ಶೇರ್
 
Comments
“ಕಳೆದ 6-7 ವರ್ಷಗಳಲ್ಲಿ ಭ್ರಷ್ಟಾಚಾರ ನಿಯಂತ್ರಣದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ವಿಶ್ವಾಸ ಮೂಡಿಸುವಲ್ಲಿ ಸರ್ಕಾರ ಯಶಸ್ವಿ”
“ಇಂದು ಭ್ರಷ್ಟಾಚಾರದ ವಿರುದ್ಧ ದಾಳಿ ಮಾಡಲು ರಾಜಕೀಯ ಇಚ್ಛಾಶಕ್ತಿ ಇದೆ ಮತ್ತು ಆಡಳಿತ ಮಟ್ಟದಲ್ಲಿ ನಿರಂತರ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ
“ನವಭಾರತ ಹೊಸತನಗಳು, ಆರಂಭಗಳು ಮತ್ತು ಜಾರಿ; ನವ ಭಾರತವು ಭ್ರಷ್ಟಾಚಾರವು ವ್ಯವಸ್ಥೆಯ ಭಾಗವಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ, ಅದು ತನ್ನ ವ್ಯವಸ್ಥೆಗಳನ್ನು ಪಾರದರ್ಶಕ, ಪರಿಣಾಮಕಾರಿ ಪ್ರಕ್ರಿಯೆ ಮತ್ತು ಸುಗಮವಾಗಿರಬೇಕೆಂದು ಬಯಸುತ್ತದೆ”
ಸರ್ಕಾರದ ಆಡಳಿತದಲ್ಲಿ ನಿಯಮಗಳನ್ನು ಸರಳೀಕರಣಗೊಳಿಸುವ ಮೂಲಕ ಸಮರೋಪಾದಿಯಲ್ಲಿ ಸಾಮಾನ್ಯ ಜನರ ಜೀವನ ಸುಗಮಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಮುಖಾಮುಖಿ ತಪ್ಪಿಸಲು ಸರ್ಕಾರದಿಂದ ಹಲವು ಕ್ರಮ
ವಿಶ್ವಾಸಾರ್ಹ ವಿಧಾನ ಮತ್ತು ತಂತ್ರಜ್ಞಾನ ಅಳವಡಿಕೆಯಿಂದ ಆಡಳಿತದಲ್ಲಿ ಪರಿಣಾಮಕಾರಿ ಬಲವರ್ಧನೆ ಮತ್ತು ವ್ಯಾಪಾರಕ್ಕೆ ಸುಗಮ ವಾತಾವರಣ ನಿರ್ಮಾಣ
“ತಂತ್ರಜ್ಞಾನ ಮತ್ತು ಜಾಗರೂಕತೆಯ ಜೊತೆಗೆ ಸರಳತೆ, ಸ್ಪಷ್ಟತೆ ಮತ್ತು ಪ್ರಕ್ರಿಯೆಗಳಲ್ಲಿನ ಪಾರದರ್ಶಕತೆ ತಡೆಗಟ್ಟುವ ಜಾಗರೂಕತೆಗೆ ಬಹಳ ದೂರ ಹೋಗುತ್ತದೆ: ಇದು ನಮ್ಮ ಕೆಲಸ ಸರಳಗೊಳಿಸುತ್ತದೆ ಮತ್ತು ರಾಷ್ಟ್ರದ ಸಂಪನ್ಮೂಲ ಉಳಿಸುತ್ತದೆ”
“ದೇಶ ಮತ್ತು ದೇಶವಾಸಿಗಳನ್ನು ಮೋಸ ಮಾಡುವವರಿಗೆ ಎಲ್ಲಿಯೂ ಸುರಕ್ಷಿತ ತಾಣವಿಲ್ಲ ಎಂದು ಖಚಿತಪಡಿಸಿ
ಸಿವಿಸಿ ಮತ್ತು ಸಿಬಿಐ ಜಂಟಿ ಸಮಾವೇಶ ಉದ್ದೇಶಿಸಿ ಪ್ರಧಾನಮಂತ್ರಿ ವಿಡಿಯೋ ಸಂದೇಶ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿವಿಸಿ ಮತ್ತು ಸಿಬಿಐನ ಜಂಟಿ ಸಮಾವೇಶವನ್ನು ಉದ್ದೇಶಿಸಿ ವಿಡಿಯೋ ಸಂದೇಶ ನೀಡಿದರು. ಈ ಕಾರ್ಯಕ್ರಮ ಗುಜರಾತ್ ನ ಕೆವಾಡಿಯಾದಲ್ಲಿ ನಡೆಯಿತು.

