ಶೇರ್
 
Comments
ಶಿಕ್ಷಣ ಕ್ಷೇತ್ರದಲ್ಲಿ ಹಲವು ಪ್ರಮುಖ ಉಪಕ್ರಮಗಳಿಗೆ ಪ್ರಧಾನಿಗಳಿಂದ ಚಾಲನೆ
ʻಆಜಾ಼ದಿ ಕಾ ಅಮೃತ್ ಮಹೋತ್ಸವʼದ ಅಡಿಯಲ್ಲಿ ಪ್ರಾರಂಭಿಸಲಾದ ಹೊಸ ಉಪಕ್ರಮಗಳು ಶೈಕ್ಷಣಿಕ ಕ್ರಾಂತಿಯನ್ನು ತರುತ್ತವೆ ಮತ್ತು ಭಾರತೀಯ ಶಿಕ್ಷಣ ವ್ಯವಸ್ಥೆಗೆ ಜಾಗತಿಕ ನಕ್ಷೆಯಲ್ಲಿ ಸ್ಥಾನ ಕಲ್ಪಿಸುತ್ತವೆ: ಪ್ರಧಾನಿ
ನಾವು ಪರಿವರ್ತನೆಯ ಅವಧಿಯ ಮಧ್ಯದಲ್ಲಿದ್ದೇವೆ; ಅದೃಷ್ಟವಶಾತ್, ನಾವು ಆಧುನಿಕ ಮತ್ತು ಭವಿಷ್ಯದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹೊಂದಿದ್ದೇವೆ: ಪ್ರಧಾನಿ
ಸಾರ್ವಜನಿಕ ಪಾಲ್ಗೊಳ್ಳುವಿಕೆಯು ಮತ್ತೆ ಭಾರತದ ರಾಷ್ಟ್ರೀಯ ಗುಣವಾಗುತ್ತಿದೆ: ಪ್ರಧಾನಿ
ಪ್ರಧಾನಮಂತ್ರಿಯವರ ಮನವಿಯ ಮೇರೆಗೆ ಪ್ರತಿಯೊಬ್ಬ ಒಲಿಂಪಿಯನ್ ಮತ್ತು ಪ್ಯಾರಾಲಿಂಪಿಯನ್ 75 ಶಾಲೆಗಳಿಗೆ ಭೇಟಿ ನೀಡಲಿದ್ದಾರೆ
ಶಿಕ್ಷಣ ಕ್ಷೇತ್ರದಲ್ಲಿನ ಹೊಸ ಪರಿವರ್ತನೆಗಳು ಕೇವಲ ನೀತಿ ಆಧಾರಿತಮಾತ್ರವಲ್ಲ, ಅವು ಪಾಲ್ಗೊಳ್ಳುವಿಕೆ ಆಧಾರಿತವಾಗಿವೆ: ಪ್ರಧಾನಿ
'ವಿದ್ಯಾಂಜಲಿ 2.0' ಎಂಬುದು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' ಜೊತೆಗೆ ದೇಶದ 'ಸಬ್ ಕಾ ಪ್ರಯಾಸ್‌' ಸಂಕಲ್ಪಕ್ಕೆ ವೇದಿಕೆ ಇದ್ದಂತೆ: ಪ್ರಧಾನಿ
ಎನ್-ಡಿಯರ್‌ (N-DEAR) ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ನಡುವೆ ಮಹಾ ಸಂಪರ್ಕ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ: ಪ್ರಧಾನಿ
ʻನಿಷ್ಠಾ 3.0ʼ ಸಾಮರ್ಥ್ಯ ಆಧಾರಿತ ಬೋಧನೆ, ಕಲಾ ಸಂಯೋಜನೆ ಮತ್ತು ಸೃಜನಶೀಲ ಹಾ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನಡೆದ ʻಶಿಕ್ಷಕ್ ಪರ್ವ್ʼ ಉದ್ಘಾಟನಾ ಸಮಾವೇಶವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಭಾರತೀಯ ಸಂಜ್ಞೆ ಭಾಷಾ ನಿಘಂಟು (ಶ್ರವಣ ದೋಷವುಳ್ಳವರಿಗೆ ಸಾರ್ವತ್ರಿಕ ಕಲಿಕಾ ವಿನ್ಯಾಸಕ್ಕೆ ಅನುಗುಣವಾಗಿ ಆಡಿಯೋ ಮತ್ತು ಪಠ್ಯ ಸಂಯೋಜಿತ ಸಂಜ್ಞೆ ಭಾಷೆಯ ವೀಡಿಯೊ), ಟಾಕಿಂಗ್ ಬುಕ್ಸ್ (ದೃಷ್ಟಿಹೀನರಿಗೆ ಆಡಿಯೋಬುಕ್‌ಗಳು) ಅನ್ನು ಪ್ರಧಾನಿ ಬಿಡುಗಡೆ ಮಾಡಿದರು. ಇದೇ ವೇಳೆ ʻಸಿಬಿಎಸ್‌ಇʼಯ ಶಾಲಾ ಗುಣಮಟ್ಟ ಭರವಸೆ ಮತ್ತು ಮೌಲ್ಯಮಾಪನ ಚೌಕಟ್ಟು, ʻನಿಪುಣ್‌ ಭಾರತ್ʼ ಮತ್ತು ʻವಿದ್ಯಾಂಜಲಿʼ ಪೋರ್ಟಲ್‌ಗಾಗಿ ʻನಿಷ್ಠಾʼ ಶಿಕ್ಷಕರ ತರಬೇತಿ ಕಾರ್ಯಕ್ರಮಕ್ಕೂ (ಶಾಲಾ ಅಭಿವೃದ್ಧಿಗಾಗಿ ಶಿಕ್ಷಣ ಸ್ವಯಂಸೇವಕರು / ದಾನಿಗಳು / ಸಿಎಸ್ಆರ್ ಕೊಡುಗೆದಾರರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ) ಚಾಲನೆ ನೀಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಷ್ಟ್ರೀಯ ಪ್ರಶಸ್ತಿ ಪಡೆದ ಶಿಕ್ಷಕರನ್ನು ಅಭಿನಂದಿಸಿದರು. ಕಷ್ಟದ ಸಮಯದಲ್ಲಿ ದೇಶದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶಿಕ್ಷಕರು ನೀಡಿದ ಕೊಡುಗೆಯನ್ನು ಅವರು ಶ್ಲಾಘಿಸಿದರು. ಇಂದು ʻಶಿಕ್ಷಕ ಪರ್ವʼದ ಸಂದರ್ಭದಲ್ಲಿ ಅನೇಕ ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗಿದೆ.  ದೇಶವು ಪ್ರಸ್ತುತ ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಸ್ವಾತಂತ್ರ್ಯ ಪಡೆದ 100 ವರ್ಷಗಳ ನಂತರ ಭಾರತ ಹೇಗಿರಬೇಕು ಎಂಬ ಮುನ್ನೋಟದೊಂದಿಗೆ ಹೊಸ ನಿರ್ಣಯಗಳನ್ನು ಕೈಗೊಳ್ಳಬೇಕಾದ ಹಿನ್ನೆಲೆಯಲ್ಲಿ ಈ ಹೊಸ ಯೋಜನೆಗಳೂ ಸಹ ಮುಖ್ಯವಾಗಿವೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ರೋಗದ ಸವಾಲನ್ನು ಎದುರಿಸಲು ಬೆಂಬಲಿಸಿದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇಡೀ ಶೈಕ್ಷಣಿಕ ಸಮುದಾಯವನ್ನು ಶ್ಲಾಘಿಸಿದ ಪ್ರಧಾನಿ, ಆ ಕಠಿಣ ಸಮಯವನ್ನು ಎದುರಿಸಲು ಅಭಿವೃದ್ಧಿಪಡಿಸಿದ ಸಾಮರ್ಥ್ಯಗಳನ್ನು ಮುಂದಕ್ಕೆ ಕೊಂಡೊಯ್ಯುವಂತೆ ಮನವಿ ಮಾಡಿದರು. "ನಾವು ಪರಿವರ್ತನೆಯ ಅವಧಿಯ ಮಧ್ಯದಲ್ಲಿದ್ದೇವೆ. ಅದೃಷ್ಟವಶಾತ್, ನಾವು ಆಧುನಿಕ ಮತ್ತು ಭವಿಷ್ಯದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಹ ಹೊಂದಿದ್ದೇವೆ," ಎಂದು ಅವರು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಅದರ ಅನುಷ್ಠಾನದ ಪ್ರತಿಯೊಂದು ಹಂತದಲ್ಲೂ ಶಿಕ್ಷಣ ತಜ್ಞರು, ತಜ್ಞರು, ಶಿಕ್ಷಕರ ಕೊಡುಗೆಯನ್ನು ಪ್ರಧಾನಿ ಶ್ಲಾಘಿಸಿದರು. ಈ ಪಾಲ್ಗೊಳ್ಳುವಿಕೆಯನ್ನು ಹೊಸ ಹಂತಕ್ಕೆ ಕೊಂಡೊಯ್ಯಲು ಮತ್ತು ಅದರಲ್ಲಿ ಸಮಾಜವನ್ನು ತೊಡಗಿಸಿಕೊಳ್ಳಲು ಶ್ರಮಿಸಬೇಕು ಎಂದು ಅವರು ಒತ್ತಾಯಿಸಿದರು. ಶಿಕ್ಷಣ ಕ್ಷೇತ್ರದಲ್ಲಿನ ಈ ಪರಿವರ್ತನೆಗಳು ಕೇವಲ ನೀತಿ ಆಧಾರಿತವಲ್ಲ,  ಪಾಲ್ಗೊಳ್ಳುವಿಕೆ ಆಧಾರಿತವಾಗಿವೆ ಎಂದು ಅವರು ಹೇಳಿದರು.

