ಗಯಾನಾದ ಸಾರ್ವತ್ರಿಕ ಮತ್ತು ಪ್ರಾದೇಶಿಕ ಚುನಾವಣೆಗಳಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ಅಧ್ಯಕ್ಷ ಇರ್ಫಾನ್ ಅಲಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಸದೃಢ ಮತ್ತು ಐತಿಹಾಸಿಕ ಜನರ ನಡುವಿನ ಬಾಂಧವ್ಯ ಹೊಂದಿರುವ ಭಾರತ-ಗಯಾನಾ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಎದುರು ನೋಡುತ್ತಿರುವುದಾಗಿ ಶ್ರೀ ಮೋದಿ ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಸಾರ್ವತ್ರಿಕ ಮತ್ತು ಪ್ರಾದೇಶಿಕ ಚುನಾವಣೆಗಳಲ್ಲಿ ಅದ್ಭುತ ಯಶಸ್ಸು ಸಾಧಿಸಿರುವ ಅಧ್ಯಕ್ಷ ಇರ್ಫಾನ್ ಅಲಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಸದೃಢ ಮತ್ತು ಐತಿಹಾಸಿಕ ಜನರ ನಡುವಿನ ಬಾಂಧವ್ಯದ ಮೇಲೆ ನೆಲೆಗೊಂಡಿರುವ ಭಾರತ-ಗಯಾನಾ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾನು ಎದುರು ನೋಡುತ್ತಿದ್ದೇನೆ."
@presidentaligy
Heartiest congratulations to President Irfaan Ali on the resounding success in General and Regional elections. I look forward to further strengthening India-Guyana partnership anchored in strong and historical people-to-people ties.@presidentaligy
— Narendra Modi (@narendramodi) September 6, 2025


