯನ್ನು ಖಾತ್ರಿಪಡಿಸುವುದು. ಈ ಯೋಜನೆಯನ್ನು ಪ್ರಸ್ತಾಪಿಸಿದಾಗ, ಜನರು ಹೆಚ್ಚಾಗಿ ನಿರ್ಮಿಸಲಾದ ಕೋಟಿಗಟ್ಟಲೆ ಶೌಚಾಲಯಗಳ ಬಗ್ಗೆ ಮಾತನಾಡುತ್ತಾರೆ. ಸಂಖ್ಯೆಗಳು ಉತ್ತಮವಾಗಿವೆ, ಆದರೆ ನಿರ್ಮಿಸಲಾದ ಪ್ರತಿಯೊಂದು ಶೌಚಾಲಯವು ಇಟ್ಟಿಗೆಗಳು, ಕಬ್ಬಿಣ ಮತ್ತು ಸಿಮೆಂಟ್ ನಂತಹ ವಸ್ತುಗಳನ್ನು ಒಳಗೊಂಡಿತ್ತು, ಇದು ಉದ್ಯೋಗಗಳನ್ನು ಸೃಷ್ಟಿಸಿತು. ಮತ್ತು ಈ ಎಲ್ಲಾ ವಸ್ತುಗಳು ಯಾವುದೋ ಅಂಗಡಿಯಿಂದ ಬಂದಿವೆ, ಕೆಲವು ಉದ್ಯಮದಿಂದ ಉತ್ಪಾದಿಸಲ್ಪಟ್ಟಿವೆ. ಯಾರೋ ಸಾಗಣೆದಾರರು ಅದನ್ನು ಬೇರೊಬ್ಬರ ಮನೆಗೆ ತಲುಪಿಸಿದ್ದಾರೆ. ಇದರರ್ಥ ಆರ್ಥಿಕತೆಗೆ ಉತ್ತೇಜನ ದೊರೆತಿದೆ, ಹೆಚ್ಚಿನ ಸಂಖ್ಯೆಯ ಉದ್ಯೋಗಗಳು ಸೃಷ್ಟಿಯಾಗಿವೆ. ಪರಿಣಾಮವಾಗಿ, ಜೀವನವು ಸುಲಭವಾಗಿದೆ, ಮತ್ತು ಜನರಲ್ಲಿ ಗೌರವ ಮತ್ತು ಸ್ವಾಭಿಮಾನ ಹೆಚ್ಚಾಗಿದೆ. ಹೆಚ್ಚುವರಿಯಾಗಿ, ಇದು ಅಭಿವೃದ್ಧಿಗೆ ದಾರಿ ಮಾಡಿಕೊಟ್ಟಿತು. ಇದು ಹೂಡಿಕೆಯು ಉದ್ಯೋಗ, ಅಭಿವೃದ್ಧಿ, ಜೊತೆಗೆ ಘನತೆಯನ್ನು ತರುತ್ತದೆ ಎಂಬ ಮಂತ್ರದ ಯಶಸ್ಸನ್ನು ತೋರಿಸುತ್ತದೆ.

ಸ್ನೇಹಿತರೇ,

ಮತ್ತೊಂದು ಉದಾಹರಣೆ- ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗಳದ್ದು. ಹಿಂದೆ, ಗ್ಯಾಸ್ ಸಿಲಿಂಡರ್ ಹೊಂದುವುದನ್ನು ಆ ಮನೆಯ ಸ್ಥಾನಮಾನದ ಸಂಕೇತವಾಗಿ ನೋಡಲಾಗುತ್ತಿತ್ತು. ನೆರೆಹೊರೆಯವರು ಅಂತಹ ವ್ಯಕ್ತಿಯನ್ನು ಪ್ರಭಾವಶಾಲಿ, ಉನ್ನತ ಸ್ಥಾನಮಾನದ ವ್ಯಕ್ತಿ ಎಂದು ನೋಡುತ್ತಿದ್ದರು, ಏಕೆಂದರೆ ಅವರು ಗ್ಯಾಸ್ ಒಲೆಯನ್ನು ಹೊಂದಿದ್ದರು ಎಂಬ ಕಾರಣಕ್ಕಾಗಿ. ಗ್ಯಾಸ್ ಸಂಪರ್ಕವಿಲ್ಲದವರು ತಮ್ಮ ಊಟವನ್ನು ಗ್ಯಾಸ್ ಒಲೆಯ ಮೇಲೆ ತಯಾರಿಸುವ ದಿನ ಎಂದು ಬರುವುದೋ ಎಂದು ಕಾಯುತ್ತಿದ್ದರು.  ಪರಿಸ್ಥಿತಿ ಹೇಗಿತ್ತೆಂದರೆ ಜನರು ಅನಿಲ ಸಂಪರ್ಕ ಪಡೆಯಲು ಸಂಸತ್ ಸದಸ್ಯರಿಂದ ಶಿಫಾರಸು ಪತ್ರಗಳನ್ನು ಪಡೆಯಬೇಕಾಗಿತ್ತು. ಮತ್ತು ನಾನು ಮಾತನಾಡುತ್ತಿರುವುದು 21 ನೇ ಶತಮಾನದ ಬಗ್ಗೆ 18 ನೇ ಶತಮಾನದ ಬಗ್ಗೆ ಅಲ್ಲ. 2014 ರ ಮೊದಲು, ವಾರ್ಷಿಕವಾಗಿ ಆರು ಸಿಲಿಂಡರ್ ಗಳನ್ನು ನೀಡಬೇಕೇ ಅಥವಾ ಒಂಬತ್ತು ಸಿಲಿಂಡರ್ ಗಳನ್ನು ನೀಡಬೇಕೇ ಎಂದು ಸರಕಾರಗಳು ಚರ್ಚಿಸುತ್ತಿದ್ದವು. ನಾವು ಸಿಲಿಂಡರ್ ಗಳ ಸಂಖ್ಯೆಯನ್ನು ಚರ್ಚಿಸುವ ಬದಲು ಪ್ರತಿ ಮನೆಯೂ ಅನಿಲ ಸಂಪರ್ಕವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸಿದ್ದೇವೆ. ಸ್ವಾತಂತ್ರ್ಯದ ನಂತರದ 70 ವರ್ಷಗಳಲ್ಲಿ ನೀಡಿದ್ದಕ್ಕಿಂತ ಹೆಚ್ಚಿನ ಅನಿಲ ಸಂಪರ್ಕಗಳನ್ನು ನಾವು ಕಳೆದ 10 ವರ್ಷಗಳಲ್ಲಿ ನೀಡಿದ್ದೇವೆ. 2014ರಲ್ಲಿ ದೇಶದಲ್ಲಿ 14 ಕೋಟಿ ಅನಿಲ ಸಂಪರ್ಕಗಳಿದ್ದವು. ಇಂದು, 30 ಕೋಟಿಗೂ ಹೆಚ್ಚು ಅನಿಲ ಸಂಪರ್ಕಗಳಿವೆ. ಗ್ರಾಹಕರಲ್ಲಿ ಈ ಭಾರಿ ಹೆಚ್ಚಳದ ಹೊರತಾಗಿಯೂ, ನೀವು ಎಂದಾದರೂ ಅನಿಲ ಕೊರತೆಯ ಬಗ್ಗೆ ಕೇಳಿದ್ದೀರಾ? ಇಲ್ಲ, ನೀವು ಕೇಳಿಲ್ಲ. ಇದು ಎಂದಾದರೂ ಹಿಂದೂಸ್ತಾನ್ ಟೈಮ್ಸ್ ನಲ್ಲಿ ವರದಿಯಾಗಿದೆಯೇ? ಇಲ್ಲ, ಅದು ಸಂಭವಿಸಿಲ್ಲ, ಏಕೆಂದರೆ ಅಂತಹದು ಸಂಭವಿಸಿಲ್ಲ. ಏಕೆಂದರೆ ನಾವು ಪೂರಕ ಮೂಲಸೌಕರ್ಯವನ್ನು ನಿರ್ಮಿಸಲು ಹೂಡಿಕೆ ಮಾಡಿದ್ದೇವೆ. ನಾವು ದೇಶಾದ್ಯಂತ ಬಾಟ್ಲಿಂಗ್ ಘಟಕಗಳು ಮತ್ತು ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ಬಾಟ್ಲಿಂಗ್ ಘಟಕಗಳಿಂದ ಹಿಡಿದು ಸಿಲಿಂಡರ್‍ ಗಳ ವಿತರಣೆಯವರೆಗೆ ಎಲ್ಲೆಡೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಯಿತು.

