ಶೇರ್
 
Comments
ಸಾಂಕ್ರಾಮಿಕ, ರಾಜಕೀಯ ವಿಷಯವಾಗಬಾರದು, ಅದು ಇಡೀ ಮನುಕುಲದ ಕಾಳಜಿ ವಿಷಯವಾಗಬೇಕು: ಪ್ರಧಾನಮಂತ್ರಿ
ಮುಂಚಿತವಾಗಿಯೇ ಲಸಿಕೆ ಲಭ್ಯತೆ ಮಾಹಿತಿ ಆಧರಿಸಿ ಜಿಲ್ಲಾ ಮಟ್ಟದಲ್ಲಿ ಲಸಿಕಾ ಅಭಿಯಾನಗಳನ್ನು ರೂಪಿಸಲು ಸೂಕ್ತ ಯೋಜನೆಗಳನ್ನು ರೂಪಿಸುವ ಅಗತ್ಯ ಪ್ರತಿಪಾದಿಸಿದ ಪ್ರಧಾನಮಂತ್ರಿ
ಇತರೆ ದೇಶಗಳ ಪರಿಸ್ಥಿತಿ ಗಮನಿಸಿ ನಾವು ಜಾಗೃತೆಯಿಂದಿರುವ ಅಗತ್ಯವಿದೆ : ಪ್ರಧಾನಮಂತ್ರಿ
ಸಾಂಕ್ರಾಮಿಕದ ನಿರ್ವಹಣೆಯುದ್ಧಕ್ಕೂ ಪ್ರಯತ್ನಗಳನ್ನು ಕೈಗೊಳ್ಳುತ್ತಿರುವ ಪ್ರಧಾನಮಂತ್ರಿ ಅವರನ್ನು ಅಭಿನಂದಿಸಿದ ಸರ್ವ ಪಕ್ಷಗಳ ನಾಯಕರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಂಸತ್ತಿನ ಉಭಯ ಸದನಗಳ ಸದನ ನಾಯಕರೊಂದಿಗೆ ಸಂವಾದ ನಡೆಸಿ, ಭಾರತದಲ್ಲಿನ ಕೋವಿಡ್-19 ಸ್ಥಿತಿಗತಿ ಮಾಹಿತಿಯನ್ನು ಮತ್ತು ಸಾಂಕ್ರಾಮಿಕ ನಿರ್ವಹಣೆಗೆ ಕೈಗೊಂಡಿರುವ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ವಿವರಿಸಿದರು. 

ಸಭೆಯಲ್ಲಿ ಭಾಗವಹಿಸಿ, ವಾಸ್ತವಿಕ ಮಾಹಿತಿ ಹಾಗೂ ಸಲಹೆಗಳನ್ನು ನೀಡಿದ ಎಲ್ಲ ನಾಯಕರಿಗೆ  ಪ್ರಧಾನಮಂತ್ರಿ ಅವರು ಧನ್ಯವಾದಗಳನ್ನು ಹೇಳಿದರು ಮತ್ತು  ದೇಶದ ನಾನಾ ಭಾಗಗಳಿಂದ ಮಾಹಿತಿ ದೊರಕುತ್ತಿರುವುದು ನೀತಿ ನಿರೂಪಣೆಗೆ ಹೆಚ್ಚು ಸಹಕಾರಿಯಾಗಿದೆ ಎಂದರು.

ಸಾಂಕ್ರಾಮಿಕ ರಾಜಕೀಯ ವಿಷಯವಾಗಬಾರದು ಮತ್ತು ಅದು ಇಡೀ ಮನುಕುಲದ ಕಾಳಜಿಯ ವಿಷಯವಾಗಬೇಕು ಎಂದು  ಪ್ರಧಾನಮಂತ್ರಿ ಹೇಳಿದರು. ಕಳೆದ ನೂರು ವರ್ಷಗಳಲ್ಲಿ ಮನುಕುಲ ಇಂತಹ ಸಾಂಕ್ರಾಮಿಕವನ್ನು ಕಂಡಿಲ್ಲ ಎಂದು ಹೇಳಿದರು.

ಅಲ್ಲದೆ ಪ್ರಧಾನಮಂತ್ರಿಗಳು ದೇಶಾದ್ಯಂತ ಪ್ರತಿಯೊಂದು ಜಿಲ್ಲೆಯಲ್ಲೂ ತಲಾ ಒಂದೊಂದು ಆಮ್ಲಜನಕ ಘಟಕಗಳ ಸ್ಥಾಪನೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಯತ್ನಗಳ ಕುರಿತು ಮಾತನಾಡಿದರು.

