ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿವಿಧ ಜನಪರ ಯೋಜನೆಗಳು ಗರಿಷ್ಠ ಸಂಖ್ಯೆಯ ನಾಗರಿಕರನ್ನು ತಲುಪುವುದನ್ನು ಖಾತರಿಪಡಿಸಿಕೊಳ್ಳುತ್ತಾ ಕಲ್ಯಾಣ ಆಧಾರಿತ ಅಭಿವೃದ್ಧಿಗೆ ಸರ್ಕಾರದ ಅಚಲ ಬದ್ಧತೆಯನ್ನು ಇಂದು ಪುನರುಚ್ಚರಿಸಿದ್ದಾರೆ. ಈ ಉಪಕ್ರಮಗಳು ಹೆಚ್ಚು ಹೆಚ್ಚು ಪರಿಣಾಮಕಾರಿಯಾಗುತ್ತಿದೆ ಮತ್ತು ಹೆಚ್ಚು ಹೆಚ್ಚು ಜನರನ್ನು ತಲುಪುತ್ತಿವೆ ಎಂದು ಅವರು ಶ್ಲಾಘಿಸಿದ್ದಾರೆ.
ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಅವರ ಎಕ್ಸ್ ಪೋಸ್ಟ್‌ಗೆ ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ:
"ನಮ್ಮ ವಿವಿಧ ಜನಪರ ಯೋಜನೆಗಳು ಗರಿಷ್ಠ ಸಂಖ್ಯೆಯ ಜನರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಮತ್ತು ಇದು ಕಲ್ಯಾಣ ಆಧಾರಿತ ಅಭಿವೃದ್ಧಿಯ ಕಡೆಗೆ ನಮ್ಮ ಬದ್ಧತೆಯ ಸಂಕೇತವಾಗಿದೆ. ಇದು ಶ್ಲಾಘನೀಯ ಹೆಚ್ಚಳವಾಗಿದೆ.”
This is a commendable rise, indicating our commitment towards welfare-driven development and ensuring our various pro-people schemes reach maximum number of people. https://t.co/pxVNxXf51k
— Narendra Modi (@narendramodi) June 11, 2025