ಸ್ನೇಹಿತರೇ,

ಅಂತಹ ಅಸಂಖ್ಯಾತ ಉದಾಹರಣೆಗಳನ್ನು ನಾನು ನಿಮಗೆ ನೀಡಬಲ್ಲೆ. ಉದಾಹರಣೆಗೆ ಮೊಬೈಲ್ ಫೋನ್ ಗಳನ್ನು ಅಥವಾ ರುಪೇ ಕಾರ್ಡ್ ತೆಗೆದುಕೊಳ್ಳಿ. ಈ ಹಿಂದೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಹೊಂದಿರುವುದು ಕೆಲವು ಜನರಿಗೆ ಹೆಮ್ಮೆಯ ಭಾವನೆಯನ್ನು ನೀಡಿತು, ಅವರು ಅದನ್ನು ಸ್ಥಾನಮಾನದ ಸಂಕೇತವಾಗಿ ತೋರಿಸುತ್ತಿದ್ದರು. ಬಡವರು, ಈ ಕಾರ್ಡ್ ಗಳನ್ನು ನೋಡಿ, ಒಂದು ದಿನ ಒಂದನ್ನು ಹೊಂದಲು ಬಯಸುತ್ತಾರೆ. ಆದರೆ ರುಪೇ ಕಾರ್ಡ್ ಬಂದ ನಂತರ, ನಮ್ಮ ದೇಶದ ಬಡವರು ಸಹ ಈಗ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಹೊಂದಿದ್ದಾರೆ. ಈ ಹೊಸ ಪ್ರವೇಶ ಲಭ್ಯತೆಯು ಅವರಿಗೆ ಸಮಾನ ಭಾವನೆಯನ್ನು ನೀಡುತ್ತದೆ ಮತ್ತು ಅವರ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ಇಂದು, ಅತ್ಯಂತ ಬಡ ವ್ಯಕ್ತಿ ಕೂಡ ಆನ್ ಲೈನ್ ವಹಿವಾಟುಗಳನ್ನು ಮಾಡುತ್ತಾರೆ. ಮಾಲ್ ನಲ್ಲಿ ಐಷಾರಾಮಿ ಕಾರಿನಿಂದ ಇಳಿಯುವ ವ್ಯಕ್ತಿಯೂ ಬೀದಿ ಬದಿ ವ್ಯಾಪಾರಿ ಬಳಸುವ ಅದೇ ಯುಪಿಐ ಪಾವತಿ ವ್ಯವಸ್ಥೆಯನ್ನು ಬಳಸುತ್ತಾರೆ. ಹೂಡಿಕೆಯು ಉದ್ಯೋಗಕ್ಕೆ ಹೇಗೆ ಕಾರಣವಾಗುತ್ತದೆ ಮತ್ತು ಅಭಿವೃದ್ಧಿ ಹೇಗೆ ಘನತೆಯನ್ನು ಬೆಳೆಸುತ್ತದೆ ಎಂಬುದಕ್ಕೆ ಇದು ಅದ್ಭುತ ಉದಾಹರಣೆಯಾಗಿದೆ.

 

ಸ್ನೇಹಿತರೇ,

ಭಾರತದ ಪ್ರಸ್ತುತ ಬೆಳವಣಿಗೆಯ ಪಥವನ್ನು ಅರ್ಥಮಾಡಿಕೊಳ್ಳಲು, ನಮ್ಮ ಸರ್ಕಾರದ ವಿಧಾನವನ್ನು ನೋಡುವುದು ಅತ್ಯಗತ್ಯ. ಒಂದು ವಿಧಾನವೆಂದರೆ 'ಜನರಿಗಾಗಿ ದೊಡ್ಡದಾಗಿ ಖರ್ಚು ಮಾಡುವುದು', ಆದರೆ ನಮಗೆ ಮತ್ತೊಂದು ವಿಧಾನವೂ ಇದೆ: 'ಜನರಿಗಾಗಿ ದೊಡ್ಡದನ್ನು ಉಳಿಸುವುದು'. ನಾವು ಇದನ್ನು ಹೇಗೆ ಮಾಡುತ್ತಿದ್ದೇವೆ ಎಂದು ತಿಳಿಯಲು ನಿಮಗೆ ಆಸಕ್ತಿ ಇರಬಹುದು. 2014 ರಲ್ಲಿ, ನಮ್ಮ ಕೇಂದ್ರ ಬಜೆಟ್ ಸುಮಾರು 16 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಇಂದು, ಈ ಬಜೆಟ್ 48 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. 2013-14ರಲ್ಲಿ ನಾವು ಬಂಡವಾಳ ವೆಚ್ಚಕ್ಕಾಗಿ ಅಂದಾಜು 2.25 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ. ಇಂದು, ನಮ್ಮ ಬಂಡವಾಳ ವೆಚ್ಚವು 11 ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದೆ. ಈ 11 ಲಕ್ಷ ಕೋಟಿ ರೂಪಾಯಿಗಳನ್ನು ಹೊಸ ಆಸ್ಪತ್ರೆಗಳು, ಶಾಲೆಗಳು, ರಸ್ತೆಗಳು, ರೈಲ್ವೆ, ಸಂಶೋಧನಾ ಸೌಲಭ್ಯಗಳು ಮತ್ತು ಇತರ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ಬಳಸಲಾಗುತ್ತಿದೆ. ನಾವು ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸುವಾಗ, ನಾವು ಸಾರ್ವಜನಿಕರ ಹಣವನ್ನು ಸಹ ಉಳಿಸುತ್ತಿದ್ದೇವೆ. ನಿಮಗೆ ಆಸಕ್ತಿಯಿರುವ ಕೆಲವು ಅಂಕಿಅಂಶಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ.

