ಶೇರ್
 
Comments
"ಅಮೃತ ಕಾಲದ ಬಜೆಟ್, ಹಸಿರು ಬೆಳವಣಿಗೆಯ ವೇಗ ಹೆಚ್ಚಿಸುತ್ತದೆ"
"ಈ ಸರ್ಕಾರದ ಪ್ರತಿಯೊಂದು ಬಜೆಟ್ ಪ್ರಸ್ತುತ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಜತೆಗೆ ನವಯುಗದ ಸುಧಾರಣೆಗಳನ್ನು ಮುಂದಿಡುತ್ತಿದೆ"
"ಈ ಬಜೆಟ್‌ನಲ್ಲಿ ಮಾಡಿರುವ ಹಸಿರು ಇಂಧನ ಅಭಿವೃದ್ಧಿಯ ಘೋಷಣೆಗಳು ಭದ್ರ ಬುನಾದಿ ಹಾಕುತ್ತವೆ ಮತ್ತು ಭವಿಷ್ಯದ ಪೀಳಿಗೆಗೆ ದಾರಿ ಮಾಡಿಕೊಡುತ್ತವೆ"
"ಜಾಗತಿಕ ಹಸಿರು ಇಂಧನ ಮಾರುಕಟ್ಟೆಯಲ್ಲಿ ಭಾರತವನ್ನು ಪ್ರಮುಖ ಸರದಾರನಾಗಿ ರೂಪಿಸುವಲ್ಲಿ ಈ ಬಜೆಟ್ ಪ್ರಮುಖ ಪಾತ್ರ ವಹಿಸುತ್ತದೆ"
"ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವು 2014ರಿಂದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸೇರ್ಪಡೆಯಲ್ಲಿ ವೇಗ ಪಡೆದುಕೊಂಡಿದೆ"
"ಭಾರತದ ಸೌರ, ಪವನ ಮತ್ತು ಜೈವಿಕ ಅನಿಲ ಕ್ಷೇತ್ರದಲ್ಲಿ ನಮ್ಮ ಖಾಸಗಿ ವಲಯದ ಸಾಮರ್ಥ್ಯ ಮತ್ತು ಪಾಲುದಾರಿಕೆಯು ಯಾವುದೇ ಚಿನ್ನದ ಗಣಿ ಅಥವಾ ತೈಲ ಕ್ಷೇತ್ರಕ್ಕಿಂತ ಕಡಿಮೆಯಿಲ್ಲ"
"ಭಾರತದ ವಾಹನಗಳ ರದ್ದಿ(ಸ್ಕ್ರ್ಯಾಪೇಜ್) ನೀತಿಯು ಹಸಿರು ಬೆಳವಣಿಗೆಯ ಕಾರ್ಯತಂತ್ರದ ನಿರ್ಣಾಯಕ ಭಾಗವಾಗಿದೆ"
“ಹಸಿರು ಇಂಧನ ಉತ್ಪಾದನೆಯಲ್ಲಿ ಜಗತ್ತನ್ನು ಮುನ್ನಡೆಸಲು ಭಾರತವು ಬಹುದೊಡ್ಡ ಸಾಮರ್ಥ್ಯ ಹೊಂದಿದೆ. ಇದು ಹಸಿರು ಉದ್ಯೋಗಗಳನ್ನು ಸೃಷ್ಟಿಸುವ ಜತೆಗೆ, ಜಾಗತಿಕ ಏಳ್ಗೆಯ ಕಾರಣವನ್ನು ಮುಂದಿಡುತ್ತದೆ"
"ಈ ಬಜೆಟ್ ಕೇವಲ ಅವಕಾಶವಲ್ಲ, ಆದರೆ ಇದು ನಮ್ಮ ಭವಿಷ್ಯದ ಭದ್ರತೆಯನ್ನು ಖಾತ್ರಿ ಪಡಿಸುತ್ತದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 'ಹಸಿರು ಬೆಳವಣಿಗೆ' ಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಮಾತನಾಡಿದರು. 2023ರ ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾದ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಲಹೆ, ಸೂಚನೆಗಳನ್ನು ಪಡೆಯಲು ಸರ್ಕಾರವು ಆಯೋಜಿಸಿರುವ ಬಜೆಟ್ ನಂತರದ 12 ವೆಬಿನಾರ್‌ಗಳ ಸರಣಿಯಲ್ಲಿ ಇದು ಮೊದಲನೆಯದಾಗಿದೆ.

