ಪ್ರಧಾನಮಂತ್ರಿ ಮಾರಿಸನ್ ಮತ್ತು ಮಾಜಿ ಪ್ರಧಾನಿ ಟೋನಿ ಅಬಾಟ್ ಅವರ ನಾಯಕತ್ವಕ್ಕೆ ಧನ್ಯವಾದ ಅರ್ಪಣೆ
“ಅತ್ಯಲ್ಪ ಅವಧಿಯಲ್ಲಿ ಇಂಡ್ ಆಸ್ ಇಸಿಟಿಎ ಸಹಿ ಹಾಕಿರುವುದು ಎರಡೂ ದೇಶಗಳ ನಡುವಿನ ಪರಸ್ಪರ ಗಾಢ ವಿಶ್ವಾಸ ಪ್ರತಿಬಿಂಬಿಸುತ್ತದೆ’’
“ಈ ಒಪ್ಪಂದದ ಆಧಾರದ ಮೇಲೆ ನಾವು ಪೂರೈಕೆ ಸರಪಳಿಗಳ ಸ್ಥಿತಿಸ್ಥಾಪಕತ್ವ ವೃದ್ಧಿ ಸಾಧ್ಯವಾಗಲಿದೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆಗೂ ಕೊಡುಗೆ ನೀಡಲಿದೆ’’
“ಈ ಒಪ್ಪಂದವು ನಮ್ಮ ನಡುವೆ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಪ್ರವಾಸಿಗರ ವಿನಿಮಯ ಸುಗಮಗೊಳಿಸುತ್ತದೆ ಮತ್ತು ಅದು ಜನರ ನಡುವಿನ ಸಂಬಂಧವನ್ನು ಮತ್ತಷ್ಟು ಬಲವರ್ಧನೆಗೊಳಿಸಲಿದೆ’’
ಮುಂಬರುವ ವಿಶ್ವಕಪ್ ಫೈನಲ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ಮಹಿಳೆಯರ ತಂಡಕ್ಕೆ ಶುಭ ಕೋರಿಕೆ

ಪ್ರಧಾನಮಂತ್ರಿ ಮಾರಿಸನ್ , 

ಭಾರತ ಮತ್ತು ಆಸ್ಟ್ರೇಲಿಯಾದ ವಾಣಿಜ್ಯ ಸಚಿವರೇ, 
ಮತ್ತು ಇಲ್ಲಿ ಸೇರಿರುವ ಉಭಯ ದೇಶಗಳ ನನ್ನೆಲ್ಲಾ ಮಿತ್ರರೇ, 

ನಮಸ್ಕಾರ!
ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಇಂದು, ಇದು ನನ್ನ ಸ್ನೇಹಿತ ಸ್ಕಾಟ್‌ ಅವರೊಂದಿಗೆ ನನ್ನ ಮೂರನೇ ಮುಖಾಮುಖಿ ಸಂವಾದವಾಗಿದೆ. ಕಳೆದ ವಾರ ವರ್ಚುವಲ್ ಶೃಂಗಸಭೆಯಲ್ಲಿ ನಾವು ಬಹಳ ಫಲಪ್ರದ ಚರ್ಚೆ ನಡೆಸಿದ್ದೇವು. ಆ  ವೇಳೆ, ನಾವು ನಮ್ಮ ತಂಡಗಳಿಗೆ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಶೀಘ್ರವಾಗಿ ಅಂತಿಮಗೊಳಿಸುವಂತೆ ಸೂಚಿಸಿದ್ದೇವೆ ಮತ್ತು ಇಂದು ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಈ ಅಸಾಧಾರಣ ಸಾಧನೆಗಾಗಿ, ನಾನು ಎರಡೂ ದೇಶಗಳ ವಾಣಿಜ್ಯ ಮಂತ್ರಿಗಳು ಮತ್ತು ಅವರ ಅಧಿಕಾರಿಗಳನ್ನು ಹೃದಯ ಪೂರ್ವಕವಾಗಿ ಅಭಿನಂದಿಸುತ್ತೇನೆ.