ಉದಾಹರಣೆಗೆ, ನೇರ ಲಾಭ/ನಗದು ವರ್ಗಾವಣೆ (ಡಿಬಿಟಿ)ಯು ಸೋರಿಕೆಯನ್ನು ತಡೆಗಟ್ಟುವ ಮೂಲಕ ದೇಶಕ್ಕೆ 3.5 ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಿದೆ. ಆಯುಷ್ಮಾನ್ ಭಾರತ್ ಯೋಜನೆಯು ಉಚಿತ ವೈದ್ಯಕೀಯ ಚಿಕಿತ್ಸೆಯ ಮೂಲಕ ಬಡವರಿಗೆ 1.1 ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಿದೆ. 80% ರಿಯಾಯಿತಿಯಲ್ಲಿ ಔಷಧಿಗಳನ್ನು ನೀಡುವ ಜನೌಷಧಿ ಕೇಂದ್ರಗಳ ಮೂಲಕ ನಾಗರಿಕರು 30,000 ಕೋಟಿ ರೂಪಾಯಿಗಳನ್ನು ಉಳಿಸಿದ್ದಾರೆ. ಸ್ಟೆಂಟ್ ಗಳು ಮತ್ತು ಮೊಣಕಾಲು ಶಸ್ತ್ರಚಿಕಿತ್ಸೆಯಲ್ಲಿ  ಅಳವಡಿಸುವ ಉಪಕರಣಗಳ ಮೇಲಿನ ಬೆಲೆ ನಿಯಂತ್ರಣವು ಜನರಿಗೆ ಸಾವಿರಾರು ಕೋಟಿಗಳನ್ನು ಉಳಿಸಿದೆ. ಎಲ್ಇಡಿ ಬಲ್ಬ್ ಗಳನ್ನು ಉತ್ತೇಜಿಸುವ ಮೂಲಕ ಉಜಾಲಾ ಯೋಜನೆಯು ವಿದ್ಯುತ್ ಬಿಲ್ ಗಳನ್ನು 20,000 ಕೋಟಿ ರೂ.ಗಳಷ್ಟು ಕಡಿಮೆ ಮಾಡಿದೆ. ಸ್ವಚ್ಛ ಭಾರತ ಅಭಿಯಾನವು ಅನಾರೋಗ್ಯವನ್ನು ಕಡಿಮೆ ಮಾಡಿದೆ, ಪ್ರತಿ ಗ್ರಾಮೀಣ ಕುಟುಂಬಕ್ಕೆ ಸುಮಾರು 50,000 ರೂಪಾಯಿಗಳನ್ನು ಉಳಿಸಿದೆ. ಸ್ವಂತ ಶೌಚಾಲಯಗಳನ್ನು ಹೊಂದಿರುವ ಕುಟುಂಬಗಳು ತಲಾ 70,000 ರೂಪಾಯಿಗಳನ್ನು ಉಳಿಸುತ್ತವೆ ಎಂದು ಯುನಿಸೆಫ್ ವರದಿ ಮಾಡಿದೆ.

ಸ್ನೇಹಿತರೇ,

ಮೊದಲ ಬಾರಿಗೆ ನಳ್ಳಿ ನೀರನ್ನು ಪಡೆದ 12 ಕೋಟಿ ಕುಟುಂಬಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಕೈಗೊಂಡ ಅಧ್ಯಯನವು ಈ ಕುಟುಂಬಗಳು ಶುದ್ಧ ನೀರಿನ ಲಭ್ಯತೆಯಿಂದಾಗಿ ವಾರ್ಷಿಕವಾಗಿ 80,000 ರೂಪಾಯಿಗಳನ್ನು ಉಳಿಸುತ್ತವೆ ಎಂದು ತೋರಿಸುತ್ತದೆ.

 

ಸ್ನೇಹಿತರೇ,

ಹತ್ತು ವರ್ಷಗಳ ಹಿಂದೆ, ಭಾರತದಲ್ಲಿ ಇಂತಹ ಪರಿವರ್ತನೆಯನ್ನು ಯಾರೂ ಊಹಿಸಿರಲಿಲ್ಲ. ನಮ್ಮ ಯಶಸ್ಸು ದೊಡ್ಡ ಕನಸುಗಳನ್ನು ಕಾಣಲು ಮತ್ತು ಆ ಕನಸುಗಳನ್ನು ಸಾಧಿಸಲು ಹೆಚ್ಚು ಶ್ರಮಿಸಲು ನಮಗೆ ಸ್ಫೂರ್ತಿ ನೀಡಿದೆ. ಇಂದು, ಈ ಶತಮಾನವು ಭಾರತದ ಶತಮಾನವಾಗಲಿದೆ ಎಂಬ ಭರವಸೆ ಮತ್ತು ನಂಬಿಕೆ ಇದೆ. ಆದರೆ ಇದನ್ನು ನಿಜವಾಗಿಸಲು, ನಾವು ಅನೇಕ ಕ್ಷೇತ್ರಗಳಲ್ಲಿ ನಮ್ಮ ಪ್ರಯತ್ನಗಳನ್ನು ವೇಗಗೊಳಿಸಬೇಕಾಗಿದೆ. ನಾವು ಆ ದಿಕ್ಕಿನಲ್ಲಿ ವೇಗವಾಗಿ ಮುಂದುವರಿಯುತ್ತಿದ್ದೇವೆ. ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಅತ್ಯುತ್ತಮವಾದದ್ದನ್ನು ಮಾಡಲು ನಾವು ಮುನ್ನಡೆಯಬೇಕು. ಉತ್ತಮವಾದುದಕ್ಕಿಂತ ಕಡಿಮೆ ಯಾವುದೂ ನಮಗೆ ಸ್ವೀಕಾರಾರ್ಹವಲ್ಲ ಎಂಬ ಮನಸ್ಥಿತಿಯನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ. ಭಾರತದ ಮಾನದಂಡಗಳನ್ನು ವಿಶ್ವ ದರ್ಜೆಯವು ಎಂದು ಗುರುತಿಸಲು/ಪರಿಗಣಿಸಲು ನಾವು ಪ್ರಕ್ರಿಯೆಗಳನ್ನು ರೂಪಿಸಬೇಕಾಗಿದೆ. ನಾವು ಜಾಗತಿಕವಾಗಿ ಉತ್ಕೃಷ್ಟತೆಗೆ ಹೆಸರುವಾಸಿಯಾದ ಸರಕುಗಳನ್ನು  ಉತ್ಪಾದಿಸಬೇಕು. ನಮ್ಮ ನಿರ್ಮಾಣ ಯೋಜನೆಗಳನ್ನು ವಿಶ್ವದರ್ಜೆಯ ಮೂಲಸೌಕರ್ಯ ಎಂದು ಪರಿಗಣಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ, ನಮ್ಮ ಕೆಲಸವನ್ನು ವಿಶ್ವಾದ್ಯಂತ ಗುರುತಿಸಬೇಕು. ಮನರಂಜನಾ ಉದ್ಯಮದಲ್ಲಿ, ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಕೃತಿಗಳನ್ನು ರಚಿಸಬೇಕು. ಈ ವಿಧಾನವನ್ನು ನಿರ್ವಹಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ಹಿಂದೂಸ್ತಾನ್ ಟೈಮ್ಸ್ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ 100 ವರ್ಷಗಳ ಅನುಭವವು 'ವಿಕ್ಷಿತ್ ಭಾರತ'ದ ಪ್ರಯಾಣದಲ್ಲಿ ಅಮೂಲ್ಯವಾಗಿದೆ.

