ಯೋಗವು ಮನುಕುಲಕ್ಕೆ ಭಾರತ ನೀಡಿದ ಸಾರ್ವಕಾಲಿಕ ಕೊಡುಗೆಯಾಗಿದೆ! ಮನಸ್ಸು, ದೇಹ ಮತ್ತು ಆತ್ಮವನ್ನು ಒಂದುಗೂಡಿಸುವ ಮೂಲಕ ಇದು ಆರೋಗ್ಯಕರ ಮತ್ತು ಹೆಚ್ಚು ಸಾಮರಸ್ಯದ ಜಗತ್ತಿಗೆ ಪ್ರೇರಣೆ ನೀಡುತ್ತದೆ: ಪ್ರಧಾನಮಂತ್ರಿ
ಅಹಮದಾಬಾದ್ ಯುನೆಸ್ಕೋ ವಿಶ್ವ ಪರಂಪರೆಯ ನಗರವಾಗಿದೆ ಮತ್ತು ಭಾರತದ ಈ ಐತಿಹಾಸಿಕ ನಗರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ: ಪ್ರಧಾನಮಂತ್ರಿ
ವಿಶ್ವ ಯೋಗ ದಿನಕ್ಕೂ ಮುನ್ನ ನಡೆಯುತ್ತಿರುವ ವಿಶ್ವ ಯೋಗಾಸನ ಚಾಂಪಿಯನ್ ಶಿಪ್ ಆರೋಗ್ಯ ಮತ್ತು ಯೋಗಕ್ಷೇಮದ ಆರೋಗ್ಯ ಮತ್ತು ಯೋಗಕ್ಷೇಮದ ಡಬಲ್ ಡೋಸ್ ಅನ್ನು ತಂದಿದೆ: ಪ್ರಧಾನಮಂತ್ರಿ
ಈ ಚಾಂಪಿಯನ್ ಶಿಪ್ ಮೂಲಕ ಯೋಗಾಸನವು ಒಂದು ಸ್ಪರ್ಧಾತ್ಮಕ ಕ್ರೀಡೆಯಾಗಿ ಹೊಸ ಮನ್ನಣೆಯನ್ನು ಪಡೆಯಲಿದೆ ಮತ್ತು ಭವಿಷ್ಯದಲ್ಲಿ ಯೋಗಾಸನವನ್ನು ಒಲಿಂಪಿಕ್ಸ್ ಹಾಗೂ ಇತರ ಬಹು-ಕ್ರೀಡಾಕೂಟಗಳಲ್ಲಿ ಸೇರಿಸಲಾಗುವುದು ಎಂಬ ವಿಶ್ವಾಸ ನನಗಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್ ನಿಂದ ವಿಡಿಯೋ ಸಂದೇಶದ ಮೂಲಕ ಪ್ರಥಮ ವಿಶ್ವ ಯೋಗಾಸನ ಚಾಂಪಿಯನ್ ಶಿಪ್ ಅನ್ನು ಉದ್ಘಾಟಿಸಿದರು, ಇದು ಜಾಗತಿಕ ಕ್ರೀಡಾ ಪರಂಪರೆಯಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. "ಇಂದು, ಅಹಮದಾಬಾದ್ ನ ಮಣ್ಣಿನಿಂದ ವಿಶ್ವದ ಕ್ರೀಡಾ ಪರಂಪರೆಗೆ ಒಂದು ಹೊಸ ಅಧ್ಯಾಯ ಸೇರ್ಪಡೆಯಾಗುತ್ತಿದೆ" ಎಂದು ಶ್ರೀ ಮೋದಿ  ಹೇಳಿದರು.

ಈ ಅದ್ಭುತ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಜಗತ್ತಿನಾದ್ಯಂತದ ಆಗಮಿಸಿರುವ ಕ್ರೀಡಾಪಟುಗಳನ್ನು ಸ್ವಾಗತಿಸಿದ ಪ್ರಧಾನಮಂತ್ರಿಯವರು, ಅಹಮದಾಬಾದ್ ಈ ಪ್ರತಿಷ್ಠಿತ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. "ಅಹಮದಾಬಾದ್ ಯುನೆಸ್ಕೋ ವಿಶ್ವ ಪರಂಪರೆಯ ನಗರವಾಗಿದೆ ಮತ್ತು ಭಾರತದ ಈ ಐತಿಹಾಸಿಕ ನಗರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ" ಎಂದು ಶ್ರೀ ಮೋದಿ ನುಡಿದರು.

