ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮದ ಪೋರ್ಟಲ್ ಅನಾವರಣ
"ನನಗೆ ಈ ಕೂಟವು ಜಿ-20 ಶೃಂಗಸಭೆಗಿಂತ ಕಡಿಮೆ ಏನಿಲ್ಲ"
"ಈ ಕಾರ್ಯಕ್ರಮವು ಟೀಮ್ ಭಾರತ್‌ ಯಶಸ್ಸಿನ ಸಂಕೇತವಾಗಿದೆ ಮತ್ತು ಸಬ್‌ಕಾ ಪ್ರಯಾಸ್‌ನ ಉತ್ಸಾಹವಾಗಿದೆ"
"ಸ್ವತಂತ್ರ ಭಾರತದ ಟಾಪ್ 10 ಕಾರ್ಯಕ್ರಮಗಳ ಯಾವುದೇ ಪಟ್ಟಿಯಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮವು ಸುವರ್ಣಾಕ್ಷರಗಳಲ್ಲಿ ಚಿತ್ರಿಸುತ್ತದೆ"
"ಆಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮದ ಪ್ರಗತಿಯ ಪಟ್ಟಿಯು ನನಗೆ ಸ್ಫೂರ್ತಿಯಾಗಿದೆ"
"ಸಂಪನ್ಮೂಲಗಳ ಅತ್ಯುತ್ತಮ ಬಳಕೆಯು ಅಭಿವೃದ್ಧಿಯ ಆಧಾರಸ್ತಂಭವಾಗಿದೆ"
"ನಾವು ಶಿಕ್ಷೆಯ ಪೋಸ್ಟಿಂಗ್‌ಗಳ ಪರಿಕಲ್ಪನೆಯನ್ನು ಸ್ಫೂರ್ತಿದಾಯಕ ಪೋಸ್ಟಿಂಗ್‌ಗಳಾಗಿ ಬದಲಾಯಿಸಿದ್ದೇವೆ"
"ಅಗತ್ಯವಿರುವ ವಲಯಗಳಲ್ಲಿ ವಿಶೇಷ ಗಮನ ಹರಿಸುವ ಮೂಲಕ ಸಂಪನ್ಮೂಲಗಳನ್ನು ಸಮಾನವಾಗಿ ವಿತರಿಸಬೇಕು"
"ಜನ ಭಾಗಿದಾರಿ ಅಥವಾ ಜನರ ಸಹಭಾಗಿತ್ವವು ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಅಪಾರ ಸಾಮರ್ಥ್ಯ ಹೊಂದಿದೆ"
ಮಹತ್ವಾಕಾಂಕ್ಷೆಯ ಜಿಲ್ಲೆಗಳಾಗಿದ್ದ 112 ಜಿಲ್ಲೆಗಳು ಈಗ ಸ್ಫೂರ್ತಿದಾಯಕ ಜಿಲ್ಲೆಗಳಾಗಿ ಮಾರ್ಪಟ್ಟಿವೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ ಮಂಟಪದಲ್ಲಿಂದು 'ಸಂಕಲ್ಪ ಸಪ್ತಾಹ' ಎಂಬ ದೇಶದ ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಿಗಾಗಿ 1 ವಾರದ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಹತ್ವಾಕಾಂಕ್ಷೆಯ ಬ್ಲಾಕ್ಸ್ ಪ್ರೋಗ್ರಾಂ ಪೋರ್ಟಲ್ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಅವರು ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು.

ಪ್ರಧಾನ ಮಂತ್ರಿ ಅವರು 3 ಬ್ಲಾಕ್ ಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.

 