ಪ್ರಧಾನಮಂತ್ರಿ ಅವರು ಭಾರತದಲ್ಲಿ ಲಸಿಕಾ ಕಾರ್ಯಕ್ರಮದ ವೇಗ ಹೆಚ್ಚಾಗುತ್ತಿರುವ ಕುರಿತು ನಾಯಕರಿಗೆ ಮಾಹಿತಿಯನ್ನು ನೀಡಿದರು ಮತ್ತು ಸುಮಾರು 85 ದಿನಗಳಲ್ಲಿ ಮೊದಲ ಹತ್ತು ಕೋಟಿ ಲಸಿಕೆಯನ್ನು ಹಾಕಲಾಗಿತ್ತು. ಆನಂತರ ಕೇವಲ 24 ದಿನಗಳಲ್ಲಿ 10 ಕೋಟಿ ಲಸಿಕೆಯನ್ನು ಹೇಗೆ ಹಾಕಲಾಯಿತು ಎಂಬ ಕುರಿತು ವಿವರಿಸಿದರು. ದೇಶಾದ್ಯಂತ ಪ್ರತಿ ದಿನದ ಕೊನೆಗೆ ಸರಾಸರಿ 1.5 ಕೋಟಿಗೂ ಅಧಿಕ ಲಸಿಕೆ ಪ್ರತಿ ದಿನ ದಾಸ್ತಾನು ಇರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ನಾಯಕರಿಗೆ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಚಿತವಾಗಿಯೇ ಲಸಿಕೆ ಲಭ್ಯತೆ ಕುರಿತು ಮಾಹಿತಿ ನೀಡುತ್ತಿದ್ದು, ಅದನ್ನು ಆಧರಿಸಿ ಜಿಲ್ಲಾ ಮಟ್ಟದಲ್ಲಿ ಲಸಿಕಾ ಅಭಿಯಾನಗಳನ್ನು ಕೈಗೊಳ್ಳಲು ಸೂಕ್ತ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಲಸಿಕಾ ಅಭಿಯಾನ ಆರಂಭವಾಗಿ ಆರು ತಿಂಗಳು ಕಳೆದರೂ ಇನ್ನೂ ಸಾಕಷ್ಟು ಸಂಖ್ಯೆಯ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆಯದಿರುವುದು ಆತಂಕಕಾರಿ ಸಂಗತಿ ಎಂದು ಹೇಳಿದ ಪ್ರಧಾನಮಂತ್ರಿ ಅವರು ಆ ನಿಟ್ಟಿನಲ್ಲಿ ರಾಜ್ಯಗಳು ಹೆಚ್ಚು ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಹಲವು ದೇಶಗಳ ಪರಿಸ್ಥಿತಿಯನ್ನು ಗಮನಿಸಿ ನಾವು ಜಾಗೃತರಾಗಿರುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಲ್ಲದೆ ರೂಪಾಂತರಿಗಳು ರೋಗವನ್ನು ಇನ್ನಷ್ಟು ಊಹಿಸಲಾಗದಂತೆ ಮಾಡುತ್ತಿದೆ ಮತ್ತು ಆದ್ದರಿಂದ ನಾವೆಲ್ಲರೂ ಒಗ್ಗೂಡಿ ಈ ರೋಗದ ವಿರುದ್ಧ ಹೋರಾಡುವ ಅಗತ್ಯವಿದೆ ಎಂದರು.

ಅಲ್ಲದೆ ಪ್ರಧಾನಮಂತ್ರಿ ಅವರು, ಈ ಸಾಂಕ್ರಾಮಿಕದ ಸಮಯದಲ್ಲಿ ತಂತ್ರಜ್ಞಾನವನ್ನು ಕೋವಿನ್ ಮತ್ತು ಆರೋಗ್ಯ ಸೇತು ರೂಪದಲ್ಲಿ ಬಳಸಿಕೊಂಡಿರುವ ಭಾರತದ ವಿಶಿಷ್ಟ ಅನುಭವದ ಕುರಿತು ಮಾತನಾಡಿದರು.