ಜಾಗತಿಕ ಯೋಗ ಆಚರಣೆಗಳ ಸಂಗಮವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಜೂನ್ 21 ರಂದು ವಿವಿಧ ದೇಶಗಳಲ್ಲಿ ಕಾರ್ಯಕ್ರಮಗಳೊಂದಿಗೆ ವಿಶ್ವ ಯೋಗ ದಿನವನ್ನು ಆಚರಿಸಲಾಗುವುದು ಮತ್ತು ಇದರ ಪ್ರಮುಖ ಕಾರ್ಯಕ್ರಮವನ್ನು ಭಾರತದ ಮತ್ತೊಂದು ಐತಿಹಾಸಿಕ ನಗರವಾದ ಕೋಲ್ಕತ್ತಾದಲ್ಲಿ ನಿಗದಿಪಡಿಸಲಾಗಿದೆ ಎಂದು ಹೇಳಿದರು. "ವಿಶ್ವ ಯೋಗ ದಿನಕ್ಕೂ ಮುನ್ನ ನಡೆಯುತ್ತಿರುವ ವಿಶ್ವ ಯೋಗಾಸನ ಚಾಂಪಿಯನ್ ಶಿಪ್ ಆರೋಗ್ಯ ಮತ್ತು ಯೋಗಕ್ಷೇಮದ ಡಬಲ್ ಡೋಸ್ ಅನ್ನು ತಂದಿದೆ" ಎಂದು ಶ್ರೀ ಮೋದಿ ಹೇಳಿದರು.

ಜಾಗತಿಕ ವೇದಿಕೆಯಲ್ಲಿ ಯೋಗವನ್ನು ಪ್ರತಿಷ್ಠಾಪಿಸುವಲ್ಲಿ ಭಾರತದ ಪ್ರಯಾಣವನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಸುಮಾರು ಒಂದು ದಶಕದ ಹಿಂದೆ, ಪ್ರಾಚೀನ ಭಾರತೀಯ ಸಂಪ್ರದಾಯವನ್ನು ಸಮಸ್ತ ಮನುಕುಲದ ಆರೋಗ್ಯ ಮತ್ತು ಸಾಮೂಹಿಕ ಕಲ್ಯಾಣದೊಂದಿಗೆ ಜೋಡಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಯೋಗ ದಿನವನ್ನು ಘೋಷಿಸುವಂತೆ ಭಾರತವು ವಿಶ್ವಸಂಸ್ಥೆಗೆ ಪ್ರಸ್ತಾಪವನ್ನು ಸಲ್ಲಿಸಿತ್ತು ಎಂದು ಹೇಳಿದರು. "ವಿಶ್ವಸಂಸ್ಥೆಯಲ್ಲಿ 190 ದೇಶಗಳು ಭಾರತದ ಪ್ರಸ್ತಾವನೆಯನ್ನು ಬೆಂಬಲಿಸಿದವು" ಎಂದು ಶ್ರೀ ಮೋದಿ ಹೇಳಿದರು.