ಉತ್ತರ ಪ್ರದೇಶದ ಬರೇಲಿಯ ಬಹೇರಿಯ ಶಾಲಾ ಶಿಕ್ಷಕಿ ಶ್ರೀಮತಿ ರಂಜನಾ ಅಗರ್ ವಾಲ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನ ಮಂತ್ರಿ, ತಮ್ಮ ಬ್ಲಾಕ್‌ನಲ್ಲಿ ಆಯೋಜಿಸಲಾದ ಚಿಂತನ ಶಿಬಿರಿದ ಅತ್ಯಂತ ಪ್ರಭಾವಶಾಲಿ ವಿಚಾರ ಆಲಿಸಿದರು. ಶ್ರೀಮತಿ ರಂಜನಾ ಅಗರವಾಲ್ ಅವರು ಬ್ಲಾಕ್‌ನ ಸರ್ವತೋಮುಖ ಅಭಿವೃದ್ಧಿ ಕಾರ್ಯಕ್ರಮವನ್ನು ಪ್ರಸ್ತಾಪಿಸಿದರು. ಸರ್ಕಾರದ ಯೋಜನೆಗಳನ್ನು ಸಾಮೂಹಿಕ ಆಂದೋಲನವಾಗಿ ಪರಿವರ್ತಿಸಲು ಎಲ್ಲಾ ಪಾಲುದಾರರು ಒಂದೇ ವೇದಿಕೆಯಲ್ಲಿ ಬರುವುದರ ಮಹತ್ವವನ್ನು ತಿಳಿಸಿದರು. ಶಾಲೆಗಳ ಕಲಿಕಾ ಫಲಿತಾಂಶವನ್ನು ಸುಧಾರಿಸಲು ಜಾರಿಗೆ ತಂದಿರುವ ಬದಲಾವಣೆಗಳ ಬಗ್ಗೆಯೂ ಪ್ರಧಾನ ಮಂತ್ರಿ ವಿಚಾರಿಸಿದರು. ಶ್ರೀಮತಿ ಅಗರವಾಲ್ ಅವರು ಸಾಂಪ್ರದಾಯಿಕ ಬೋಧನಾ ವಿಧಾನಗಳ ಬದಲಿಗೆ ಚಟುವಟಿಕೆ ಆಧಾರಿತ ಕಲಿಕೆ ಆಯ್ಕೆಯನ್ನು ಪ್ರಸ್ತಾಪಿಸಿದರು. ಬಾಲ ಸಭೆಗಳು, ಸಂಗೀತ ಪಾಠಗಳು, ಕ್ರೀಡೆಗಳು ಮತ್ತು ದೈಹಿಕ ತರಬೇತಿ ಇತ್ಯಾದಿಗಳನ್ನು ಆಯೋಜಿಸುವ ಉದಾಹರಣೆಗಳನ್ನು ನೀಡಿದರು. ಅಲ್ಲದೆ, ಸ್ಮಾರ್ಟ್ ತರಗತಿಗಳು ಮತ್ತು ಶಿಕ್ಷಣದ ಗುಣಮಟ್ಟ ಸುಧಾರಿಸಲು ತಂತ್ರಜ್ಞಾನದ ಬಳಕೆಯನ್ನು ಪ್ರಸ್ತಾಪಿಸಿದರು. ತನ್ನ ಜಿಲ್ಲೆಯ ಎಲ್ಲಾ 2,500 ಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳ ಲಭ್ಯತೆಯ ಬಗ್ಗೆ ಅವರು ಮಾಹಿತಿ ನೀಡಿದರು. ವಿಕ್ಷಿತ್ ಭಾರತ್‌ನ ಪ್ರಾಥಮಿಕ ಷರತ್ತುಗಳಲ್ಲಿ ಒಂದು ಮಕ್ಕಳ ಗುಣಮಟ್ಟದ ಶಿಕ್ಷಣವಾಗಿದೆ ಎಂದು ಪ್ರಧಾನಿ ಹೇಳಿದರು. ಶಿಕ್ಷಕರ ಸಮರ್ಪಣಾ ಮನೋಭಾವ ಹಾಗೂ ತೊಡಗಿಸಿಕೊಳ್ಳುವಿಕೆಗೆ ಮನಸೋತಿದ್ದೇನೆ ಎಂದರು. ಇದು ‘ಸಮರ್ಪಣ್ ಸೇ ಸಿದ್ಧಿಗೆ’ ದಾರಿಯಾಗಿದೆ ಎಂದು ಪ್ರಧಾನಿ ತಿಳಿಸಿದರು.

ಜಮ್ಮು-ಕಾಶ್ಮೀರದ ಪೂಂಚ್‌ನ ಮಂಕೋಟೆಯ ಖ್ಯಾತ ಪಶುವೈದ್ಯಕೀಯ ಸಹಾಯಕ ಶಸ್ತ್ರಚಿಕಿತ್ಸಕ ಡಾ. ಸಾಜಿದ್ ಅಹಮದ್ ಅವರು ಬುಡಕಟ್ಟು ಜನಾಂಗದ ಪಶುಸಂಗೋಪನೆಯ ಜನಸಾಮಾನ್ಯರ ಸಮಸ್ಯೆಗಳನ್ನು ವಿವರಿಸಿದರು. ವಲಸೆಯ ಸಮಯದಲ್ಲಿ ತೊಂದರೆಗಳು ಮತ್ತು ಹಾನಿಗಳನ್ನು ಮಿತಿಗೊಳಿಸುವ ವಿಧಾನಗಳ ಬಗ್ಗೆ ತಿಳಿಸಿದ ಅವರು, ತಮ್ಮ ವೈಯಕ್ತಿಕ ಅನುಭವಗಳನ್ನು ಪ್ರಧಾನಿಗೆ ತಿಳಿಸಿದರು. ಪ್ರಧಾನ ಮಂತ್ರಿ ಅವರು ತರಗತಿಯ ಜ್ಞಾನ ಮತ್ತು ನೆಲಮಟ್ಟದ ಅನುಭವದ ನಡುವಿನ ವ್ಯತ್ಯಾಸವನ್ನು ಆಲಿಸಿದರು. ಕಾಲು ಮತ್ತು ಬಾಯಿ ರೋಗಕ್ಕೆ ಲಸಿಕೆ ಅಭಿಯಾನದ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಲಾಯಿತು. ಈ ಪ್ರದೇಶದಲ್ಲಿ ಲಸಿಕೆಯನ್ನು ವ್ಯಾಪಕವಾಗಿ ನೀಡುವ ಬಗ್ಗೆ ಅವರಿಗೆ ತಿಳಿಸಲಾಯಿತು. ಪ್ರಧಾನ ಮಂತ್ರಿ ಅವರು ಈ ಪ್ರದೇಶದ ಗುರ್ಜರ್‌ಗಳೊಂದಿಗಿನ ತಮ್ಮ ನಿಕಟ ಸಂಪರ್ಕವನ್ನು ವಿವರಿಸಿದರು.

