ಕೊಚ್ಚಿ-ಲಕ್ಷದ್ವೀಪ ದ್ವೀಪ ಪ್ರದೇಶಗಳ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಸಂಪರ್ಕ ಉದ್ಘಾಟನೆ
ಕಡಮತ್‌ನಲ್ಲಿ ಅಸ್ಪ ತಾಪಮಾನದ ಉಷ್ಣ ಉಪ್ಪು ಹಿಂಗಿಸುವ(ಥರ್ಮಲ್ ಡಿಸಲೈನೇಷನ್) ಸ್ಥಾವರ (LTTD) ರಾಷ್ಟ್ರಕ್ಕೆ ಸಮರ್ಪಣೆ
ಅಗತ್ತಿ ಮತ್ತು ಮಿನಿಕಾಯ್ ದ್ವೀಪ ಪ್ರದೇಶಗಳಲ್ಲಿ ಎಲ್ಲಾ ಮನೆಗಳಲ್ಲೂ ಕಾರ್ಯ ನಿರ್ವಹಿಸುವ ನಲ್ಲಿ ನೀರಿನ ಸಂಪರ್ಕ(FHTC)ಗಳಿಗೆ ಚಾಲನೆ
ಕವರಟ್ಟಿಯಲ್ಲಿ ಸೌರ ವಿದ್ಯುತ್ ಸ್ಥಾವರ ಲೋಕಾರ್ಪಣೆ
ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು 5 ಮಾದರಿ ಅಂಗನವಾಡಿ ಕೇಂದ್ರಗಳ ನವೀಕರಣಕ್ಕೆ ಶಂಕುಸ್ಥಾಪನೆ
"ಲಕ್ಷದ್ವೀಪದ ಭೌಗೋಳಿಕ ಪ್ರದೇಶವು ಚಿಕ್ಕದಾಗಿದ್ದರೂ, ಜನರ ಹೃದಯವು ಸಾಗರದಷ್ಟು ವಿಶಾಲವಾಗಿದೆ"
"ನಮ್ಮ ಸರ್ಕಾರವು ದೂರದ ಗ್ರಾಮಗಳನ್ನು, ಗಡಿ, ಕರಾವಳಿ ಮತ್ತು ದ್ವೀಪ ಪ್ರದೇಶಗಳಿಗೆ ಸವಲತ್ತು ಒದಗಿಸುವುದನ್ನು ಆದ್ಯತೆಯನ್ನಾಗಿ ಮಾಡಿಕೊಂಡಿದೆ"
"ಸರ್ಕಾರದ ಎಲ್ಲಾ ಯೋಜನೆಗಳನ್ನು ಪ್ರತಿಯೊಬ್ಬ ಫಲಾನುಭವಿಗೆ ತಲುಪಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ"
" ಗುಣಮಟ್ಟದ ಸ್ಥಳೀಯ ಮೀನುಗಳನ್ನು ರಫ್ತು ಮಾಡಲು ಇರುವ ಅಪಾರ ಸಾಧ್ಯತೆಗಳು ಸ್ಥಳೀಯ ಮೀನುಗಾರರ ಜೀವನವನ್ನು ಪರಿವರ್ತಿಸಲಿವೆ"
"ಲಕ್ಷದ್ವೀಪದ ಸೌಂದರ್ಯಕ್ಕೆ ಹೋಲಿಸಿದರೆ ಜಗತ್ತಿನ ಇತರೆ ತಾಣಗಳು ಮಸುಕಾಗಿವೆ"
"ವಿಕಸಿತ ಭಾರತ ನಿರ್ಮಾಣದಲ್ಲಿ ಲಕ್ಷದ್ವೀಪವು ಪ್ರಬಲ ಪಾತ್ರ ವಹಿಸುತ್ತದೆ"