ಸಾಂಕ್ರಾಮಿಕದುದ್ದಕ್ಕೂ ಅಹರ್ನಿಶಿ ದುಡಿಯುತ್ತಿರುವ ಮತ್ತು ನಿರಂತರ ನಿಗಾವಹಿಸುತ್ತಿರುವ ಪ್ರಧಾನಮಂತ್ರಿ ಅವರ ಕಾರ್ಯದ ಬಗ್ಗೆ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲ ಪಕ್ಷಗಳ ನಾಯಕರು ಸಾಂಕ್ರಾಮಿಕ ನಿರ್ವಹಣೆಯಲ್ಲಿ ಪ್ರಯತ್ನಗಳನ್ನು ಕೈಗೊಂಡ ಪ್ರಧಾನಮಂತ್ರಿ ಅವರಿಗೆ ಧನ್ಯವಾದಗಳನ್ನು ಹೇಳಿದರು. ಅಲ್ಲದೆ ನಾಯಕರು ರೋಗದ ಕುರಿತಂತೆ ತಮ್ಮದೇ ಆದ ವಿಭಿನ್ನ ಅನುಭವಗಳನ್ನು ಹಂಚಿಕೊಂಡರು. ಅವರು ಹಲವು ರಾಜ್ಯಗಳ ಸ್ಥಿತಿಗತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ಆಯಾ ರಾಜ್ಯಗಳಲ್ಲಿ ಕೈಗೊಂಡಿರುವ ಲಸಿಕಾ ಅಭಿಯಾನದ ಕುರಿತು ಮಾನಾಡಿದರು. ಅಲ್ಲದೆ ಅವರು ಕೋವಿಡ್ ಸೂಕ್ತ ನಡವಳಿಕೆಯನ್ನು ನಿರಂತರವಾಗಿ ಖಾತ್ರಿಪಡಿಸುವ ಅಗತ್ಯವಿದೆ ಎಂಬ ಕುರಿತು ಮಾತನಾಡಿದರು. ಎಲ್ಲ ನಾಯಕರು ಸರ್ವಾನುಮತದಿಂದ ತಮಗೆ ಸಮೃದ್ಧ ಮಾಹಿತಿ ಮತ್ತು ಒಳನೋಟಗಳಿರುವ ಪ್ರಾತ್ಯಕ್ಷಿಕೆ ನೀಡಿದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಅವರು ವಿಸ್ತೃತವಾದ ಪ್ರಾತ್ಯಕ್ಷಿಕೆಯನ್ನು ನೀಡಿದರು. ಅವರು ಈ ದಿನದ ವರೆಗೆ ಕೇವಲ 8 ರಾಜ್ಯಗಳಲ್ಲಿ 10,000ಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಅವುಗಳಲ್ಲಿ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಅತ್ಯಧಿಕ ಪ್ರಕರಣಗಳಿವೆ ಎಂದರು. ಕೇವಲ 5 ರಾಜ್ಯಗಳಲ್ಲಿ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಾಗಿದೆ.

ಸಾಂಕ್ರಾಮಿಕದುದ್ದಕ್ಕೂ ಪ್ರಧಾನಮಂತ್ರಿ ಅವರು, ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ 20 ಸಭೆಗಳನ್ನು ನಡೆಸಿದ್ದಾರೆ ಮತ್ತು ಕೇಂದ್ರ ಆರೋಗ್ಯ ಸಚಿವರು ರಾಜ್ಯಗಳೊಂದಿಗೆ 29 ಸಭೆಗಳನ್ನು ನಡೆಸಿದರು ಎಂದು ಮಾಹಿತಿ ನೀಡಲಾಯಿತು. ಕೇಂದ್ರ ಸಂಪುಟ ಕಾರ್ಯದರ್ಶಿ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ 34 ಬಾರಿ ವಿವರ ನೀಡಿದ್ದಾರೆ ಮತ್ತು ಕೋವಿಡ್-19 ನಿರ್ವಹಣೆಗೆ 33 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನೆರವು ನೀಡಲು 166 ಕೇಂದ್ರ ತಂಡಗಳನ್ನು ನಿಯೋಜಿಸಲಾಗಿತ್ತು.

