ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 19 ರಂದು ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ಪ್ರಧಾನಮಂತ್ರಿ ಅವರು ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿರುವ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಪವಿತ್ರ ದೇವಾಲಯ ಮತ್ತು ಮಹಾಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಲಿದ್ದಾರೆ. ಬೆಳಗ್ಗೆ 10:30ರ ಸುಮಾರಿಗೆ ಪ್ರಧಾನಮಂತ್ರಿ ಅವರು ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಶತಮಾನೋತ್ಸವ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಜೀವನ, ಬೋಧನೆಗಳು ಮತ್ತು ಶಾಶ್ವತ ಪರಂಪರೆಯನ್ನು ಗೌರವಿಸುವ ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿಗಳ ಗುಂಪನ್ನು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಅವರು ಸಭಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ನಂತರ, ಪ್ರಧಾನಮಂತ್ರಿ ಅವರು ತಮಿಳುನಾಡಿನ ಕೊಯಮತ್ತೂರಿಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ಅವರು ಮಧ್ಯಾಹ್ನ 1:30ರ ಸುಮಾರಿಗೆ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ 2025 ಅನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ದೇಶಾದ್ಯಂತ 9 ಕೋಟಿ ರೈತರನ್ನು ಬೆಂಬಲಿಸಲು 18,000 ಕೋಟಿ ರೂ.ಗೂ ಹೆಚ್ಚು ಮೊತ್ತದ ಪಿಎಂ-ಕಿಸಾನ್ ನ 21ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
2025ರ ನವೆಂಬರ್ 19 ರಿಂದ 21 ರವರೆಗೆ ನಡೆಯುತ್ತಿರುವ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ 2025 ಅನ್ನು ತಮಿಳುನಾಡು ನೈಸರ್ಗಿಕ ಕೃಷಿ ಮಧ್ಯಸ್ಥಗಾರರ ವೇದಿಕೆ ಆಯೋಜಿಸಿದೆ. ಶೃಂಗಸಭೆಯು ಸುಸ್ಥಿರ, ಪರಿಸರ ಸ್ನೇಹಿ ಮತ್ತು ರಾಸಾಯನಿಕ ಮುಕ್ತ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಮತ್ತು ಭಾರತದ ಕೃಷಿ ಭವಿಷ್ಯಕ್ಕೆ ಕಾರ್ಯಸಾಧ್ಯವಾದ, ಹವಾಮಾನ-ಸ್ಮಾರ್ಟ್ ಮತ್ತು ಆರ್ಥಿಕವಾಗಿ ಸುಸ್ಥಿರ ಮಾದರಿಯಾಗಿ ನೈಸರ್ಗಿಕ ಮತ್ತು ಪುನರುತ್ಪಾದಕ ಕೃಷಿಯತ್ತ ಬದಲಾವಣೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ.
ಸಾವಯವ ಒಳಹರಿವುಗಳು, ಕೃಷಿ ಸಂಸ್ಕರಣೆ, ಪರಿಸರ ಸ್ನೇಹಿ ಪ್ಯಾಕೇಜಿಂಗ್ ಮತ್ತು ದೇಶೀಯ ತಂತ್ರಜ್ಞಾನಗಳಲ್ಲಿನ ನಾವೀನ್ಯತೆಗಳನ್ನು ಪ್ರದರ್ಶಿಸುವಾಗ ರೈತ-ಉತ್ಪಾದಕ ಸಂಸ್ಥೆಗಳು ಮತ್ತು ಗ್ರಾಮೀಣ ಉದ್ಯಮಿಗಳಿಗೆ ಮಾರುಕಟ್ಟೆ ಸಂಪರ್ಕಗಳನ್ನು ಸೃಷ್ಟಿಸುವತ್ತ ಶೃಂಗಸಭೆಯು ಗಮನ ಹರಿಸುತ್ತದೆ. ಈ ಕಾರ್ಯಕ್ರಮದಲ್ಲಿ ತಮಿಳುನಾಡು, ಪುದುಚೇರಿ, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ಆಂಧ್ರಪ್ರದೇಶದ 50,000ಕ್ಕೂ ಹೆಚ್ಚು ರೈತರು, ನೈಸರ್ಗಿಕ ಕೃಷಿ ವೃತ್ತಿಪರರು, ವಿಜ್ಞಾನಿಗಳು, ಸಾವಯವ ಕೃಷಿ ಪೂರೈಕೆದಾರರು, ಮಾರಾಟಗಾರರು ಮತ್ತು ಮಧ್ಯಸ್ಥಗಾರರು ಭಾಗವಹಿಸಲಿದ್ದಾರೆ.
I look forward to being among my sisters and brothers of Andhra Pradesh tomorrow, 19th November to participate in the birth centenary celebrations of Sri Sathya Sai Baba in Puttaparthi. His life and efforts towards community service and the spiritual awakening of society remain a… pic.twitter.com/NC1V0KBmMz
— Narendra Modi (@narendramodi) November 18, 2025
In the afternoon tomorrow, 19th November, I will be in Coimbatore, Tamil Nadu to take part in the South India Natural Farming Summit. The Summit brings together many farmers, researchers and innovators working in this field. The emphasis on sustainable, eco-friendly and… pic.twitter.com/9jI2jOCxGo
— Narendra Modi (@narendramodi) November 18, 2025
రేపు, నవంబర్ 19న పుట్టపర్తిలో జరిగే శ్రీ సత్యసాయి బాబా శత జయంతి ఉత్సవాల్లో పాల్గొనడానికి ఆంధ్రప్రదేశ్లోని నా సోదర సోదరీమణులలో ఒకరిగా ఉండటానికి ఎదురుచూస్తున్నాను. సమాజ సేవ, ఆధ్యాత్మిక మేల్కొలుపు కోసం ఆయన జీవితం, చేసిన ప్రయత్నాలు తరతరాలకు మార్గదర్శకంగా ఉంటాయి. ఆయనతో… pic.twitter.com/wCycNz5S14
— Narendra Modi (@narendramodi) November 18, 2025
தென்னிந்திய இயற்கை வேளாண் மாநாட்டில் பங்கேற்பதற்காக நாளை, நவம்பர் 19 மதியம், கோயம்புத்தூர் செல்கிறேன். ஏராளமான விவசாயிகள், ஆராய்ச்சியாளர்கள் மற்றும் இந்தத் துறையுடன் தொடர்புடைய புதிய கண்டுபிடிப்பாளர்கள் மாநாட்டில் கலந்து கொள்வார்கள். நிலையான, சுற்றுச்சூழலுக்கு உகந்த, ரசாயன… pic.twitter.com/qbKIKcrxj5
— Narendra Modi (@narendramodi) November 18, 2025


