ಮೊದಲು ಅಗ್ಗದ ಪಡಿತರ ಯೋಜನೆ ವ್ಯಾಪ್ತಿ ಮತ್ತು ಬಜೆಟ್ ಹೆಚ್ಚುತ್ತಲೇ ಇತ್ತು, ಆದರೆ ಹಸಿವು ಮತ್ತು ಅಪೌಷ್ಟಿಕತೆಯು ಆ ಪ್ರಮಾಣದಲ್ಲಿ ಕಡಿಮೆಯಾಗಲಿಲ್ಲ: ಪ್ರಧಾನಮಂತ್ರಿ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಆರಂಭವಾದಾಗಿನಿಂದ ಫಲಾನುಭವಿಗಳು ಮೊದಲು ಪಡೆಯುತ್ತಿದ್ದಕ್ಕಿಂತ ದುಪ್ಪಟ್ಟು ಪಡಿತರ ಪಡೆಯುತ್ತಿದ್ದಾರೆ: ಪ್ರಧಾನಮಂತ್ರಿ
2 ಲಕ್ಷ ಕೋಟಿ ರೂ,ಗೂ ಅಧಿಕ ಹಣ ವ್ಯಯ ಮಾಡಿ ಸಾಂಕ್ರಾಮಿಕದ ಸಮಯದಲ್ಲಿ 80 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಉಚಿತ ಪಡಿತರ ಪೂರೈಕೆ: ಪ್ರಧಾನಮಂತ್ರಿ
ಶತಮಾನದ ಅತಿದೊಡ್ಡ ವಿಪತ್ತು ಎದುರಾದರೂ ಯಾವೊಬ್ಬ ಪ್ರಜೆಯೂ ಹಸಿವಿನಿಂದ ಬಳಲುತ್ತಿಲ್ಲ: ಪ್ರಧಾನಮಂತ್ರಿ
ಬಡವರ ಸಬಲೀಕರಣಕ್ಕೆ ಇಂದು ಅಗ್ರ ಆದ್ಯತೆ: ಪ್ರಧಾನಮಂತ್ರಿ
ನಮ್ಮ ಜನರಲ್ಲಿ ಹೊಸ ವಿಶ್ವಾಸ ಮೂಡಿರುವುದು ನವಭಾರತ ನಿರ್ಮಾಣಕ್ಕೆ ಹೆಗ್ಗರುತು: ಪ್ರಧಾನಮಂತ್ರಿ
ದೇಶ 50 ಕೋಟಿ ಲಸಿಕೆ ಮೈಲಿಗಲ್ಲಿನತ್ತ ಕ್ಷಿಪ್ರವಾಗಿ ಸಾಗುತ್ತಿದೆ: ಪ್ರಧಾನಮಂತ್ರಿ
ಆಜಾ಼ದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಷ್ಟ್ರ ನಿರ್ಮಾಣದ ಬಗ್ಗೆ ಹೊಸ ಸ್ಫೂರ್ತಿ ಮೂಡಿಸುವ ಪಣ ತೊಡೋಣ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಯೋಜನೆಯ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸುವ ರಾಜ್ಯದ ಸಾರ್ವಜನಿಕರ ಭಾಗಿ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಗುಜರಾತ್ ನ ಲಕ್ಷಾಂತರ ಕುಟುಂಬಗಳು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಉಚಿತ ಪಡಿತರ ಪಡೆಯುತ್ತಿದ್ದಾರೆ. ಈ ಉಚಿತ ಪಡಿತರ ಬಡವರ ಮೇಲಿನ ಹೊರೆಯನ್ನು ತಗ್ಗಿಸಿದೆ ಮತ್ತು ಅವರಿಗೆ ವಿಶ್ವಾಸ ಮೂಡಿಸಿದೆ. ಕ್ಷಾಮ ಸೇರಿದಂತೆ ದೇಶದಲ್ಲಿ ಯಾವುದೇ ವಿಪತ್ತು ಇದ್ದರೂ ಸಹ ದೇಶ ತಮ್ಮ ಜೊತೆಗೆ ಇದೆ ಎಂಬ ಭಾವನೆ ಬಡವರಲ್ಲಿ ಮೂಡಿದೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯಾನಂತರ ಪ್ರತಿಯೊಂದು ಸರಕಾರವೂ ಬಡವರಿಗೆ ಅಗ್ಗದ ಆಹಾರ ನೀಡುವ ಬಗ್ಗೆ ಮಾತನಾಡಿದವು ಎಂದು  ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. ಉಚಿತ ಪಡಿತರ ಯೋಜನೆಗಳ ವ್ಯಾಪ್ತಿ ಮತ್ತು ಬಜೆಟ್ ವರ್ಷದಿಂದ ವರ್ಷಗಳಿಗೆ ಏರಿಕೆಯಾಗುತ್ತಲೇ ಇತ್ತು, ಆದರೆ ಅದರ ಪರಿಣಾಮ ಏನೂ ಆಗಿಲ್ಲ, ಸ್ಥಿತಿ ಮೊದಲಿನಂತೆಯೇ ಮುಂದುವರಿದಿತ್ತು ಎಂದರು. ದೇಶದಲ್ಲಿ ಆಹಾರ ದಾಸ್ತಾನು ಹೆಚ್ಚಾಗುತ್ತಲೇ ಇತ್ತು, ಆದರೆ ಹಸಿವು ಮತ್ತು ಅಪೌಷ್ಟಿಕತೆ ಅದಕ್ಕೆ ತಕ್ಕಂತೆ ಕಡಿಮೆಯಾಗಲಿಲ್ಲ. ಇದಕ್ಕೆ ಒಂದು ಮುಖ್ಯ ಕಾರಣ ಎಂದರೆ, ಪರಿಣಾಮಕಾರಿ ವಿತರಣಾ ವ್ಯವಸ್ಥೆ ಇಲ್ಲದಿರುವುದು. ಈ ಪರಿಸ್ಥಿತಿಯನ್ನು ಬದಲಾಯಿಸುವ ಕಾರ್ಯ 2014ರ ನಂತರ ಹೊಸದಾಗಿ ಆರಂಭವಾಯಿತು. ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಕೋಟ್ಯಂತರ ನಕಲಿ ಫಲಾನುಭವಿಗಳನ್ನು ವ್ಯವಸ್ಥೆಯಿಂದ ಹೊರಗಿಡಲಾಯಿತು ಮತ್ತು ಪಡಿತರ ಚೀಟಿಗಳನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಲಾಯಿತು. ಇದರಿಂದಾಗಿ ಶತಮಾನದ ಅತಿದೊಡ್ಡ ವಿಪತ್ತಿನ ಹೊರತಾಗಿಯೂ ಯಾವುದೇ ನಾಗರಿಕರು ಹಸಿವಿನಿಂದ ಬಳಲಿಲ್ಲ ಮತ್ತು ಜೀವನೋಪಾಯಕ್ಕೆ ಧಕ್ಕೆ ಉಂಟಾದಾಗ ಹಾಗೂ ಲಾಕ್ ಡೌನ್ ಸಮಯದಲ್ಲಿ ವ್ಯಾಪಾರ ನಷ್ಟವಾದಾಗ ಇದು ಜನರ ನೆರವಿಗೆ ಸಹಕಾರಿಯಾಯಿತು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಬಗ್ಗೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಸುಮಾರು 2 ಲಕ್ಷ ಕೋಟಿಗೂ ಅಧಿಕ ರೂಪಾಯಿಗಳನ್ನು ವೆಚ್ಚ ಮಾಡಿ ಸಾಂಕ್ರಾಮಿಕದ ಸಮಯದಲ್ಲಿ ಸುಮಾರು 80 ಕೋಟಿಗೂ ಅಧಿಕ ಜನರಿಗೆ ಉಚಿತ ಪಡಿತರವನ್ನು ನೀಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಇಂದು ಪ್ರತಿಯೊಬ್ಬ ಫಲಾನುಭವಿಗೆ  5 ಕೆ.ಜಿ. ಗೋಧಿ ಮತ್ತು ಅಕ್ಕಿ ಉಚಿತವಾಗಿ ನೀಡುವ ಜೊತೆಗೆ ಹೆಚ್ಚುವರಿಯಾಗಿ ಪ್ರತಿ ಕೆ.ಜಿ. ಗೋಧಿಗೆ 2 ರೂ ಮತ್ತು ಪ್ರತಿ ಕೆ.ಜಿ. ಗೋಧಿಗೆ 3 ರೂ. ಗೆ ನೀಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಯೋಜನೆ ಆರಂಭಕ್ಕೂ ಮುನ್ನ ನೀಡುತ್ತಿದ್ದ ಪಡಿತರ ಚೀಟಿ ಹೊಂದಿರುವವರಿಗೆ ನೀಡುತ್ತಿದ್ದ ಆಹಾರ ಧಾನ್ಯಕ್ಕೆ ಹೋಲಿಸಿದರೆ ಸದ್ಯ ಆಹಾರ ಧಾನ್ಯಗಳ ಪ್ರಮಾಣ ಬಹುತೇಕ ದುಪ್ಪಟ್ಟಾಗಿದೆ. ಈ ಯೋಜನೆ ದೀಪಾವಳಿ ಹಬ್ಬದವರೆಗೆ ಮುಂದುವರಿಯಲಿದೆ. ಯಾವೊಬ್ಬ ಬಡವರೂ ಸಹ ಹಸಿವಿನಿಂದ ನಿದ್ರಿಸಬಾರದು ಎಂದು ಪ್ರಧಾನಮಂತ್ರಿ ಹೇಳಿದರು. “ಒಂದು ದೇಶ-ಒಂದು ಪಡಿತರ’ ಯೋಜನೆಯ ಉದ್ದೇಶವನ್ನು ಪೂರೈಸಲು ವಲಸೆ ಕಾರ್ಮಿಕರ ಬಗ್ಗೆ ಕಾಳಜಿ ವಹಿಸುತ್ತಿರುವ ಗುಜರಾತ್ ಸರ್ಕಾರದ ಕ್ರಮಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶ ಇಂದು ಮೂಲಸೌಕರ್ಯಕ್ಕಾಗಿ ಲಕ್ಷಾಂತರ ಕೋಟಿ ರೂ.ಗಳನ್ನು ವ್ಯಯ ಮಾಡುತ್ತಿದೆ ಎಂದ ಪ್ರಧಾನಮಂತ್ರಿ ಅವರು, ಇದೇ ವೇಳೆ ಜನಸಾಮಾನ್ಯರ ಜೀವನ ಮಟ್ಟದಲ್ಲಿ ಸುಧಾರಣೆಯಾಗಿ ಸುಲಭ ಜೀವನಕ್ಕೆ ಹೊಸ ಮಾನದಂಡವನ್ನು ನಿಗದಿಪಡಿಸಿದೆ ಎಂದರು. ಬಡವರ ಸಬಲೀಕರಣಕ್ಕೆ ಇಂದು ಅಗ್ರ ಆದ್ಯತೆಯನ್ನು ನೀಡಲಾಗಿದೆ. ಸುಮಾರು 2 ಕೋಟಿಗೂ ಅಧಿಕ ಬಡ ಕುಟುಂಬಗಳಿಗೆ ಮನೆ ಮತ್ತು 10 ಕೋಟಿಗೂ ಅಧಿಕ ಕುಟುಂಬಗಳಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸಲಾಗಿದೆ. ಅಂತೆಯೇ, ಜನ್ ಧನ್ ಖಾತೆ ಮೂಲಕ ಅವರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸೇರ್ಪಡೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಆರೋಗ್ಯ, ಶಿಕ್ಷಣ ಮತ್ತು ಸೌಕರ್ಯಗಳು ಹಾಗೂ ಘನತೆಯನ್ನು ಖಾತ್ರಿಪಡಿಸಲು ಸಬಲೀಕರಣಕ್ಕೆ ನಿರಂತರ ಕಠಿಣ ಪರಿಶ್ರಮ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಆಯುಷ್ಮಾನ್ ಯೋಜನೆ, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮೀಸಲು, ರಸ್ತೆ, ಉಚಿತ ಅಡುಗೆ ಅನಿಲ ಮತ್ತು ವಿದ್ಯುತ್ ಸಂಪರ್ಕ, ಮುದ್ರಾ ಯೋಜನಾ, ಸ್ವನಿಧಿ ಯೋಜನಾ ಮತ್ತಿತರ ಯೋಜನೆಗಳು ಬಡವರು ಗೌರವದಿಂದ ಜೀವನ ನಡೆಸಲು ನಿರ್ದೇಶನ ನೀಡುತ್ತಿದೆ ಮತ್ತು ಅವರ ಸಬಲೀಕರಣದ ಮಾರ್ಗವಾಗಿದೆ.