ಸರ್ದಾರ್ ಪಟೇಲ್ ಅವರಿಗೆ ಮೀಸಲಾದ ಕೆವಾಡಿಯಾ ಸ್ಥಳದಲ್ಲಿ ನಡೆಯುತ್ತಿರುವ ಈ ಸಮಾವೇಶದಲ್ಲಿ ಸಮಾಲೋಚನೆ ನಡೆಯುತ್ತಿದೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಪಟೇಲ್ ಅವರು ಭಾರತದ ಪ್ರಗತಿ, ಸಾರ್ವಜನಿಕ ಒಳಿತು ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಆಡಳಿತಕ್ಕೆ ಅಗ್ರ ಆದ್ಯತೆ  ನೀಡಿದ್ದರು ಎಂದರು. “ಅಮೃತ ಮಹೋತ್ಸವದ ಈ ಕಾಲಘಟ್ಟದಲ್ಲಿ ಭಾರತ ಇಂದು ತನ್ನ ಭವ್ಯ ಗುರಿಗಳನ್ನು ಸಾಧಿಸುವತ್ತ ಮುನ್ನಡೆದಿದೆ. ಇಂದು ನಾವು ಜನಪರ ಮತ್ತು ಸಕ್ರಿಯ ಆಡಳಿತದ ಬಲವರ್ಧನೆಗೆ ಬದ್ಧವಾಗಿದ್ದೇವೆ. ನಿಮ್ಮ ಕಾರ್ಯ ಆಧಾರಿತ ಪರಿಶ್ರಮವು ಸರ್ದಾರ್ ಸಾಹೇಬ್ ಅವರ ಆದರ್ಶಗಳಿಗೆ ಬಲ ತುಂಬುತ್ತದೆ”ಎಂದು ಪ್ರಧಾನಮಂತ್ರಿ ಸಮಾವೇಶದಲ್ಲಿ ಭಾಗವಹಿಸಿದ್ದವರಿಗೆ ಹೇಳಿದರು.

ರಾಷ್ಟ್ರದ ಹಾದಿಯಲ್ಲಿನ  ಎಲ್ಲ ಹಂತಗಳಲ್ಲಿ ಭ್ರಷ್ಟಾಚಾರವನ್ನು ನಿಷೇಧಿಸಲು ಸಿಬಿಐ ಹಾಗೂ ಸಿವಿಸಿ ಅಧಿಕಾರಿಗಳು ತಮ್ಮನ್ನು ತಾವು ಮರುಸಮರ್ಪಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಕರೆ ನೀಡಿದರು. ಭ್ರಷ್ಟಾಚಾರ ಜನರ ಹಕ್ಕುಗಳನ್ನು ಕಸಿದುಕೊಳ್ಳಲಿದೆ ಮತ್ತು ಸರ್ವರಿಗೂ ನ್ಯಾಯದ ಅನ್ವೇಷಣೆಗ ಅಡ್ಡಿಪಡಿಸುತ್ತದೆ ಮತ್ತು ರಾಷ್ಟ್ರದ ಪ್ರಗತಿ ಮತ್ತು ರಾಷ್ಟ್ರದ ಸಾಮೂಹಿಕ ಶಕ್ತಿಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು.