ವೆಬಿನಾರ್ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, 2014ರ ನಂತರ ದೇಶದಲ್ಲಿ ಮಂಡಿಸಲಾದ ಎಲ್ಲಾ ಬಜೆಟ್‌ಗಳು ಪ್ರಸ್ತುತ ದಿನಮಾನದಲ್ಲಿ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಜತೆಗೆ, ನವಯುಗದ ಸುಧಾರಣೆಗಳನ್ನು ಮುಂದಿಡುತ್ತಿವೆ ಎಂದು ಬಣ್ಣಿಸಿದರು.

ಹಸಿರು ಬೆಳವಣಿಗೆ ಮತ್ತು ಇಂಧನ ಪ್ರಸರಣಕ್ಕೆ ರೂಪಿಸಿರುವ 3 ಆಧಾರ ಸ್ತಂಭಗಳನ್ನು ಪ್ರಧಾನ ಮಂತ್ರಿ ಅವರು ವಿವರಿಸಿದರು. ಮೊದಲನೆಯದಾಗಿ, ನವೀಕರಿಸಬಹುದಾದ ಇಂಧನ ಉತ್ಪಾದನೆ ಹೆಚ್ಚಿಸುವುದು; ಎರಡನೆಯದಾಗಿ, ದೇಶದ ಆರ್ಥಿಕತೆಯಲ್ಲಿ ಪಳೆಯುಲಿಕೆ (ಫಾಸಿಲ್) ಇಂಧನದ ಬಳಕೆ ಕಡಿಮೆ ಮಾಡುವುದು ಮತ್ತು ಅಂತಿಮವಾಗಿ, ದೇಶದಲ್ಲಿ ಅನಿಲ ಆಧಾರಿತ ಆರ್ಥಿಕತೆಯತ್ತ ವೇಗವಾಗಿ ಮುನ್ನಡೆಯುವುದಾಗಿದೆ. ಈ ಕಾರ್ಯತಂತ್ರವು ಕಳೆದ ಕೆಲವು ವರ್ಷಗಳ ಬಜೆಟ್‌ನಲ್ಲಿ ಎಥೆನಾಲ್ ಮಿಶ್ರಣ, ಪಿಎಂ ಕುಸುಮ್ ಯೋಜನೆ, ಸೌರಶಕ್ತಿ ಉತ್ಪಾದನೆಗೆ ಪ್ರೋತ್ಸಾಹ, ಮೇಲ್ಛಾವಣಿಯ ಸೌರ ಯೋಜನೆ, ಕಲ್ಲಿದ್ದಲು ಅನಿಲೀಕರಣ ಮತ್ತು ಬ್ಯಾಟರಿ ಸಂಗ್ರಹಣೆಯಂತಹ ಕ್ರಮಗಳ ಘೋಷಣೆಗಳನ್ನು ಬಜೆಟ್ ನಲ್ಲಿ ಒತ್ತಿ ಹೇಳಲಾಗಿದೆ. ಹಿಂದಿನ ವರ್ಷಗಳ ಬಜೆಟ್‌ಗಳ ಮಹತ್ವದ ಘೋಷಣೆಗಳನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ಈ ವರ್ಷದ ಬಜೆಟ್‌ನಲ್ಲಿ ಕೈಗಾರಿಕೆಗಳಿಗೆ ಹಸಿರು ಸಾಲ, ರೈತರಿಗೆ ಪ್ರಧಾನಮಂತ್ರಿ ಪ್ರಣಾಮ್ ಯೋಜನೆ, ಹಳ್ಳಿಗಳಿಗೆ ಗೋಬರ್ಧನ್ ಯೋಜನೆ, ನಗರಗಳಿಗೆ ವಾಹನ ಸ್ಕ್ರ್ಯಾಪಿಂಗ್(ರದ್ದಿ) ನೀತಿ, ಹಸಿರು ಹೈಡ್ರೋಜನ್ ಮತ್ತು ಜೌಗು ಭೂಮಿ ಸಂರಕ್ಷಣೆಯಂತಹ ಯೋಜನೆಗಳನ್ನು ಪ್ರಕಟಿಸಲಾಗಿದೆ. ಈ ಘೋಷಣೆಗಳು ದೇಶದ ಅರ್ಥ ವ್ಯವಸ್ಥೆಯ ಪ್ರಗತಿಗೆ ಭದ್ರ ಬುನಾದಿ  ಹಾಕುತ್ತವೆ ಮತ್ತು ಭವಿಷ್ಯದ ಪೀಳಿಗೆಗೆ ಸುಗಮ ದಾರಿ ಮಾಡಿಕೊಡುತ್ತವೆ ಎಂದು ಪ್ರಧಾನಿ ಪ್ರತಿಪಾದಿಸಿದರು. 