ಗುಜರಾತ್ ಸೇರಿದಂತೆ ಇಡೀ ದೇಶದಲ್ಲಿ ಇಂತಹ ಅನೇಕ ಕೆಲಸಗಳಿವೆ, ಈ ಕಾರಣದಿಂದಾಗಿ ಇಂದು ಪ್ರತಿಯೊಬ್ಬ ದೇಶವಾಸಿ ಮತ್ತು ಪ್ರತಿ ಪ್ರದೇಶದ ಆತ್ಮವಿಶ್ವಾಸ ಹೆಚ್ಚುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮತ್ತು ಈ ಆತ್ಮವಿಶ್ವಾಸವೇ ಪ್ರತಿ ಸವಾಲನ್ನು ಜಯಿಸಲು, ಪ್ರತಿ ಕನಸನ್ನು ಸಾಧಿಸಲು ಸೂತ್ರವಾಗಿದೆ.

ಭಾರತೀಯ ಒಲಿಂಪಿಕ್ಸ್ ತಂಡವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಶತಮಾನದ ಅತಿದೊಡ್ಡ ವಿಪತ್ತಿನ ಹೊರತಾಗಿಯೂ ಅಧಿಕ ಸಂಖ್ಯೆಯ ಕ್ರೀಡಾಪಟ್ಟುಗಳು ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು. ಆಟಗಾರರು ಕೇವಲ ಅರ್ಹತೆ ಪಡೆದಿದ್ದಷ್ಟೇ ಅಲ್ಲ, ಉತ್ತಮ ಶ್ರೇಯಾಂಕದ ಆಟಗಾರರ ವಿರುದ್ಧ ಬಲಿಷ್ಠ ಹೋರಾಟ ನಡೆಸಿದರು.

