ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ ಡಿಸ್ಕಸ್ ಥ್ರೋ-ಎಫ್ 54/55/56ರಲ್ಲಿ ಕಂಚಿನ ಪದಕ ಗೆದ್ದ ಮುತ್ತುರಾಜ ಅವರನ್ನು ಅಭಿನಂದಿಸಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:
‘‘ ಕಂಚಿನ ಪದಕ ಗೆದ್ದ ಮುತ್ತುರಾಜ ಅವರಿಗೆ ದೊಡ್ಡ ಚಪ್ಪಾಳೆ.
ಪುರುಷರ ಡಿಸ್ಕಸ್ ಥ್ರೋ-ಎಫ್ 54/55/56 ವಿಭಾಗದಲ್ಲಿಅದ್ಭುತ ಸಾಧನೆಗೆ ಅಭಿನಂದನೆಗಳು. ಈ ಅಸಾಧಾರಣ ಪ್ರದರ್ಶನವು ಅವರ ಸಮರ್ಪಣೆ ಮತ್ತು ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಭಾರತ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ,’’ ಎಂದಿದ್ದಾರೆ.
A resounding applause for remarkable Muthuraja for the Bronze Medal victory.
— Narendra Modi (@narendramodi) October 24, 2023
Congratulations on this great achievement in Men's Discus Throw-F54/55/56. This exceptional performance is a testament to his dedication and spirit. India is proud of you! pic.twitter.com/vvPTXhh5G3


