ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹಾಂಗ್ ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ ನ ಪುರುಷರ ಶಾಟ್ ಪುಟ್ ನಲ್ಲಿ ಚಿನ್ನ ಗೆದ್ದ ತಜಿಂದರ್ ಪಾಲ್ ಸಿಂಗ್ ತೂರ್ ಅವರನ್ನು ಅಭಿನಂದಿಸಿದರು.
ಎಕ್ಸ್ ಖಾತೆಯಲ್ಲಿ ಈ ಸಂಬಂಧ ಹಂಚಿಕೊಂಡಿರುವ ಪ್ರಧಾನಮಂತ್ರಿ ಅವರು ಹೀಗೆ ಹೇಳಿದರು;
"ಅಸಾಧಾರಣ @Tajinder_Singh3 ಅವರ ಅತ್ಯುತ್ತಮ ಸಾಧನೆಯಾಗಿದೆ.
ಏಷ್ಯನ್ ಗೇಮ್ಸ್ ನಲ್ಲಿ ಶಾಟ್ ಪುಟ್ ಸ್ಪರ್ಧೆಯಲ್ಲಿ ಸತತ ಚಿನ್ನದ ಪದಕ ಗೆದ್ದಿರುವುದಕ್ಕೆ ಅಭಿನಂದನೆಗಳು. ಅವರ ಪ್ರದರ್ಶನವು ಅಸಾಧಾರಣವಾಗಿದೆ, ನಮ್ಮೆಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಮುಂದಿನ ಪ್ರಯತ್ನಗಳಿಗೆ ಶುಭಾ ಹಾರೈಕೆಗಳು" ಎಂದಿದ್ದಾರೆ
The phenomenal @Tajinder_Singh3 at his best.
— Narendra Modi (@narendramodi) October 1, 2023
Congratulations on a consecutive Gold Medal in the Shot Put event at the Asian Games. His performance is exceptional, leaving us all spellbound. All the best for the endeavours ahead. pic.twitter.com/cdtmomGgbM


