ಭುವನೇಶ್ವರದಲ್ಲಿ ಉತ್ಕರ್ಷ್ ಒಡಿಶಾ - ಮೇಕ್ ಇನ್ ಒಡಿಶಾ ಸಮಾವೇಶ 2025ನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ
ಒಡಿಶಾವನ್ನು ಭಾರತದ ಪ್ರಮುಖ ಹೂಡಿಕೆ ತಾಣ ಹಾಗೂ ಕೈಗಾರಿಕಾ ಕೇಂದ್ರವಾಗಿ ಪೂರ್ವೋದಯ ದೃಷ್ಟಿಕೋನದ ಆಂಕರ್ ಆಗಿಸುವ ಗುರಿಯನ್ನು ಹೊಂದಿರುವ ಸಮಾವೇಶ
ಡೆಹ್ರಾಡೂನ್ ನಲ್ಲಿ 38ನೇ ರಾಷ್ಟ್ರೀಯ ಕ್ರೀಡಾಕೂಟ ಉದ್ಘಾಟಿಸಲಿರುವ ಪ್ರಧಾನಮಂತ್ರಿ
ರಾಷ್ಟ್ರೀಯ ಕ್ರೀಡಾಕೂಟದ ಶೀರ್ಷಿಕೆ: ಗ್ರೀನ್ ಗೇಮ್ಸ್

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜನವರಿ 28ರಂದು ಒಡಿಶಾ ಮತ್ತು ಉತ್ತರಾಖಂಡಕ್ಕೆ ಭೇಟಿ ನೀಡಲಿದ್ದಾರೆ. ಅವರು ಬೆಳಿಗ್ಗೆ 11 ಗಂಟೆಗೆ ಭುವನೇಶ್ವರದ ಜನತಾ ಮೈದಾನದಲ್ಲಿ ಉತ್ಕರ್ಷ್ ಒಡಿಶಾ - ಮೇಕ್ ಇನ್ ಒಡಿಶಾ ಕಾನ್ಕ್ಲೇವ್ 2025ನ್ನು ಉದ್ಘಾಟಿಸಲಿದ್ದಾರೆ. ನಂತರ ಅವರು ಉತ್ತರಾಖಂಡದ ಡೆಹ್ರಾಡೂನ್ ಗೆ ಪ್ರಯಾಣ ಬೆಳೆಸಲಿದ್ದು, ಸಂಜೆ 6 ಗಂಟೆಗೆ 38ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ.

ಒಡಿಶಾದಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು ಭುವನೇಶ್ವರದಲ್ಲಿ ಉತ್ಕರ್ಷ್ ಒಡಿಶಾ – ಮೇಕ್ ಇನ್ ಒಡಿಶಾ ಸಮಾವೇಶ 2025ನ್ನು ಉದ್ಘಾಟಿಸಲಿದ್ದು, ಈ ಸಮಾವೇಶವು ಒಡಿಶಾ ಸರ್ಕಾರವು ಆಯೋಜಿಸುತ್ತಿರುವ ಪ್ರಮುಖ ಜಾಗತಿಕ ಹೂಡಿಕೆ ಶೃಂಗಸಭೆಯು ಒಡಿಶಾ ರಾಜ್ಯವನ್ನು ಪೂರ್ವೋದಯ ದೃಷ್ಟಿಕೋನದ ನಿರೂಪಕ ಎಂದು ಪ್ರತಿಬಿಂಬಿಸಲಿದ್ದು, ಭಾರತದ ಪ್ರಮುಖ ಹೂಡಿಕೆ ತಾಣ ಹಾಗೂ ಕೈಗಾರಿಕಾ ಕೇಂದ್ರವಾಗಿ ಸ್ಥಾಪಿಸುವ ಗುರಿಯನ್ನು ಹೊಂದಿದೆ.

