ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಜಯಂತಿ ಅಂಗವಾಗಿ ಇಂದು ಅವರಿಗೆ ಗೌರವ ನಮನ ಸಲ್ಲಿಸಿದರು.
ಡಾ. ಮುಖರ್ಜಿ ಅವರ ಅಪಾರ ಕೊಡುಗೆಗಳನ್ನು ಸ್ಮರಿಸಿರುವ ಶ್ರೀ ಮೋದಿ ಅವರು, ದೇಶದ ಗೌರವ, ಘನತೆ ಮತ್ತು ಗರಿಮೆಯನ್ನು ರಕ್ಷಿಸಲು ಡಾ.ಮುಖರ್ಜಿ ಅವರು ತಮ್ಮ ಪ್ರಾಣ ತ್ಯಾಗ ಮಾಡಿದರು. ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಅವರ ಆದರ್ಶಗಳು ಮತ್ತು ತತ್ವಗಳು ಅಮೂಲ್ಯವಾಗಿವೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
"ರಾಷ್ಟ್ರದ ಅಮರ ಪುತ್ರ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜಯಂತಿಯಂದು ಅವರಿಗೆ ಮನಃಪೂರ್ವಕ ನಮನಗಳು. ದೇಶದ ಗೌರವ, ಹಿರಿಮೆ ಮತ್ತು ಗರಿಮೆಯನ್ನು ರಕ್ಷಿಸಲು ಅವರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತ ನಿರ್ಮಿಸುವಲ್ಲಿ ಅವರ ಆದರ್ಶಗಳು ಮತ್ತು ತತ್ವಗಳು ಅಮೂಲ್ಯವಾಗಿವೆ."
राष्ट्र के अमर सपूत डॉ. श्यामा प्रसाद मुखर्जी को उनकी जन्म-जयंती पर भावभीनी श्रद्धांजलि। देश की आन-बान और शान की रक्षा के लिए उन्होंने अपने प्राण न्योछावर कर दिए। उनके आदर्श और सिद्धांत विकसित और आत्मनिर्भर भारत के निर्माण में बहुमूल्य हैं। pic.twitter.com/7RzeKDh8m6
— Narendra Modi (@narendramodi) July 6, 2025