 

ಮೇಘಾಲಯದ ಗಾರೋ ಪ್ರದೇಶದ ರೆಸುಬೆಲ್‌ಪಾರಾದಿಂದ ಕಿರಿಯ ಗ್ರಾಮೀಣಾಭಿವೃದ್ಧಿ ಅಧಿಕಾರಿ ಶ್ರೀ ಮೈಕೆಹೆನ್‌ಚಾರ್ಡ್ ಸಿಎಚ್ ಮೊಮಿನ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನ ಮಂತ್ರಿ, ಈ ಪ್ರದೇಶವು ಹವಾಮಾನ ವೈಪರೀತ್ಯದಿಂದಾಗಿ ಎದುರಿಸುತ್ತಿರುವ ತೊಂದರೆಗಳಿಗೆ ಪರಿಹಾರಗಳ ಕುರಿತು ವಿಚಾರಿಸಿದರು. ಶ್ರೀ ಮೊಮಿನ್ ಅವರು ಅಗತ್ಯ ಸರಕುಗಳ ಮೇಲೆ ದಾಸ್ತಾನು ಮಾಡಲು ಪ್ರಾಥಮಿಕ ಆದೇಶಗಳನ್ನು ಹೊರಡಿಸಿದ್ದಲ್ಲದೆ, ಪ್ರಗತಿಯ ಮೇಲ್ವಿಚಾರಣೆ ನಡೆಸಲು ತಂಡವನ್ನು ರಚಿಸಿದರು. ಜೀವನ ಸುಲಭವಾಗಿ ನಡೆಸುವುದನ್ನು ಸುಧಾರಿಸಲು ಪಿಎಂ-ಆವಾಸ್(ಗ್ರಾಮೀಣ) ಯೋಜನೆಯಲ್ಲಿ ಪ್ರಾದೇಶಿಕ ವಿನ್ಯಾಸಗಳು ಮತ್ತು ಮಾಲೀಕ-ಚಾಲಿತ ನಿರ್ಮಾಣ ಕಾರ್ಯವಿಧಾನ ಪರಿಚಯಿಸಿದ ನಂತರ ಉತ್ಪನ್ನದ ಗುಣಮಟ್ಟದಲ್ಲಿ ಆಗಿರುವ ಬದಲಾವಣೆಗಳ ಕುರಿತು ಪ್ರಧಾನ ಮಂತ್ರಿ ವಿಚಾರಿಸಿದರು. ಇದಕ್ಕೆ ಶ್ರೀ ಮೋಮಿನ್ ಅವರು ಸಕಾರಾತ್ಮಕವಾಗಿ ಉತ್ತರಿಸಿದರು. ಈ ಪ್ರದೇಶದಲ್ಲಿ ಉತ್ಪಾದನೆಯಾಗುವ ಗೋಡಂಬಿ ಮಾರಾಟದ ಬಗ್ಗೆ ಪ್ರಧಾನ ಮಂತ್ರಿ ಕೇಳಿದಾಗ, ಶ್ರೀ ಮೋಮಿನ್ ಅವರು ಈ ಪ್ರದೇಶದಲ್ಲಿ ಉತ್ಪಾದಿಸುವ ಗೋಡಂಬಿಯು ರಾಷ್ಟ್ರಾದ್ಯಂತ ಉತ್ತಮ ಗುಣಮಟ್ಟದ್ದಾಗಿದೆ. ಅದರ ಉತ್ಪಾದನೆ ಉತ್ತೇಜಿಸಲು ಮನ್ರೇಗಾ ಯೋಜನೆ ಮತ್ತು ಸ್ವ-ಸಹಾಯ ಗುಂಪುಗಳನ್ನು ಬಳಸಲಾಗುತ್ತಿದೆ ಎಂದರು. ಶ್ರೀ ಮೊಮಿನ್ ಅವರು ಈ ಪ್ರದೇಶದಲ್ಲಿ ಹೆಚ್ಚಿನ ಗೋಡಂಬಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವಂತೆ ಪ್ರಧಾನ ಮಂತ್ರಿ ಅವರನ್ನು ಒತ್ತಾಯಿಸಿದರು. ಈ ಪ್ರದೇಶದ  ಸಂಗೀತದ ಜನಪ್ರಿಯತೆ ಹೆಚ್ಚಿಸಲು ಜಾಗೃತಿ ಮೂಡಿಸಬೇಕು ಎಂದು ಶ್ರೀ ಮೋದಿ ಸಲಹೆ ನೀಡಿದರು. ಪ್ರಧಾನ ಮಂತ್ರಿ ಅವರು ಮಹತ್ವಾಕಾಂಕ್ಷೆಯ ಬ್ಲಾಕ್ ಮತ್ತು ಜಿಲ್ಲಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಗಳ ಪಾತ್ರ ನಿರ್ಣಾಯಕ ಎಂದು ಪ್ರಧಾನಿ ಹೇಳಿದರು.

 

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಸ್ಥಳ ಭಾರತ ಮಂಟಪದಲ್ಲಿ ಜರುಗಿದ ನಾನಾ ಸಭೆಗಳು ಮತ್ತು ದೂರದ ಪ್ರದೇಶಗಳಲ್ಲಿ ಅಭಿವೃದ್ಧಿಯ ಕಾಳಜಿ ವಹಿಸುತ್ತಿರುವ ಜನರ ಬಗ್ಗೆ ಪ್ರಸ್ತಾಪಿಸಿದರು. ಜಾಗತಿಕ ವ್ಯವಹಾರಗಳ ದಿಕ್ಕನ್ನು ನಿರ್ಧರಿಸುವ ಜನರು ಒಂದು ತಿಂಗಳ ಹಿಂದೆ ಜಮಾಯಿಸಿದ ಜಿ-20 ಶೃಂಗಸಭೆಯ ಸ್ಥಳದಲ್ಲಿ ಇಂತಹ ಸಭೆ ನಡೆದಿರುವುದು ಸರ್ಕಾರದ ಉದಾತ್ತ ಚಿಂತನೆಯ ಸೂಚನೆಯಾಗಿದೆ. ಹಾಗಾಗಿ, ತಳಮಟ್ಟದಲ್ಲಿ ಬದಲಾವಣೆ ಮಾಡುವವರನ್ನು ಸ್ವಾಗತಿಸುತ್ತೇನೆ. "ನನಗೆ ಈ ಕೂಟವು ಜಿ-20 ಶೃಂಗಸಭೆಗಿಂತ ಕಡಿಮೆ ಏನಿಲ್ಲ" ಎಂದು ಶ್ರೀ ಮೋದಿ ಹೇಳಿದರು.

