ಶೇರ್
 
Comments
"ಉತ್ತರಾಖಂಡದ ಜನರ ಶಕ್ತಿ ಈ ದಶಕವನ್ನು ಉತ್ತರಾಖಂಡದ ದಶಕವನ್ನಾಗಿ ಮಾಡುತ್ತದೆ"
ಲಖ್ವಾರ್ ಯೋಜನೆಯನ್ನು ಮೊದಲ ಬಾರಿಗೆ 1976ರಲ್ಲಿ ರೂಪಿಸಲಾಯಿತು. 46 ವರ್ಷಗಳ ನಂತರ ಇಂದು ನಮ್ಮ ಸರ್ಕಾರ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುತ್ತಿದೆ. ಈ ವಿಳಂಬವು ಅಪರಾಧಕ್ಕೆ ಕಡಿಮೆಯೇನಿಲ್ಲ"
"ಹಿಂದಿನ ಕೊರತೆ ಮತ್ತು ತೊಂದರೆಗಳನ್ನು ಈಗ ಸೌಲಭ್ಯಗಳು ಮತ್ತು ಸಾಮರಸ್ಯವಾಗಿ ಪರಿವರ್ತಿಸಲಾಗುತ್ತಿದೆ"
"ಇಂದು, ದೆಹಲಿ ಮತ್ತು ಡೆಹ್ರಾಡೂನ್ ಸರ್ಕಾರಗಳು ಅಧಿಕಾರದ ಬಯಕೆಯಿಂದ ಪ್ರೇರಿತವಾಗಿಲ್ಲ ಬದಲಾಗಿ ಸೇವಾ ಮನೋಭಾವದಿಂದ ಮುನ್ನಡೆಯುತ್ತಿವೆ"
"ನಿಮ್ಮ ಕನಸುಗಳು ನಮ್ಮ ಸಂಕಲ್ಪಗಳು; ನಿಮ್ಮ ಬಯಕೆಯೇ ನಮ್ಮ ಸ್ಫೂರ್ತಿ; ಮತ್ತು ನಿಮ್ಮ ಪ್ರತಿಯೊಂದು ಅಗತ್ಯವನ್ನು ಪೂರೈಸುವುದು ನಮ್ಮ ಜವಾಬ್ದಾರಿ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರಾಖಂಡದಲ್ಲಿ 17500 ಕೋಟಿ ರೂ.ಗೂ ಹೆಚ್ಚು ಮೌಲ್ಯದ 23 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅವರು 1976 ರಲ್ಲಿ ಮೊದಲ ಬಾರಿಗೆ ರೂಪುಗೊಂಡ ಮತ್ತು ಅನೇಕ ವರ್ಷಗಳವರೆಗೆ ನೆನೆಗುದಿಗೆ ಬಿದ್ದಿದ್ದ ಲಖ್ವಾರ್  ವಿವಿಧೋದ್ದೇಶ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. 8700 ಕೋಟಿ ರೂ.ಗಳ ರಸ್ತೆ ವಲಯದ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಿದರು. 

