ಆಂಧ್ರಪ್ರದೇಶದ ತಿರುಪತಿಯಲ್ಲಿ ಎರಡು ದಿನಗಳ ಸಮ್ಮೇಳನವನ್ನು ಆಯೋಜಿಸಲಾಗಿದೆ
ಕಾರ್ಮಿಕ ಸಮಸ್ಯೆಗಳು ಮತ್ತು ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಏಕರೂಪತೆಯ ಸಂಯೋಜನೆಗೆ ಈ ಸಮ್ಮೇಳನವು ಸಹಾಯ ಮಾಡಲಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ ಸಚಿವರುಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ 25 ಆಗಸ್ಟ್, 2022 ರಂದು ಸಂಜೆ 4:30 ಗಂಟೆಗೆ ವಿಡಿಯೊ ಸಮಾವೇಶ ಮೂಲಕ ಭಾಷಣ ಮಾಡಲಿದ್ದಾರೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಎರಡು ದಿನಗಳ ಸಮ್ಮೇಳನವನ್ನು 25-26 ಆಗಸ್ಟ್, 2022 ರಂದು ಆಂಧ್ರಪ್ರದೇಶದ ತಿರುಪತಿಯಲ್ಲಿ ಆಯೋಜಿಸಿದೆ.

 ವಿವಿಧ ಮಹತ್ವದ ಕಾರ್ಮಿಕ ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸಲು ರಾಜ್ಯಗಳ ಸಹಕಾರಿ ಒಕ್ಕೂಟದ ಉತ್ಸಾಹದಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ಇದು ಕಾರ್ಮಿಕರ ಕಲ್ಯಾಣಕ್ಕಾಗಿ ಉತ್ತಮ ನೀತಿಗಳನ್ನು ರೂಪಿಸುವಲ್ಲಿ ಮತ್ತು ಯೋಜನೆಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಮತ್ತಷ್ಟು ಏಕರೂಪದ ಸಂಯೋಜನೆಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಸಾಮಾಜಿಕ ರಕ್ಷಣೆಯನ್ನು ಸಾರ್ವತ್ರಿಕಗೊಳಿಸಲು ವ್ಯವಸ್ಥೆಯಲ್ಲಿರುವ ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ, ಇ-ಶ್ರಮ್ ಪೋರ್ಟಲ್ ಅನ್ನು ಏಕರೂಪದಲ್ಲಿ ಸಂಯೋಜಿಸುವ ಕುರಿತು ಸಮ್ಮೇಳನವು ನಾಲ್ಕು ವಿಷಯಾಧಾರಿತ ಸಭೆಗಳನ್ನು ಹೊಂದಿರುತ್ತದೆ; ರಾಜ್ಯ ಸರ್ಕಾರಗಳು ನಡೆಸುತ್ತಿರುವ ಇ.ಎಸ್.ಐ. ಆಸ್ಪತ್ರೆಗಳ ಮೂಲಕ ವೈದ್ಯಕೀಯ ಆರೈಕೆಯನ್ನು ಸುಧಾರಿಸಲು ಮತ್ತು ಪಿ.ಎಂ.ಜೆ.ಎ.ವೈ. ನೊಂದಿಗೆ ಏಕೀಕರಣಕ್ಕಾಗಿ “ಸ್ವಾಸ್ಥ್ಯ ಸೇ ಸಮೃದ್ಧಿ”; ನಾಲ್ಕು ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ನಿಯಮಗಳ ರಚನೆ ಮತ್ತು ಅವುಗಳ ಅನುಷ್ಠಾನಕ್ಕೆ ವಿಧಾನಗಳು; “ವಿಷನ್ ಶ್ರಮೇವ ಜಯತೆ @ 2047 ಸಂಕಲ್ಪವು ಕೆಲಸದ ನ್ಯಾಯಯುತ ಮತ್ತು ಸಮಾನ ಪರಿಸ್ಥಿತಿಗಳ ಮೇಲೆ ಕೇಂದ್ರೀಕರಿಸಿದೆ, ಅಸಂಪ್ರದಾಯಿಕ (ಗಿಗ್ ಮತ್ತು ಪ್ಲಾಟ್ಫಾರ್ಮ್) ಕೆಲಸಗಾರರು ಸೇರಿದಂತೆ ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ, ಕೆಲಸದಲ್ಲಿ ಲಿಂಗ ಸಮಾನತೆ ಸೇರಿದಂತೆ ಜೊತೆಗೆ ಇರುವ ಇತರ ಎಲ್ಲಾ ಸಮಸ್ಯೆಗಳು ಚರ್ಚೆಯಾಗಲಿವೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Khichdi To Moringa Paratha: 7 Traditional Foods PM Modi Loves

Media Coverage

Khichdi To Moringa Paratha: 7 Traditional Foods PM Modi Loves
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 26 ಆಗಸ್ಟ್ 2026
August 26, 2026

Accountability Meets Ambition: Record Low NPAs, Record Defence Output, Record Digital Adoption Under the Leadership of PM Modi