ರೋಮಾಂಚಕ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ರಾಜ್ಯದ ಸಾಧನೆಗಳನ್ನು ಎತ್ತಿ ತೋರಿಸುವ ಮೇಕ್ ಇನ್ ಒಡಿಶಾ ವಸ್ತುಪ್ರದರ್ಶನವನ್ನೂ ಕೂಡಾ ಪ್ರಧಾನಿಯವರು ಉದ್ಘಾಟಿಸಲಿದ್ದಾರೆ. ಈ ಸಮಾವೇಶವು ಜನವರಿ 28ರಿಂದ 29ರವರೆಗೆ ಎರಡು ದಿನಗಳ ಕಾಲ ನಡೆಯಲಿದ್ದು, ಇದು ಉದ್ಯಮದ ನಾಯಕರು, ಹೂಡಿಕೆದಾರರು ಮತ್ತು ನೀತಿ ನಿರೂಪಕರಿಗೆ ಸಂಯೋಜಿತ ವೇದಿಕೆಯನ್ನು ಒದಗಿಸಿ, ಒಡಿಶಾ ರಾಜ್ಯವನ್ನು ಆದ್ಯತೆಯ ಹೂಡಿಕೆ ತಾಣವಾಗಿ ನೀಡುವ ಅವಕಾಶಗಳ ಬಗ್ಗೆ ಚರ್ಚಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಸಮಾವೇಶವು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ನಾಯಕರ ದುಂಡುಮೇಜಿನ ಸಭೆಗಳು, ವಲಯ ಅಧಿವೇಶನಗಳು, ಬಿ2ಬಿ ಸಭೆಗಳು ಮತ್ತು ನೀತಿ ಚರ್ಚೆಗಳನ್ನು ಆಯೋಜಿಸಲಿದ್ದು, ವಿಶ್ವದಾದ್ಯಂತದ ಹೂಡಿಕೆದಾರರನ್ನು ಆಕರ್ಷಿಸುವ ವೇದಿಕೆಯಾಗಿದೆ.

ಉತ್ತರಾಖಂಡದಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು ಡೆಹ್ರಾಡೂನ್ ನಲ್ಲಿ 38ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಜನವರಿ 28ರಿಂದ ಫೆಬ್ರವರಿ 14ರವರೆಗೆ ಉತ್ತರಾಖಂಡದ 8 ಜಿಲ್ಲೆಗಳ 11 ನಗರಗಳಲ್ಲಿ ಈ ಕ್ರೀಡಾಕೂಟವು ನಡೆಯಲಿದೆ. ಉತ್ತರಾಖಂಡದ ರಜತ ಮಹೋತ್ಸವದ ಸಂದರ್ಭದಲ್ಲಿ ಈ ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ.

36 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶವು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ. 17 ದಿನಗಳ ಕಾಲ 35 ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಇವುಗಳಲ್ಲಿ 33 ಕ್ರೀಡೆಗಳಿಗೆ ಪದಕಗಳನ್ನು ನೀಡಲಾಗುವುದು, ಅಲ್ಲದೆ ಎರಡು ಪ್ರದರ್ಶನ ಕ್ರೀಡೆಗಳನ್ನೂ ಆಯೋಜಿಸಲಾಗುವುದು. ಯೋಗ ಮತ್ತು ಮಲ್ಲಕಂಬವನ್ನು ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸೇರಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ದೇಶಾದ್ಯಂತ 10,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಸುಸ್ಥಿರತೆಯ ಮೇಲೆ ಗಮನವನ್ನು ಕೇಂದ್ರೀಕರಿಸಿ, ಈ ವರ್ಷದ ರಾಷ್ಟ್ರೀಯ ಕ್ರೀಡಾಕೂಟದ ಶೀರ್ಷಿಕೆಯನ್ನು "ಗ್ರೀನ್ ಗೇಮ್ಸ್" ಎಂದು ನಿರ್ಧರಿಸಲಾಗಿದೆ. ಕ್ರೀಡಾ ಅರಣ್ಯ ಎಂದು ಕರೆಯಲ್ಪಡುವ ವಿಶೇಷ ಉದ್ಯಾನವನವನ್ನು ಈ ಸ್ಥಳದಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಮತ್ತು ಅತಿಥಿಗಳು 10,000 ಕ್ಕೂ ಹೆಚ್ಚು ಸಸಿಗಳನ್ನು ನೆಡಲಿದ್ದಾರೆ. ಕ್ರೀಡಾಪಟುಗಳಿಗೆ ಪದಕಗಳು ಮತ್ತು ಪ್ರಮಾಣಪತ್ರಗಳನ್ನು ಪರಿಸರ ಸ್ನೇಹಿ ಮತ್ತು ಜೈವಿಕ ವಿಘಟನೀಯ ವಸ್ತುಗಳಿಂದ ತಯಾರಿಸಲಾಗುವುದು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Jan Dhan accounts hold Rs 2.75 lakh crore in banks: Official

Media Coverage

Jan Dhan accounts hold Rs 2.75 lakh crore in banks: Official
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 7 ಡಿಸೆಂಬರ್ 2025
December 07, 2025

National Resolve in Action: PM Modi's Policies Driving Economic Dynamism and Inclusivity