ಭಾರತ ಸಾಂಕ್ರಾಮಿಕದುದ್ದಕ್ಕೂ ಲಸಿಕೆ ಲಭ್ಯತೆಯನ್ನು ವೃದ್ಧಿಸಿದೆ. ಸಿಡಿಎಸ್ ಸಿಒ, ರೆಮ್ ಡೆಸಿವಿರ್ ಉತ್ಪಾದನಾ ತಾಣಗಳ ಸಂಖ್ಯೆ ಮಾರ್ಚ್ ನಲ್ಲಿ 22 ಇದ್ದದ್ದು, ಜೂನ್ ವೇಳೆಗೆ 62ಕ್ಕೆ ಹೆಚ್ಚಿಸಲು ಅನುಮತಿ ನೀಡಿದೆ ಹಾಗೂ ಉತ್ಪಾದನಾ ಸಾಮರ್ಥ್ಯ ಕೂಡ ಪ್ರತಿ ತಿಂಗಳು 38 ಲಕ್ಷ ದಿಂದ 122 ಲಕ್ಷ ವಯಲ್ಸ್ ಗೆ ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಲಿಪೊಸೊಮಲ್ ಆಂಪೊಟೆರಿಸಿನ್ ಆಮದನ್ನು ಉತ್ತೇಜಿಸಲಾಗಿದೆ. ಇದರಿಂದಾಗಿ ಒಟ್ಟಾರೆ ಹಂಚಿಕೆ ಕೇವಲ 45,050ರಿಂದ 14.81 ಲಕ್ಷಕ್ಕೆ ಹೆಚ್ಚಿಸಲಾಗಿದೆ.  ಸದ್ಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದರೂ ರಾಜ್ಯಗಳಿಗೆ ಮುಂದಿನ ದಿನಗಳಲ್ಲಿ ಏರಿಕೆಯಾಗಬಹುದಾದ ಕೋವಿಡ್ ಪ್ರಕರಣಗಳನ್ನು ನಿರ್ವಹಿಸಲು ಸಾಕಷ್ಟು ಪ್ರಮಾಣದ ಔಷಧಗಳ ದಾಸ್ತಾನು ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿರುವ ಕನಿಷ್ಠ 8 ಔಷಧಗಳ ದಾಸ್ತಾನಿಗೆ ಒತ್ತು ನೀಡಲಾಗಿದೆ. ಅವುಗಳೆಂದರೆ: ಎನೋಕ್ಸಪರಿನ್, ಮೀಥೈಲ್ ಪ್ರೆಡ್ನಿಸೋಲೋನ್, ಡೆಕ್ಸಮೆಥಾಸೊನ್, ರೆಮ್ ಡಿಸಿವಿರ್, ಟೊಸಿಲಿಜುಮಾಬ್ (ಕೋವಿಡ್-19ಚಿಕಿತ್ಸೆಗಾಗಿ), ಆಂಫೊಟೆರೆಸಿನ್ ಬಿ ಡಿಯೋಕ್ಸಿಕೋಲೇಟ್, ಪೊಸಕೊನಜೋಲ್(ಕೋವಿಡ್ ಸಂಬಂಧಿ ಮ್ಯೂಕರ್ ಮೈಕೋಸಿಸ್ ಚಿಕಿತ್ಸೆಗಾಗಿ), ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್(ಐವಿಐಜಿ)(ಮಕ್ಕಳಲ್ಲಿನ ಮಲ್ಟಿ ಸಿಸ್ಟಮ್ ಇನ್ಫ್ಲಮೇಟರಿ ಸಿಂಡ್ರೋಮ್(ಎಂಐಎಸ್-ಸಿ)ಐಎಸ್-ಸಿ) ಕೇಂದ್ರ ಆರೋಗ್ಯ ಸಚಿವಾಲಯ ಈಶಾನ್ಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇವುಗಳ ಖರೀದಿಗೆ ಸಹಾಯ ಮಾಡಲಿದೆ.

ಭಾರತದ ಕೋವಿಡ್-19 ಲಸಿಕೆ ನೀಡುವಿಕೆ ಕಾರ್ಯತಂತ್ರದ ಕುರಿತು ಸದಸ್ಯರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯತಂತ್ರದ ಗುರಿ

  • ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಮತ್ತು ಸುರಕ್ಷಿತವಾಗಿ ಎಲ್ಲಾ ವಯಸ್ಕ ಭಾರತೀಯರಿಗೆ ಉಚಿತ ಲಸಿಕೆಯನ್ನು ಒದಗಿಸುವುದು.
  • ಆದ್ಯತಾ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರನ್ನು ರಕ್ಷಿಸುವುದು.
  • ದುರ್ಬಲ ಜನಸಂಖ್ಯೆ ಅಂದರೆ 45 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟವರ ರಕ್ಷಣೆ, ದೇಶದ ಕೋವಿಡ್ ಸಂಬಂಧಿ ಸಾವುಗಳಲ್ಲಿ ಶೇ.80ರಷ್ಟು ಇವರ ಪಾತ್ರವಿದ್ದು, ಅವರನ್ನು ರಕ್ಷಿಸುವುದು.

