ಹರ್ ಘರ್ ತಿರಂಗಾ ಅಭಿಯಾನದಲ್ಲಿ ಜನರ ಅಭೂತಪೂರ್ವ ಪಾಲ್ಗೊಳ್ಳುವಿಕೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇದು ಭಾರತದ ಜನರನ್ನು ಒಂದುಗೂಡಿಸುವ ಗಾಢ ದೇಶಭಕ್ತಿಯ ಭಾವ ಮತ್ತು ತ್ರಿವರ್ಣದ ಬಗ್ಗೆ ಅವರ ಅಚಲ ಹೆಮ್ಮೆಯ ಪ್ರತಿಬಿಂಬವಾಗಿದೆ. ನಾಗರಿಕರು harghartiranga.com ನಲ್ಲಿ ತಮ್ಮ ಚಿತ್ರಗಳು ಮತ್ತು ಸೆಲ್ಫಿಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸುವಂತೆ ಅವರು ಮನವಿ ಮಾಡಿದ್ದಾರೆ.
ಹರ್ ಘರ್ ತಿರಂಗಾ ಅಭಿಯಾನದಲ್ಲಿ ಜನರ ಅಭೂತಪೂರ್ವ ಭಾಗವಹಿಸುವಿಕೆಯ ಬಗ್ಗೆ ಸಂಸ್ಕೃತಿ ಸಚಿವಾಲಯದ ಎಕ್ಸ್ ಪೋಸ್ಟ್ ಗಳಿಗೆ ಪ್ರಧಾನಮಂತ್ರಿ ಅವರ ಪ್ರತಿಕ್ರಿಯೆ ಹೀಗಿದೆ:
"ಭಾರತದಾದ್ಯಂತ #HarGharTiranga ಅಭಿಯಾನದಲ್ಲಿ ಜನರ ಅದ್ಭುತ ಭಾಗವಹಿಸುವಿಕೆಯನ್ನು ನೋಡಿ ಸಂತೋಷವಾಗಿದೆ. ಇದು ನಮ್ಮ ಜನರನ್ನು ಒಗ್ಗೂಡಿಸುವ ಆಳವಾದ ದೇಶಭಕ್ತಿಯ ಮನೋಭಾವದ ಪ್ರತೀಕವಾಗಿದೆ ಮತ್ತು ತ್ರಿವರ್ಣದಲ್ಲಿ ಅವರ ಅಚಲ ಹೆಮ್ಮೆಯನ್ನು ಪ್ರದರ್ಶಿಸಿದೆ. harghartiranga.com ನಲ್ಲಿ ಫೋಟೋಗಳು ಮತ್ತು ಸೆಲ್ಫಿಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸಿ"
Glad to see #HarGharTiranga receiving phenomenal participation across India. This shows the deep patriotic spirit that unites our people and their unwavering pride in the Tricolour. Do keep sharing photos and selfies on https://t.co/uJuh3CXyQS https://t.co/Ua5fHfYFcU
— Narendra Modi (@narendramodi) August 9, 2025