ಯೋಗಕ್ಕೆ ಜಾಗತಿಕವಾಗಿ ಹೆಚ್ಚುತ್ತಿರುವ ಮನ್ನಣೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಲಕ್ಷಾಂತರ ಜನರು ಯೋಗ, ಧ್ಯಾನ ಮತ್ತು ಪ್ರಾಣಾಯಾಮವನ್ನು ತಮ್ಮ ದೈನಂದಿನ ದಿನಚರಿ ಹಾಗೂ ಜೀವನಶೈಲಿಯಲ್ಲಿ ಹೇಗೆ ಅಳವಡಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸಿದರು. ಜೀವಂತ ಸಂಪ್ರದಾಯಗಳ ವಿಕಸನೀಯ ಸ್ವರೂಪವನ್ನು ಒತ್ತಿಹೇಳಿದ ಅವರು, ವಿಶ್ವ ಯೋಗಾಸನ ಚಾಂಪಿಯನ್ ಶಿಪ್ ಯೋಗವು ಸಮಕಾಲೀನ ಪ್ರಸ್ತುತತೆಯೊಂದಿಗೆ ಪರಿವರ್ತನಾತ್ಮಕ ಹೊಸ ಹಂತಕ್ಕೆ ಪ್ರವೇಶಿಸಿರುವುದನ್ನು ಪ್ರತಿನಿಧಿಸುತ್ತದೆ ಎಂದು ಬಣ್ಣಿಸಿದರು. ಯೋಗಾಸನವನ್ನು ಒಂದು ಮಾನ್ಯತೆ ಪಡೆದ ಸ್ಪರ್ಧಾತ್ಮಕ ವಿಭಾಗವಾಗಿ ಸ್ಥಾಪಿಸುವಲ್ಲಿ ಈ ಚಾಂಪಿಯನ್ ಶಿಪ್ನ ಪ್ರಾಮುಖ್ಯತೆಯನ್ನು ವಿವರಿಸಿದ ಪ್ರಧಾನಮಂತ್ರಿಯವರು, ಪ್ರಮುಖ ಜಾಗತಿಕ ಕ್ರೀಡಾಕೂಟಗಳಲ್ಲಿ ಅದರ ಭವಿಷ್ಯದ ಸೇರ್ಪಡೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. "ಈ ಚಾಂಪಿಯನ್ ಶಿಪ್ ಮೂಲಕ ಯೋಗಾಸನವು ಸ್ಪರ್ಧಾತ್ಮಕ ಕ್ರೀಡೆಯಾಗಿ ಹೊಸ ಮನ್ನಣೆಯನ್ನು ಪಡೆಯುತ್ತದೆ ಮತ್ತು ಭವಿಷ್ಯದಲ್ಲಿ ಯೋಗಾಸನವನ್ನು ಒಲಿಂಪಿಕ್ಸ್ ಮತ್ತು ಇತರ ಬಹು-ಕ್ರೀಡಾಕೂಟಗಳಲ್ಲಿ ಸೇರಿಸಲಾಗುವುದು ಎಂದು ನನಗೆ ವಿಶ್ವಾಸವಿದೆ" ಎಂದು ಶ್ರೀ ಮೋದಿ ಹೇಳಿದರು.

ಅಹಮದಾಬಾದ್ನ ಪ್ರವರ್ತಕ ಪಾತ್ರವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಯೋಗಾಸನವನ್ನು ಮುಖ್ಯವಾಹಿನಿಯ ಜಾಗತಿಕ ಕ್ರೀಡಾ ಮನ್ನಣೆಯತ್ತ ಕೊಂಡೊಯ್ಯುವ ಪ್ರಯಾಣದಲ್ಲಿ ಈ ಉದ್ಘಾಟನಾ ಚಾಂಪಿಯನ್ ಶಿಪ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಒತ್ತಿ ಹೇಳಿದರು. ಒಂದು ಕ್ರೀಡೆಯಾಗಿ ಯೋಗದ ಬೆಳವಣಿಗೆಯಿಂದ ಉಂಟಾಗುವ ವ್ಯಾಪಕ ಆರ್ಥಿಕ ಮತ್ತು ವೃತ್ತಿಪರ ಪರಿಣಾಮಗಳನ್ನು ಒತ್ತಿಹೇಳುತ್ತಾ, ಅವರು ವಿವಿಧ ವಲಯಗಳು ಮತ್ತು ವೃತ್ತಿಗಳಲ್ಲಿ ಹೊರಹೊಮ್ಮುತ್ತಿರುವ ಅವಕಾಶಗಳ ಕುರಿತು ತಿಳಿಸಿದರು. "ಯೋಗಾಸನ ಕ್ರೀಡೆಯು ವಿಸ್ತರಿಸುತ್ತಿದ್ದಂತೆ, ಹೊಸ ಸಾಧ್ಯತೆಗಳು ಬೆಳೆಯುತ್ತವೆ, ಇದು ಕ್ರೀಡಾಪಟುಗಳು, ತರಬೇತುದಾರರು, ಕ್ರೀಡಾ ವಿಜ್ಞಾನಿಗಳು, ಸಂಶೋಧಕರು ಮತ್ತು ಈವೆಂಟ್ ಮ್ಯಾನೇಜರ್ ಗಳಿಗೆ ವೃತ್ತಿಯ  ಅವಕಾಶಗಳನ್ನು ತರುತ್ತದೆ" ಎಂದು ಶ್ರೀ ಮೋದಿ ತಿಳಿಸಿದರು.

ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ವಿಷಯವಾದ ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಎಂಬುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸಮಕಾಲೀನ ಜಾಗತಿಕ ಆರೋಗ್ಯ ಕಾಳಜಿಗಳು ಮತ್ತು ದೀರ್ಘಾಯುಷ್ಯವನ್ನು ಬಯಸುವ ಆಧುನಿಕ ಜನರಿಗೆ ಯೋಗದ ಪ್ರಸ್ತುತತೆಯನ್ನು ಉದ್ದೇಶಿಸಿ ಮಾತನಾಡಿದರು. "ದೀರ್ಘಕಾಲದವರೆಗೆ ಆರೋಗ್ಯವಾಗಿ ಮತ್ತು ಸಕ್ರಿಯವಾಗಿರಲು ಸಹಾಯ ಮಾಡುವ ಕ್ರಮಗಳನ್ನು ಹುಡುಕುತ್ತಿರುವವರಿಗೆ ಯೋಗವು ಅತ್ಯಂತ ಸೂಕ್ತವಾದ ಆಯ್ಕೆಯಾಗಿದೆ" ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು.

ಯೋಗವನ್ನು ವಿಮೋಚನೆ ನೀಡುವ ಆಧ್ಯಾತ್ಮಿಕ ಅಭ್ಯಾಸ ಮತ್ತು  ಕೈಗೆಟುಕುವ ಆರೋಗ್ಯ ರಕ್ಷಣಾ ಪರಿಹಾರ ಎಂದು ಬಣ್ಣಿಸಿದ ಶ್ರೀ ಮೋದಿ, ಅದರ ಸಾರ್ವತ್ರಿಕ ಲಭ್ಯತೆಯ ವ್ಯಾಪಕ ಸಂದೇಶವನ್ನು ತಿಳಿಸಿದರು. ಸ್ಮರಣೀಯ ಸಾರ್ವಜನಿಕ ಆರೋಗ್ಯ ಮಂತ್ರವನ್ನು ಉತ್ತೇಜಿಸುತ್ತಾ, ಅವರು ಯೋಗದ ರೋಗ ತಡೆಗಟ್ಟುವ ಶಕ್ತಿಯನ್ನು ಜಾಗತಿಕ ಅಳವಡಿಕೆಗಾಗಿ ಸರಳ, ಸ್ಮರಣೀಯ ಪದಗಳಲ್ಲಿ ಹೀಗೆ ಸಂಕ್ಷೇಪಿಸಿದರು. ‘ಪ್ರತಿದಿನದ ಯೋಗ, ಓಡಿಸುವುದು ಎಲ್ಲಾ ರೋಗʼ  ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಯೋಗವನ್ನು ದೈನಂದಿನ ಅಭ್ಯಾಸದಲ್ಲಿ ಅಳವಡಿಸಿಕೊಳ್ಳಲು ಆಯುಷ್ ಸಚಿವಾಲಯ ಇತ್ತೀಚೆಗೆ ಹಮ್ಮಿಕೊಂಡಿರುವ 'ಯೋಗ 365' ಅಭಿಯಾನವನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಈ ಆಂದೋಲನದಲ್ಲಿ ಜಾಗತಿಕವಾಗಿ ವ್ಯಾಪಕ ಪಾಲ್ಗೊಳ್ಳುವಿಕೆಗೆ ಕರೆ ನೀಡಿದರು. ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳು ತಮ್ಮ ದೇಶಗಳಿಗೆ ಹಿಂತಿರುಗಿದ  ನಂತರ ಯೋಗದ ಜಾಗತಿಕ ರಾಯಭಾರಿಗಳಾಗಬೇಕೆಂದು ಮನವಿ ಮಾಡಿದ ಪ್ರಧಾನಮಂತ್ರಿಯವರು, ಪ್ರಭಾವಿಗಳು ಮತ್ತು ಪ್ರೇರಣಾದಾಯಕ ವ್ಯಕ್ತಿಗಳೆಂದು ಅವರ ವಿಶಿಷ್ಟ ಸ್ಥಾನವನ್ನು ಉಲ್ಲೇಖಿಸಿದರು. “ನಿಮ್ಮ ದೇಶಗಳಿಗೆ ಹಿಂದಿರುಗಿದ ನಂತರ, ನೀವು ಯೋಗದ ಈ ಸಂದೇಶವನ್ನು ನಿಮ್ಮೊಂದಿಗೆ ಕೊಂಡೊಯ್ಯಬೇಕೆಂದು ನಾನು ಒತ್ತಾಯಿಸುತ್ತೇನೆ. ನಿಮ್ಮ ದೇಶಗಳಲ್ಲಿ ನೀವು 'ಯೋಗ 365' ಅಭಿಯಾನದ ರಾಯಭಾರಿಗಳಾಗಿ, ಯೋಗದ ಮೇಲಿನ ನಿಮ್ಮ ಅನುಭವ ಮತ್ತು ನಂಬಿಕೆಯ ಮೂಲಕ ಇಡೀ ಜಗತ್ತನ್ನು ಈ ಸಂದೇಶದೊಂದಿಗೆ ಜೋಡಿಸಿ”  ಎಂದು ಶ್ರೀ ಮೋದಿ ಕರೆ ನೀಡಿದರು.