ಈ ಕಾರ್ಯಕ್ರಮವು ಟೀಮ್ ಭಾರತ್‌ನ ಯಶಸ್ಸಿನ ಸಂಕೇತ ಮತ್ತು ಸಬ್‌ಕಾ ಪ್ರಾಯಸ್‌ನ ಮನೋಭಾವವಾಗಿದೆ. ಈ ಕಾರ್ಯಕ್ರಮವು ಭಾರತದ ಭವಿಷ್ಯಕ್ಕೆ ಮಹತ್ವದ್ದಾಗಿದೆ ಮತ್ತು ‘ಸಂಕಲ್ಪ್ ಸೇ ಸಿದ್ಧಿ’ ಇದರಲ್ಲಿ ಅಂತರ್ಗತವಾಗಿದೆ.

"ಸ್ವತಂತ್ರ ಭಾರತದ ಟಾಪ್ 10 ಕಾರ್ಯಕ್ರಮಗಳ ಯಾವುದೇ ಪಟ್ಟಿಯಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮವು ಸುವರ್ಣಾಕ್ಷರಗಳಲ್ಲಿ ಚಿತ್ರಿಸುತ್ತದೆ". ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮವು 112 ಜಿಲ್ಲೆಗಳಲ್ಲಿ ಸುಮಾರು 25 ಕೋಟಿ ಜನರ ಜೀವನವನ್ನು ಪರಿವರ್ತಿಸಿದೆ. ಈ ಕಾರ್ಯಕ್ರಮದ ಯಶಸ್ಸು ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮದ ಆಧಾರಸ್ತಂಭವಾಯಿತು. ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮವು ಅಭೂತಪೂರ್ವ ಯೋಜನೆ ಆಗಿರುವುದು ಮಾತ್ರವಲ್ಲದೆ, ಅದರ ಕಡೆಗೆ ಕೆಲಸ ಮಾಡುವ ಜನರು ಅದ್ಭುತವಾಗಿರುವುದರಿಂದಲೂ ಇದು ಭಾರಿ ಯಶಸ್ಸನ್ನು ಪಡೆಯಲಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದರು.

 

ಸ್ವಲ್ಪ ಸಮಯದ ಹಿಂದೆ 3 ಬ್ಲಾಕ್ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಸಂವಾದವನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿ, ನೆಲಮಟ್ಟದಲ್ಲಿ ಕೆಲಸ ಮಾಡುವವರ ನೈತಿಕ ಸ್ಥೈರ್ಯವನ್ನು ನೋಡಿದ ನಂತರ ತಮ್ಮ ಆತ್ಮವಿಶ್ವಾಸವು ಅನೇಕ ಪಟ್ಟು ಹೆಚ್ಚಾಗಿದೆ. ತಂಡದ ಸದಸ್ಯರಾಗಿ ನೆಲಮಟ್ಟದ ಅಧಿಕಾರಿಗಳೊಂದಿಗೆ ಕೆಲಸ ಮಾಡಲು ಬಯಸುತ್ತೇನೆ. ಇದರಿಂದ ಕಾರ್ಯಕ್ರಮದ ಗುರಿಗಳನ್ನು ಸಮಯಕ್ಕೆ ಮುಂಚಿತವಾಗಿ ಸಾಧಿಸಬಹುದು. ನೆಲಮಟ್ಟದಲ್ಲಿನ ಯಶಸ್ಸು ಅವರಿಗೆ ದಣಿವರಿಯದೆ ಕೆಲಸ ಮಾಡಲು ಹೆಚ್ಚಿನ ಶಕ್ತಿ ಮತ್ತು ಉತ್ಸಾಹವನ್ನು ನೀಡುತ್ತದೆ. "ಆಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮದ ಪ್ರಗತಿಯ ಪಟ್ಟಿ(ಚಾರ್ಟ್) ನನಗೆ ಸ್ಫೂರ್ತಿಯಾಗಿದೆ" ಎಂದರು.

ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮವು 5 ವರ್ಷ ಪೂರೈಸಿರುವುದನ್ನು ಗಮನಿಸಿದ ಪ್ರಧಾನ ಮಂತ್ರಿ, ಕಾರ್ಯಕ್ರಮದ ಮೂರನೇ ವ್ಯಕ್ತಿಯ ಮೌಲ್ಯಮಾಪನದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದ ಸರಳ ಕಾರ್ಯತಂತ್ರ ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ಆಡಳಿತದ ಸವಾಲಿನ ಕಾರ್ಯಗಳನ್ನು ಎದುರಿಸುವಲ್ಲಿ ಇವು ನಿಜಕ್ಕೂ ಪಾಠಗಳಾಗಿವೆ. ಸಮಗ್ರ ಅಭಿವೃದ್ಧಿಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿ, ದೇಶದ ಎಲ್ಲಾ ಭಾಗಗಳು ಮತ್ತು ಪ್ರದೇಶಗಳನ್ನು ನೋಡಿಕೊಳ್ಳಬೇಕು. “ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, ಎಲ್ಲರನ್ನು ಮುಟ್ಟುವುದು, ಎಲ್ಲರಿಗೂ ಪ್ರಯೋಜನ ನೀಡುವುದು ಅಗತ್ಯ. ಸಂಖ್ಯಾ ಅಭಿವೃದ್ಧಿಯನ್ನು ತೋರಿಸಬಹುದು, ಆದರೆ ಮೂಲಭೂತ ಅಭಿವೃದ್ಧಿ ನಡೆಯುತ್ತಿಲ್ಲ. ಅದಕ್ಕಾಗಿಯೇ ಪ್ರತಿಯೊಂದು ತಳಮಟ್ಟದ ಮಾನದಂಡಗಳು ಒಳಗೊಂಡಂತೆ ನಾವು ಮುನ್ನಡೆಯುವುದು ಮುಖ್ಯವಾಗಿದೆ”.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಇಲಾಖೆಗಳ ಕಾರ್ಯದರ್ಶಿಗಳಿಗೆ ಎರಡು ಹೊಸ ದಿಕ್ಕುಗಳಲ್ಲಿ ಕೆಲಸ ಮಾಡುವಂತೆ ಪ್ರಧಾನ ಮಂತ್ರಿ ಸೂಚನೆ ನೀಡಿದರು - ಪ್ರತಿ ರಾಜ್ಯದ ತ್ವರಿತ ಅಭಿವೃದ್ಧಿ ಮತ್ತು ಹಿಂದುಳಿದ ಜಿಲ್ಲೆಗಳ ಮೇಲೆ ಹಿಡಿತ ಸಾಧಿಸಬೇಕು. ಆಯಾ ಇಲಾಖೆಗಳಲ್ಲಿ ಹಿಂದುಳಿದಿರುವ ದೇಶದ 100 ಬ್ಲಾಕ್‌ಗಳನ್ನು ಗುರುತಿಸಿ ಪರಿಸ್ಥಿತಿಗಳನ್ನು ಸುಧಾರಿಸಲು ಕೆಲಸ ಮಾಡಬೇಕು. ಗುರುತಿಸಲಾದ 100 ಬ್ಲಾಕ್‌ಗಳು ದೇಶದ ಸರಾಸರಿಗಿಂತ ಮೇಲೇರಿದಾಗ ಅಭಿವೃದ್ಧಿಯ ಎಲ್ಲಾ ನಿಯತಾಂಕಗಳು ಬದಲಾಗುತ್ತವೆ. ಕೇಂದ್ರದ ಎಲ್ಲ ಇಲಾಖೆಗಳು ಸುಧಾರಣೆಗೆ ಅವಕಾಶವಿರುವ ಬ್ಲಾಕ್‌ಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ರಾಜ್ಯ ಸರ್ಕಾರಗಳ ಪಾತ್ರವನ್ನು ಎತ್ತಿ ಹಿಡಿದ ಪ್ರಧಾನ ಮಂತ್ರಿ, 100 ಅತ್ಯಂತ ಹಿಂದುಳಿದ ಗ್ರಾಮಗಳನ್ನು ಗುರುತಿಸಿ ಅವುಗಳನ್ನು ಸುಧಾರಿಸಲು ಮಾದರಿಯನ್ನು ರಚಿಸುವಂತೆ ಸಲಹೆ ನೀಡಿದರು, ಮುಂದಿನ 1000 ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಅದನ್ನು ಇನ್ನಷ್ಟು ಪುನರಾವರ್ತಿಸಬಹುದು.

 

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಪಂಚ ಸಂಕಲ್ಪಗಳನ್ನು ಉಲ್ಲೇಖಿಸಿದ ಪ್ರಧಾನಿ, ಅಭಿವೃದ್ಧಿ ಎಂದರೆ ಅಭಿವೃದ್ಧಿ ಹೊಂದಿದ ಮೆಟ್ರೋ ನಗರಗಳು ಮತ್ತು ಹಿಂದುಳಿದ ಹಳ್ಳಿಗಳಲ್ಲ. "ನಾವು ಆ ಮಾದರಿಯನ್ನು ಅನುಸರಿಸುವುದಿಲ್ಲ, ನಾವು 140 ಕೋಟಿ ಜನರೊಂದಿಗೆ ಚಲಿಸಲು ಬಯಸುತ್ತೇವೆ". ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ಸಂದರ್ಭದಲ್ಲಿ ಜಿಲ್ಲೆಗಳ ನಡುವಿನ ಆರೋಗ್ಯಕರ ಸ್ಪರ್ಧೆಯನ್ನು ಪ್ರಸ್ತಾಪಿಸಿದ ಅವರು, ಗುಜರಾತ್‌ನ ಕಚ್ ಜಿಲ್ಲೆಯ ಉದಾಹರಣೆ ನೀಡಿದರು. ಇದು ಒಂದು ಕಾಲದಲ್ಲಿ ಅಂದರೆ ಭೂಕಂಪವಾದ ನಂತರ, ಅಧಿಕಾರಿಗಳಿಗೆ ಕೆಲಸ ಮಾಡಲು ಶಿಕ್ಷಾರ್ಹ ಅಥವಾ ಕಷ್ಟದ ಸ್ಥಳವೆಂದು ಪರಿಗಣಿಸಲ್ಪಟ್ಟಿತ್ತು. ಆದರೆ ಈಗ ನೇಮಕಗೊಂಡ ಅಧಿಕಾರಿಗಳ ಸಮರ್ಪಣಾ ಮನಭಾವ ಮತ್ತು ಶ್ರದ್ಧೆಯಿಂದ ಅತ್ಯಂತ ಗೌರವಾನ್ವಿತ ಸ್ಥಳವಾಗಿದೆ. ದೇಶದ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ನಡೆಸಿದ ಅಭಿವೃದ್ಧಿಯ ಯಶಸ್ಸು ಯುವ ಅಧಿಕಾರಿಗಳಿಗೆ ಸಲ್ಲುತ್ತದೆ. ಮಹತ್ವಾಕಾಂಕ್ಷೆಯ ಬ್ಲಾಕ್ ಕಾರ್ಯಕ್ರಮಕ್ಕಾಗಿ ಬ್ಲಾಕ್ ಮಟ್ಟದಲ್ಲಿ ಯಶಸ್ವಿಯಾದವರಿಗೆ ಬಡ್ತಿ ನೀಡುವ ಮೂಲಕ ಯುವ ಅಧಿಕಾರಿಗಳನ್ನು ಪ್ರೋತ್ಸಾಹಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಧಾನ ಮಂತ್ರಿ ಸಲಹೆ ನೀಡಿದರು.