ಕಳೆದ 6-7 ವರ್ಷಗಳಲ್ಲಿ ಸರ್ಕಾರ ಭ್ರಷ್ಟಾಚಾರ ನಿಯಂತ್ರಣ ವಿಚಾರದಲ್ಲಿ ಸಾಧ್ಯವಾದಷ್ಟು ವಿಶ್ವಾಸವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು ಯಾವುದೇ ಮಧ್ಯವರ್ತಿಗಳು ಮತ್ತು ಲಂಚವಿಲ್ಲದೆ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಬಹುದು ಎಂಬ ವಿಶ್ವಾಸ ಜನರಲ್ಲಿ ಮೂಡಿದೆ ಎಂದು ಹೇಳಿದರು. ಈಗ ಜನರು ಭ್ರಷ್ಟಾಚಾರಿಗಳು ಎಲ್ಲೆ ಹೋದರೂ, ಎಷ್ಟೇ ಬಲಶಾಲಿಯಾಗಿದ್ದರೂ ಬಿಡುವುದಿಲ್ಲ ಎಂದು ಭಾವಿಸುತ್ತಾರೆ.  “ಹಿಂದೆ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯಲ್ಲಿ ರಾಜಕೀಯ ಮತ್ತು ಆಡಳಿತ ಬದ್ಧತೆ ಎರಡೂ ಕೊರತೆ ಇತ್ತು. ಇಂದು ಭ್ರಷ್ಟಾಚಾರದ ವಿರುದ್ಧ ದಾಳಿ ಮಾಡಲು ಮತ್ತು ಆಡಳಿತ ಮಟ್ಟದಲ್ಲಿ ನಿರಂತರ ಸುಧಾರಣೆಗಳನ್ನು ಕೈಗೊಳ್ಳುವ ರಾಜಕೀಯ ಬದ್ಧತೆ ಎರಡೂ ಇದೆ” ಎಂದು ಅವರು ಹೇಳಿದರು. ಬದಲಾಗುತ್ತಿರುವ ಭಾರತದ ಕುರಿತು ಮಾತನಾಡಿದ ಶ್ರೀ ನರೇಂದ್ರ ಮೋದಿ ಅವರು, ಇಂದು 21ನೇ ಶತಮಾನದ ಭಾರತ, ಆಧುನಿಕ ಚಿಂತನೆಯೊಂದಿಗೆ ಮಾನವೀಯತೆಯ ಲಾಭಕ್ಕಾಗಿ ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಒತ್ತು ನೀಡಿದೆ. ಹೊಸ ಭಾರತ ಆವಿಷ್ಕಾರಗಳು,  ಉಪಕ್ರಮಗಳು, ಆರಂಭಗಳು ಮತ್ತು ಅನುಷ್ಠಾನಗಳು; ನವಭಾರತ ಭ್ರಷ್ಟಾಚಾರ ವ್ಯವಸ್ಥೆಯ ಒಂದು ಭಾಗವಾಗಿದೆ ಎಂಬುದನ್ನು ಇನ್ನೂ ಸಹಿಸಿಕೊಳ್ಳಲು ಸಿದ್ಧವಿಲ್ಲ. ಅದು ಪಾರದರ್ಶಕ ವ್ಯವಸ್ಥೆ, ಪರಿಣಾಮಕಾರಿ ಪ್ರಕ್ರಿಯೆ ಮತ್ತು ಸುಗಮ ಆಡಳಿತವನ್ನು ಬಯಸುತ್ತದೆ ಎಂದು ಹೇಳಿದರು.