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲಕ್ಷದ್ವೀಪದ ಕವರಟ್ಟಿಯಲ್ಲಿಂದು 1,150 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಜತೆಗೆ ಶಂಕುಸ್ಥಾಪನೆ ನೆರವೇರಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳು ತಂತ್ರಜ್ಞಾನ, ಇಂಧನ, ಜಲ ಸಂಪನ್ಮೂಲ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳನ್ನು ಒಳಗೊಂಡಿವೆ. ಪ್ರಧಾನ ಮಂತ್ರಿ ಅವರು ಲ್ಯಾಪ್‌ಟಾಪ್ ಯೋಜನೆಯಡಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದರು. ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆ ಅಡಿ, ಶಾಲಾ ವಿದ್ಯಾರ್ಥಿಗಳಿಗೆ ಬೈಸಿಕಲ್‌ಗಳನ್ನು ವಿತರಿಸಿದರು. ರೈತರು ಮತ್ತು ಮೀನುಗಾರ ಫಲಾನುಭವಿಗಳಿಗೆ ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಿದರು.

 

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಲಕ್ಷದ್ವೀಪದ ಸೊಬಗು ಪದಗಳಿಗೆ ಮೀರಿದ್ದು. ಅಗತ್ತಿ, ಬಂಗಾರಂ ಮತ್ತು ಕವರಟ್ಟಿಗೆ ಭೇಟಿ ನೀಡಿ ನಾಗರಿಕರನ್ನು ಭೇಟಿಯಾಗುತ್ತಿರುವುದು ಸಂತಸ ತಂದಿದೆ. "ಲಕ್ಷದ್ವೀಪದ ಭೌಗೋಳಿಕ ಪ್ರದೇಶವು ಚಿಕ್ಕದಾಗಿದ್ದರೂ ಸಹ, ಜನರ ಹೃದಯವು ಸಾಗರದಷ್ಟು ವಿಶಾಲವಾಗಿದೆ". ನಿಮ್ಮೆಲ್ಲರ ಉಪಸ್ಥಿತಿಗಾಗಿ ಧನ್ಯವಾದಗಳು ಎಂದರು.

ಇಲ್ಲಿನ ದೂರದ ಗ್ರಾಮಗಳನ್ನು, ಗಡಿ ಅಥವಾ ಕರಾವಳಿ ಮತ್ತು ದ್ವೀಪ ಪ್ರದೇಶಗಳನ್ನು ದೀರ್ಘ ಕಾಲದಿಂದಲೂ ನಿರ್ಲಕ್ಷ್ಯ ಮಾಡುತ್ತಾ ಬರಲಾಗಿದೆ. "ಆದರೆ, ನಮ್ಮ ಸರ್ಕಾರವು ಅಂತಹ ಕ್ಷೇತ್ರಗಳನ್ನು ಆದ್ಯತೆಯನ್ನಾಗಿ ಮಾಡಿಕೊಂಡಿದೆ". ಮೂಲಸೌಕರ್ಯ, ಸಂಪರ್ಕ, ನೀರು, ಆರೋಗ್ಯ ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಯೋಜನೆಗಳನ್ನು ಪಡೆಯುತ್ತಿರುವ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ ಎಂದರು.

ಲಕ್ಷದ್ವೀಪದ ಅಭಿವೃದ್ಧಿಗೆ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ), ಪ್ರತಿ ಫಲಾನುಭವಿಗೆ ಉಚಿತ ಪಡಿತರ ಲಭ್ಯವಾಗುವಂತೆ, ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳು ಮತ್ತು ಆಯುಷ್ಮಾನ್ ಕಾರ್ಡ್‌ಗಳ ವಿತರಣೆ, ಆಯುಷ್ಮಾನ್ ಆರೋಗ್ಯ ಮಂದಿರ, ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಪ್ರಸ್ತಾಪಿಸಿದರು. "ಸರ್ಕಾರದ ಎಲ್ಲಾ ಯೋಜನೆಗಳನ್ನು ಪ್ರತಿಯೊಬ್ಬ ಫಲಾನುಭವಿಗೆ ತಲುಪಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ". ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳಿಗೆ ಹಣ ವಿತರಿಸುವಲ್ಲಿ ಸಾಧಿಸಿದ ಪಾರದರ್ಶಕತೆಯನ್ನು ಉಲ್ಲೇಖಿಸಿದ ಪ್ರಧಾನಿ, ಇದು ಭ್ರಷ್ಟಾಚಾರವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಗ್ರಹಿಸಿದೆ. ಲಕ್ಷದ್ವೀಪದ ಜನರ ಹಕ್ಕುಗಳನ್ನು ಕಸಿಯಲು ಯತ್ನಿಸುವವರನ್ನು ಯಾವುದೇ ಬೆಲೆ ತೆರುವುದಾಗಲಿ, ಅಂಥವರನ್ನು ಬಿಡುವುದಿಲ್ಲ ಎಂದು ಭರವಸೆ ನೀಡಿದರು.

