ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರಾಟಿಸ್ಲಾವಾದ ಅಧ್ಯಕ್ಷರ ಭವನದಲ್ಲಿ ಸ್ಲೋವಾಕ್ ಗಣರಾಜ್ಯದ ಅಧ್ಯಕ್ಷರಾದ ಮಾನ್ಯ ಶ್ರೀ ಪೀಟರ್ ಪೆಲ್ಲೆಗ್ರಿನಿ ಅವರನ್ನು ಭೇಟಿ ಮಾಡಿದರು.

ಫೆಬ್ರವರಿ 2026ರಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಅಧ್ಯಕ್ಷರಾದ ಪೆಲ್ಲೆಗ್ರಿನಿ ಅವರ ಭೇಟಿಯನ್ನು ಪ್ರಧಾನಮಂತ್ರಿಯವರು ಒಲುಮೆಯಿಂದ ನೆನಪಿಸಿಕೊಂಡಿದ್ದಾರೆ. ಪ್ರಸ್ತುತದ ಸಹಕಾರದ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು ಹಾಗೂ ವ್ಯಾಪಾರ, ಹೂಡಿಕೆ, ತಂತ್ರಜ್ಞಾನ ಮತ್ತು ಜನರ ನಡುವಿನ ಸಂಬಂಧಗಳ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವೆ ವರ್ಧಿಸುತ್ತಿರುವ ಬಾಂಧವ್ಯವನ್ನು ಸ್ವಾಗತಿಸಿದರು. ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆಯೂ ಉಭಯರು ಚರ್ಚಿಸಿದರು.

ಅಧ್ಯಕ್ಷರ ಭವನದಲ್ಲಿ "ವಾರಾಣಸಿ ನಗರ" ಎಂಬ ವಿಷಯಾಧಾರಿತವಾಗಿ ಸ್ಲೋವಾಕ್ ಕಲಾವಿದರಿಂದ ನಡೆದ ಚಿತ್ರಕಲಾ ಪ್ರದರ್ಶನವನ್ನು ಪ್ರಧಾನಮಂತ್ರಿ ಮೋದಿ ಮತ್ತು ಅಧ್ಯಕ್ಷ ಪೆಲ್ಲೆಗ್ರಿನಿ ವೀಕ್ಷಿಸಿದರು. ಸ್ಲೋವಾಕ್ ಶಾಲಾ ಮಕ್ಕಳ ವಿಶೇಷ ಯೋಗ ಪ್ರದರ್ಶನವನ್ನೂ ಉಭಯರು ವೀಕ್ಷಿಸಿದರು.

ಪ್ರಧಾನಮಂತ್ರಿಯವರಿಗೆ ಅಧ್ಯಕ್ಷರಾದ ಪೆಲ್ಲೆಗ್ರಿನಿ ಅವರು ಔತಣಕೂಟವನ್ನು ಏರ್ಪಡಿಸಿದ್ದರು. ಅಧ್ಯಕ್ಷರಾದ ಪೆಲ್ಲೆಗ್ರಿನಿ ಅವರ ಆತ್ಮೀಯತೆ ಮತ್ತು ಆತಿಥ್ಯಕ್ಕಾಗಿ ಹಾಗೂ ಭಾರತ-ಸ್ಲೋವಾಕಿಯಾ ಪಾಲುದಾರಿಕೆಗೆ ಅಚಲ ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸಿದರು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'Make in India' radar programme to help Tejas track targets gets Rs 2,205 crore boost

Media Coverage

'Make in India' radar programme to help Tejas track targets gets Rs 2,205 crore boost
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 01 ಆಗಸ್ಟ್ 2026
August 01, 2026

Aatmanirbhar Bharat Delivers: Indigenous Power, Farmer Prosperity & Blue Economy