ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಓಸ್ಲೋದಲ್ಲಿ ನಡೆದ ಭಾರತ-ನಾರ್ವೆ ಉದ್ಯಮ ವ್ಯವಹಾರ ಮತ್ತು ಸಂಶೋಧನಾ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಗೌರವಾನ್ವಿತ ರಾಜಕುಮಾರ  ಹಾಕನ್ ಮತ್ತು ನಾರ್ವೆಯ ಪ್ರಧಾನಮಂತ್ರಿ ಗೌರವಾನ್ವಿತ ಜೋನಾಸ್ ಗಹರ್ ಸ್ಟೋರೆ ಕೂಡ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

ಶೃಂಗಸಭೆಯಲ್ಲಿ 50ಕ್ಕೂ ಹೆಚ್ಚಿನ ಕಂಪನಿಗಳ ಸಿಇಒಗಳು ಮತ್ತು ನಾರ್ವೆ ಮತ್ತು ಭಾರತೀಯ ಉದ್ಯಮ ವ್ಯವಹಾರ ಮತ್ತು ಸಂಶೋಧನಾ ಸಮುದಾಯಗಳ 250ಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಿದ್ದರು. ಭಾರತ-ಇಎಫ್‌ಟಿಎ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ ಜಾರಿಗೆ ಬಂದ ನಂತರ ದ್ವಿಪಕ್ಷೀಯ ಆರ್ಥಿಕ ಸಹಕಾರದಲ್ಲಿ ಬೆಳೆಯುತ್ತಿರುವ ಆವೇಗವನ್ನು ಶೃಂಗಸಭೆ ಗುರುತಿಸಿತು.

ಉನ್ನತ ಮಟ್ಟದ ಉದ್ಯಮ ವ್ಯವಹಾರ ಮತ್ತು ಸಂಶೋಧನಾ ಶೃಂಗಸಭೆಗೆ ಮುಂಚಿತವಾಗಿ,  ಆರೋಗ್ಯ ರಕ್ಷಣೆ ನಾವೀನ್ಯತೆ, ಕಡಲ ಸಹಕಾರ, ಬ್ಯಾಟರಿಗಳು ಮತ್ತು ಇಂಧನ ಸಂಗ್ರಹ ವ್ಯವಸ್ಥೆಗಳು, ಡಿಜಿಟಲೀಕರಣ ಮತ್ತು ವಿದ್ಯುದೀಕರಣ ಮತ್ತು ಪವನಶಕ್ತಿಯ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಓಸ್ಲೋದ ವಿವಿಧ ಸ್ಥಳಗಳಲ್ಲಿ 4 ದುಂಡುಮೇಜಿನ ಅಧಿವೇಶನಗಳನ್ನು ಆಯೋಜಿಸಲಾಗಿತ್ತು.

ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ಮೋದಿ, ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ(ಟಿಇಪಿಎ) ಜಾರಿಗೆ ಬಂದ ನಂತರ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯಲ್ಲಿ  ಬೆಳವಣಿಗೆ ಕಂಡುಬಂದಿದೆ ಎಂದು ಶ್ಲಾಘಿಸಿದರು. ಟಿಇಪಿಎ ಅಡಿ, 100 ಶತಕೋಟಿ ಡಾಲರ್ ಹೂಡಿಕೆ ಗುರಿ ಸಾಧಿಸಲು ಮತ್ತು ಪರಿಣಾಮವಾಗಿ ಭಾರತದಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಎರಡೂ ಕಡೆಯ ಪಾಲುದಾರರು ಪ್ರಯತ್ನಗಳನ್ನು ಮಾಡಬೇಕು ಎಂದು ಕರೆ ನೀಡಿದರು. ಭಾರತದ ಬಲಿಷ್ಠ ಆರ್ಥಿಕ ಬೆಳವಣಿಗೆಯ ಪಥ, ಯುವ ಜನಸಂಖ್ಯಾ ಲಾಭಾಂಶ, ಪ್ರತಿಭಾನ್ವಿತ ಮತ್ತು ಮಹತ್ವಾಕಾಂಕ್ಷೆಯ ಯುವಕರು, ಸದೃಢವಾದ ವ್ಯಾಪಾರ ಅಭ್ಯಾಸಗಳು, ಹೂಡಿಕೆದಾರರ ಸ್ನೇಹಿ ನಿಯಂತ್ರಕ ಮಾರ್ಗಸೂಚಿಗಳು ಮತ್ತು ಸ್ಪರ್ಧಾತ್ಮಕ ಒಕ್ಕೂಟದ ಮನೋಭಾವ ಹೊಂದಿದೆ. ಭಾರತದ ನೀಲಿ ಆರ್ಥಿಕತೆ, ಹಡಗು ನಿರ್ಮಾಣ, ಹಸಿರು ಪರಿವರ್ತನೆ, ನವೀಕರಿಸಬಹುದಾದ ಇಂಧನ, ಆರೋಗ್ಯ-ತಂತ್ರಜ್ಞಾನ, ನಿರ್ಣಾಯಕ ಖನಿಜಗಳು ಮತ್ತು ಸ್ಟಾರ್ಟಪ್‌ಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ನಾರ್ವೆ ಹೂಡಿಕೆದಾರರು ಹೆಚ್ಚಿನ ಬಂಡವಾಳ ತೊಡಗಿಸಬೇಕು ಎಂದು ಆಹ್ವಾನ ನೀಡಿದರು.