ಸ್ನೇಹಿತರೇ,

ನಾವು ಅಭಿವೃದ್ಧಿಯ ಈ ವೇಗವನ್ನು ಕಾಯ್ದುಕೊಳ್ಳುತ್ತೇವೆ ಮತ್ತು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತೇವೆ ಎಂಬ ವಿಶ್ವಾಸ ನನಗಿದೆ. ಭಾರತವು ತನ್ನ ಸ್ವಾತಂತ್ರ್ಯದ 100 ನೇ ವಾರ್ಷಿಕೋತ್ಸವವನ್ನು ಆಚರಿಸುವಾಗ, ಹಿಂದೂಸ್ತಾನ್ ಟೈಮ್ಸ್ ಸಹ ಸುಮಾರು 125 ವರ್ಷಗಳ ಸನಿಹದಲ್ಲಿರುತ್ತದೆ. ಮತ್ತು 'ವಿಕ್ಷಿತ್ ಭಾರತ್' ನ ಪ್ರಮುಖ ಪತ್ರಿಕೆಯಾಗಿ ಗುರುತಿಸಲ್ಪಡುತ್ತದೆ. ಈ ಪ್ರಯಾಣಕ್ಕೆ ನೀವು ಸಾಕ್ಷಿಯಾಗುತ್ತೀರಿ. ಆದಾಗ್ಯೂ, ನಾನು ಇಲ್ಲಿರುವುದರಿಂದ, ನಾನು ನಿಮಗೆ ಒಂದು ಕೆಲಸವನ್ನು ವಹಿಸಬೇಕು, (ಶೋಭನಾ) ಭಾರ್ತಿಯಾ ಜೀ ಮತ್ತು ಇದು ನಿಮ್ಮ ಜವಾಬ್ದಾರಿಯಾಗಿದೆ.

ನಮ್ಮ ಶ್ರೇಷ್ಠ ಸಾಹಿತಿಗಳ ಕೃತಿಗಳ ಬಗ್ಗೆ ಸಂಶೋಧನೆ ನಡೆಸಲಾಗಿದೆ. ವಿವಿಧ ವಿಷಯಗಳ ಸಂಶೋಧನೆಗಾಗಿ ಪಿಎಚ್.ಡಿ.ಗಳನ್ನು ನೀಡಲಾಗಿದೆ. ಹಿಂದೂಸ್ತಾನ್ ಟೈಮ್ಸ್ ನ 100 ವರ್ಷಗಳ ಪ್ರಯಾಣದ ಬಗ್ಗೆ ಪಿಎಚ್ ಡಿ ನಡೆಸಿದರೆ ಏನಾಗಬಹುದು? ವಸಾಹತುಶಾಹಿ ಮತ್ತು ಸ್ವಾತಂತ್ರ್ಯೋತ್ತರ ಯುಗಗಳು, ಕೊರತೆಯ ದಿನಗಳು ಮತ್ತು ಪ್ರಭಾವದ ದಿನಗಳಿಗೆ ಸಾಕ್ಷಿಯಾದ ಭಾರತೀಯ ಪತ್ರಿಕೋದ್ಯಮದ ಪ್ರಯಾಣವನ್ನು ಎತ್ತಿ ತೋರಿಸುವ ಸಂಶೋಧನೆಯನ್ನು ಹೊರತರುವ ಮೂಲಕ ಇದು ಒಂದು ದೊಡ್ಡ ಸೇವೆಯಾಗಲಿದೆ. ಇದು ಮಹತ್ವದ ಕೊಡುಗೆ ಎಂದು ನಾನು ನಂಬುತ್ತೇನೆ. ಬಿರ್ಲಾ ಕುಟುಂಬವು ಯಾವಾಗಲೂ ತನ್ನ ದತ್ತಿ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಜಾಗತಿಕ ಸನ್ನಿವೇಶದಲ್ಲಿ ಭಾರತದ ನಿಜವಾದ ಗುರುತನ್ನು ಹೊರತರುವ, ಸಂಶೋಧನೆಗೆ ಮೀಸಲಾಗಿರುವ ಹಿಂದೂಸ್ತಾನ್ ಟೈಮ್ಸ್ ಪೀಠವನ್ನು ಭಾರತದೊಳಗಿನ ಮತ್ತು ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಏಕೆ ಸ್ಥಾಪಿಸಬಾರದು? ನಿಮ್ಮ ಪತ್ರಿಕೆ ದೊಡ್ಡ ಸಾಧನೆಗಳನ್ನು ಮಾಡಿದೆ, ಆದರೆ ಕಳೆದ 100 ವರ್ಷಗಳಲ್ಲಿ ನೀವು ಗಳಿಸಿದ ಗೌರವ ಮತ್ತು ವಿಶ್ವಾಸವು ಹಿಂದೂಸ್ತಾನ್ ಟೈಮ್ಸ್ ನ ವ್ಯಾಪ್ತಿಯನ್ನು ಮೀರಿ ತಲೆಮಾರುಗಳಿಗೆ ಸೇವೆ ಸಲ್ಲಿಸಬಹುದು. ಈ ಶತಮಾನೋತ್ಸವ ವಿಚಾರ ಸಂಕಿರಣ ಇಲ್ಲಿಗೆ ಕೊನೆಗೊಳ್ಳುವುದಕ್ಕೆ ಬದಲು ಇನ್ನಷ್ಟು ಉಪಕ್ರಮಗಳಿಗೆ ದಾರಿ ಮಾಡಿಕೊಡುತ್ತದೆ ಎಂಬ ವಿಶ್ವಾಸ ನನಗಿದೆ. ಎರಡನೆಯದಾಗಿ, ನಾನು ನೋಡಿದ ಪ್ರದರ್ಶನವು ನಿಜವಾಗಿಯೂ ಪ್ರಭಾವಶಾಲಿಯಾಗಿತ್ತು. ಸಮಗ್ರ ವ್ಯಾಖ್ಯಾನದೊಂದಿಗೆ ನೀವು ಡಿಜಿಟಲ್ ಆವೃತ್ತಿಯನ್ನು ರಚಿಸಬಹುದೇ ಮತ್ತು ಅದನ್ನು ದೇಶಾದ್ಯಂತದ ಎಲ್ಲಾ ಶಾಲಾ ಮಕ್ಕಳಿಗೆ ಲಭ್ಯವಾಗುವಂತೆ ಮಾಡಬಹುದೇ? ಇದು ಭಾರತದ ಇತಿಹಾಸ, ಎದುರಿಸಿದ ಸವಾಲುಗಳು ಮತ್ತು ಸಾಧಿಸಿದ ಪ್ರಗತಿಯ ಬಗ್ಗೆ ಅಮೂಲ್ಯವಾದ ಒಳನೋಟವನ್ನು ನೀಡುತ್ತದೆ. ನೀವು ಈ ನಿಟ್ಟಿನಲ್ಲಿ ಕಠಿಣ ಪರಿಶ್ರಮ ಹಾಕಿದ್ದೀರಿ  ಎಂದು ನಾನು ನಂಬುತ್ತೇನೆ, ಮತ್ತು ಡಿಜಿಟಲ್ ಆವೃತ್ತಿಯನ್ನು ರಚಿಸುವ ಮೂಲಕ, ನೀವು ಇದನ್ನು ರಾಷ್ಟ್ರದಾದ್ಯಂತದ ಮಕ್ಕಳಿಗೆ ಆಕರ್ಷಣೆ ಮತ್ತು ಕಲಿಕೆಯ ಮೂಲವನ್ನಾಗಿ ಮಾಡಬಹುದು.