 

1000 ದಿನಗಳಲ್ಲಿ ಅತ್ಯಂತ ವೇಗದ ಅಂತರ್ಜಾಲ ಸೇವೆ ಖಾತ್ರಿಪಡಿಸುವ ಬಗ್ಗೆ 2020ರಲ್ಲಿ ನೀಡಿದ್ದ ಭರವಸೆಯನ್ನು ಪ್ರಧಾನಿ ನೆನಪಿಸಿಕೊಂಡರು. ಕೊಚ್ಚಿ-ಲಕ್ಷದ್ವೀಪ್ ದ್ವೀಪಗಳ ಸಬ್‌ಮೆರಿನ್ ಆಪ್ಟಿಕಲ್ ಫೈಬರ್ ಸಂಪರ್ಕ (KLI - SOFC) ಯೋಜನೆಯನ್ನು ಇಂದು ಜನರಿಗೆ ಸಮರ್ಪಿಸಲಾಗಿದೆ. ಇದು ಲಕ್ಷದ್ವೀಪದ ಜನರಿಗೆ 100 ಪಟ್ಟು ವೇಗದ ಇಂಟರ್ನೆಟ್ ಖಚಿತಪಡಿಸುತ್ತದೆ. ಇದು ಸರ್ಕಾರಿ ಸೇವೆಗಳು, ವೈದ್ಯಕೀಯ ಚಿಕಿತ್ಸೆ, ಶಿಕ್ಷಣ ಮತ್ತು ಡಿಜಿಟಲ್ ಬ್ಯಾಂಕಿಂಗ್‌ನಂತಹ ಸೌಲಭ್ಯಗಳನ್ನು ಸುಧಾರಿಸುತ್ತದೆ. ಲಕ್ಷದ್ವೀಪವನ್ನು ಸರಕು ಸಾಗಣೆಯ ತಾಣವಾಗಿ ಅಭಿವೃದ್ಧಿಪಡಿಸುವ ಸಾಮರ್ಥ್ಯವು ಇದರಿಂದ ಬಲಗೊಳ್ಳುತ್ತದೆ. ಕಡಮತ್‌ನಲ್ಲಿ ಅಲ್ಪ ತಾಪಮಾನದ ಉಷ್ಣ ಉಪ್ಪು ಹಿಂಗಿಸುವ(ಥರ್ಮಲ್ ಡಿಸಲೈನೇಷನ್) ಸ್ಥಾವರ(ಎಲ್‌ಟಿಟಿಡಿ) ಲೋಕಾರ್ಪಣೆ ಉಲ್ಲೇಖಿಸಿದ ಪ್ರಧಾನಿ ಮೋದಿ, ಲಕ್ಷದ್ವೀಪದಲ್ಲಿ ಪ್ರತಿ ಮನೆಗೆ ಪೈಪ್‌ಲೈನ್‌ನಲ್ಲಿ ನೀರು ಒದಗಿಸುವ ಕಾರ್ಯವು ತ್ವರಿತ ಗತಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು.