ನಾನು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಮತ್ತು ಪ್ರಧಾನಿ ಮಾರಿಸನ್ ಅವರ ಸದ್ಯದ ವ್ಯಾಪಾರ ಪ್ರತಿನಿಧಿಯಾಗಿರುವ ಶ್ರೀ ಟೋನಿ ಅಬ್ಬೋಟ್ ಅವರನ್ನು ವಿಶೇಷವಾಗಿ ಅಭಿನಂದಿಸಲು ಬಯಸುತ್ತೇನೆ. ಅವರ ಪ್ರಯತ್ನಗಳು ಈ ಪ್ರಕ್ರಿಯೆಗೆ ವೇಗ ನೀಡುವಲ್ಲಿ ಮಹತ್ವದ ಕೊಡುಗೆ ನೀಡಿವೆ. 

ಮಿತ್ರರೇ,


ಅತ್ಯಲ್ಪ ಅವಧಿಯಲ್ಲಿ ಅಂತಹ ಮಹತ್ವದ ಒಪ್ಪಂದದ ತೀರ್ಮಾನವು ಉಭಯ ದೇಶಗಳ ನಡುವೆ ಪರಸ್ಪರ ನಂಬಿಕೆ ಎಷ್ಟು ಗಾಡವಾಗಿದೆ ಎಂಬುದನ್ನು ತೋರುತ್ತದೆ. ನಮ್ಮ ದ್ವಿಪಕ್ಷೀಯ ಬಾಂಧವ್ಯಕ್ಕೆ ಇದು ನಿಜಕ್ಕೂ ಐತಿಹಾಸಿಕ ಕ್ಷಣವಾಗಿದೆ. ನಮ್ಮ ಆರ್ಥಿಕತೆಗಳು ಪರಸ್ಪರರ ಅಗತ್ಯಗಳನ್ನು ಈಡೇರಿಸಲು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿವೆ. ಈ ಒಪ್ಪಂದದ ಮೂಲಕ ನಾವು ಈ ಅವಕಾಶಗಳ ಸಂಪೂರ್ಣ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬ ಖಾತ್ರಿ ನನಗಿದೆ. 

ಈ ಒಪ್ಪಂದವು ನಮಗೆ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಪ್ರವಾಸಿಗರನ್ನು ವಿನಿಮಯ ಮಾಡಿಕೊಳ್ಳುವುದನ್ನು ಸುಗಮಗೊಳಿಸುತ್ತದೆ ಮತ್ತು ಈ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ – ‘ಇಂಡ್- ಆಸ್ ಇಸಿಟಿಎ’ ಯ ಪರಿಣಾಮಕಾರಿ ಮತ್ತು ಯಶಸ್ವಿ ಮಾತುಕತೆಗಾಗಿ ಎರಡು ದೇಶಗಳ ತಂಡಗಳನ್ನು ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ. 

ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕಾಗಿ ಪ್ರಧಾನ ಮಂತ್ರಿ ಮಾರಿಸನ್ ಅವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಮತ್ತು ಆಸ್ಟ್ರೇಲಿಯಾದಲ್ಲಿ ಮುಂಬರುವ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಲು ನನ್ನ ಶುಭಾಶಯಗಳು. ಮತ್ತು ನಾಳೆ ನಡೆಯಲಿರುವ ವಿಶ್ವಕಪ್ ಫೈನಲ್‌ ಗಾಗಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡಕ್ಕೆ ನನ್ನ ಶುಭಾಶಯಗಳು. 

ನಮಸ್ಕಾರ!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India on track to becoming third-largest economy by FY31: S&P report

Media Coverage

India on track to becoming third-largest economy by FY31: S&P report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 20 ಸೆಪ್ಟೆಂಬರ್ 2024
September 20, 2024

Appreciation for PM Modi’s efforts to ensure holistic development towards Viksit Bharat