 

 

ಸ್ನೇಹಿತರೇ,

100 ವರ್ಷಗಳು ಎಂದರೆ ಅದೊಂದು ಮಹತ್ವದ ಮೈಲಿಗಲ್ಲು. ಈ ದಿನಗಳಲ್ಲಿ, ನಾನು ವಿವಿಧ ಕಾರ್ಯಗಳಲ್ಲಿ ಸಾಕಷ್ಟು ತೊಡಗಿಕೊಂಡಿದ್ದೇನೆ. ಆದರೆ ಇದು ನಾನು ಕಳೆದುಕೊಳ್ಳಲು ಬಯಸದ ಸಂದರ್ಭ; ನಾನು ವೈಯಕ್ತಿಕವಾಗಿ ಇಲ್ಲಿರಲು ಬಯಸುತ್ತೇನೆ. ಏಕೆಂದರೆ 100 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸುವುದು ಅದೇ ಒಂದು ದೊಡ್ಡ ಸಾಧನೆಯಾಗಿದೆ. ಆದ್ದರಿಂದ, ನಾನು ನಿಮಗೆ ಮತ್ತು ನಿಮ್ಮ ಎಲ್ಲಾ ಸಹೋದ್ಯೋಗಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತುಂಬ ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
New Smart Drug RK-251 Developed as Replacement for Chemotherapy

Media Coverage

New Smart Drug RK-251 Developed as Replacement for Chemotherapy
NM on the go

Nm on the go

Always be the first to hear from the PM. Get the App Now!
...
The world is seeing India as a bright spot of growth and hope: PM Modi at Economic Times World Leaders Forum 2026
August 21, 2026
The world sees India as a bright spot for growth and hope: PM
Today, India is implementing next-generation reforms at the policy level and undertaking reforms at governance level: PM
Increasing production was met with punishment earlier but today, our government is providing incentives for boosting production
India has political stability and continuity in its policies: PM
Earlier, the approach of regulations was, 'prohibited unless permitted’; We are changing this approach and taking it towards 'permitted unless prohibited’: PM
The relationship between the government and citizens should be based on trust, not suspicion: PM
Today, we are shaping policies that are pro-people, pro-growth and pro-development: PM

World Leaders Forum का ये प्रतिष्ठित मंच, Business और Industry की दुनिया के सभी जाने माने दिग्गज, पॉलिसी मेकर्स, अन्य महानुभाव, देवियों और सज्जनों।

आप सबके बीच आकर के खुश होना बहुत स्वाभाविक भी है। इस साल समिट का फोकस Shared Future पर है। पिछले कुछ वर्षों में दुनिया ने अनेक उतार-चढ़ाव देखे हैं। और इन अनुभवों ने एक बात बहुत स्पष्ट कर दी है, कोई चाहे या ना चाहे, हर देश का भविष्य, उसका फ्यूचर, एक-दूसरे से जुड़ा हुआ ही है, Isolation में कुछ संभव नहीं है। इसीलिए Shared Futures की ये theme, आज और भी अधिक प्रासंगिक हो गई है। और भारत तो हमेशा से इसी भावना को लेकर चला है। जी-20 की अध्यक्षता में इसलिए ही भारत का मंत्र रहा, One Earth, One Family, One Future. Shared Future की ये भावना और इसके साथ जुड़ा दायित्वबोध, 21वीं सदी के इस विश्व की अनेक समस्याओं का समाधान देता है।

साथियों,

आज दुनिया में growth को लेकर के कई तरह की चिंताएं हैं। दुनिया ने बड़ा भयंकर एक रूप देखा है इन दिनों। Resources का वेपनाइजेशन हो रहा है। अविश्वास का वातावरण विश्व के लिए अनेक नई चुनौतियां लेकर के आ रहा है। लेकिन ऐसे समय में भी, दुनिया भारत को growth और hope के bright spot के रूप में देख रही है। भारत ने पिछले 10-12 साल में अपनी 25 करोड़ आबादी को गरीबी से बाहर निकाला है। इतना ही नहीं, अगर आने वाले दिनों की चर्चा करें, तो IMF का forecast है कि भारत दुनिया की fastest growing major economy बना रहेगा। और भारत निरंतर वो कदम उठा रहा है, जो उसके विकास को गति दे रहे हैं।

Friends,

अभी पिछले हफ्ते ही, 15 अगस्त को मैंने लाल किले से सप्त-धारा की सप्त-शक्तियों की बात की है। मैन्यूफैक्चरिंग, टेक्नोलॉजी और इनोवेशन, फूड प्रोसेसिंग, ग्रीन और ब्लू इकोनॉमी समेत, मैंने ऐसे सात सेक्टर्स की बात की है, जिन पर भारत का आज बहुत ज्यादा फोकस है। और इसलिए भारत आज, Policy level पर, नेक्स्ट जनरेशन reforms कर रहा है, ताकि हमारा future सुरक्षित हो। Governance पर reforms कर रहा है, Ease of Living के लिए reforms कर रहा है। पिछली बार जब मैं इसी मंच के माध्यम से आपसे जुड़ा था, तब भी मैंने कहा था, ये Reforms हमारे लिए Compulsion नहीं है। ये हमारा commitment है, ये हमारा conviction है।

साथियों,

2014 में, जब हमारी सरकार बनी, तो उसके बाद से ही रिफॉर्म्स ने कैसे देश की दिशा और दशा बदली है, मैं इसका एक बहुत दिलचस्प उदाहरण आपको देना चाहता हूं। यहां मौजूद शायद ही किसी को PLP के बारे में पता होगा, कोई है, जिसको PLP के बारे में पता है? अपना हाथ उठाएं। यहां इतने मीडिया के दिग्गज बैठे हैं, PLP आपको पता है? और आप सुनकर के हैरान हो जाएंगे। PLP यानी प्रोडक्शन लिंक्ड पनिशमेंट, इसके बारे में किसी को पता नहीं है। और एक दूसरा टर्म आपने जरूर सुना है PLI, ये ज्यादातर लोगों को पता होगा। PLI- यानी प्रोडक्शन लिंक्ड इंसेंटिव।

साथियों,

ये दोनों टर्म, भारत के दो अलग-अलग Time Period को डिफाइन करते हैं। आजकल Explainer का जमाना है, तो मैं आपको Explain करता हूं।

साथियों,

आज की युवा पीढ़ी को ये सुनकर हैरानी होगी, कि हमारे देश में एक समय ऐसा भी था, कि अगर कोई कंपनी तय लिमिट से ज्यादा प्रॉडक्शन कर दे, तो उसे पनिशमेंट दिया जाता था। ये पहले की लाइसेंस राज वाली सरकारों का, PLP यानी प्रोडक्शन लिंक्ड पनिशमेंट मॉडल था। ऐसे भी उदाहरण रहे हैं कि अगर किसी फैक्ट्री ने ज्यादा डिमांड देखते हुए ज्यादा प्रॉडक्शन कर दिया, तो उसे नोटिस भेज दिया जाता था। मजबूरी में वो कंपनी अपना प्रॉडक्ट मार्केट में बेचने के बजाय, उसे खुद ही नष्ट कर देती थी।

साथियों,

आज जो लोग Make In India और आत्मनिर्भर भारत अभियान का मजाक उड़ाते हैं, उनके पुरखों की सोच यही थी, PLP यानी प्रोडक्शन लिंक्ड पनिशमेंट। ऐसा करने के पीछे एक विशेष तरह की विकृत मानसिकता काम करती थी। ऐसी मानसिकता वाले लोग हमेशा चाहते थे कि जरूरी चीजों की किल्लत बनी रहे। देश के नागरिकों को अभाव में रखना उनकी पॉलिसी थी। वो चाहते थे कि जनता उनके सामने हाथ जोड़े, हाथ फैलाए, आप समझ गए मैं किन लोगों की बात कर रहा हूं। लोगों से हाथ जुड़वाने के बाद उपकार करना, उन सरकारों का तरीका था, इसलिए वो प्रोडक्शन लिंक्ड पनिशमेंट मॉडल पर चलते थे। आप कल्पना कर सकते हैं, ऐसे करके उन लोगों ने Employment Generation के बेसिक principal का गला घोंट दिया था। और हैरानी ये, इन लोगों के दरबारियों ने again I repeat, इन लोगों के दरबारियों ने, कभी इसके खिलाफ कोई आवाज नहीं उठाई।

