ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಝೆರೋಧಾದ ಸ್ಥಾಪಕ ಮತ್ತು ಸಿಇಓ ನಿತಿನ್ ಕಾಮತ್ ಅವರ ಟ್ವೀಟ್ ಥ್ರೆಡ್ ಗೆ ಪ್ರತಿಕ್ರಿಯಿಸಿದ್ದಾರೆ, ನಿತಿನ್ ಕಾಮತ್ ಅವರು ತಮ್ಮ ಆಹಾರದಲ್ಲಿ ಸಿರಿಧಾನ್ಯಗಳನ್ನು ಸೇರಿಸಿಕೊಂಡಿರುವುದಾಗಿ ಮಾಹಿತಿ ನೀಡುವ ಟ್ವೀಟನ್ನು .ಲಗತ್ತಿಸಿದ್ದಾರೆ.
ನಿತಿನ್ ಕಾಮತ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿಯವರು;
"ಇದನ್ನು ಓದಲು ಸಂತೋಷವಾಗುತ್ತಿದೆ! ನಾವೆಲ್ಲರೂ ಶ್ರೀ ಅನ್ನವನ್ನು ನಮ್ಮ ಜೀವನದ ಒಂದು ಭಾಗವನ್ನಾಗಿ ಮಾಡೋಣ." ಎಂದು ಹೇಳಿದ್ದಾರೆ.
Good to read this! Let us all make Shree Ann a part of our lives. https://t.co/YC5h0o4Bez
— Narendra Modi (@narendramodi) February 15, 2023