ಭಾರತೀಯ ಆಟಗಾರರ ಉತ್ಸಾಹ, ಚೈತನ್ಯ, ಪ್ಯಾಷನ್ ಮತ್ತು ಸ್ಫೂರ್ತಿ ಇಂದು ಉನ್ನತ ಮಟ್ಟದಲ್ಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸೂಕ್ತ ಪ್ರತಿಭೆಯನ್ನು ಗುರುತಿ, ಉತ್ತೇಜಿಸಿದರೆ ಆಗ ಇಂತಹ ವಿಶ್ವಾಸ ಕಾಣಬಹುದು. ವ್ಯವಸ್ಥೆ ಬದಲಾವಣೆಯಾಗಿ ಪಾರದರ್ಶಕತೆ ಮೂಡಿದಾಗ ಇಂತಹ ವಿಶ್ವಾಸ ಮೂಡಲಿದೆ. ಈ ಹೊಸ ಹುಮ್ಮಸ್ಸು ನವಭಾರತ ನಿರ್ಮಾಣಕ್ಕೆ ಹೆಗ್ಗರುತಾಗಿದೆ.

ಕೊರೊನಾ ವಿರುದ್ಧ ಹೋರಾಟದಲ್ಲಿ ಮತ್ತು ನಮ್ಮ ಲಸಿಕಾ ಅಭಿಯಾನದಲ್ಲಿ ಇದೇ ವಿಶ್ವಾಸವನ್ನು ಮುಂದುವರಿಸುವಂತೆ ಪ್ರಧಾನಮಂತ್ರಿ ಅವರು ಜನರಿಗೆ ಕರೆ ನೀಡಿದರು. ಜಾಗತಿಕ ಸಾಂಕ್ರಾಮಿಕ ವಾತಾವರಣದ ಹಿನ್ನೆಲೆಯಲ್ಲಿ ನಿರಂತರವಾಗಿ ನಮ್ಮ ಜಾಗರೂಕತೆಯನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು.

ದೇಶವು 50 ಕೋಟಿ ಲಸಿಕೆ ನೀಡಿಕೆಯ ಮೈಲಿಗಲ್ಲು ಕಡೆಗೆ ವೇಗವಾಗಿ ಸಾಗುತ್ತಿದೆ, ಗುಜರಾತ್ 3.5 ಕೋಟಿ ಲಸಿಕೆ ಡೋಸ್ ಮೈಲಿಗಲ್ಲಿನತ್ತ ಸಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.  ಲಸಿಕಾ ಕಾರ್ಯಕ್ರಮಕ್ಕೆ ಇನ್ನೂ ಹೆಚ್ಚಿನ ಒತ್ತು ನೀಡಬೇಕು, ಮಾಸ್ಕ್ ಧರಿಸಬೇಕು ಮತ್ತು ಸಾಧ್ಯವಾದಷ್ಟೂ ಜನದಟ್ಟಣೆಯಿಂದ ದೂರವಿರಬೇಕು ಎಂದು ಪ್ರಧಾನಿ ಪ್ರತಿಪಾದಿಸಿದರು.