साथियों,

हर reform की शुरुआत सबसे पहले, आपके सोचने के तरीके, आपके मानसिक, किस रेंज में आप काम कर रहे हैं, इस सोच के reform से ही होती है। जहां पहले production बढ़ाने पर पनिशमेंट मिलता था, वहीं आज हमारी सरकार production बढ़ाने पर incentive दे रही है। और आज PLI स्कीम की सक्सेस दुनिया देख रही है। सिर्फ इस एक योजना की वजह से, मैं सारी योजनाओं की बात नहीं करता हूं, एक की बात करता हूं, करीब ढाई लाख करोड़ रुपए का actual investment हुआ है। 22 लाख करोड़ रुपए से ज्यादा का production और sales हुई है। 15 लाख करोड़ रुपए से ज्यादा का exports हुआ है, और 14 लाख से ज्यादा direct और indirect jobs बनी हैं। और मैं फिर याद दिलाउंगा, ये आंकड़े सिर्फ एक स्कीम के हैं। आप सोचिए, पहले का लाइसेंस राज वाली सरकार का पनिशमेंट मॉडल जहां बेरोजगारी बढ़ाता था, वहीं आज का हमारा incentive मॉडल लाखों नई जॉब्स क्रिएट कर रहा है।

साथियों,

आज भारत में ये तेज विकास, ये तेज रिफॉर्म इसलिए हो रहे हैं, क्योंकि भारत में और जिसका अभी सत्य ने उल्लेख किया, political stability है, हमारी policy में continuity है। पहले देश में रिफॉर्म्स की बात करने वाले घोषणा तो कर देते थे, बाद में भूल जाते थे। लेकिन हमने रिफॉर्म्स को लेकर एक क्लियर रोडमैप बनाया। इस रोडमैप की प्रमुख दिशा रही है- गवर्नेंस लेवेल के रिफॉर्म्स हों! इसके लिए, आज 21वीं सदी के भारत में, हम सिर्फ regulations नहीं बदल रहे हैं, हम regulation की पूरी philosophy बदल रहे हैं। पहले regulations की अप्रोच थी- “Prohibited unless permitted.” यानी जब तक सरकार इजाजत ना दे, तब तक आप वो काम नहीं कर सकते। हम इस approach को बदलकर, “Permitted unless prohibited” की तरफ ले जा रहे हैं। यानी, जो काम कानून ने स्पष्ट रूप से मना नहीं किया है, उसके लिए हर कदम पर permission की कोई जरूरत नहीं होनी चाहिए। और इसके पीछे सोच बहुत सीधी है, सरकार और नागरिक के रिश्ते का आधार, Suspicion नहीं, trust होना चाहिए।

साथियों,

यही सोच आपको Jan Vishwas बिल में भी दिखाई देती है। मैं मानता हूं, हर procedural गलती को criminal offence मान लेना ठीक नहीं है। इसीलिए अनेक offences को decriminalise किया गया है। कई मामलों में जेल की जगह केवल आर्थिक penalty का प्रावधान किया गया है। Government और enterprise के रिश्ते में, हम इसी reform mindset को आगे बढ़ा रहे हैं। बीते वर्षों में 40 हजार से ज्यादा compliances हटाए गए हैं, 40 thousand. डेढ़ हजार से ज्यादा, 15 hundred, डेढ़ हजार से ज्यादा, पुराने और बेकार हो चुके कानून हमने खत्म किए, और जब इन सारे reforms को एक साथ देखते हैं, तो अंदाजा होता है, हमारी industries और businesses के कंधों से कितना बड़ा बोझ कम हुआ है।

साथियों,

गवर्नेंस रिफॉर्म्स की इस प्रक्रिया, उस पर हम निरंतर काम कर रहे है। अभी संसद के मॉनसून सत्र में हमने ‘बैंकर्स बुक एविडेंस बिल’ पारित किया है। और वो भी तब जब विपक्ष ने संसद में लगातार गतिरोध बनाया हुआ था। हमने देश की सेवा करने का काम रूकने नहीं दिया। अब इस कानून ने 19वीं सदी के अंग्रेजी कानून को रिप्लेस किया है। अब बैंकों के डिजिटल रिकॉर्ड्स की स्वीकार्यता को कानूनी मान्यता दी गई है। इससे कानूनी उलझनें कम होंगी, सिस्टम में पारदर्शिता होगी, Ease of Doing Business बढ़ेगा।

साथियों,

गवर्नेंस में रिफॉर्म का एक मतलब ये भी है कि सिस्टम ऐसे बनें, जिसमें एक-एक मानव जीवन और उसके समय के प्रति संवेदनशीलता हो। मैं रेलवे का उदाहरण देता हूं। हमारी रेलवेज में भी इसी अप्रोच के साथ काम हुआ है। आज साढ़े 6 हजार से ज्यादा रेलवे स्टेशनों पर इलेक्ट्रॉनिक इंटरलॉकिंग की व्यवस्था है। 10 हजार से ज्यादा लेवल क्रॉसिंग गेट्स को भी इंटरलॉकिंग से जोड़ा जा चुका है। इससे ह्यूमन एरर से होने वाले हादसों की आशंका बहुत कम हुई है।

साथियों,

जब 2014 में हमारी सरकार आई, तो करीब 9 हजार फाटक ऐसे थे जो Un-Manned थे। इन्हें हटाना कोई रॉकेट साइंस नहीं था। Un-Manned क्रॉसिंग्स की वजह से हजारों लोगों को अपनी जान गंवानी पड़ी, लेकिन पहले की सरकारों को इससे बहुत फर्क नहीं पड़ता था। हमने मिशन मोड में, गत दस वर्ष में, इन Un-Manned क्रॉसिंग्स को समाप्त कर दिया। हमने रोड ओवर ब्रिज और रोड अंडर ब्रिज बनाने की गति भी कई गुना बढ़ा दी। और इसी का नतीजा है कि 2014 के पहले के मुकाबले ट्रेन दुर्घटनाओं की संख्या में Ninety Percent तक की कमी आई है, 90, Ninety Percent. 12 साल पहले जहां एक साल में करीब डेढ़ सौ रेल दुर्घटनाएं होती थीं, वहीं अब इनकी संख्या घटकर 15-20 रह गई है। और हम इसे और कम से कम करने का प्रयास लगातार कर रहे हैं।

साथियों,

Railways में स्वच्छता भी गवर्नेंस रिफॉर्म का एक बड़ा उदाहरण है। एक समय था, जब रेल पटरियों पर गंदगी और human waste एक बड़ी समस्या हुआ करती थी। आज स्थिति पूरी तरह बदल गई है। 2014 से पहले हमारी ट्रेनों में जहां लगभग 12 हजार बायो-टॉयलेट्स लगाए गए थे, वहीं 2014 के बाद ट्रेनों में 3 लाख 60 हजार से ज्यादा बायो-टॉयलेट्स लगाए गए हैं। यानी, 97 प्रतिशत से ज्यादा बायो-टॉयलेट्स पिछले 12 वर्षों में लगे हैं। ये बदलाव सिर्फ सफाई का नहीं, यात्रियों की गरिमा, स्वच्छता और आधुनिक भारत के निर्माण की दिशा में गवर्नेंस का एक नया मॉडल है। ये करोड़ों यात्रियों को बेहतर अनुभव देने का अभियान भी है।