ಗರಿಷ್ಠ ನಿಯಂತ್ರಣ ಮತ್ತು ಕನಿಷ್ಠ ಹಾನಿಯಿಂದ ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತ ನಿಟ್ಟಿನಲ್ಲಿ ಸರ್ಕಾರದ ಪಯಣವನ್ನು ವಿವರಿಸಿದ ಪ್ರಧಾನಮಂತ್ರಿ ಅವರು, ಸರ್ಕಾರದ ವ್ಯವಸ್ಥೆಯಲ್ಲಿ ಸರಳೀಕರಣ ವಿಧಾನದ ಮೂಲಕ ಸಾಮಾನ್ಯ ಜನರು, ಸರ್ಕಾರಿ ಅಧಿಕಾರಿಗಳೊಂದಿಗೆ ಮುಖಾಮುಖಿಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಪ್ರಧಾನಮಂತ್ರಿ ಅವರು ತಮ್ಮ ಸರ್ಕಾರ ಹೇಗೆ ಪ್ರಜೆಗಳಲ್ಲಿ ವಿಶ್ವಾಸ ವೃದ್ಧಿ ಮತ್ತು ತಂತ್ರಜ್ಞಾನ ಅಳವಡಿಕೆಗೆ ಒತ್ತು ನೀಡಿದೆ ಎಂದು ವಿವರಿಸಿದರು. ತಮ್ಮ ಸರ್ಕಾರ ಜನತೆಗೆ ಎಂದೂ ಅಪನಂಬಿಕೆ ಹುಟ್ಟಿಸಿಲ್ಲ ಎಂದು ಹೇಳಿದ ಅವರು, ಜನನ ಪ್ರಮಾಣ ಪತ್ರ, ಪಿಂಚಣಿಗಾಗಿ ಜೀವಂತ ಪ್ರಮಾಣಪತ್ರ ಪಡೆಯುವುದು ಸೇರಿದಂತೆ ದಾಖಲೆಗಳ ವಿತರಣೆ ಮತ್ತು ಪರಿಶೀಲನೆಯಲ್ಲಿ ಹಲವು ಹಂತಗಳನ್ನು ತೆಗೆದುಹಾಕಿ, ಮಧ್ಯವರ್ತಿಗಳಿಲ್ಲದೆ ತಂತ್ರಜ್ಞಾನದ ಸಹಾಯದಿಂದ ಸೇವೆಯನ್ನು ಒದಗಿಸಲಾಗುತ್ತಿದೆ. ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೇಮಕಾತಿಯಲ್ಲಿ ಸಂದರ್ಶನಗಳನ್ನು ರದ್ದುಗೊಳಿಸುವಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅನಿಲ ಸಿಲಿಂಡರ್ ವಿತರಣೆಯಿಂದ ತೆರಿಗೆ  ಫೈಲಿಂಗ್ ವರೆಗೆ ಭ್ರಷ್ಟಾಚಾರವನ್ನು ತಗ್ಗಿಸಲು ಹಲವು ಸೇವೆಗಳಲ್ಲಿ ಮುಖಾಮುಖಿ ರಹಿತ ಮತ್ತು ಆನ್ ಲೈನ್ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗಿದೆ ಎಂದರು. 