ಸರ್ಕಾರದ ಬಜೆಟ್‌ನ ಅನುದಾನ ಹೆಚ್ಚಿಸಿದ ದೃಷ್ಟಿಕೋನದಿಂದ ಫಲಿತಾಂಶದ ಬದಲಾವಣೆ ಆಗಿದೆ. ಇದರಿಂದ ಗುಣಾತ್ಮಕ ಬದಲಾವಣೆಯಾಗಿದೆ ಎಂದರು. ತಮ್ಮ ಆಡಳಿತದ ಅಪಾರ ಅನುಭವ ಪ್ರಸ್ತಾಪಿಸಿದ ಪ್ರಧಾನಿ, ಬಜೆಟ್ ಮಾತ್ರ ಬದಲಾವಣೆಯ ಅಂಶವಲ್ಲ. ಸಂಪನ್ಮೂಲಗಳ ಅತ್ಯುತ್ತಮ ಬಳಕೆಯೂ ಅಭಿವೃದ್ಧಿಯ ಆಧಾರಸ್ತಂಭವಾಗಲಿದೆ. ಯೋಜನೆಗಳ ಒಮ್ಮುಖ ಮತ್ತು ಪೂರಕತೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಉತ್ತಮ ಕಾರ್ಯ ನಿರ್ವಹಣೆ ಅಂಶಗಳ ಮೇಲೆ, ಫಲಿತಾಂಶಗಳ ಮೇಲೆ ಅತಿಯಾದ ಅವಲಂಬನೆ ಮತ್ತು ಸಂಪನ್ಮೂಲಗಳ ಹೇರಳ ಬಳಕೆಯ ತಪ್ಪುಗಳ ಬಗ್ಗೆಯೂ ಪ್ರಧಾನ ಮಂತ್ರಿ ಪ್ರಸ್ತಾಪಿಸಿದರು. "ಸಂಪನ್ಮೂಲಗಳನ್ನು ಹೇರಳ ಬಳಕೆಯು ವ್ಯರ್ಥಕ್ಕೆ ಕಾರಣವಾಗುತ್ತದೆ ಆದರೆ ಅದನ್ನು ಅಗತ್ಯಗಳ ಕ್ಷೇತ್ರಗಳಿಗೆ ನೀಡಿದರೆ, ಬಳಕೆ ಉತ್ತಮವಾಗಿರುತ್ತದೆ. ಅಗತ್ಯವಿರುವ ಪ್ರದೇಶಗಳಲ್ಲಿ ವಿಶೇಷ ಗಮನ ಹರಿಸುವ ಮೂಲಕ ಸಂಪನ್ಮೂಲಗಳನ್ನು ಸಮಾನವಾಗಿ ವಿತರಿಸಬೇಕು,'' ಎಂದು ಹೇಳಿದರು.

 

ಸರ್ಕಾರದ ಮೇಲಿನ ಅವಲಂಬನೆಯ ಮನಸ್ಥಿತಿಯಿಂದ ಹೊರಬರುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ಮಹತ್ತರವಾದ ಕಾರ್ಯಗಳನ್ನು ಸಾಧಿಸಲು ಸಮಾಜದ ಶಕ್ತಿ ಅಗತ್ಯ. ‘ಜನ ಭಾಗಿದಾರಿ’ ಇಂದಿನ ಅಗತ್ಯ. ಪ್ರತಿಯೊಂದು ಕ್ಷೇತ್ರದಲ್ಲೂ ನಾಯಕನ ಪಾತ್ರ ಅಗತ್ಯ. ‘ಸಂಕಲ್ಪ ಸಪ್ತಾಹ’ ಕಾರ್ಯಕ್ರಮದಲ್ಲಿ ಸಾಂಘಿಕ ಮನೋಭಾವ  ಮೈಗೂಡಿಸಿಕೊಳ್ಳಬೇಕು. ಇದು ನಾಯಕರ ಹೊರಹೊಮ್ಮುವಿಕೆಗೆ ಮತ್ತು ಜನ್ ಭಾಗೀದಾರಿಯ ಹೊಸ ಆಲೋಚನೆಗಳಿಗೆ ಕಾರಣವಾಗುತ್ತದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಮಾಜ ಒಗ್ಗೂಡಿ ಒಬ್ಬರಿಗೊಬ್ಬರು ಆಸರೆಯಾಗುವ ಉದಾಹರಣೆ ನೀಡಿದರು. ಜನರ ಸಹಭಾಗಿತ್ವದ ಉತ್ಸಾಹ ಪ್ರೇರೇಪಿಸಲು ಬ್ಲಾಕ್ ಮಟ್ಟದಲ್ಲಿ ಸಾಮೂಹಿಕವಾಗಿ ಕೆಲಸ ಮಾಡಬೇಕು. ಅಪೌಷ್ಟಿಕತೆ ಹೋಗಲಾಡಿಸಲು ಅಂತಹ ಸಂದರ್ಭಗಳಲ್ಲಿ ಪ್ರಾದೇಶಿಕ ಸಂಸ್ಥೆಗಳ ವಾರ್ಷಿಕೋತ್ಸವಗಳನ್ನು ಆಚರಿಸುವ ಮತ್ತು ಶಾಲಾ ಮಕ್ಕಳಿಗೆ ಆಹಾರವನ್ನು ವಿತರಿಸುವ ಉದಾಹರಣೆಗಳನ್ನು ನೀಡಿದರು. "ಜನ ಭಾಗಿದಾರಿ ಅಥವಾ ಜನರ ಸಹಭಾಗಿತ್ವವು ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಅಪಾರ ಸಾಮರ್ಥ್ಯವನ್ನು ಹೊಂದಿದೆ" ಎಂದರು.