ಈ ರಸ್ತೆ ಯೋಜನೆಗಳು ದೂರದ, ಗ್ರಾಮೀಣ ಮತ್ತು ಗಡಿ ಪ್ರದೇಶಗಳಲ್ಲಿ ಸಂಪರ್ಕವನ್ನು ಸುಧಾರಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸುತ್ತವೆ. ಇದರಿಂದ ಕೈಲಾಸ  ಮಾನಸ ಸರೋವರ  ಯಾತ್ರೆಗೂ ಸುಧಾರಿತ ಸಂಪರ್ಕ ದೊರೆಯಲಿದೆ. ಅವರು  ಉಧಮ್  ಸಿಂಗ್ ನಗರದಲ್ಲಿ ಏಮ್ಸ್ ಋಷಿಕೇಶ್ ಉಪಗ್ರಹ ಕೇಂದ್ರ ಮತ್ತು ಪಿಥೋರಗಢದ ಜಗಜೀವನ್ ರಾಮ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಉಪಗ್ರಹ ಕೇಂದ್ರಗಳು ದೇಶದ ಎಲ್ಲಾ ಭಾಗಗಳಲ್ಲಿ ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಪ್ರಧಾನಮಂತ್ರಿಯವರ ಪ್ರಯತ್ನಕ್ಕೆ ಅನುಗುಣವಾಗಿರುತ್ತವೆ. ಕಾಶಿಪುರದಲ್ಲಿ ಅವರು ಸುಗಂಧ ಉದ್ಯಾನ ಮತ್ತು  ಸಿತಾರ್ ಗಂಜ್ ನ ಪ್ಲಾಸ್ಟಿಕ್ ಕೈಗಾರಿಕಾ ಉದ್ಯಾನವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಜ್ಯದಾದ್ಯಂತ ವಸತಿ, ನೈರ್ಮಲ್ಯ ಮತ್ತು ಕುಡಿಯುವ ನೀರು ಪೂರೈಕೆಯಲ್ಲಿ ಇತರ ಅನೇಕ ಉಪಕ್ರಮಗಳಿಗೂ ಶಂಕುಸ್ಥಾಪನೆ ನೆರವೇರಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕುಮಾವೂನ್ ಅವರೊಂದಿಗಿನ ತಮ್ಮ ಸುದೀರ್ಘ ಒಡನಾಟವನ್ನು ಸ್ಮರಿಸಿದರು, ಉತ್ತರಾಖಂಡ್ ಟೋಪಿಯನ್ನು ತಮಗೆ ಗೌರವಪೂರ್ವಕವಾಗಿ ನೀಡಿದ್ದಕ್ಕಾಗಿ ಆ ಪ್ರದೇಶದ ಜನತೆಗೆ ಧನ್ಯವಾದ ಅರ್ಪಿಸಿದರು.  ಈ ದಶಕವು  ಉತ್ತರಾಖಂಡ್ ದಶಕ ಎಂದು ಅವರು ಏಕೆ ಭಾವಿಸುತ್ತಾರೆ ಎಂಬುದನ್ನು ಪ್ರಧಾನಮಂತ್ರಿ ವಿವರಿಸಿದರು. ಉತ್ತರಾಖಂಡದ ಜನರ ಶಕ್ತಿ ಈ ದಶಕವನ್ನು ಉತ್ತರಾಖಂಡದ ದಶಕವನ್ನಾಗಿ ಮಾಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಉತ್ತರಾಖಂಡದಲ್ಲಿ ವೃದ್ಧಿಸುತ್ತಿರುವ ಆಧುನಿಕ ಮೂಲಸೌಕರ್ಯ, ಚಾರ್ ಧಾಮ್ ಯೋಜನೆ, ಹೊಸ ರೈಲು ಮಾರ್ಗಗಳು, ಇದು ಈ ದಶಕದಲ್ಲಿ ಉತ್ತರಾಖಂಡದ ದಶಕವಾಗಿ ಮಾಡಲಿದೆ. ಜಲ ವಿದ್ಯುತ್, ಕೈಗಾರಿಕೆ, ಪ್ರವಾಸೋದ್ಯಮ, ನೈಸರ್ಗಿಕ  ಕೃಷಿ ಮತ್ತು ಸಂಪರ್ಕ ಕ್ಷೇತ್ರಗಳಲ್ಲಿ ಉತ್ತರಾಖಂಡ್ ನ ಸಾಧನೆಗಳನ್ನು ಅವರು ಉಲ್ಲೇಖಿಸಿದರು, ಅದು ಈ ದಶಕವನ್ನು ಉತ್ತರಾಖಂಡ್ ನ ದಶಕವನ್ನಾಗಿ ಮಾಡುತ್ತದೆ ಎಂದರು.

ಗ ಪ್ರದೇಶಗಳ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುವ ಚಿಂತನೆಯ ವಾಹಿನಿ ಮತ್ತು ಗುಡ್ಡಗಾಡು ಪ್ರದೇಶಗಳನ್ನು ಅಭಿವೃದ್ಧಿಯಿಂದ ದೂರವಿರಿಸಿದ ಚಿಂತನೆಯ ನಡುವಿನ ವ್ಯತ್ಯಾಸವನ್ನು ಪ್ರಧಾನಮಂತ್ರಿ ವಿವರಿಸಿದರು. ಅಭಿವೃದ್ಧಿ ಮತ್ತು ಸೌಲಭ್ಯಗಳು ಇಲ್ಲದ ಕಾರಣ, ಅನೇಕರು ಈ ಪ್ರದೇಶದಿಂದ ಇತರ ಸ್ಥಳಗಳಿಗೆ ವಲಸೆ ಹೋದರು ಎಂದು ಅವರು ಹೇಳಿದರು. ಎಲ್ಲರೊಂದಿಗೆ ಎಲ್ಲರ ವಿಕಾಸ, ಮನೋಭಾವದಿಂದ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.  ಉಧಮ್  ಸಿಂಗ್ ನಗರದಲ್ಲಿ ಏಮ್ಸ್ ಋಷಿಕೇಶ್ ಉಪಗ್ರಹ ಕೇಂದ್ರ ಮತ್ತು ಪಿಥೋರಗಢದ ಜಗಜೀವನ್ ರಾಮ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಇದು ರಾಜ್ಯದಲ್ಲಿ ವೈದ್ಯಕೀಯ ಮೂಲಸೌಕರ್ಯವನ್ನು ಬಲಪಡಿಸಲಿದೆ ಎಂದು ಅವರು ಹೇಳಿದರು.

