ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬುದ್ಧ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಎಲ್ಲಾ ನಾಗರಿಕರಿಗೆ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಪ್ರಧಾನಮಂತ್ರಿಗಳು ಪೋಸ್ಟ್ ಮಾಡಿರುವ ಸಂದೇಶ ಹೀಗಿದೆ:
"ಬುದ್ಧ ಪೂರ್ಣಿಮೆಯಂದು ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳು. ಸತ್ಯ, ಸಮಾನತೆ ಮತ್ತು ಸದ್ಭಾವದ ಸಿದ್ಧಾಂತವನ್ನಾಧರಿಸಿರುವ ಭಗವಾನ್ ಬುದ್ಧನ ಸಂದೇಶಗಳು ಮಾನವೀಯತೆಯ ಪಥದ ಮಾರ್ಗದರ್ಶಿಯಾಗಿವೆ. ತ್ಯಾಗ ಮತ್ತು ತಪಸ್ಸಿಗೆ ಮುಡಿಪಾಗಿಟ್ಟ ಅವರ ಜೀವನವು ವಿಶ್ವ ಸಮುದಾಯವನ್ನು ಸಹಾನುಭೂತಿ ಮತ್ತು ಶಾಂತಿಯೆಡೆಗೆ ಸದಾ ಪ್ರೇರೇಪಿಸುತ್ತದೆ.”
सभी देशवासियों को बुद्ध पूर्णिमा की ढेरों शुभकामनाएं। सत्य, समानता और सद्भाव के सिद्धांत पर आधारित भगवान बुद्ध के संदेश मानवता के पथ-प्रदर्शक रहे हैं। त्याग और तप को समर्पित उनका जीवन विश्व समुदाय को सदैव करुणा और शांति के लिए प्रेरित करता रहेगा।
— Narendra Modi (@narendramodi) May 12, 2025