ಭಾರತದ ಮಹತ್ವಾಕಾಂಕ್ಷೆಯ ಹಸಿರು ಪರಿವರ್ತನೆಯ ಕಾರ್ಯಸೂಚಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ ಮೋದಿ, ದೇಶದ ಪ್ರಮಾಣ, ಬೆಳೆಯುತ್ತಿರುವ ಇಂಧನ ಬೇಡಿಕೆಗಳು, ಹವಾಮಾನ ಬದ್ಧತೆಗಳು ಮತ್ತು ನವೀಕರಿಸಬಹುದಾದ ಇಂಧನದಲ್ಲಿ ತ್ವರಿತ ವಿಸ್ತರಣೆ, ಗ್ರಿಡ್ ಮೂಲಸೌಕರ್ಯ, ಹಸಿರು ಹೈಡ್ರೋಜನ್ ಮತ್ತು ಸ್ವಚ್ಛ ಇಂಧನ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ. ಸ್ವಚ್ಛ ಇಂಧನ ಹೂಡಿಕೆಗಳು, ಕಡಲ ಇಂಗಾಲ ಮುಕ್ತೀಕರಣ, ಸಾಗರ ಸುಸ್ಥಿರತೆ ಮತ್ತು ಹವಾಮಾನ ಹಣಕಾಸುಗಳಲ್ಲಿ ನಾರ್ವೆಯ ಜಾಗತಿಕ ನಾಯಕತ್ವವನ್ನು ಅವರು ಶ್ಲಾಘಿಸಿದರು. ಎರಡೂ ದೇಶಗಳ ವ್ಯಾಪಾರ ಸಮುದಾಯಗಳು ಹೊಸ ಪಾಲುದಾರಿಕೆಗಳನ್ನು ರೂಪಿಸಲು, ಸಹಯೋಗದ ಉದಯೋನ್ಮುಖ ಕ್ಷೇತ್ರಗಳನ್ನು ಗುರುತಿಸಲು ಮತ್ತು ಆರ್ಥಿಕ ಸಹಕಾರ ಬಲಪಡಿಸಲು ಮುಂದಾಗಬೇಕು ಎಂದು ಪ್ರಧಾನಿ ಒತ್ತಾಯಿಸಿದರು.

ಶೃಂಗಸಭೆ ಸಮಯದಲ್ಲಿ ಭಾರತ ಮತ್ತು ನಾರ್ವೆ ಕಂಪನಿಗಳು ಮತ್ತು ಘಟಕಗಳ ನಡುವೆ ಹಲವಾರು ವ್ಯವಹಾರ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

Click here to read full text speech

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
‘Give mothers, sisters their due rights’: PM Modi pushes for women's reservation from the ramparts of Red Fort

Media Coverage

‘Give mothers, sisters their due rights’: PM Modi pushes for women's reservation from the ramparts of Red Fort
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 16 ಆಗಸ್ಟ್ 2026
August 16, 2026

Aatmanirbhar Ambitions Meet Global Alliances: The Modi Doctrine in Action