ಲಕ್ಷದ್ವೀಪಕ್ಕೆ ಆಗಮಿಸಿದ ನಂತರ ಖ್ಯಾತ ಪರಿಸರ ವಿಜ್ಞಾನಿ ಶ್ರೀ ಅಲಿ ಮಾಣಿಕ್‌ಫಾನ್‌ ಅವರೊಂದಿಗಿನ ಸಂವಾದದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಲಕ್ಷದ್ವೀಪ ದ್ವೀಪ ಪ್ರದೇಶದ ಸಂರಕ್ಷಣೆಯ ಕಡೆಗೆ ಅವರು ನಡೆಸಿರುವ ಸಂಶೋಧನೆ ಮತ್ತು ನಾವೀನ್ಯತೆಯನ್ನು ಶ್ಲಾಘಿಸಿದರು. 2021ರಲ್ಲಿ ಶ್ರೀ ಅಲಿ ಮಾಣಿಕ್‌ಫಾನ್‌ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಪ್ರಸ್ತುತ ಸರ್ಕಾರವು ಉತ್ತಮ ಕೆಲಸ ಮಾಡಿದೆ ಎಂದು ಪ್ರಧಾನಿ ಅಪಾರ ತೃಪ್ತಿ ವ್ಯಕ್ತಪಡಿಸಿದರು. ಲ್ಯಾಪ್‌ಟಾಪ್‌ಗಳನ್ನು ಹಸ್ತಾಂತರಿಸುವ ಕುರಿತು ಪ್ರಸ್ತಾಪಿಸಿದಂತೆ, ಲಕ್ಷದ್ವೀಪದ ಯುವಕರ ಆವಿಷ್ಕಾರ ಮತ್ತು ಶಿಕ್ಷಣಕ್ಕೆ ಕೇಂದ್ರ ಸರ್ಕಾರವು ದಾರಿ ಮಾಡಿಕೊಡುತ್ತಿದೆ. ಅಲ್ಲದೆ, ಇಂದು ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲಾಗಿದೆ. ಹಿಂದಿನ ವರ್ಷಗಳಲ್ಲಿ ಲಕ್ಷದ್ವೀಪದಲ್ಲಿ ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯ ಅನುಪಸ್ಥಿತಿಯಿಂದಾಗಿ ದ್ವೀಪಗಳಿಂದ ಯುವಕರ ವಲಸೆಗೆ ಕಾರಣವಾಯಿತು. ಆದರೀಗ ಉನ್ನತ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ ಶ್ರೀ ಮೋದಿ, ಆಂಡ್ರೊಟ್ ಮತ್ತು ಕದ್ಮತ್ ದ್ವೀಪಗಳಲ್ಲಿ ಕಲೆ ಮತ್ತು ವಿಜ್ಞಾನಕ್ಕಾಗಿ ಶಿಕ್ಷಣ ಸಂಸ್ಥೆಗಳು ಮತ್ತು ಮಿನಿಕಾಯ್‌ನಲ್ಲಿ ಪಾಲಿಟೆಕ್ನಿಕ್ ಸಂಸ್ಥೆಗಳ ಪ್ರಾರಂಭಿಸಲಾಗಿದೆ. "ಇದು ಲಕ್ಷದ್ವೀಪದ ಯುವಕರಿಗೆ ಹೆಚ್ಚು ಪ್ರಯೋಜನ ನೀಡುತ್ತಿದೆ" ಎಂದು ಅವರು ಹೇಳಿದರು.