ಇಂದು ಆರಂಭಿಸಲಾದ ಯೋಜನೆಗಳು ಸೇರಿದಂತೆ ವಿವಿಧ ಯೋಜನೆಯಿಂದ ರಾಜ್ಯದಲ್ಲಿ ಸಂಪರ್ಕ ಸುಧಾರಣೆಯಾಗಲಿದೆ ಎಂದು ಅವರು ಹೇಳಿದರು. ಇಂದು ಹಾಕಲಾದ ಅಡಿಗಲ್ಲು, ಪ್ರತಿಜ್ಞೆಯ ಕಲ್ಲುಗಳಾಗಿವೆ, ಅವುಗಳನ್ನು ಸಂಪೂರ್ಣ ಸಂಕಲ್ಪದೊಂದಿಗೆ ಅನುಸರಿಸಲಾಗುವುದು ಎಂದು ಅವರು ಹೇಳಿದರು. ಹಿಂದಿನ ಕೊರತೆ ಮತ್ತು ತೊಂದರೆಗಳನ್ನು ಈಗ ಸೌಲಭ್ಯ ಮತ್ತು ಸಾಮರಸ್ಯವಾಗಿ ಪರಿವರ್ತಿಸಲಾಗುತ್ತಿದೆ ಎಂದು ಅವರು ಹೇಳಿದರು. ಹರ್  ಘರ್  ಜಲ್ (ಪ್ರತಿ ಮನೆಗೆ ನೀರು), ಶೌಚಾಲಯಗಳು,  ಉಜ್ವಲಾ  ಯೋಜನೆ, ಪಿಎಂಎವೈ ಮೂಲಕ ಕಳೆದ ಏಳು ವರ್ಷಗಳಲ್ಲಿ ಮಹಿಳೆಯರ ಜೀವನಕ್ಕೆ ಹೊಸ ಸೌಲಭ್ಯಗಳು ಮತ್ತು ಘನತೆ ದೊರಕಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸರ್ಕಾರದ ಯೋಜನೆಗಳ ವಿಳಂಬವು ಈ ಮೊದಲು ಸರ್ಕಾರದಲ್ಲಿದ್ದವರ ಶಾಶ್ವತ ಟ್ರೇಡ್ ಮಾರ್ಕ್ ಆಗಿ ಮಾರ್ಪಟ್ಟಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. "ಇಂದು ಉತ್ತರಾಖಂಡದಲ್ಲಿ ಆರಂಭವಾಗಿರುವ ಲಖ್ವಾರ್  ಯೋಜನೆಗೆ ಇದೇ ಇತಿಹಾಸವಿದೆ. ಈ ಯೋಜನೆಯನ್ನು ಮೊದಲು 1976 ರಲ್ಲಿ ಯೋಚಿಸಲಾಗಿತ್ತು. 46 ವರ್ಷಗಳ ನಂತರ ಇಂದು ನಮ್ಮ ಸರ್ಕಾರ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದೆ. ಈ ವಿಳಂಬವು ಅಪರಾಧಕ್ಕಿಂತ ಕಡಿಮೆಯೇನಿಲ್ಲ", ಎಂದು ಅವರು ಹೇಳಿದರು.

ಗಂಗೋತ್ರಿಯಿಂದ  ಗಂಗಾಸಾಗರಕ್ಕೆ ಸರ್ಕಾರ ಅಭಿಯಾನ ಆರಂಭಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಶೌಚಾಲಯ ನಿರ್ಮಾಣ, ಉತ್ತಮ ಒಳಚರಂಡಿ ವ್ಯವಸ್ಥೆ ಮತ್ತು ಆಧುನಿಕ ನೀರು ಸಂಸ್ಕರಣಾ ಸೌಲಭ್ಯಗಳಿಂದ, ಗಂಗಾ ನದಿಗೆ ಸೇರುತ್ತಿದ್ದ ಕೊಳಕು ನೀರಿನ ಚರಂಡಿಗಳ ಸಂಖ್ಯೆ ವೇಗವಾಗಿ ಕಡಿಮೆಯಾಗುತ್ತಿದೆ. ಅದೇ ರೀತಿ,  ನೈನಿತಾಲ್  ಝೀಲ್  ಅನ್ನು ಕೂಡ ಮಾಡಲಾಗುತ್ತಿದೆ ಎಂದರು. ನೈನಿತಾಲ್ ನ  ದೇವಸ್ಥಳದಲ್ಲಿ ಕೇಂದ್ರ ಸರ್ಕಾರ ಭಾರತದ ಅತಿದೊಡ್ಡ ಆಪ್ಟಿಕಲ್ ಟೆಲಿಸ್ಕೋಪ್ ಅನ್ನು ಸ್ಥಾಪಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದು ದೇಶ ಮತ್ತು ವಿದೇಶಗಳ ವಿಜ್ಞಾನಿಗಳಿಗೆ ಹೊಸ ಸೌಲಭ್ಯವನ್ನು ನೀಡಿದೆ ಮಾತ್ರವಲ್ಲ, ಈ ಪ್ರದೇಶಕ್ಕೆ ಹೊಸ ಗುರುತನ್ನು   ನೀದಿದೆ. ಇಂದು ದೆಹಲಿ ಮತ್ತು ಡೆಹ್ರಾಡೂನ್ ಸರ್ಕಾರಗಳು ಅಧಿಕಾರದ ಬಯಕೆಯಿಂದ ಪ್ರೇರಿತವಾಗಿಲ್ಲ, ಬದಲಾಗಿ ಸೇವಾ ಮನೋಭಾವದಿಂದ ಮುನ್ನಡೆಯುತ್ತಿವೆ ಎಂದು ಅವರು ಹೇಳಿದರು.