ರಾಷ್ಟ್ರ ನಿರ್ಮಾಣಕ್ಕೆ ಹೊಸ ಸ್ಫೂರ್ತಿಯನ್ನು ಜಾಗೃತಗೊಳಿಸುವ ಕರೆಯನ್ನು ಪ್ರಧಾನಮಂತ್ರಿ ಜನರಿಗೆ ನೀಡಿದರು, ಅವರು, 75ನೇ ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ಆ ಕಾರ್ಯ ಕೈಗೆತ್ತಿಕೊಳ್ಳಬೇಕೆಂದರು. ಆ ನಿರ್ಣಯಗಳಲ್ಲಿ, ಬಡವರು, ಶ್ರೀಮಂತರು, ಪುರುಷರು ಮತ್ತು ಮಹಿಳೆಯರು, ಶೋಷಿತರು, ಪ್ರತಿಯೊಬ್ಬರದ್ದೂ ಸಮಾನ ಪಾಲು ಇದೆ ಎಂದು ತಮ್ಮ ಭಾಷಣವನ್ನು ಸಮಾಪನಗೊಳಿಸಿದರು.  

ಕಳೆದ ವರ್ಷ 948 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಲಾಗಿತ್ತು, ಇದು ಸಾಮಾನ್ಯಕ್ಕಿಂತ ಶೇ.50ರಷ್ಟು ಹೆಚ್ಚಳವಾಗಿದೆ.  ಕೋವಿಡ್ ಸಮಯದಲ್ಲಿ ಆಹಾರ ಭದ್ರತೆಯನ್ನು ಖಾತ್ರಿ ಪಡಿಸಲು ಹೆಚ್ಚಿನ ಆಹಾರಧಾನ್ಯಗಳನ್ನು ಪೂರೈಸಲಾಗಿದೆ. 2020-21ರಲ್ಲಿ ಆಹಾರ ಸಬ್ಸಿಡಿಗಾಗಿ ಸುಮಾರು 2.84 ಲಕ್ಷ ಕೋಟಿ ರೂ.ಗಳನ್ನು ವ್ಯಯ ಮಾಡಲಾಗಿದೆ. 

ಗುಜರಾತ್ ನ 3.3 ಕೋಟಿಗೂ ಅರ್ಹ ಫಲಾನುಭವಿಗಳಿಗೆ 25.5 ಲಕ್ಷ ಮೆಟ್ರಿಕ್ ಟನ್ ಗೂ ಅಧಿಕ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ, ಇದಕ್ಕಾಗಿ 5 ಸಾವಿರ ಕೋಟಿಗೂ ಅಧಿಕ ಸಬ್ಸಿಡಿ ಹಣವನ್ನು ವ್ಯಯ ಮಾಡಲಾಗಿದೆ.

ವಲಸೆ ಫಲಾನುಭವಿಗಳಿಗೆ ಆಹಾರ ಭದ್ರತೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು, ಈವರೆಗೆ 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ‘ಒಂದು ರಾಷ್ಟ್ರ-ಒಂದು ಪಡಿತರ ಚೀಟಿ’ ಯೋಜನೆ ಜಾರಿಗೊಳಿಸಲಾಗಿದೆ. 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'Will walk shoulder to shoulder': PM Modi pushes 'Make in India, Partner with India' at Russia-India forum

Media Coverage

'Will walk shoulder to shoulder': PM Modi pushes 'Make in India, Partner with India' at Russia-India forum
NM on the go

Nm on the go

Always be the first to hear from the PM. Get the App Now!
...
Prime Minister pays tribute to Dr. Babasaheb Ambedkar on Mahaparinirvan Diwas
December 06, 2025

The Prime Minister today paid tributes to Dr. Babasaheb Ambedkar on Mahaparinirvan Diwas.

The Prime Minister said that Dr. Ambedkar’s unwavering commitment to justice, equality and constitutionalism continues to guide India’s national journey. He noted that generations have drawn inspiration from Dr. Ambedkar’s dedication to upholding human dignity and strengthening democratic values.

The Prime Minister expressed confidence that Dr. Ambedkar’s ideals will continue to illuminate the nation’s path as the country works towards building a Viksit Bharat.

The Prime Minister wrote on X;

“Remembering Dr. Babasaheb Ambedkar on Mahaparinirvan Diwas. His visionary leadership and unwavering commitment to justice, equality and constitutionalism continue to guide our national journey. He inspired generations to uphold human dignity and strengthen democratic values. May his ideals keep lighting our path as we work towards building a Viksit Bharat.”