 

ಹಜ್ ಯಾತ್ರಿಗಳಿಗಾಗಿ ಕೈಗೊಂಡ ಕ್ರಮಗಳಿಂದ ಲಕ್ಷದ್ವೀಪದ ಜನತೆಗೂ ಪ್ರಯೋಜನಕಾರಿಯಾಗಿದೆ. ಹಜ್ ವೀಸಾ ಸುಲಭಗೊಳಿಸಲಾಗಿದೆ, ವೀಸಾ ಪ್ರಕ್ರಿಯೆಯ ಡಿಜಿಟಲೀಕರಣ ಮತ್ತು ‘ಮೆಹ್ರಮ್’ ಇಲ್ಲದೆ ಮಹಿಳೆಯರಿಗೆ ಹಜ್‌ಗೆ ಹೋಗಲು ಅನುಮತಿ ನೀಡಲಾಗಿದೆ. ಈ ಪ್ರಯತ್ನಗಳು ಉಮ್ರಾಕ್ಕೆ ಹೋಗುವ ಭಾರತೀಯರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಿವೆ ಎಂದು ಅವರು ಹೇಳಿದರು.

ಜಾಗತಿಕ ಸಮುದ್ರಾಹಾರ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವ ಭಾರತದ ಪ್ರಯತ್ನವನ್ನು ಪ್ರಧಾನ ಮಂತ್ರಿ ಪ್ರಸ್ತಾಪಿಸಿದರು. ಇದು ಸ್ಥಳೀಯ ಟ್ಯೂನ ಮೀನುಗಳನ್ನು ಜಪಾನ್‌ಗೆ ರಫ್ತು ಮಾಡುವುದರಿಂದ ಲಕ್ಷದ್ವೀಪಕ್ಕೆ ಲಾಭವಾಗುತ್ತದೆ. ಮೀನುಗಾರರ ಜೀವನವನ್ನು ಪರಿವರ್ತಿಸಬಲ್ಲ ಗುಣಮಟ್ಟದ ಸ್ಥಳೀಯ ಮೀನುಗಳನ್ನು ರಫ್ತು ಮಾಡುವ ಸಾಧ್ಯತೆಗಳನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಕಡಲಕಳೆ ಕೃಷಿ ಸಾಮರ್ಥ್ಯದ ಅನ್ವೇಷಣೆಯ ಬಗ್ಗೆಯೂ ಅವರು ಮಾಹಿತಿ ನೀಡಿದರು. ಈ ಪ್ರದೇಶದ ದುರ್ಬಲ ಪರಿಸರ ರಕ್ಷಿಸುವುದು ಅತ್ಯಗತ್ಯವಾಗಿದೆ. ಲಕ್ಷದ್ವೀಪದ ಮೊದಲ ಬ್ಯಾಟರಿ ಬೆಂಬಲಿತ ಸೌರ ವಿದ್ಯುತ್ ಯೋಜನೆಯಾದ ಕವರಟ್ಟಿ ಸೌರ ವಿದ್ಯುತ್ ಸ್ಥಾವರವು ಅಂತಹ ಉಪಕ್ರಮಗಳ ಭಾಗವಾಗಿದೆ ಎಂದರು.

 