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತದ ಪ್ರಭಾವಿ ಅಥವಾ ಭದ್ರವಾದ ಸ್ಥಾನವು ವಿಶ್ವದಲ್ಲಿ ಅನುಗುಣವಾದ ಬದಲಾವಣೆಯನ್ನು ಖಚಿತಪಡಿಸುತ್ತದೆ. “ಜಾಗತಿಕ ಹಸಿರು ಇಂಧನ ಮಾರುಕಟ್ಟೆಯಲ್ಲಿ ಭಾರತವನ್ನು ಪ್ರಮುಖ ಸರದಾರನಾಗಿ ರೂಪಿಸುವಲ್ಲಿ ಈ ಬಜೆಟ್ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿಯೇ ಇಂದು ನಾನು ಇಂಧನ ಜಗತ್ತಿನ ಪ್ರತಿಯೊಬ್ಬ ಪಾಲುದಾರರನ್ನು ಭಾರತದಲ್ಲಿ ಹೂಡಿಕೆ ಮಾಡಲು ಮುಕ್ತವಾಗಿ ಆಹ್ವಾನಿಸುತ್ತೇನೆ”. ಇಂಧನ ಪೂರೈಕೆ ಸರಪಳಿಯ ವೈವಿಧ್ಯೀಕರಣಕ್ಕಾಗಿ ಜಾಗತಿಕ ಪ್ರಯತ್ನಗಳನ್ನು ಉಲ್ಲೇಖಿಸಿದ ಪ್ರಧಾನಿ, ಈ ಬಜೆಟ್ ಪ್ರತಿಯೊಬ್ಬ ಹಸಿರು ಇಂಧನ ಹೂಡಿಕೆದಾರರಿಗೆ ಭಾರತದಲ್ಲಿ ಹೂಡಿಕೆ ಮಾಡಲು ಉತ್ತಮ ಅವಕಾಶ ನೀಡಿದೆ. ಈ ವಲಯದ ಸ್ಟಾರ್ಟಪ್‌ಗಳಿಗೂ ಇದು ತುಂಬಾ ಉಪಯುಕ್ತವಾಗಲಿದೆ ಎಂದು ಹೇಳಿದರು.

"2014ರಿಂದ ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಸೇರ್ಪಡೆಯಲ್ಲಿ ಭಾರತವು ಅತ್ಯಂತ ವೇಗವಾಗಿ ಮುನ್ನಡೆಯುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳಿಗೆ ಸಂಬಂಧಿಸಿದ ಗುರಿಗಳನ್ನು ಸಾಧಿಸುವ ಸಾಮರ್ಥ್ಯವನ್ನು ಭಾರತದ ದಾಖಲೆಯು ತೋರಿಸುತ್ತಿದೆ. 9 ವರ್ಷಗಳ ಮೊದಲು ಸ್ಥಾಪಿಸಲಾದ ವಿದ್ಯುತ್ ಸಾಮರ್ಥ್ಯದಲ್ಲಿ ಭಾರತವು ಪಳೆಯುಳಿಕೆ (ಫಾಸಿಲ್)ಇಂಧನಗಳಿಂದ 40% ಕೊಡುಗೆ ನೀಡಿ, ಗುರಿ ಸಾಧಿಸಿದೆ. ಭಾರತವು ನಿಗದಿತ ಗುರಿಗಿಂತ 5 ತಿಂಗಳ ಮೊದಲು ಪೆಟ್ರೋಲ್‌ನಲ್ಲಿ 10% ಎಥೆನಾಲ್ ಮಿಶ್ರಣದ ಗುರಿ ಸಾಧಿಸಿದೆ. 2030ರ ಗುರಿಗೆ ಬದಲಾಗಿ 2025-26ರ ಹೊತ್ತಿಗೆ ಪೆಟ್ರೋಲ್‌ನಲ್ಲಿ 20% ಎಥೆನಾಲ್ ಮಿಶ್ರಣವನ್ನು ಸಾಧಿಸಲು ರಾಷ್ಟ್ರವು ನಿರಂತರ ಶ್ರಮಿಸುತ್ತಿದೆ. 500 ಗಿಗಾ ವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗಲಿದೆ. 2023ರ ವೇಳೆಗೆ ಇದನ್ನು ಸಾಧಿಸಲಾಗುವುದು. ಇ20 ಇಂಧನ ಅನಾವರಣವನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ಜೈವಿಕ ಇಂಧನಗಳ ಉತ್ಪಾದನೆಗೆ ಸರ್ಕಾರ ಒತ್ತು ನೀಡಿದೆ ಮತ್ತು ಇದು ಹೂಡಿಕೆದಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ ಎಂದು ಹೇಳಿದರು. ದೇಶದಲ್ಲಿ ಹೇರಳವಾಗಿರುವ ಕೃಷಿ ತ್ಯಾಜ್ಯದಿಂದ ದೇಶದ ಮೂಲೆ ಮೂಲೆಗಳಲ್ಲಿ ಎಥೆನಾಲ್ ಸ್ಥಾವರಗಳನ್ನು ಸ್ಥಾಪಿಸುವ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಹೂಡಿಕೆದಾರರನ್ನು ಒತ್ತಾಯಿಸಿದರು. "ಭಾರತದಲ್ಲಿ ನಮ್ಮ ಖಾಸಗಿ ವಲಯಕ್ಕೆ ಸೌರ, ಪವನ ಮತ್ತು ಜೈವಿಕ ಅನಿಲ ಉತ್ಪಾದನಾ ಸಾಮರ್ಥ್ಯವು ಯಾವುದೇ ಚಿನ್ನದ ಗಣಿ ಅಥವಾ ತೈಲ ಕ್ಷೇತ್ರಕ್ಕಿಂತ ಕಡಿಮೆಯಿಲ್ಲ" ಎಂದು ಪ್ರಧಾನಮಂತ್ರಿ ಹೇಳಿದರು.

 ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿ, ಭಾರತವು 5 ದಶಲಕ್ಷ ಮೆಟ್ರಿಕ್ ಟನ್ (ಎಂಎಂಟಿ) ಹಸಿರು ಹೈಡ್ರೋಜನ್ ಉತ್ಪಾದನೆಯ ಗುರಿಯೊಂದಿಗೆ ಮುನ್ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ಖಾಸಗಿ ವಲಯಕ್ಕೆ ಉತ್ತೇಜನ ನೀಡಲು 19 ಸಾವಿರ ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಎಲೆಕ್ಟ್ರೋಲೈಜರ್ ತಯಾರಿಕೆ, ಹಸಿರು ಉಕ್ಕಿನ ಉತ್ಪಾದನೆ ಮತ್ತು ದೀರ್ಘಾವಧಿಯ ಇಂಧನ ಕೋಶಗಳಂತಹ ಉತ್ಪಾದನೆಗೆ ಇರುವ ವಿಫುಲ ಅವಕಾಶಗಳನ್ನು ಪ್ರಧಾನಿ ಪ್ರಸ್ತಾಪಿಸಿದರು.

ಗೋಬರ್ (ಹಸುವಿನ ಸಗಣಿ)ಯಿಂದ 10 ಸಾವಿರ ದಶಲಕ್ಷ ಕ್ಯೂಬಿಕ್ ಮೀಟರ್ ಜೈವಿಕ ಅನಿಲ ಉತ್ಪಾದಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ. 1.5 ಲಕ್ಷ ಕ್ಯೂಬಿಕ್ ಮೀಟರ್ ಗ್ಯಾಸ್‌ನಿಂದ ದೇಶದ ನಗರಗಳ ಅನಿಲ ವಿತರಣೆಗೆ 8%ವರೆಗೆ ಕೊಡುಗೆ ನೀಡಬಹುದು ಎಂದು ಪ್ರಧಾನಿ ತಿಳಿಸಿದರು. “ಈ ಸಾಧ್ಯತೆಗಳ ಕಾರಣದಿಂದ ಇಂದು ಗೋಬರ್ಧನ್ ಯೋಜನೆಯು ಭಾರತದ ಜೈವಿಕ ಇಂಧನ ಕಾರ್ಯತಂತ್ರದ ಪ್ರಮುಖ ಅಂಶವಾಗಿದೆ. ಈ ಬಜೆಟ್‌ನಲ್ಲಿ ಗೋಬರ್ಧನ್ ಯೋಜನೆಯಡಿ 500 ಹೊಸ ಸ್ಥಾವರಗಳನ್ನು ಸ್ಥಾಪಿಸುವ ಯೋಜನೆಯನ್ನು ಸರ್ಕಾರ ಘೋಷಿಸಿದೆ. ಈ ಆಧುನಿಕ ಸ್ಥಾವರಗಳಿಗೆ ಸರ್ಕಾರ 10,000 ಕೋಟಿ ರೂಪಾಯಿ ಖರ್ಚು ಮಾಡಲಿದೆ”. ಕೃಷಿ ತ್ಯಾಜ್ಯ ಮತ್ತು ಪುರಸಭೆಯ ಘನತ್ಯಾಜ್ಯದಿಂದ ಸಾಂದ್ರಿತ ಜೈವಿಕ ಅನಿಲ ಉತ್ಪಾದಿಸಲು ಖಾಸಗಿ ವಲಯವು ಆಕರ್ಷಕ ಪ್ರೋತ್ಸಾಹ ಪಡೆಯುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ಭಾರತದ ವಾಹನ ಸ್ಕ್ರ್ಯಾಪಿಂಗ್(ರದ್ದಿ) ನೀತಿಯ ಮೇಲೆ ಬೆಳಕು ಚೆಲ್ಲಿದ ಪ್ರಧಾನ ಮಂತ್ರಿ,  ಇದು ಹಸಿರು ಬೆಳವಣಿಗೆಯ ಕಾರ್ಯತಂತ್ರದ ನಿರ್ಣಾಯಕ ಭಾಗವಾಗಿದೆ. ಪೊಲೀಸ್ ವಾಹನಗಳು, ಆಂಬ್ಯುಲೆನ್ಸ್‌ಗಳು ಮತ್ತು ಬಸ್‌ಗಳು ಸೇರಿದಂತೆ 15 ವರ್ಷಕ್ಕಿಂತ ಕೇಂದ್ರ ಮತ್ತು ರಾಜ್ಯ ಸರಕಾರಿ ಒಡೆತನದ ಸುಮಾರು 3 ಲಕ್ಷ ಹಳೆಯದಾದ ವಾಹನಗಳನ್ನು ರದ್ದುಗೊಳಿಸಲು ಸರ್ಕಾರವು ಈ ವರ್ಷದ ಬಜೆಟ್‌ನಲ್ಲಿ 3000 ಕೋಟಿ ರೂ. ಅನುದಾನ ಒದಗಿಸಿದೆ. ಮರುಬಳಕೆ, ಮರುಉತ್ಪಾದನೆ ಮತ್ತು ಚೇತರಿಕೆಯ ತತ್ವ ಅನುಸರಿಸಿ, "ವಾಹನಗಳ ಸ್ಕ್ರ್ಯಾಪಿಂಗ್ ಒಂದು ದೊಡ್ಡ ಮಾರುಕಟ್ಟೆಯಾಗಲಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಇದು ನಮ್ಮ ಮರುಬಳಕೆಯ(ಸರ್ಕ್ಯುಲರ್) ಆರ್ಥಿಕತೆಗೆ ಹೊಸ ಶಕ್ತಿ ನೀಡುತ್ತದೆ. ಭಾರತದ ಯುವ ಸಮುದಾಯ ಮರುಬಳಕೆ ಆರ್ಥಿಕತೆಯ ವಿವಿಧ ವಿಧಾನಗಳಲ್ಲಿ ಸೇರ್ಪಡೆ ಆಗಬೇಕು ಎಂದು ಪ್ರಧಾನಿ ಒತ್ತಾಯಿಸಿದರು.
 