ಸ್ಪರ್ಧೆಯ ಫಲಿತಾಂಶಗಳನ್ನು ಲೆಕ್ಕಿಸದೆ, ಎಲ್ಲಾ ಭಾಗವಹಿಸುವವರನ್ನು ಐತಿಹಾಸಿಕ ಕೊಡುಗೆದಾರರು ಎಂದು ಶ್ಲಾಘಿಸಿದ ಶ್ರೀ ಮೋದಿ ಅವರು, ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಉಪಸ್ಥಿತಿಯ ವಿಶೇಷ ಮಹತ್ವವನ್ನು ಒತ್ತಿ ಹೇಳಿದರು.

ಇಲ್ಲಿ ನೆರೆದಿರುವ ವಿಶ್ವದರ್ಜೆಯ ಕ್ರೀಡಾಪಟುಗಳ ಸ್ಪೂರ್ತಿದಾಯಕ ಶಕ್ತಿಯನ್ನು ಗುರುತಿಸಿದ ಅವರು, ಅವರ ಸಾಮೂಹಿಕ ಪ್ರತಿಭೆ ಮತ್ತು ಶಿಸ್ತು ಜಾಗತಿಕವಾಗಿ ಯುವಜನರಿಗೆ ದಾರಿದೀಪವಾಗಿದೆ ಎಂದು ಶ್ಲಾಘಿಸಿದರು. "ನಿಮ್ಮ ಬದ್ಧತೆಯು ಪ್ರಪಂಚದಾದ್ಯಂತದ ಯುವಕರಿಗೆ ಪ್ರೇರಣೆ ನೀಡುತ್ತದೆ" ಎಂದು ಅವರು ಹೇಳಿದರು.

ಚಾಂಪಿಯನ್ ಶಿಪ್ ಅನ್ನು ಅಧಿಕೃತವಾಗಿ ಉದ್ಘಾಟಿಸಿದ ಶ್ರೀ ಮೋದಿ ಅವರು, “ಇದರೊಂದಿಗೆ, ಪ್ರಥಮ ವಿಶ್ವ ಯೋಗಾಸನ ಚಾಂಪಿಯನ್ಶಿಪ್ 2026’ ಅಧಿಕೃತವಾಗಿ ಆರಂಭವಾಗಿದೆ ಎಂದು ನಾನು ಈ ಮೂಲಕ ಘೋಷಿಸುತ್ತೇನೆ." ಎಂದು ಘೋಷಿಸಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Auto industry contributes over ₹22.75 lakh crore to Indian economy: SIAM

Media Coverage

Auto industry contributes over ₹22.75 lakh crore to Indian economy: SIAM
NM on the go

Nm on the go

Always be the first to hear from the PM. Get the App Now!
...
Prime Minister congratulates Italian PM Giorgia Meloni on becoming the longest continuously serving Prime Minister in Italy's postwar history
September 04, 2026

Prime Minister Shri Narendra Modi today congratulated Italian Prime Minister Giorgia Meloni on becoming the longest continuously serving Prime Minister in Italy's postwar history.

The Prime Minister stated that this milestone is a reflection of the trust and confidence of the Italian people in her leadership. He further noted that her friendship has been instrumental in strengthening the India-Italy Special Strategic Partnership, adding that he looks forward to continuing their close cooperation to build a prosperous future for the people of both countries. He extended his best wishes for her continued success in the years ahead.

In a post on X, the Prime Minister shared:

"Congratulations to my friend Prime Minister Meloni on becoming the longest continuously serving Prime Minister in Italy's postwar history. This milestone is a reflection of the trust and confidence of the Italian people in her leadership.

Her friendship has also been instrumental in strengthening the India-Italy Special Strategic
Partnership and I look forward to continuing our close cooperation to build a prosperous future for the people of our countries.

My best wishes for her continued success in the years ahead.

@GiorgiaMeloni"