ಭಾರತ ಮೊದಲು ಎಂಬ ಬದ್ಧತೆ, ಕರ್ತವ್ಯ ಮತ್ತು ಸಹಾನುಭೂತಿಯ ಸಂಕೇತವಾಗಿ 'ಸೇವಾ ತೀರ್ಥ' – ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೇವಾ ತೀರ್ಥವನ್ನು ರಾಷ್ಟ್ರಕ್ಕೆ ಅರ್ಪಿಸಿದರು ಮತ್ತು ಭಾರತದ ಜನರಿಗೆ ಸೇವೆ ಸಲ್ಲಿಸುವ ತಮ್ಮ ಅಚಲ ಸಂಕಲ್ಪವನ್ನು ಪುನರುಚ್ಚರಿಸುತ್ತಾ 'ನಾಗರಿಕ ದೇವೋ ಭವ' ಎಂಬ ಚೈತನ್ಯದಿಂದ ಇದು ಮಾರ್ಗದರ್ಶಿಸಲ್ಪಟ್ಟಿದೆ ಎಂದು ವಿವರಿಸಿದ್ದಾರೆ.

ಸೇವಾ ತೀರ್ಥದ ಸಮರ್ಪಣೆಯು ಸಾರ್ವಜನಿಕ ಸೇವೆ ಮತ್ತು ನಾಗರಿಕರ ಕಲ್ಯಾಣದ ಬಗೆಗಿನ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸಲಿದೆ ಎಂದು ಶ್ರೀ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ತವ್ಯ, ಕರುಣೆ ಮತ್ತು 'ಭಾರತ ಮೊದಲು' ಎಂಬ ತತ್ವಕ್ಕೆ ಬದ್ಧತೆಯ ಉಜ್ವಲ ಮತ್ತು ಶಕ್ತಿಶಾಲಿ ಸಂಕೇತವಾಗಿ 'ಸೇವಾ ತೀರ್ಥ' ನಿಂತಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ನಿಃಸ್ವಾರ್ಥ ಸೇವೆ ಮತ್ತು ಎಲ್ಲರ ಕಲ್ಯಾಣಕ್ಕಾಗಿ ಅವಿಶ್ರಾಂತ ಬದ್ಧತೆಯೊಂದಿಗೆ ಸಾಗಲು ಇದು ಪೀಳಿಗೆಗಳಾದ್ಯಂತ ಪ್ರೇರಣೆ ನೀಡಲಿದೆ ಹಾಗೂ ಪ್ರತಿಯೊಬ್ಬ ನಾಗರಿಕನ ಯೋಗಕ್ಷೇಮಕ್ಕಾಗಿ ಸಮರ್ಪಣಾಭಾವದಿಂದ ಮುನ್ನಡೆಯುವಂತೆ ಜನರನ್ನು ಪ್ರೇರೇಪಿಸಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿಗಳು  ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ: 

“ಭಾರತದ ಜನರಿಗೆ ಸೇವೆ ಸಲ್ಲಿಸುವ ಅಚಲ ಸಂಕಲ್ಪದೊಂದಿಗೆ ಮತ್ತು ನಾಗರಿಕ ದೇವೋ ಭವದ ಪವಿತ್ರ ಮನೋಭಾವದಿಂದ ಮಾರ್ಗದರ್ಶಿಸಲ್ಪಟ್ಟ ಸೇವಾ ತೀರ್ಥವು ವಿನಮ್ರವಾಗಿ ರಾಷ್ಟ್ರಕ್ಕೆ ಸಮರ್ಪಿತವಾಗಿದೆ.

ಸೇವಾ ತೀರ್ಥವು ಕರ್ತವ್ಯ, ಸಹಾನುಭೂತಿ ಮತ್ತು "ಭಾರತ ಮೊದಲು" ಎಂಬ ತತ್ವಕ್ಕೆ ಬದ್ಧತೆಯ ಉಜ್ವಲ ಸಂಕೇತವಾಗಿ ಸದಾ ನಿಲ್ಲಲಿ. ಇದು ನಿಃಸ್ವಾರ್ಥ ಸೇವೆಯೊಂದಿಗೆ ಎಲ್ಲರ ಕಲ್ಯಾಣಕ್ಕಾಗಿ ಅವಿಶ್ರಾಂತ ಬದ್ಧತೆಯ ಹಾದಿಯಲ್ಲಿ ನಡೆಯಲು ಪೀಳಿಗೆಗಳಿಗೆ ಸ್ಫೂರ್ತಿ ನೀಡಲಿ.

 

“देशवासियों की सेवा के अटूट संकल्प और 'नागरिक देवो भव' की पावन भावना को साथ लेकर, आज ‘सेवा तीर्थ’ को राष्ट्र को समर्पित करने का सौभाग्य मिला।

‘सेवा तीर्थ’ कर्तव्य, करुणा और ‘राष्ट्र प्रथम’ के लिए हमारी प्रतिबद्धता का सशक्त प्रतीक है।

मेरी कामना है कि यह आने वाली पीढ़ियों को निःस्वार्थ सेवा और जन-जन के कल्याण के लिए समर्पित होकर आगे बढ़ने को प्रेरित करता रहे।”

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Odisha’s Dhenkanal farmers export 3 tonne of mango to London

Media Coverage

Odisha’s Dhenkanal farmers export 3 tonne of mango to London
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 14 ಮೇ 2026
May 14, 2026

Kisan Kalyan to Viksit Bharat: PM Modi Delivers Jobs, Markets & Dignity Across Rural and Industrial India