ವಾಲ್ಮೀಕಿ ಜಯಂತಿಯ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭ ಕೋರಿದ್ದಾರೆ.
ಪ್ರಾಚೀನ ಕಾಲದಿಂದಲೂ ಭಾರತೀಯ ಸಮಾಜ ಮತ್ತು ಕುಟುಂಬ ಜೀವನದ ಮೇಲೆ ಮಹರ್ಷಿ ವಾಲ್ಮೀಕಿಯವರ ಶುದ್ಧ ಮತ್ತು ಆದರ್ಶ ಚಿಂತನೆಗಳ ಆಳವಾದ ಪ್ರಭಾವವಿದೆ. ಸಾಮಾಜಿಕ ಸಾಮರಸ್ಯದಲ್ಲಿ ಬೇರೂರಿರುವ ಮಹರ್ಷಿ ವಾಲ್ಮೀಕಿಯವರ ಬೋಧನೆಗಳು ರಾಷ್ಟ್ರವನ್ನು ಪ್ರೇರೇಪಿಸುತ್ತಿವೆ ಮತ್ತು ಬೆಳಗಿಸುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಮಂತ್ರಿ;
"ಮಹರ್ಷಿ ವಾಲ್ಮೀಕಿ ಜಯಂತಿಯಂದು ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳು. ಅವರ ಸದ್ಗುಣಶೀಲ ಮತ್ತು ಆದರ್ಶವಾದಿ ಚಿಂತನೆಗಳು ಪ್ರಾಚೀನ ಕಾಲದಿಂದಲೂ ನಮ್ಮ ಸಮಾಜ ಮತ್ತು ಕುಟುಂಬಗಳ ಮೇಲೆ ಆಳವಾದ ಪ್ರಭಾವ ಬೀರಿವೆ. ಸಾಮಾಜಿಕ ಸಾಮರಸ್ಯವನ್ನು ಆಧರಿಸಿದ ಅವರ ಸೈದ್ಧಾಂತಿಕ ಬೆಳಕು ದೇಶವಾಸಿಗಳನ್ನು ಯಾವಾಗಲೂ ಬೆಳಗಿಸುತ್ತದೆ."
सभी देशवासियों को महर्षि वाल्मीकि जयंती की हार्दिक शुभकामनाएं। प्राचीनकाल से ही हमारे समाज और परिवार पर उनके सात्विक और आदर्श विचारों का गहरा प्रभाव रहा है। सामाजिक समरसता पर आधारित उनके वैचारिक प्रकाशपुंज देशवासियों को सदैव आलोकित करते रहेंगे। pic.twitter.com/VJWk5ayJo8
— Narendra Modi (@narendramodi) October 7, 2025