ಆಜಾದಿ ಕಾ ಅಮೃತ್ ಕಾಲ್‌ನಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವಲ್ಲಿ ಲಕ್ಷದ್ವೀಪದ ಪಾತ್ರ ಬಹುದೊಡ್ಡದು. ಈ ಕೇಂದ್ರಾಡಳಿತ ಪ್ರದೇಶವನ್ನು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ಇರಿಸಲು ಸರ್ಕಾರ ಹಲವು ಪ್ರಯತ್ನಗಳನ್ನು ಮಾಡಿದೆ. ಲಕ್ಷದ್ವೀಪಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ ಎಂದು ಇಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಜಿ-20 ಶೃಂಗಸಭೆಯನ್ನು ಪ್ರಧಾನಿ ಉಲ್ಲೇಖಿಸಿದರು. ಸ್ವದೇಶ್ ದರ್ಶನ್ ಯೋಜನೆಯಡಿ, ಲಕ್ಷದ್ವೀಪಕ್ಕೆ ಗಮ್ಯಸ್ಥಾನ-ನಿರ್ದಿಷ್ಟ ಮಾಸ್ಟರ್ ಪ್ಲಾನ್ ರೂಪಿಸಲಾಗುತ್ತಿದೆ. ಲಕ್ಷದ್ವೀಪವು 2 ನೀಲಿ ಧ್ವಜದ ಬೀಚ್‌ಗಳಿಗೆ ನೆಲೆಯಾಗಿದೆ. ಕದ್ಮತ್ ಮತ್ತು ಸುಹೇಲಿ ದ್ವೀಪಗಳಲ್ಲಿನ ವಾಟರ್ ವಿಲ್ಲಾ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗಿದೆ. "ಲಕ್ಷದ್ವೀಪವು ಕ್ರೂಸ್ ಪ್ರವಾಸೋದ್ಯಮಕ್ಕೆ ಒಂದು ಪ್ರಮುಖ ತಾಣವಾಗಿ ಹೊರಹೊಮ್ಮುತ್ತಿದೆ". 5 ವರ್ಷಗಳ ಹಿಂದಿನ ಪ್ರವಾಸಿಗರಿಗೆ ಹೋಲಿಸಿದರೆ ಪ್ರವಾಸಿಗರ ಒಳಹರಿವು 5 ಪಟ್ಟು ಹೆಚ್ಚಾಗಿದೆ. ವಿದೇಶಕ್ಕೆ ಭೇಟಿ ನೀಡಲು ನಿರ್ಧರಿಸುವ ಮೊದಲು ದೇಶದ ಕನಿಷ್ಠ 15 ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವಂತೆ ಭಾರತದ ನಾಗರಿಕರಿಗೆ ಕರೆ ನೀಡಿದರು. ವಿದೇಶದಲ್ಲಿರುವ ದ್ವೀಪ ರಾಷ್ಟ್ರಗಳಿಗೆ ಭೇಟಿ ನೀಡಲು ಬಯಸುವವರು ಲಕ್ಷದ್ವೀಪಕ್ಕೆ ಭೇಟಿ ನೀಡುವಂತೆ ಅವರು ಒತ್ತಾಯಿಸಿದರು. "ಲಕ್ಷದ್ವೀಪದ ಸೌಂದರ್ಯವನ್ನು ಒಮ್ಮೆ ನೀವು ವೀಕ್ಷಿಸಿದರೆ, ಪ್ರಪಂಚದ ಇತರೆ ಸ್ಥಳಗಳು ಮಂಕಾಗಿ ಕಾಣಿಸುತ್ತವೆ" ಎಂದು ಪ್ರಧಾನಿ ಹೇಳಿದರು.

ಲಕ್ಷದ್ವೀಪ ಜನತೆಯ ಜೀವನ, ಪ್ರಯಾಣ ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ಭರವಸೆ ನೀಡಿದರು. "ಲಕ್ಷದ್ವೀಪವು ವಿಕ್ಷಿತ ಭಾರತ ನಿರ್ಮಾಣದಲ್ಲಿ ಪ್ರಬಲ ಪಾತ್ರ ವಹಿಸುತ್ತದೆ" ಎಂದು ಪ್ರಧಾನ ಮಂತ್ರಿ ಹೇಳಿದರು.

 

ಈ ಸಂದರ್ಭದಲ್ಲಿ ಲಕ್ಷದ್ವೀಪದ ಲೆಫ್ಟಿನೆಂಟ್ ಗವರ್ನರ್ ಶ್ರೀ ಪ್ರಫುಲ್ ಪಟೇಲ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

