ಭಾರತದ ಸಾರ್ವಜನಿಕ ಆರೋಗ್ಯ ಮತ್ತು ಪೌಷ್ಟಿಕಾಂಶ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ #NextGenGST ಸುಧಾರಣೆಗಳ ಪರಿವರ್ತನಾತ್ಮಕ ಪರಿಣಾಮವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಪುನರುಚ್ಚರಿಸಿದರು. ಅಗತ್ಯ ಆಹಾರ ಪದಾರ್ಥಗಳು, ಅಡುಗೆ ಬೇಕಾಗುವ ಅಗತ್ಯ ವಸ್ತುಗಳು ಮತ್ತು ಪ್ರೋಟೀನ್-ಭರಿತ ಉತ್ಪನ್ನಗಳ ಮೇಲಿನ ತೆರಿಗೆ ದರಗಳನ್ನು ಕಡಿಮೆ ಮಾಡುವ ಮೂಲಕ, ಈ ಸುಧಾರಣೆಗಳು ದೇಶಾದ್ಯಂತ ಕುಟುಂಬಗಳಿಗೆ ಸುಧಾರಿತ ಕೈಗೆಟುಕುವಿಕೆ ಮತ್ತು ಆಹಾರ ಪೂರೈಕೆಗೆ ನೇರವಾಗಿ ಕೊಡುಗೆ ನೀಡುತ್ತವೆ.
ಈ ಕ್ರಮಗಳು ಆಯುಷ್ಮಾನ್ ಭಾರತ್ ಮತ್ತು ಪೋಷಣ್(POSHAN) ಅಭಿಯಾನದಂತಹ ಪ್ರಮುಖ ಉಪಕ್ರಮಗಳಿಗೆ ಪೂರಕವಾಗಿದ್ದು, ಪ್ರತಿಯೊಬ್ಬ ನಾಗರಿಕನ ಸಮಗ್ರ ಯೋಗಕ್ಷೇಮ, ಸಮತೋಲಿತ ಪೋಷಣೆ ಮತ್ತು ವರ್ಧಿತ ಜೀವನದ ಗುಣಮಟ್ಟಕ್ಕೆ ಸರ್ಕಾರದ ಬದ್ಧತೆಯನ್ನು ತೋರಿಸುತ್ತವೆ.
ಎಕ್ಸ ನಲ್ಲಿ ಶ್ರೀಮತಿ ಚಂದ್ರ ಆರ್. ಶ್ರೀಕಾಂತ್ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು:
“#NextGenGST ಕ್ರಮಗಳು ಭಾರತದಾದ್ಯಂತ ಕುಟುಂಬಗಳಿಗೆ ಅಗತ್ಯ ಆಹಾರ ಪದಾರ್ಥಗಳು, ಅಡುಗೆ ಅಗತ್ಯ ವಸ್ತುಗಳು ಮತ್ತು ಪ್ರೋಟೀನ್-ಭರಿತ ಉತ್ಪನ್ನಗಳನ್ನು ಕೈಗೆಟುಕುವಂತೆ ಮಾಡುವ ಮೂಲಕ 'ಸ್ವಸ್ಥ ಭಾರತ'ದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ.
ಆಯುಷ್ಮಾನ್ ಭಾರತ್ ಮತ್ತು ಪೋಷಣ್(POSHAN) ಅಭಿಯಾನದಂತಹ ಉಪಕ್ರಮಗಳೊಂದಿಗೆ, ಈ ಸುಧಾರಣೆಗಳು ಪ್ರತಿಯೊಬ್ಬ ನಾಗರಿಕನ ಉತ್ತಮ ಆರೋಗ್ಯ, ಸಮತೋಲಿತ ಪೋಷಣೆ ಮತ್ತು ಸುಧಾರಿತ ಜೀವನ ಗುಣಮಟ್ಟಕ್ಕೆ ನಮ್ಮ ಬದ್ಧತೆಯನ್ನು ಬಲಪಡಿಸುತ್ತವೆ.” ಎಂದು ಟ್ವೀಟ್ ಮಾಡಿದ್ದಾರೆ.”
A big push towards health
— Chandra R. Srikanth (@chandrarsrikant) September 3, 2025
More emphasis on proteins
Carbonated drinks, tobacco, cigarettes get the axe
GST on food items, drinks, cooking items ⏬⏬
Graphics via @moneycontrolcom pic.twitter.com/nAT4dnNVpN