ವೈಜ್ಞಾನಿಕ ಮತ್ತು ಸಾಂಕ್ರಾಮಿಕ ಸಾಕ್ಷ್ಯಗಳನ್ನು ಆಧರಿಸಿ ಹಾಗೂ ಜಾಗತಿಕ ಉತ್ತಮ ಪದ್ಧತಿಗಳನ್ನು ಆಧರಿಸಿ ಅಭಿಯಾನದ ಪ್ರತಿಯೊಂದು ಹಂತವೂ ದೇಶಾದ್ಯಂತ ಕೋವಿಡ್-19 ಲಸಿಕೆ ಲಭ್ಯತೆ ಮತ್ತು ಉತ್ಪಾದನೆಗೆ ಅನುಗುಣವಾಗಿ ವಿಸ್ತೃತವಾದ ಲಸಿಕಾ ವ್ಯಾಪ್ತಿಯನ್ನು ಹೊಂದುವ ಜೊತೆಗೆ ಹೊಸ ಆದ್ಯತಾ ಗುಂಪುಗಳಲ್ಲಿ ಲಸಿಕೆ ವ್ಯಾಪ್ತಿಯಲ್ಲಿ ವಿಶಾಲವಾಗಿ ವಿಸ್ತರಿಸಲಾಗಿದೆ. 

ಅಮೆರಿಕಾಕ್ಕೆ ಹೋಲಿಸಿದರೆ ಭಾರತ ಅತ್ಯಧಿಕ ಸಂಖ್ಯೆಯ(41.2 ಕೋಟಿ) ಡೋಸ್ ಲಸಿಕೆಗಳನ್ನು ನೀಡಿದೆ. ಅಮೆರಿಕ(33.8ಕೋಟಿ), ಬ್ರೆಜಿಲ್(12.4ಕೋಟಿ), ಜರ್ಮನಿ(8.6 ಕೋಟಿ), ಬ್ರಿಟನ್(8.3 ಕೋಟಿ) ಲಸಿಕೆ ನೀಡಿವೆ. 12.3ಕೋಟಿ(ಶೇ.42ರಷ್ಟು) ಲಸಿಕೆಗಳನ್ನು ನಗರ ಪ್ರದೇಶಗಳಲ್ಲಿ ಮತ್ತು 17.11 ಕೋಟಿ(ಶೇ.58ರಷ್ಟು) ಲಸಿಕೆಗಳನ್ನು ನಗರ ಪ್ರದೇಶದಲ್ಲಿ ಮೇ 1 ರಿಂದ ಜುಲೈ 19ರ ನಡುವಿನ ಅವಧಿಯಲ್ಲಿ ನೀಡಲಾಗಿದೆ. ಇದೇ ಅವಧಿಯಲ್ಲಿ 21.75 ಕೋಟಿ ಪುರುಷರು (ಶೇ.53), 18.94 ಕೋಟಿ ಮಹಿಳೆಯರು(ಶೇ.47 ಮತ್ತು 72,834 ತೃತೀಯ ಲಿಂಗಿಗಳು ಲಸಿಕೆಯನ್ನು ಸ್ವೀಕರಿಸಿದ್ದಾರೆ. 

ಕೋವಿಡ್-19 ವಿರುದ್ಧದ ಭಾರತದ ಸಮರದಲ್ಲಿ ಮುಂಚೂಣಿಯಲ್ಲಿರುವ ಪರೀಕ್ಷೆ ಪತ್ತೆ, ಚಿಕಿತ್ಸೆ, ಲಸಿಕೆ ಮತ್ತು ಕೋವಿಡ್ ಸೂಕ್ತ ನಡವಳಿಕೆಯ ಮಾರ್ಗದರ್ಶಿ ಸೂತ್ರಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಯಿತು.

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
Rs 1,780 Cr & Counting: How PM Modi’s Constituency Varanasi is Scaling New Heights of Development

Media Coverage

Rs 1,780 Cr & Counting: How PM Modi’s Constituency Varanasi is Scaling New Heights of Development
...

Nm on the go

Always be the first to hear from the PM. Get the App Now!
...
PM congratulates boxer, Lovlina Borgohain for winning gold medal at Boxing World Championships
March 26, 2023
ಶೇರ್
 
Comments

The Prime Minister, Shri Narendra Modi has congratulated boxer, Lovlina Borgohain for winning gold medal at Boxing World Championships.

In a tweet Prime Minister said;

“Congratulations @LovlinaBorgohai for her stupendous feat at the Boxing World Championships. She showed great skill. India is delighted by her winning the Gold medal.”