ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಪ್ಘಾನಿಸ್ತಾನದ ಅಧ್ಯಕ್ಷ ಘನತೆವೆತ್ತ ಶ್ರೀ ಮೊಹಮದ್ ಅಷರಫ್ ಘನಿ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು. ಈ ಸಂಭಾಷಣೆ, ಇಬ್ಬರೂ ನಾಯಕರ ಮತ್ತು ಅವರ ಎರಡು ದೇಶಗಳ ನಡುವಿನ ಸಂಬಂಧ ನಿರೂಪಿಸುವ ಆಪ್ತ ಮತ್ತು ಸೌಹಾರ್ದತೆಯ ಗುಣವನ್ನು ಬಿಂಬಿಸಿತು.

ಪ್ರಧಾನಮಂತ್ರಿ ಮೋದಿ ಅವರು ಅಧ್ಯಕ್ಷ ಘನಿ ಅವರಿಗೆ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಫಲಿತಾಂಶದ ಅಧಿಕೃತ ಪ್ರಕಟಣೆಯ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿದರು. ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಭೀಕರ ಸವಾಲುಗಳನ್ನು ಎದುರಿಸಿ

ಚುನಾವಣೆಗಳನ್ನು ಯಶಸ್ವಿ ನಡೆಸಿದ ಮತ್ತು ನಂತರದ ಪ್ರಕ್ರಿಯೆ ಕುರಿತಂತೆ ಅಫ್ಘಾನಿಸ್ತಾನದ ಜನರಿಗೆ ಪ್ರಧಾನಮಂತ್ರಿ ಅಭಿನಂದನೆ ಸಲ್ಲಿಸಿದರು.

ಏಕೀಕೃತ, ಸಾರ್ವಭೌಮ, ಪ್ರಜಾಸತ್ತಾತ್ಮಕ, ಸಮೃದ್ಧ ಮತ್ತು ಶಾಂತಿಯುತ ಅಫ್ಘಾನಿಸ್ತಾನಕ್ಕೆ ಆಪ್ತ ಸ್ನೇಹಿತನಾಗಿ ಮತ್ತು ನೆರೆಯ ರಾಷ್ಟ್ರವಾಗಿ ಭಾರತದ ದೃಢ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಆಫ್ಘಾನಿಸ್ತಾನದಲ್ಲಿ ಆಫ್ಘನ್ ನೇತೃತ್ವದ, ಆಫ್ಘನ್ ಒಡೆತನದ ಮತ್ತು ಅಫ್ಘನ್ –ನಿಯಂತ್ರಿತ ಅಂತರ್ಗತ ಶಾಂತಿ ಪ್ರಕ್ರಿಯೆಗೆ ಭಾರತದ ತತ್ವಬದ್ಧ ಬೆಂಬಲವನ್ನು ಪುನರುಚ್ಚರಿಸಿದರು. ಆಫ್ಘಾನಿಸ್ತಾನದ ವ್ಯೂಹಾತ್ಮಕ ಪಾಲುದಾರರಾಗಿ, ಭಾರತವು ಅಭಿವೃದ್ಧಿ, ಸುರಕ್ಷತೆಯ ವರ್ಧನೆ ಮತ್ತು ನಮ್ಮ ವಲಯದಲ್ಲಿ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಆಫ್ಘಾನಿಸ್ತಾನದೊಂದಿಗೆ ಆಪ್ತವಾಗಿ ಸಹಕಾರ ಮುಂದುವರಿಸಲಿದೆ ಎಂದರು.
ಅಧ್ಯಕ್ಷ ಘನಿ ಅವರು ಆಫ್ಘಾನಿಸ್ತಾನದಲ್ಲಿನ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವಕ್ಕಾಗಿ ಬೆಂಬಲ ಮುಂದುವರಿಸಿರುವ ಪ್ರಧಾನಮಂತ್ರಿ, ಭಾರತ ಸರ್ಕಾರ ಮತ್ತು ಅದರ ಜನತೆಗೆ ಧನ್ಯವಾದ ಅರ್ಪಿಸಿದರು. ಎರಡೂ ರಾಷ್ಟ್ರಗಳ ನಡುವೆ ಸರ್ವಾಂಗೀಣ ಸಹಕಾರ ಬಲವರ್ಧನೆಯ ಆಶಯವನ್ನು ಅವರು ಒತ್ತಿ ಹೇಳಿದರು.

ಇಬ್ಬರೂ ನಾಯಕರು ಮುಂಬರುವ ಹೊಸ ವರ್ಷಕ್ಕಾಗಿ ಶುಭಾಶಯ ವಿನಿಮಯ ಮಾಡಿಕೊಂಡರು.

ಪ್ರಧಾನಮಂತ್ರಿಯವರು ಅಧ್ಯಕ್ಷ ಘನಿ ಅವರಿಗೆ ಪರಸ್ಪರರಿಗೆ ಅನುಕೂಲಕರವಾದ ಹತ್ತಿರದ ದಿನಾಂಕದಲ್ಲೇ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದರು. ಈ ಆಹ್ವಾನವನ್ನು ಅವರು ಅಂಗೀಕರಿಸಿದರು.

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Cabinet approves ₹1,570 crore ship repair facility at Vadinar, Gujarat

Media Coverage

Cabinet approves ₹1,570 crore ship repair facility at Vadinar, Gujarat
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 6 ಮೇ 2026
May 06, 2026

New India, New Pride: When Self-Reliance Meets Results — A Tribute to PM Modi