ಗಡಿ ರಾಜ್ಯವಾಗಿದ್ದರೂ ರಕ್ಷಣಾ ಸಂಬಂಧಿತ ಅನೇಕ ಅಗತ್ಯಗಳನ್ನು ನಿರ್ಲಕ್ಷಿಸಲಾಗಿತ್ತು ಎಂದು ಪ್ರಧಾನಮಂತ್ರಿ ವಿಷಾದಿಸಿದರು. ಸಂಪರ್ಕದ ಜೊತೆಗೆ, ರಾಷ್ಟ್ರೀಯ ಭದ್ರತೆಯ ಪ್ರತಿಯೊಂದು ಅಂಶವನ್ನೂ ನಿರ್ಲಕ್ಷಿಸಲಾಗಿತ್ತು. ಸೈನಿಕರು ಸಂಪರ್ಕ, ಅಗತ್ಯ ರಕ್ಷಾಕವಚ,  ಮದ್ದುಗುಂಡುಗಳು  ಮತ್ತು ಶಸ್ತ್ರಾಸ್ತ್ರಗಳಿಗಾಗಿ ಕಾಯಬೇಕಾಗಿತ್ತು ಅಷ್ಟೇ ಅಲ್ಲ, ಆಕ್ರಮಣಕಾರರು ಮತ್ತು ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಲು ಸಹ ಕಾಯಬೇಕಾಗಿತ್ತು ಎಂದು ಹೇಳಿದರು.

ಉತ್ತರಾಖಂಡವು ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು ಬಯಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. "ನಿಮ್ಮ ಕನಸುಗಳು ನಮ್ಮ ಸಂಕಲ್ಪಗಳು; ನಿಮ್ಮ ಬಯಕೆಯೇ ನಮ್ಮ ಸ್ಫೂರ್ತಿ; ಮತ್ತು ನಿಮ್ಮ ಪ್ರತಿಯೊಂದು ಅಗತ್ಯವನ್ನು ಪೂರೈಸುವುದು ನಮ್ಮ ಜವಾಬ್ದಾರಿ." ಎಂದು ಹೇಳಿದರು.  ಉತ್ತರಾಖಂಡ್ ಜನರ ಸಂಕಲ್ಪವು ಈ ದಶಕವನ್ನು ಉತ್ತರಾಖಂಡದ ದಶಕವನ್ನಾಗಿ ಮಾಡುತ್ತದೆ ಎಂದು ಅವರು ಪುನರುಚ್ಚರಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೋದಿ ಮಾಸ್ಟರ್‌ಕ್ಲಾಸ್: ಪ್ರಧಾನಿ ಮೋದಿಯವರೊಂದಿಗೆ ‘ಪರೀಕ್ಷಾ ಪೇ ಚರ್ಚಾ’
Share your ideas and suggestions for 'Mann Ki Baat' now!
Explore More
Do things that you enjoy and that is when you will get the maximum outcome: PM Modi at Pariksha Pe Charcha

ಜನಪ್ರಿಯ ಭಾಷಣಗಳು

Do things that you enjoy and that is when you will get the maximum outcome: PM Modi at Pariksha Pe Charcha
PM calls for rapid rollout of 5G, says will contribute $450 bn to economy

Media Coverage

PM calls for rapid rollout of 5G, says will contribute $450 bn to economy
...

Nm on the go

Always be the first to hear from the PM. Get the App Now!
...
PM congratulates Indian contingent for the best ever performance at the Deaflympics
May 17, 2022
ಶೇರ್
 
Comments

The Prime Minister, Shri Narendra Modi has congratulated the Indian contingent for the best ever performance at the recently concluded Deaflympics.

He will host the contingent at the Prime Minister residence on 21st.

The Prime Minister tweeted :

"Congrats to the Indian contingent for the best ever performance at the recently concluded Deaflympics! Every athlete of our contingent is an inspiration for our fellow citizens.

I will be hosting the entire contingent at my residence on the morning of the 21st."