ಅಂತೆಯೇ, ದೇಶದಲ್ಲಿ ಹೆಚ್ಚುತ್ತಿರುವ ಜಾಗತಿಕ ಬೆಳವಣಿಗೆಗಳಿಗೆ ಸಮುದಾಯಗಳು ಭಾಗವಹಿಸುವುದು ಅಗತ್ಯ. ಇದು ಅಪಾರ ಶಕ್ತಿ ನೀಡುತ್ತದೆ. ಸಮುದಾಯದ ಕ್ರಿಯಾಶೀಲತೆಯು ಸರ್ಕಾರದ ರಾಜತಾಂತ್ರಿಕ ಪ್ರಯತ್ನಗಳನ್ನು ಬೆಂಬಲಿಸಿದೆ. ಸಂಕಲ್ಪ ಸಪ್ತಾಹವನ್ನು ಗರಿಷ್ಠವಾಗಿ ಬಳಸಿಕೊಳ್ಳುವಂತೆ ಪ್ರಧಾನ ಮಂತ್ರಿ ಅವರು ಪ್ರತಿನಿಧಿಗಳಿಗೆ ಸಲಹೆ ನೀಡಿದರು. ಸಂಪನ್ಮೂಲಗಳ ಕ್ರೋಡೀಕರಣ ಮತ್ತು ಗರಿಷ್ಠ ಪರಿಣಾಮಗಳಿಗೆ ಪ್ರಯತ್ನ ಹಾಕಲು ಗಮನ ಕೇಂದ್ರೀಕರಿಸಬೇಕು. ಇದು ಅಡೆತಡೆಗಳನ್ನು ತೆಗೆದುಹಾಕುತ್ತದೆ ಮತ್ತು ಸಂಪೂರ್ಣ ಸರ್ಕಾರದ ಕಾರ್ಯವಿಧಾನವನ್ನು ತುಂಬುತ್ತದೆ. ‘ಸಂಕಲ್ಪ ಸಪ್ತಾಹ’ದಲ್ಲಿ ಒಂದು ವಾರ ಸಹೋದ್ಯೋಗಿಗಳೊಂದಿಗೆ ಕುಳಿತುಕೊಂಡರೆ ಪರಸ್ಪರರ ಸಾಮರ್ಥ್ಯ ಮತ್ತು ಅಗತ್ಯಗಳ ಬಗ್ಗೆ ಅರಿವು ಮೂಡುತ್ತದೆ, ತಂಡದ ಮನೋಭಾವವನ್ನು ಸುಧಾರಿಸುತ್ತದೆ ಎಂದರು.

 

5 ಮಾನದಂಡಗಳ ಮೇಲೆ ಗಮನ ಹರಿಸಿ ಉತ್ತಮ ಫಲಿತಾಂಶಗಳನ್ನು ಪಡೆಯುವಂತೆ ಪ್ರತಿನಿಧಿಗಳಿಗೆ ಪ್ರಧಾನ ಮಂತ್ರಿ ಸಲಹೆ ನೀಡಿದರು. ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಹಂತ ಹಂತವಾಗಿ ಸಮಸ್ಯೆಗಳ ನಿವಾರಣೆಯಿಂದ ಬ್ಲಾಕ್ ಇತರರ ಆಕಾಂಕ್ಷೆಯ ಮೂಲವಾಗಲಿದೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳಾಗಿದ್ದ 112 ಜಿಲ್ಲೆಗಳು ಈಗ ಸ್ಫೂರ್ತಿದಾಯಕ ಜಿಲ್ಲೆಗಳಾಗಿ ಮಾರ್ಪಟ್ಟಿವೆ. ಒಂದು ವರ್ಷದೊಳಗೆ ಕನಿಷ್ಠ 100 ಮಹತ್ವಾಕಾಂಕ್ಷೆಯ ಬ್ಲಾಕ್‌ಗಳು ಸ್ಫೂರ್ತಿದಾಯಕ ಬ್ಲಾಕ್‌ಗಳಾಗುತ್ತವೆ ಎಂಬ ಖಾತ್ರಿ ನನಗಿದೆ" ಎಂದರು.