साथियों,

गवर्नेंस की क्वालिटी का एक और पैमाना, और वो पैमाना है - समय। जो प्रोजेक्ट शुरू हो, वो समय पर पूरा हो। और जो सर्विस लोगों को मिले, वो भी समय की कसौटी पर खरी उतरे। दिल्ली-मेरठ नमो भारत रैपिड रेल सिस्टम इसका बहुत अच्छा उदाहरण है। इस कॉरिडोर पर 160 किलोमीटर प्रति घंटे की रफ्तार से ट्रेनें चल रही हैं। ये हमारे देश में पहले कभी सोचा नहीं जा सकता था। अब तक 4 करोड़ से ज्यादा यात्री इसमें ट्रैवल कर चुके हैं। और इसका एक और अहम फैक्टर है, जिसकी चर्चा नहीं होती है। दिल्ली मेरठ नमो भारत रैपिड रेल की पंक्चुअलिटी 99.9 परसेंट है। वरना हम तो हर चीज में कहते हैं, लेट हो तो कहते थे, ये तो इंडियन टाइम है। वक्त बदला है, ये मैं छोटी-छोटी चीजें इसलिए बताता हूं, कि हमें अंदाज आए कि कितने बड़े व्यापक स्तर पर काम हो रहा है। इसी तरह, Delhi Metro की पंक्चुअलिटी। Delhi Metro की पंक्चुअलिटी 99.9 परसेंट है। और ये punctuality, New York, Hong Kong और Paris जैसे शहरों की Metro से करीब-करीब बराबर हो चुकी है। ये सिर्फ समय पर चलती हुई Metro और नमो रेपिड रेल की कहानी नहीं है, ये समय के साथ बदलते हुए भारत की पहचान है। मैं जानता हूं कि अभी भी, और र्मैं कोई इतने से संतोष मानकर बैठने वाला व्यक्ति नहीं हूं, अभी भी इस दिशा में हमें बहुत कुछ करना है, बहुत कुछ बाकी है, लेकिन हम लगातार कर रहे हैं। लेकिन एक शुरूआत तो हुई है और ये शुरुआत सराहनीय है।

साथियों,

हमारे रिफॉर्म्स रोडमैप का एक और बड़ा आयाम है- पॉलिसी लेवल पर होने वाले रिफॉर्म्स! आज हम ऐसी policies बना रहे हैं, जो pro-people हों, Pro-growth हों, pro development हों! पॉलिसीज़ देश और देश के लोगों की जरूरत के हिसाब से होनी चाहिए न कि पॉलिसीज़ बनाकर देश को उनके हिसाब से चलने को मजबूर होना पड़े! मैं आपको एक और Interesting उदाहरण देना चाहता हूं। कुछ साल पहले तक हमारे यहाँ देश का नक्शा बनाना भी गैर-कानूनी था, मैप बनाए तो गैर कानूनी था, आप जेल चले जाएंगे। बिना परमिशन के आप देश में मैपिंग का काम भी नहीं कर सकते थे। आप सोचिए, विदेशी सैटेलाइट टेक्नोलॉजी के जरिए भारत के किसी भी कोने को मैप कर सकती थी, लेकिन भारत में भारतीयों पर भारत का मैप बनाने पर पाबंदी लगी हुई थी।

साथियों,

आज टेक्नोलॉजी के इस दौर में, इस एक पाबंदी से कितने स्टार्टअप्स की हत्या हो सकती थी! कितने ideas implement होने से वंचित रह सकते थे! हमने इस व्यवस्था को भी बदला। हमने Geospatial डेटा का Deregulation किया और आज Geospatial डेटा कितने ही स्टार्टअप्स का आधार बन रहा है।

साथियों,

आज आप लगातार ड्रोन्स की उपयोगिता बढ़ते हुए देख रहे हैं। एग्रीकल्चर में, डिफेंस में, डिलिवरी में, शूटिंग में, कंटेंट क्रिएशन में, ये सब संभव ही नहीं होता, अगर सरकार ने इससे जुड़े नियमों में Reform नहीं किए होते। पहले देश में ड्रोन फ्लाइंग पूरी तरह नियमों में, बंधनों में जकड़ी हुई थी। हमने उसे बंधनों से आजाद किया, और आज भारत की ड्रोन इंडस्ट्री, एक अभूतपूर्व उड़ान के साथ आगे बढ़ रही है।

साथियों,

पहले border areas को लेकर सरकारों की सोच थी कि बॉर्डर पर roads और infrastructure बढ़ेगा, तो उसका फायदा दुश्मन भी उठा सकता है। हमने इस सोच को बदला। हमने कहा, Border infrastructure कमजोरी नहीं, देश की ताकत है। और इसीलिए आज border areas में roads, bridges और tunnels का network तेजी से बढ़ रहा है। सिर्फ 2024 और 2025 में ही, BRO के 250 infrastructure projects देश को समर्पित किए गए हैं। सोच बदली, तो border infrastructure की तस्वीर भी बदल गई।

साथियों,

एक उदाहरण न्यूक्लियर रिफॉर्म्स का भी है। एक ऐसे समय में, जब विकास पूरी तरह से energy dependent है, बंदिशों और प्रतिबंधों के कारण, देश अपने न्यूक्लियर potential का इस्तेमाल नहीं कर पा रहा था। हमने शांति बिल के जरिए इसमें भी बड़ा रिफॉर्म किया है। आज भारत में न्यूक्लियर एनर्जी में प्राइवेट सेक्टर के लिए रास्ता खुल चुका है। इसी तरह, हमने एक बड़ा पॉलिसी रिफॉर्म डिफेंस सेक्टर में भी किया। 200 साल के पहले जो व्यवस्था चली आ रही थी, उसे बदलकर हमने 40 से ज्यादा ordnance फैक्ट्रीज़ को मर्ज करके 7 फैक्ट्रीज़ बना दी। और उसका परिणाम हमें देखने को मिल रहा है। आज भारत अपनी रक्षा जरूरतों के लिए भी आत्मनिर्भर बन रहा है, और 2014 की तुलना में, हमारा डिफेंस एक्सपोर्ट 55 गुना बढ़ा है। और इसलिए, कई बार रिफॉर्म्स हमारे जीवन में इस तरह घुल-मिल जाते हैं कि हमारा उनकी तरफ ध्यान ही नहीं जाता। आप सोचिए, आपका कोई सामान्य दिन आज कैसे बीतता है। आप सुबह उठते हैं, फोन पर घर का सामान ऑर्डर कर देते हैं, और जब तक ऑफिस के लिए रेडी होते हैं, वो सारा सामान आपके घर आकर के पहुंच जाता है। आपकी गली के स्ट्रीट वेंडर से लेकर, आपकी गाड़ी के शो रूम तक, आपकी सारी पेमेंट्स, सिर्फ एक क्यूआर कोड स्कैन करके हो जाती है। अगर आपकी बेटी, किसी दूसरे शहर में पढ़ती है, तो आप फोन से उसे पैसे भेज सकते हैं, और वो पैसा, कुछ सेकंड्स में उसके पास भी पहुंच जाता है। कई बार तो बिटिया क्यूआर ही शेयर कर देती है कि ‘पापा-मां मैंने ये ड्रेस ले ली है, इसकी पेमेंट कर दीजिए, और आप उसकी शॉपिंग अपने घर बैठे-बैठे करवा देते हैं। ये चीजें Remarkable हैं, लेकिन अब ये कोई भारत के लोगों को कम से कम हैरानी नहीं होती, बाहर के लोग आते हैं, उनको आश्चर्य होता है, अच्छा ऐसे होता है। भारत के लोगों का रूटीन हो गया है। ये भारत के सामान्य मानवी के जीवन का हिस्सा बन चुका है। आप सोचिए, 2014 से पहले ऐसी कितनी ही बातें क्या पॉसिबल थीं?