ಮುಂದಿನ 6-7 ವರ್ಷಗಳಲ್ಲಿ ಭಾರತವು ತನ್ನ ಬ್ಯಾಟರಿ ಶೇಖರಣಾ ಸಾಮರ್ಥ್ಯವನ್ನು 125 ಗಿಗಾವ್ಯಾಟ್ ತಾಸುಗಳಿಗೆ ಹೆಚ್ಚಿಸಬೇಕಾಗಿದೆ. ಬಂಡವಾಳ-ತೀವ್ರತೆ ಇರುವ ಈ ವಲಯದಲ್ಲಿ ದೊಡ್ಡ ಗುರಿ ಸಾಧಿಸಲು ಬ್ಯಾಟರಿ ಡೆವಲಪರ್‌ಗಳನ್ನು ಬೆಂಬಲಿಸಲು ಸರ್ಕಾರವು ಈ ಬಜೆಟ್‌ನಲ್ಲಿ ‘ಕಾರ್ಯಸಾಧು ಅಂತರ ನಿಧಿ ಯೋಜನೆ’ ಹೊರತಂದಿದೆ ಎಂದು ಪ್ರಧಾನಿ ತಿಳಿಸಿದರು.

ಜಲ ಮಾರ್ಗಗಳ ಸಾರಿಗೆ ಭಾರತದಲ್ಲಿ ಬೃಹತ್ ಕ್ಷೇತ್ರವಾಗುತ್ತಿದೆ. ಭಾರತವು ಇಂದು ತನ್ನ ಕರಾವಳಿ ಮಾರ್ಗದ ಮೂಲಕ ಕೇವಲ 5% ಸರಕುಗಳನ್ನು ಮಾತ್ರ ಸಾಗಿಸುತ್ತಿದೆ. ಆದರೆ ಭಾರತದಲ್ಲಿ ಕೇವಲ 2% ಸರಕುಗಳನ್ನು ಒಳನಾಡಿನ ಜಲಮಾರ್ಗಗಳ ಮೂಲಕ ಸಾಗಿಸಲಾಗುತ್ತಿದೆ. ಆದ್ದರಿಂದ ಭಾರತದಲ್ಲಿ ಜಲಮಾರ್ಗಗಳ ಅಭಿವೃದ್ಧಿಯು ಈ ಕ್ಷೇತ್ರದಲ್ಲಿ ಎಲ್ಲಾ ಪಾಲುದಾರರಿಗೆ ಅನೇಕ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಪ್ರಧಾನಿ  ಹೇಳಿದರು.