ಈ ಸಂದರ್ಭದಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ಶ್ರೀ ಸುಮನ್ ಬೇರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ

‘ಸಂಕಲ್ಪ ಸಪ್ತಾಹ’ವು ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮ(ABP)ಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದ್ದಾಗಿದೆ. ಪ್ರಧಾನ ಮಂತ್ರಿ ಅವರು 2023 ಜನವರಿ 7ರಂದು ರಾಷ್ಟ್ರವ್ಯಾಪಿ ಕಾರ್ಯಕ್ರಮ ಆರಂಭಿಸಿದರು. ನಾಗರಿಕರ ಜೀವನ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಬ್ಲಾಕ್ ಮಟ್ಟದಲ್ಲಿ ಆಡಳಿತ ಸುಧಾರಿಸುವ ಗುರಿಯನ್ನು ಇದು ಹೊಂದಿದೆ. ದೇಶದ 329 ಜಿಲ್ಲೆಗಳ 500 ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಲ್ಲಿ ಇದನ್ನು ಜಾರಿಗೊಳಿಸಲಾಗುತ್ತಿದೆ. ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ಮತ್ತು ಪರಿಣಾಮಕಾರಿ ಬ್ಲಾಕ್ ಅಭಿವೃದ್ಧಿ ಕಾರ್ಯತಂತ್ರ ತಯಾರಿಸಲು ದೇಶಾದ್ಯಂತ ಗ್ರಾಮ ಮತ್ತು ಬ್ಲಾಕ್ ಮಟ್ಟದಲ್ಲಿ ಚಿಂತನ ಶಿಬಿರಗಳನ್ನು ಆಯೋಜಿಸಲಾಗಿದೆ. ‘ಸಂಕಲ್ಪ ಸಪ್ತಾಹ’ ಈ ಚಿಂತನ ಶಿಬಿರಗಳ ಪರಾಕಾಷ್ಠೆಯಾಗಿದೆ.

500 ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಲ್ಲಿ 'ಸಂಕಲ್ಪ ಸಪ್ತಾಹ' ಆಚರಿಸಲಾಗುತ್ತದೆ. 2023 3ನೇ ಅಕ್ಟೋಬರ್‌ 3ರಿಂದ 9ರ ತನಕ 'ಸಂಕಲ್ಪ ಸಪ್ತಾಹ'ದಲ್ಲಿ ಪ್ರತಿ ದಿನವೂ ಒಂದು ನಿರ್ದಿಷ್ಟ ಅಭಿವೃದ್ಧಿ ಥೀಮ್‌ಗೆ(ವಸ್ತು ವಿಷಯ) ಮೀಸಲಾಗಿರುತ್ತದೆ. ಅದರ ಮೇಲೆ ಎಲ್ಲಾ ಮಹತ್ವಾಕಾಂಕ್ಷೆಯ ಬ್ಲಾಕ್‌ಗಳು ಕಾರ್ಯ ನಿರ್ವಹಿಸುತ್ತವೆ. ಮೊದಲ 6 ದಿನಗಳ ವಿಷಯಗಳಲ್ಲಿ ‘ಸಂಪೂರ್ಣ ಸ್ವಾಸ್ಥ್ಯ’, ‘ಸುಪೋಷಿತ್ ಪರಿವಾರ’, ‘ಸ್ವಚ್ಛತಾ’, ‘ಕೃಷಿ’, ‘ಶಿಕ್ಷಾ’, ಮತ್ತು ‘ಸಮೃದ್ಧಿ ದಿವಸ್’ ಕಾರ್ಯಕ್ರಮಗಳು ಸೇರಿವೆ. ವಾರದ ಕೊನೆಯ ದಿನ ಅಂದರೆ 2023 ಅಕ್ಟೋಬರ್ 9ರಂದು ಇಡೀ ವಾರದ ಅವಧಿಯಲ್ಲಿ ‘ಸಂಕಲ್ಪ ಸಪ್ತಾಹ ಸಮಾವೇಶದ ಸಮರೋಪ’ ನಡೆಯಲಿದೆ.

ಭಾರತ ಮಂಟಪದಲ್ಲಿ ಜರುಗುವ ಉದ್ಘಾಟನಾ ಕಾರ್ಯಕ್ರಮದಲ್ಲಿ ದೇಶಾದ್ಯಂತದ ಸುಮಾರು 3,000 ಪಂಚಾಯತಿ ಮತ್ತು ಬ್ಲಾಕ್ ಮಟ್ಟದ ಜನಪ್ರತಿನಿಧಿಗಳು ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಇದಲ್ಲದೆ, ಬ್ಲಾಕ್ ಮತ್ತು ಪಂಚಾಯತಿ ಮಟ್ಟದ ಪದಾಧಿಕಾರಿಗಳು, ರೈತರು ಮತ್ತು ಸಮಾಜದ ಇತರೆ ವರ್ಗಗಳ ಪ್ರತಿನಿಧಿಗಳು ಸೇರಿದಂತೆ ಸುಮಾರು 2 ಲಕ್ಷ ಜನರು ವರ್ಚುವಲ್ ಆಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

 

Explore More
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

ಜನಪ್ರಿಯ ಭಾಷಣಗಳು

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ
India’s booming economy: A golden age for real estate investment

Media Coverage

India’s booming economy: A golden age for real estate investment
NM on the go

Nm on the go

Always be the first to hear from the PM. Get the App Now!
...
Prime Minister condoles demise of renowned radio personality, Ameen Sayani
February 21, 2024

The Prime Minister, Shri Narendra Modi has expressed deep grief over the demise of renowned radio personality, Ameen Sayani. Shri Modi also said that Ameen Sayani Ji has played an important role in revolutionising Indian broadcasting and nurtured a very special bond with his listeners through his work.

In a X post, the Prime Minister said;

“Shri Ameen Sayani Ji’s golden voice on the airwaves had a charm and warmth that endeared him to people across generations. Through his work, he played an important role in revolutionising Indian broadcasting and nurtured a very special bond with his listeners. Saddened by his passing away. Condolences to his family, admirers and all radio lovers. May his soul rest in peace.”