ಉಲಾನ್ಬತಾರ್ ಓಪನ್ 2025 ರ 3 ನೇ ಶ್ರೇಯಾಂಕ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಕುಸ್ತಿಪಟುಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. "ನಮ್ಮ ನಾರಿ ಶಕ್ತಿ ರ್‍ಯಾಂಕಿಂಗ್ ಸರಣಿಯಲ್ಲಿ ಇದುವರೆಗಿನ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಈ ಸಾಧನೆಯ ಮೂಲಕ ಸರಣಿಯನ್ನು ಇನ್ನಷ್ಟು ಸ್ಮರಣೀಯವಾಗಿಸಿದೆ. ಈ ಕ್ರೀಡಾ ಪ್ರದರ್ಶನವು ಹಲವಾರು ಮುಂಬರುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ" ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿಯವರ ಎಕ್ಸ್ ಪೋಸ್ಟ್ ಹೀಗಿದೆ:
"ಕ್ರೀಡೆಯಲ್ಲಿ ಭಾರತದ ಸಾಧನೆಗಳು ಮುಂದುವರೆದಿವೆ! ಉಲಾನ್‌ಬತಾರ್ ಓಪನ್ 2025ರಲ್ಲಿ ಅದ್ಭುತ ಪ್ರದರ್ಶನಕ್ ತೋರಿ 3ನೇ ಶ್ರೇಯಾಂಕ ಸರಣಿಯಲ್ಲಿ 6 ಚಿನ್ನ ಸೇರಿದಂತೆ 21 ಪದಕಗಳನ್ನು ಗೆದ್ದ ನಮ್ಮ ಕುಸ್ತಿಪಟುಗಳಿಗೆ ಅಭಿನಂದನೆಗಳು. ನಮ್ಮ ನಾರಿ ಶಕ್ತಿ ರ್‍ಯಾಂಕಿಂಗ್ ಸರಣಿಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದು, ಈ ಸಾಧನೆಯನ್ನು ಇನ್ನಷ್ಟು ಸ್ಮರಣೀಯವಾಗಿಸಿದೆ. ಈ ಅತ್ಯದ್ಭುತ ಕ್ರೀಡಾ ಪ್ರದರ್ಶನವು ಭವಿಷ್ಯದ ಅನೇಕ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಲಿದೆ."
India’s accomplishments in sports continue! Congrats to our wrestlers for their phenomenal performance at the 3rd Ranking Series in the Ulaanbaatar Open 2025, bringing home 21 medals including 6 Golds. Our Nari Shakti has given their best ever performance at the Ranking Series,… pic.twitter.com/dXqjecuQ5Z
— Narendra Modi (@narendramodi) June 2, 2025