ಭಾಷಣದ ಕೊನೆಯ ಹಂತಕ್ಕೆ ಬಂದ ಪ್ರಧಾನಮಂತ್ರಿ, ಹಸಿರು ಇಂಧನ ತಂತ್ರಜ್ಞಾನ ವಿಷಯದಲ್ಲಿ ಭಾರತವು ಜಗತ್ತನ್ನು ಮುನ್ನಡೆಸುವ ದೊಡ್ಡ ಸಾಮರ್ಥ್ಯ ಹೊಂದಿದೆ. ಇದು ಹಸಿರು ಉದ್ಯೋಗಗಳನ್ನು ಸೃಷ್ಟಿಸುವ ಜತೆಗೆ, ಜಾಗತಿಕ ಏಳ್ಗೆಯ ಕಾರಣವನ್ನು ಮುಂದಿಡುತ್ತದೆ. "ಈ ಬಜೆಟ್ ಕೇವಲ ಒಂದು ಅವಕಾಶವಲ್ಲ, ಆದರೆ ಇದು ನಮ್ಮ ಭವಿಷ್ಯದ ಭದ್ರತೆಯ ಖಾತ್ರಿಯನ್ನು ಸಹ ಒಳಗೊಂಡಿದೆ", ಬಜೆಟ್‌ನ ಪ್ರತಿಯೊಂದು ಪ್ರಸ್ತಾವನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸುವಂತೆ ಪ್ರಧಾನಮಂತ್ರಿ ಎಲ್ಲಾ ಪಾಲುದಾರರನ್ನು ಒತ್ತಾಯಿಸಿದರು. "ಸರ್ಕಾರವು ನಿಮ್ಮ ಸಲಹೆ ಸೂಚನೆಗಳನ್ನು ಮುಕ್ತ ಮನಸ್ಸಿನಿಂದ ನಿರೀಕ್ಷಿಸುತ್ತಿದೆ" ಎಂದು ಪ್ರಧಾನಮಂತ್ರಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.
 
ಹಿನ್ನೆಲೆ

ಕೇಂದ್ರ ವಿದ್ಯುತ್ ಸಚಿವಾಲಯದ ನೇತೃತ್ವದಲ್ಲಿ ಆಯೋಜಿತವಾಗಿರುವ ವೆಬಿನಾರ್, ಹಸಿರು ಬೆಳವಣಿಗೆಯ ಇಂಧನ  ಮತ್ತು ಇಂಧನೇತರ ವಿಷಯಗಳನ್ನು ಒಳಗೊಂಡ 6 ಸಂವಾದ ಅಥವಾ ಚರ್ಚಾ ಕಾರ್ಯಕ್ರಮಗಳನ್ನು ಹೊಂದಿರುತ್ತದೆ. ಸಂಬಂಧಪಟ್ಟ ಕೇಂದ್ರ ಸರ್ಕಾರದ ಸಚಿವಾಲಯಗಳ ಸಚಿವರು ಮತ್ತು ಕಾರ್ಯದರ್ಶಿಗಳಲ್ಲದೆ, ರಾಜ್ಯ ಸರ್ಕಾರಗಳು, ಕೈಗಾರಿಕೆ, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಪಾಲುದಾರರು ಈ ವೆಬಿನಾರ್‌ಗಳಲ್ಲಿ ಪಾಲ್ಗೊಳ್ಳುತ್ತಾರೆ. ಬಜೆಟ್ ಪ್ರಸ್ತಾವನೆಗಳ ಉತ್ತಮ ಅನುಷ್ಠಾನಕ್ಕಾಗಿ ಅವರು ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಾರೆ.

