ಯೋಗದ ರಾಷ್ಟ್ರವ್ಯಾಪಿ ಆಂದೋಲನವನ್ನು ಮತ್ತಷ್ಟು ಮುನ್ನಡೆಸುವ ಮೂಲಕ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವ ಆಂಧ್ರಪ್ರದೇಶದ ಜನರ ಸ್ಫೂರ್ತಿದಾಯಕ ಬದ್ಧತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ಲಾಘಿಸಿದ್ದಾರೆ.
ವಿಶಾಖಪಟ್ಟಣದಲ್ಲಿ ನಿನ್ನೆ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಯೋಗಾಂಧ್ರ ಉಪಕ್ರಮದ ಅಡಿಯಲ್ಲಿ ರಾಜ್ಯದ ತಳಮಟ್ಟದ ಉತ್ಸಾಹ ಮತ್ತು ಸಕ್ರಿಯ ಬೆಂಬಲವನ್ನು ಶ್ರೀ ಮೋದಿ ಅವರು ಶ್ಲಾಘಿಸಿದ್ದಾರೆ.
ಎಕ್ಸ್ ನಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪೋಸ್ಟ್ ಗೆ ಪ್ರಧಾನಮಂತ್ರಿ ಅವರ ಪ್ರತಿಕ್ರಿಯೆ ಹೀಗಿದೆ:
"ಯೋಗವು ಮತ್ತೊಮ್ಮೆ ಜನರನ್ನು ಒಟ್ಟುಗೂಡಿಸಿದೆ!
ಯೋಗವನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳುವ ಆಂದೋಲನವನ್ನು ಬಲಪಡಿಸಿದ ಆಂಧ್ರಪ್ರದೇಶದ ಜನರ ಪ್ರಯತ್ನ ಶ್ಲಾಘನೀಯ. ವಿಶಾಖಪಟ್ಟಣಂನಲ್ಲಿ ನಡೆದ ನಾನೂ ಕೂಡ ಭಾಗವಹಿಸಿದ ಯೋಗ ಕಾರ್ಯಕ್ರಮ ಮತ್ತು #Yogandhra ಉಪಕ್ರಮವು ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮದತ್ತ ಜನರನ್ನು ಸದಾ ಪ್ರೇರೇಪಿಸುತ್ತದೆ.
Yoga brings people together, once again!
— Narendra Modi (@narendramodi) June 22, 2025
Compliments to the people of Andhra Pradesh for the manner in which they have strengthened the movement to make Yoga a part of their lives. The #Yogandhra initiative and the programme in Visakhapatnam, which I also took part in, will… https://t.co/p00EQGm0o0