साथियों,

भारत ने बीते 10-12 सालों में Ease of Living से जुड़े जो रिफॉर्म्स किए हैं, उसकी वजह से लोगों का, खासतौर पर हमारे मिडिल क्लास का जो जीवन बदला है, वो दुनिया के कई विकसित देशों में आज भी एक सपना ही है।

साथियों,

आज दुनिया का सबसे सस्ता डेटा भारत में है, हम सस्ते और अच्छे स्मार्टफोन्स बना रहे हैं। अभी सत्या ने उसका वर्णन किया। भारत दुनिया के fastest 5G rollouts करने वाले देशों में से एक है। हमने आधार को बैंकिंग, मोबाइल कनेक्टिविटी और सर्विसेज से जोड़कर, ई-के.वाई.सी और Digital Authentication जैसी सर्विसेज को पॉसिबल किया है। आज आपको अगर बैंक अकाउंट खोलना है, तो उसके लिए बैंक जाने तक की जरूरत नहीं है। सरकार ने बैंक को ही, आपके पास पहुंचा दिया है। आज चाहे कोई बिल जमा करना हो, कोई टिकट करानी हो, किसी सरकारी दफ्तर में जाने की जरूरत नहीं पड़ती, ये सारा काम ऑनलाइन हो जाता है। इनकम टैक्स की फाइलिंग का काम आसान हुआ है। ऐसी व्यवस्था बनी है कि फॉर्म में मैक्सिमम जानकारियां पहले से भरी होती हैं। आप ये इन्फॉर्मेशन वेरिफाई करते हैं, कुछ जोड़ना है तो जोड़ देते हैं, और सबमिट करते हैं, आपका काम पूरा हो जाता है। पहले जो रिफंड आने में महीनों लगते थे, अब वो भी कुछ ही दिनों में आ जाता है।

साथियों,

आज ई-संजीवनी की मदद से, शायद इसकी चर्चा अभी बहुत कम होती है, ई-संजीवनी की मदद से, गांव के दूर दराज के लोग भी, कहीं से भी डॉक्टर्स के साथ सीधी अपनी चर्चा करके अपने उपचार का रास्ता लेते हैं। और इससे जिन लोगों को अस्पताल जाने के लिए कई किलोमीटर का सफर करना पड़ता था, आज डॉक्टर उनके घर पर, उनकी स्क्रीन पर उपलब्ध है। अब तक ये आंकड़ा भी आपको जरूर आश्चर्य करेगा। यानी भारत ने टेक्नोलॉजी को किस प्रकार से अडाप्ट किया है, सामान्य मानवीय के जीवन को कैसे सरल किया है। अब तक ईं-संजीवनी के तहत करीब-करीब 50 करोड़ टेली-कंसल्टेशंस हो चुकी हैं।

साथियों,

आज भारत में Travel Experience बदल रहा है, भारत के नागरिकों की यात्राएं पूरी तरह बदल गई हैं। यहां इस हॉल में ऐसा व्यक्ति खोजना मुश्किल होगा, जिसने एयरपोर्ट पर डिजी यात्रा का इस्तेमाल ना किया हो। ऐसे ही आजकल बहुत सारा काम Seamless तरीके से हो रहा है। हाइवे पर फास्ट टैग चल रहे हैं, ताकि आप बिना रुके टोल देकर आगे बढ़ सकें। Ease of Living का सही अर्थ यही है। समय की बचत हो रही है, जीवन आसान हो रहा है, और करोड़ों लोग अपनी प्रगति पर फोकस कर पा रहे हैं।

साथियों,

Politics में अक्सर वही फैसले headlines बनते हैं, जिनका असर आज दिखाई दे, यानी उसकी उमर 24 घंटे हो। पहले की सरकारों ने इलेक्शन सामने देख कर भी घोषणाएं करने का फॉर्मूला अपनाया। लेकिन ऐसी घोषणाओं से देश नहीं बदला। देश बदलने वाले फैसले वो होते हैं, जिनका प्रभाव जमीन पर दिखे, जो वर्तमान और भविष्य, दोनों को ध्यान में रखकर के लिए गए होने चाहिए।

साथियों,

पीएम कुसुम योजना और पीएम सूर्यघर मुफ्त बिजली योजना इसका बहुत बड़ा यूनीक Example है। कुसुम योजना से किसानों को बिजली की चिंता से मुक्ति मिली है। और सूर्यघर योजना से मिडिल क्लास को बहुत फायदा हुआ है।

साथियों,

मैं ये जानता हूं कि अगर मैंने ये अनाउंस कर दिया होता कि आज से लाखों-लाख परिवारों के लिए बिजली मुफ्त है, तो सारा मीडिया, सारी स्क्रीन्स, सारे न्यूजपेपर्स, बड़ी-बड़ी हेडलाइन बनाकर के खबर दे देते कि मोदी जी ने आज अनाउंस कर दिया है। लेकिन हमने कुछ दूसरे अप्रोच से काम शुरू किया। हमने हर घर की छत पर एक सूरज उगाने की ठान ली, और आज देश के 50 लाख से ज्यादा परिवार, पीएम सूर्यघर मुफ्त बिजली योजना से जुड़े हैं। सरकार ने 22 हजार करोड़ रुपए से ज्यादा इन परिवारों को दिए हैं, ये सोलर सिस्टम लगाने के लिए, ताकि उनकी छत पर सोलर प्लांट लगाकर सोलर पावर पैदा की जा सके। अब ये परिवार, एक्स्ट्रा बिजली को, बिजली ग्रिड में बेचकर, पैसे भी कमा रहे हैं। खुद का बिल तो जीरो हुआ, कमाई भी होने लगी। इस योजना से लोगों के सपनों को भी विस्तार मिल रहा है। बिजली बिल कम हुआ है, तो अब घर में फ्रिज, कूलर, वाशिंग मशीन, टीवी जैसी चीजें लोग खरीदकर रखने लगे हैं। अब ये डर नहीं होता कि बिजली कटौती की वजह से दूध फट जाएगा, अब चिंता नहीं रहती है। अब स्कूल जाने वाले बच्चे रातभर चैन से सो पाते हैं। मैं फिर कहता हूं- इलेक्शन हो या ना हो, लेकिन ये सूर्यघर और उसकी रोशनी बनी रहेगी, इस प्लांट का फायदा, सालों तक देश के परिवारों को होता रहेगा।

साथियों,

आने वाले समय में Ease of Living और Ease of Doing Business का और विस्तार होगा। देश के Youth के लिए, नारीशक्ति के लिए, Farmers के लिए, गरीब और Middle Class के लिए, हमारी सरकार लगातार काम करती रहेगी, हमारी Reform Express और अधिक गति से आगे बढ़ने वाली है। विकसित भारत का लक्ष्य पूरा करने के लिए, हम पूरी प्रतिबद्धता के साथ काम करते रहेंगे। और मैं, मेरे लिए भारत का future अगर सुनिश्चित हो गया ना, तो दुनिया के future में भी स्थिरता लाने का बहुत बड़ा काम इसी धरती से होने वाला है। इस आत्मविश्वास के साथ भारत जितना स्टेबल होगा, भारत का future जितना सुरक्षित होगा, विश्व को सुरक्षत्व का एहसास देने की ताकत यहीं से पैदा होने वाली है। इस सामर्थ्य के साथ, इसी संकल्प के साथ, मैं एक बार फिर, आज के इस कार्यक्रम में मुझे आमंत्रित करने के लिए, Economic Times की पूरी टीम का हृदय से बहुत-बहुत धन्यवाद करता हूं। वन्दे मातरम् !