ಹಸಿರು ಕೈಗಾರಿಕಾ ಮತ್ತು ಆರ್ಥಿಕ ಸ್ಥಿತ್ಯಂತರ, ಪರಿಸರ ಸ್ನೇಹಿ ಕೃಷಿ ಮತ್ತು ದೇಶದಲ್ಲಿ ಸುಸ್ಥಿರ ಇಂಧನ ಉತ್ಪಾದನೆ ಮೂಲಕ ಹಸಿರು ಬೆಳವಣಿಗೆಯು ಕೇಂದ್ರ ಬಜೆಟ್ 2023-24ರ 7 ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಇದು ಹೆಚ್ಚಿನ ಸಂಖ್ಯೆಯ ಹಸಿರು ಉದ್ಯೋಗಗಳನ್ನು ಸಹ ಸೃಷ್ಟಿಸುತ್ತದೆ. ಕೇಂದ್ರ ಬಜೆಟ್ ನ ಹಲವಾರು ಯೋಜನೆಗಳು ಮತ್ತು ಉಪಕ್ರಮಗಳು ವಿವಿಧ ವಲಯಗಳು ಮತ್ತು ಸಚಿವಾಲಯಗಳಿಗೆ ಹರಡಿಕೊಂಡಿದೆ. ಹಸಿರು ಹೈಡ್ರೋಜನ್ ಮಿಷನ್, ಇಂಧನ ಪರಿವರ್ತನೆ, ಇಂಧನ ಸಂಗ್ರಹಣೆ ಯೋಜನೆಗಳು, ನವೀಕರಿಸಬಹುದಾದ ಇಂಧನ ಮೂಲಗಳ ಆಯ್ಕೆ, ಹಸಿರು ಸಾಲ ಕಾರ್ಯಕ್ರಮಗಳು, ಪಿಎಂ-ಪ್ರಣಾಮ್, ಗೋಬರ್ಧನ್ ಯೋಜನೆ, ಭಾರತೀಯ ಪ್ರಾಕೃತಿಕ ಖೇತಿ ಬಯೋ-ಇನ್‌ಪುಟ್ ರಿಸೋರ್ಸ್ ಸೆಂಟರ್‌ಗಳು, ಮಿಷ್ಟಿ, ಅಮೃತ್ ಧರೋಹರ್, ಕರಾವಳಿ ಬಂದರು ಮತ್ತು ವಾಹನಗಳ ಬದಲಾವಣೆಯಂತಹ ಹಲವು ಯೋಜನೆಗಳು ಬಜೆಟ್ ಪ್ರಸ್ತಾವನೆಯಲ್ಲಿ ಸೇರಿವೆ.
 
ಬಜೆಟ್ ನಂತರದ ಪ್ರತಿ ವೆಬಿನಾರ್ 3 ಕಲಾಪಗಳನ್ನು ಹೊಂದಿರುತ್ತದೆ. ಪ್ರಧಾನಮಂತ್ರಿ ಅವರು ಮಾತನಾಡುವ ಪೂರ್ಣ ಪ್ರಮಾಣದ ಆರಂಭಿಕ ಅಧಿವೇಶನದೊಂದಿಗೆ ಇದು ಪ್ರಾರಂಭವಾಗುತ್ತದೆ. ಈ ಕಲಾಪಗಳಿಗೆ ಸಮಾನಾಂತರವಾಗಿ ವಿವಿಧ ವಿಷಯಗಳ ಮೇಲೆ ಪ್ರತ್ಯೇಕ ಪ್ರಶ್ನೋತ್ತರ(ಚರ್ಚಾ) ಕಲಾಪಗಳು ಸಹ ನಡೆಯುತ್ತವೆ. ಅಂತಿಮವಾಗಿ, ಚರ್ಚಾ ಕಲಾಪಗಳ ವಿಚಾರಗಳನ್ನು ಸಮಾರೋಪ ಕಲಾಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ವೆಬಿನಾರ್ ಗಳಲ್ಲಿ ಸ್ವೀಕರಿಸಿದ ಸಲಹೆ ಸೂಚನೆಗಳ ಆಧಾರದ ಮೇಲೆ, ಸಂಬಂಧಪಟ್ಟ ಸಚಿವಾಲಯಗಳು ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಕಾಲಮಿತಿಯ ಕ್ರಿಯಾಯೋಜನೆ ಸಿದ್ಧಪಡಿಸುತ್ತವೆ.

ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರವು ಹಲವಾರು ಬಜೆಟ್ ಸುಧಾರಣೆಗಳನ್ನು ಕೈಗೊಂಡಿದೆ. ಬಜೆಟ್‌ ದಿನಾಂಕವನ್ನು ಫೆಬ್ರವರಿ 1ಕ್ಕೆ ನಿಗದಿಪಡಿಸಲಾಯಿತು, ಇದರಿಂದಾಗಿ ಸಚಿವಾಲಯಗಳು ಮತ್ತು ಇಲಾಖೆಗಳು ಮುಂಗಾರು ಆರಂಭಕ್ಕೆ ಮುನ್ನ ಅನುದಾನ ಬಳಸಿಕೊಳ್ಳಲು ಸಾಕಷ್ಟು ಸಮಯ ಸಿಕ್ಕಂತಾಗಿದೆ. ಬಜೆಟ್ ಅನುಷ್ಠಾನದಲ್ಲಿ ಸುಧಾರಣೆಗಳನ್ನು ತರುವ ಕಡೆಗೆ ಮತ್ತೊಂದು ಹೆಜ್ಜೆಯೆಂದರೆ, ಬಜೆಟ್ ನಂತರ ವೆಬಿನಾರ್ ಗಳ ಆಯೋಜನೆ, ಇದು ಹೊಸ ಪರಿಕಲ್ಪನೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ತಜ್ಞರು, ಶೈಕ್ಷಣಿಕ, ಉದ್ಯಮ ಮತ್ತು ಕ್ಷೇತ್ರದ ವೃತ್ತಿನಿರತರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲು ಮತ್ತು ವಿವಿಧ ವಲಯಗಳ ಸಹಯೋಗದೊಂದಿಗೆ ಕಾರ್ಯತಂತ್ರ ಅನುಷ್ಠಾನದ ಮೇಲೆ ಕೆಲಸ ಮಾಡಲು ಪ್ರಧಾನ ಮಂತ್ರಿ ಅವರು ಈ ಪರಿಕಲ್ಪನೆ ರೂಪಿಸಿದರು. 2021ರಲ್ಲಿ ಈ ವೆಬಿನಾರ್‌ಗಳನ್ನು ಜನರ ಪಾಲ್ಗೊಳ್ಳುವಿಕೆ ಉತ್ಸಾಹದಲ್ಲಿ ಪ್ರಾರಂಭಿಸಲಾಯಿತು. ಇದು ಬಜೆಟ್ ಪ್ರಕಟಣೆಗಳ ಪರಿಣಾಮಕಾರಿ, ತ್ವರಿತ ಮತ್ತು ತಡೆರಹಿತ ಅನುಷ್ಠಾನದಲ್ಲಿ ಎಲ್ಲಾ ಸಂಬಂಧಪಟ್ಟ ಪಾಲುದಾರರ ಒಳಗೊಳ್ಳುವಿಕೆ ಮತ್ತು ಒಡೆತನವನ್ನು ಪ್ರೋತ್ಸಾಹಿಸುತ್ತದೆ.
 
ತ್ರೈಮಾಸಿಕ ಗುರಿಯೊಂದಿಗೆ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ವಿವಿಧ ಸಚಿವರು ಮತ್ತು ಇಲಾಖೆಗಳು ಮತ್ತು ಎಲ್ಲಾ ಸಂಬಂಧಿತ ಪಾಲುದಾರರ ಸಮನ್ವಯ ಪ್ರಯತ್ನಗಳ ಮೇಲೆ ವೆಬಿನಾರ್‌ಗಳು ಗಮನ  ಕೇಂದ್ರೀಕರಿಸುತ್ತವೆ. ಇದರಿಂದಾಗಿ ಕಾರ್ಯಕ್ರಮಗಳು ಮತ್ತು ಯೋಜನೆಗಳ ಅನುಷ್ಠಾನವು ಮುನ್ನೆಲೆಗೆ ಬರುವ ಜತೆಗೆ, ಉದ್ದೇಶಿತ ಫಲಿತಾಂಶಗಳ ಸಮಯೋಚಿತ ಸಾಧನೆಯೊಂದಿಗೆ ಸುಗಮವಾಗಿರುತ್ತದೆ. ವ್ಯಾಪಕ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ವೆಬಿನಾರ್ ಗಳನ್ನು ವರ್ಚುವಲ್ ರೂಪದಲ್ಲಿ ನಡೆಸಲಾಗುತ್ತದೆ. ಸಂಬಂಧಪಟ್ಟ ಕೇಂದ್ರ ಸಚಿವರು, ಸರ್ಕಾರಿ ಇಲಾಖೆ, ನಿಯಂತ್ರಣ ಸಂಸ್ಥೆಗಳು, ಶಿಕ್ಷಣ, ವ್ಯಾಪಾರ ಮತ್ತು ಕೈಗಾರಿಕಾ ಸಂಘಗಳ ಪಾಲುದಾರರರು ಈ ವೆಬಿನಾರ್ ಗಳಲ್ಲಿ ಭಾಗವಹಿಸಲಿದ್ದಾರೆ.

 

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
Bhupender Yadav writes: What the Sengol represents

Media Coverage

Bhupender Yadav writes: What the Sengol represents
...

Nm on the go

Always be the first to hear from the PM. Get the App Now!
...
PM condoles loss of lives due to train accident in Odisha
June 02, 2023
ಶೇರ್
 
Comments

The Prime Minister, Shri Narendra Modi has expressed deep grief over the loss of lives due to train accident in Odisha.

In a tweet, the Prime Minister said;

"Distressed by the train accident in Odisha. In this hour of grief, my thoughts are with the bereaved families. May the injured recover soon. Spoke to Railway Minister @AshwiniVaishnaw and took stock of the situation. Rescue ops are underway at the site of the mishap and all possible assistance is being given to those affected."