ಪರಿವರ್ತನೀಯ ಕ್ರಮದಲ್ಲಿ, ಕೊಚ್ಚಿ-ಲಕ್ಷದ್ವೀಪ ದ್ವೀಪಗಳ ಸಬ್‌ಮೆರಿನ್ ಆಪ್ಟಿಕಲ್ ಫೈಬರ್ ಸಂಪರ್ಕ (ಕೆಎಲ್‌ಐ-ಎಸ್‌ಒಎಫ್‌ಸಿ) ಯೋಜನೆಯನ್ನು ಪ್ರಾರಂಭಿಸುವ ಮೂಲಕ ಲಕ್ಷದ್ವೀಪದಲ್ಲಿದ್ದ ನಿಧಾನಗತಿಯ ಇಂಟರ್ನೆಟ್ ಸೇವೆಗೆ ವೇಗ ನೀಡಲು ಪ್ರಧಾನ ಮಂತ್ರಿ ನಿರ್ಧರಿಸಿದ್ದಾರೆ. ಇದನ್ನು 2020ರಲ್ಲಿ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೋಷಿಸಲಾಯಿತು. ಯೋಜನೆಯು ಈಗ ಪೂರ್ಣಗೊಂಡಿದ್ದು, ಪ್ರಧಾನ ಮಂತ್ರಿ ಅವರೇ ಉದ್ಘಾಟಿಸಿದರು. ಇದು ಇಂಟರ್ನೆಟ್ ವೇಗವನ್ನು 100 ಪಟ್ಟು (1.7 Gbps ನಿಂದ 200 Gbps ವರೆಗೆ) ಹೆಚ್ಚಿಸುತ್ತದೆ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಲಕ್ಷದ್ವೀಪವನ್ನು ಸಬ್‌ಮೆರಿನ್ ಆಪ್ಟಿಕ್ ಫೈಬರ್ ಕೇಬಲ್ ಮೂಲಕ ಸಂಪರ್ಕಿಸಲಾಗಿದೆ. ಸಮರ್ಪಿತ ಜಲಾಂತರ್ಗಾಮಿ OFC ಲಕ್ಷದ್ವೀಪದಲ್ಲಿ ಸಂವಹನ ಮೂಲಸೌಕರ್ಯದಲ್ಲಿ ಒಂದು ಮಾದರಿ ಬದಲಾವಣೆಯನ್ನು ಖಚಿತಪಡಿಸುತ್ತದೆ, ವೇಗವಾದ ಮತ್ತು ಹೆಚ್ಚು ವಿಶ್ವಾಸಾರ್ಹ ಇಂಟರ್ನೆಟ್ ಸೇವೆಗಳು, ಟೆಲಿಮೆಡಿಸಿನ್, ಇ-ಆಡಳಿತ, ಶೈಕ್ಷಣಿಕ ಉಪಕ್ರಮಗಳು, ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ಕರೆನ್ಸಿ ಬಳಕೆ, ಡಿಜಿಟಲ್ ಸಾಕ್ಷರತೆ ಇತ್ಯಾದಿಗಳನ್ನು ಸಕ್ರಿಯಗೊಳಿಸುತ್ತದೆ.

 

ಪ್ರಧಾನ ಮಂತ್ರಿ ಅವರು ಕಡಮತ್‌ನಲ್ಲಿರುವ ಅಲ್ಪ ತಾಪಮಾನದ ಉಷ್ಣ ಉಪ್ಪು ಹಿಂಗಿಸುವ(ಲೋ ಟೆಂಪರೇಚರ್ ಥರ್ಮಲ್ ಡಿಸಲೈನೇಷನ್-ಎಲ್‌ಟಿಟಿಡಿ) ಸ್ಥಾವರವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದರಿಂದ ಪ್ರತಿದಿನ 1.5 ಲಕ್ಷ ಲೀಟರ್ ಶುದ್ಧ ಕುಡಿಯುವ ನೀರು ಉತ್ಪಾದನೆಯಾಗಲಿದೆ. ಅಗತ್ತಿ ಮತ್ತು ಮಿನಿಕಾಯ್ ದ್ವೀಪಗಳ ಎಲ್ಲಾ ಮನೆಗಳಲ್ಲಿ ಬಳಕೆಯಾಗುವ ನಲ್ಲಿ ನೀರಿನ(ಫಂಕ್ಷನಲ್ ಹೌಸ್‌ಹೋಲ್ಡ್ ಟ್ಯಾಪ್ ಕನೆಕ್ಷನ್‌)ಸಂಪರ್ಕಗಳನ್ನು (ಎಫ್‌ಹೆಚ್‌ಟಿಸಿ) ಪ್ರಧಾನ ಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಹವಳ ದ್ವೀಪ(ಗಡುಸು ನೀರಿರುವ ಪ್ರದೇಶ)ವಾಗಿರುವ ಲಕ್ಷದ್ವೀಪದಲ್ಲಿ ಕುಡಿಯುವ ಶುದ್ಧ ನೀರಿನ ಲಭ್ಯತೆ ಯಾವಾಗಲೂ ಸವಾಲಾಗಿತ್ತು, ಇದು ಕನಿಷ್ಠ ಅಂತರ್ಜಲ ಲಭ್ಯತೆಯನ್ನು ಹೊಂದಿದೆ. ಈ ಕುಡಿಯುವ ನೀರು ಯೋಜನೆಗಳು ದ್ವೀಪಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಇದು ಸ್ಥಳೀಯ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕಾರಣವಾಗುತ್ತದೆ.

