ಸಂಗೀತಗಾರರೊಬ್ಬರು ಹಲವಾರು ಭಾಷೆಗಳಲ್ಲಿ ಹಾಡುವ ವಿಡಿಯೊ ಒಂದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ಇದು ‘ಏಕ್ ಭಾರತ ಶ್ರೇಷ್ಠ ಭಾರತ’ ಎಂಬ ಮನೋಭಾವದ ಶ್ರೇಷ್ಠ ದ್ಯೋತಕವಾಗಿದೆ ಎಂದು ವಿಶ್ಲೇಷಿಸಿದ್ದಾರೆ.
ಪ್ರಧಾನಮಂತ್ರಿ ಈ ರೀತಿ ಸಂದೇಶ ಟ್ವೀಟ್ ಮಾಡಿದ್ದಾರೆ:
“ಪ್ರತಿಭಾವಂತ ಶ್ರೀ ಸ್ನೇಹದೀಪ್ ಸಿಂಗ್ ಕಲ್ಸಿಯವರ ಈ ಅದ್ಭುತ ನಿರೂಪಣೆಯನ್ನು ಕಂಡೆ. ಮಾಧುರ್ಯದ ಜೊತೆಗೆ, ಇದು ‘ಏಕ್ ಭಾರತ್ ಶ್ರೇಷ್ಠ ಭಾರತ’ದ ಸಂಕಲ್ಪವನ್ನು ಅಭಿವ್ಯಕ್ತಿಸುವ ಒಂದು ದೊಡ್ಡ ರೂಪಕವಾಗಿದೆ.
Came across this amazing rendition by the talented @SnehdeepSK. In addition to the melody, it is a great manifestation of the spirit of ‘Ek Bharat Shreshtha Bharat.’ Superb! pic.twitter.com/U2MA3rWJNi
— Narendra Modi (@narendramodi) March 17, 2023