ವಿಶ್ವಾಸ ಮತ್ತು ತಂತ್ರಜ್ಞಾನದ ಕಾರ್ಯ ವಿಧಾನ, ಪರಿಣಾಮಕಾರಿ ಆಡಳಿತ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಿದೆ ಮತ್ತು ವ್ಯಾಪಾರಕ್ಕೆ ಸುಲಭ ವಾತಾವರಣವನ್ನು ನಿರ್ಮಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವ್ಯಾಪಾರಕ್ಕೆ ಅಗತ್ಯವಾದ ಅನಗತ್ಯ ಹಾಗೂ ತುಂಬಾ ಹಿಂದಿನ ನಿಯಮಗಳ ಪಾಲನೆ ಮತ್ತು ಅನುಮತಿಗಳನ್ನು ತೆಗೆದು ಹಾಕಲಾಗಿದೆ ಮತ್ತು ಸದ್ಯದ ಸವಾಲುಗಳಿಗೆ ಅನುಗುಣವಾಗಿ ಹಲವು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎಂದರು. ಇನ್ನೂ ಹಲವು ನಿಯಮಗಳ ಪಾಲನೆಯನ್ನು ತೆಗೆದು ಹಾಕಲು ಉದ್ದೇಶಿಸಲಾಗಿದೆ ಎಂದ ಅವರು, ಬಹುತೇಕ ನಿಯಮಗಳ ಪಾಲನೆ ಮತ್ತು ಅನುಮತಿಗಳನ್ನು ಮುಖಾಮುಖಿಗೊಳಿಸಲಾಗಿದೆ. ಸ್ವಯಂ ಘೋಷಣೆ ಮತ್ತು ಸ್ವಯಂ ಮೌಲ್ಯಮಾಪನ ಪದ್ಧತಿಗಳನ್ನು ಉತ್ತೇಜಿಸಲಾಗುತ್ತಿದೆ ಎಂದರು. ಜಿಇಎಂ- ಸರ್ಕಾರದ ಇ-ಮಾರುಕಟ್ಟೆ ತಾಣ ಇ-ಟೆಂಡರಿಂಗ್ ವಿಧಾನದಲ್ಲಿ ಪಾರದರ್ಶಕತೆ ತಂದಿದೆ. ಡಿಜಿಟಲ್ ಹೆಜ್ಜೆ ಗುರುತುಗಳು ತನಿಖೆಯನ್ನು ಸುಗಮಗೊಳಿಸಿದೆ. ಅಂತೆಯೇ ಪಿಎಂ-ಗತಿಶಕ್ತಿ ರಾಷ್ಟ್ರೀಯ ಕ್ರಿಯಾ ಯೋಜನೆ ನಿರ್ಧಾರ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಹಲವು ಅಡೆತಡೆಗಳನ್ನು ನಿವಾರಿಸಲಿದೆ. ಈ ವಿಶ್ವಾಸ ಮತ್ತು ತಂತ್ರಜ್ಞಾನದ ಯುಗದಲ್ಲಿ ಸಿವಿಸಿ, ಸಿಬಿಐನಂತಹ ಸಂಸ್ಥೆಗಳು ಮತ್ತು ಅಧಿಕಾರಿಗಳ ಮೇಲೆ ದೇಶ ವಿಶ್ವಾಸವಿಡುವುದು ಅತ್ಯಂತ ನಿರ್ಣಾಯಕವಾಗಿದೆ ಎಂದರು. “ನಾವು ಸದಾ ರಾಷ್ಟ್ರ ಮೊದಲು ಎಂಬ ಧ್ಯೇಯವನ್ನು ಗಮನದಲ್ಲಿಟ್ಟುಕೊಂಡು ಕಾರ್ಯೋನ್ಮುಖವಾಗಬೇಕು. ಸಾರ್ವಜನಿಕ ಕಲ್ಯಾಣ ಮತ್ತು ಸಾರ್ವಜನಿಕ ಕಾಳಜಿಯನ್ನು ಸದಾ ನಮ್ಮ ಕೆಲಸದ ಕೇಂದ್ರ ಬಿಂದುವಾಗಿ ಮಾಡಿಕೊಳ್ಳಬೇಕು” ಎಂದು ಅವರು ಹೇಳಿದರು. ಈ ಮಾನದಂಡಗಳನ್ನು ಪೂರೈಸುವ ಅಂತಹ ‘ಕರ್ಮ ಯೋಗಿಗಳ’ ಕ್ರಿಯೆಗಳನ್ನು ತಾನು ಸದಾ ಬೆಂಬಲಿಸುತ್ತೇನೆ ಎಂದರು.