ರಾಷ್ಟ್ರಕ್ಕೆ ಸಮರ್ಪಿತವಾಗಿರುವ ಇತರ ಯೋಜನೆಗಳು ಕವರಟ್ಟಿಯಲ್ಲಿ ಸೌರ ವಿದ್ಯುತ್ ಸ್ಥಾವರ ಒಳಗೊಂಡಿದೆ. ಇದು ಲಕ್ಷದ್ವೀಪದ ಮೊದಲ ಬ್ಯಾಟರಿ ಬೆಂಬಲಿತ ಸೌರ ವಿದ್ಯುತ್ ಯೋಜನೆಯಾಗಿದೆ. ಇದು ಡೀಸೆಲ್ ಆಧಾರಿತ ವಿದ್ಯುತ್ ಉತ್ಪಾದನಾ ಸ್ಥಾವರ, ಹೊಸ ಆಡಳಿತಾತ್ಮಕ ಬ್ಲಾಕ್ ಮತ್ತು ಕವರಟ್ಟಿಯಲ್ಲಿರುವ ಇಂಡಿಯಾ ರಿಸರ್ವ್ ಬೆಟಾಲಿಯನ್(IRBn) ಕಾಂಪ್ಲೆಕ್ಸ್‌ನಲ್ಲಿ 80 ಪುರುಷರ ಬ್ಯಾರಕ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 

ಪ್ರಧಾನ ಮಂತ್ರಿ ಅವರು ಕಲ್ಪೇನಿಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ನವೀಕರಣ ಮತ್ತು ಆಂದ್ರೋತ್, ಚೆಟ್ಲಾಟ್, ಕದ್ಮತ್, ಅಗತ್ತಿ ಮತ್ತು ಮಿನಿಕಾಯ್ 5 ದ್ವೀಪಗಳಲ್ಲಿ 5 ಮಾದರಿ ಅಂಗನವಾಡಿ ಕೇಂದ್ರಗಳ (ನಂದ್ ಘರ್) ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Decoding Modi's Triumphant Three-Nation Tour Beyond MoUs

Media Coverage

Decoding Modi's Triumphant Three-Nation Tour Beyond MoUs
NM on the go

Nm on the go

Always be the first to hear from the PM. Get the App Now!
...
PM Modi shares Sanskrit Subhashitam emphasising the importance of Farmers
December 23, 2025

The Prime Minister, Shri Narendra Modi, shared a Sanskrit Subhashitam-

“सुवर्ण-रौप्य-माणिक्य-वसनैरपि पूरिताः।

तथापि प्रार्थयन्त्येव कृषकान् भक्ततृष्णया।।”

The Subhashitam conveys that even when possessing gold, silver, rubies, and fine clothes, people still have to depend on farmers for food.

The Prime Minister wrote on X;

“सुवर्ण-रौप्य-माणिक्य-वसनैरपि पूरिताः।

तथापि प्रार्थयन्त्येव कृषकान् भक्ततृष्णया।।"