ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಕೊಲಂಬೋ ಸಮೀಪದ ಶ್ರೀ ಜಯವರ್ಧನಪುರ ಕೋಟೆಯಲ್ಲಿರುವ 'ಭಾರತೀಯ ಶಾಂತಿಪಾಲನಾ ಪಡೆ (ಐಪಿಕೆಎಫ್) ಸ್ಮಾರಕ'ಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.
ಭಾರತೀಯ ಶಾಂತಿಪಾಲನಾ ಪಡೆ ಸ್ಮಾರಕವು ಶ್ರೀಲಂಕಾದ ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ಭಾರತೀಯ ಶಾಂತಿಪಾಲನಾ ಪಡೆಯ ಸೈನಿಕರನ್ನು ಸ್ಮರಿಸುತ್ತದೆ.