‘ವಿಚಕ್ಷಣಾ ಮುನ್ನೆಚ್ಚರಿಕೆ’ ಕುರಿತಂತೆ ಪ್ರಧಾನಮಂತ್ರಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವಿಚಕ್ಷಣಾ ಮುಂಚಿತವಾಗಿಯೇ ಜಾಗರೂಕತೆ ವಹಿಸುವುದರಿಂದ ಅದನ್ನು ಸಾಧಿಸಬಹುದಾಗಿದೆ ಮತ್ತು ಅದನ್ನು ತಂತ್ರಜ್ಞಾನ ಹಾಗೂ ಅನುಭವದಿಂದ ಬಲವರ್ಧನೆಗೊಳಿಸಬಹುದಾಗಿದೆ. ತಂತ್ರಜ್ಞಾನ ಮತ್ತು ಜಾಗರೂಕತೆಯ ಜತೆಗೆ ಸರಳತೆ, ಸ್ಪಷ್ಟತೆ ಮತ್ತು ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ತಡೆಗಟ್ಟುವ ಜಾಗರೂಕತೆ ನಿಟ್ಟಿನಲ್ಲಿ ಬಹುದೂರ ಕ್ರಮಿಸಬೇಕಾಗಿದೆ.  ಇದು ನಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ ಮತ್ತು ರಾಷ್ಟ್ರದ ಸಂಪನ್ಮೂಲವನ್ನು ಉಳಿಸುತ್ತದೆ ಎಂದರು.

ಅಧಿಕಾರಿಗಳು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯಬೇಕಾಗಿಲ್ಲ,  ದೇಶ ಮತ್ತು ದೇಶವಾಸಿಗಳನ್ನು ಮೋಸ ಮಾಡುವವರಿಗೆ ಇದು ಸುರಕ್ಷಿತ ತಾಣವಲ್ಲ ಎಂಬುದನ್ನು ಖಾತ್ರಿಪಡಿಸಬೇಕಿದೆ ಎಂದು ಹೇಳಿದರು. ಬಡವರ ಮನಸ್ಸಿನಲ್ಲಿ ವ್ಯವಸ್ಥೆಯ ಬಗೆಗೆ ಇರುವ ಭಯವನ್ನು ದೂರಮಾಡಬೇಕಿದೆ ಎಂದು ಅವರು ಹೇಳಿದರು. ಸೈಬರ್ ವಂಚನೆ ಮತ್ತು ತಾಂತ್ರಿಕ ಸವಾಲುಗಳ ಕುರಿತಂತೆ ವ್ಯಾಪಕ ಸಮಾಲೋಚನೆಗಳು ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು.

ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಕಾನೂನು ಮತ್ತು ನಿಯಮಗಳ ಸರಳೀಕರಣಕ್ಕೆ ಕರೆ ನೀಡಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ನವಭಾರತ ನಿರ್ಮಾಣ ನಿಟ್ಟಿನಲ್ಲಿ ಎದುರಾಗುವ ಅಡೆತಡೆಗಳನ್ನು ಸಿವಿಸಿ ಮತ್ತು ಸಿಬಿಐ ಹಾಗೂ ಇತರ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳು ಹೋಗಲಾಡಿಸಬೇಕು ಎಂದು ಕರೆ ನೀಡಿದರು. “ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ನವಭಾರತದಲ್ಲಿ ನೀವು ಬಲವರ್ಧನೆಗೊಳಿಸುವ ಅಗತ್ಯವಿದೆ. ಬಡವರು ವ್ಯವಸ್ಥೆಗೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಮತ್ತು ಭ್ರಷ್ಟಾಚಾರವನ್ನು ವ್ಯವಸ್ಥೆಯಿಂದ ದೂರ ಮಾಡುವ ನಿಟ್ಟಿನಲ್ಲಿ ಕಾನೂನುಗಳನ್ನು ನೀವು ಜಾರಿಗೊಳಿಸುವ ಅಗತ್ಯವಿದೆ” ಎಂದು ಹೇಳಿ  ಪ್ರಧಾಮಂತ್ರಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಿ.
21 Exclusive Photos of PM Modi from 2021
Explore More
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಧಾಮ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
India's forex reserves up by $2.229 billion to $634.965 billion

Media Coverage

India's forex reserves up by $2.229 billion to $634.965 billion
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಜನವರಿ 2022
January 21, 2022
ಶೇರ್
 
Comments

Citizens salute Netaji Subhash Chandra Bose for his contribution towards the freedom of India and appreciate PM Modi for honoring him.

India shows strong support and belief in the economic reforms of the government.