ದೇಶದ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ, ʻಸಬ್ ಕಾ ವಿಶ್ವಾಸ್' ಜೊತೆಗೆ 'ಸಬ್ ಕಾ ಪ್ರಯಾ' ಸಂಕಲ್ಪಕ್ಕೆ 'ವಿದ್ಯಾಂಜಲಿ 2.0' ಒಂದು ವೇದಿಕೆ ಇದ್ದಂತೆ ಎಂದು ಪ್ರಧಾನಿ ಬಣ್ಣಿಸಿದರು. ಈ ಸಮಾಜದಲ್ಲಿ, ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ನಮ್ಮ ಖಾಸಗಿ ವಲಯವು ಮುಂದೆ ಬರಬೇಕು ಮತ್ತು ಕೊಡುಗೆ ನೀಡಬೇಕು ಎಂದು ಪ್ರಧಾನಿ ಕರೆ ನೀಡಿದರು.

ಕಳೆದ ಕೆಲವು ವರ್ಷಗಳಲ್ಲಿ ಸಾರ್ವಜನಿಕ ಪಾಲ್ಗೊಳ್ಳುವಿಕೆಯು ಮತ್ತೆ ಭಾರತದ ರಾಷ್ಟ್ರೀಯ ಗುಣವಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಕಳೆದ 6-7 ವರ್ಷಗಳಲ್ಲಿ, ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಶಕ್ತಿಯಿಂದಾಗಿ, ಭಾರತದಲ್ಲಿ ಅನೇಕ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ. ಇದಕ್ಕೆ ಮುಂಚಿನ ಅವಧಿಯಲ್ಲಿ ಆ ಕೆಲಸಗಳನ್ನು ಊಹಿಸುವುದೂ ಕಷ್ಟಕರವಾಗಿತ್ತು. ಸಮಾಜವು ಒಟ್ಟಿಗೆ ನಿಂತು ಏನನ್ನಾದರೂ ಮಾಡಿದಾಗ, ಅಪೇಕ್ಷಿತ ಫಲಗಳು ನಿಶ್ಚಿತವಾಗಿ ದೊರೆಯುತ್ತವೆ ಎಂದು ಅವರು ಹೇಳಿದರು. ಪ್ರತಿಯೊಬ್ಬರೂ ಅವರು ಜೀವನದ ಯಾವುದೇ ಹಂತದಲ್ಲಿದ್ದರೂ ದೇಶದ ಯುವಜನರ ಭವಿಷ್ಯವನ್ನು ರೂಪಿಸುವಲ್ಲಿ ಪಾತ್ರವನ್ನು ಹೊಂದಿದ್ದಾರೆ ಎಂದು ಪ್ರಧಾನಿ ಹೇಳಿದರು. ಇತ್ತೀಚೆಗೆ ಮುಕ್ತಾಯಗೊಂಡ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡಾಪಟುಗಳ ಅದ್ಭುತ ಪ್ರದರ್ಶನವನ್ನು ಅವರು ಸ್ಮರಿಸಿದರು. ʻಆಜಾದಿ ಕಾ ಅಮೃತ ಮಹೋತ್ಸವʼದ ಸಂದರ್ಭದಲ್ಲಿ ಪ್ರತಿಯೊಬ್ಬ ಆಟಗಾರ ಕನಿಷ್ಠ 75 ಶಾಲೆಗಳಿಗೆ ಭೇಟಿ ನೀಡಬೇಕೆಂದು ಮಾಡಲಾದ ಮನವಿಗೆ ಕ್ರೀಡಾಪಟುಗಳು ಒಪ್ಪಿಕೊಂಡಿದ್ದಾರೆ ಎಂದು ಪ್ರಧಾನಿ ಸಂತೋಷ ವ್ಯಕ್ತಪಡಿಸಿದರು. ಇದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ದಾಯಕವಾಗಲಿದೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿಯಲು ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಯಾವುದೇ ದೇಶದ ಪ್ರಗತಿಗಾಗಿ, ಶಿಕ್ಷಣದಲ್ಲಿ ಸರ್ವರ ಒಳಗೊಳ್ಳುವಿಕೆ ಮಾತ್ರವಲ್ಲ, ಸಮಾನತೆಯೂ ಇರಬೇಕು ಎಂದು ಪ್ರಧಾನಿ ಹೇಳಿದರು. ಶಿಕ್ಷಣ ಮತ್ತು ಅದರ ಆಧುನೀಕರಣದಲ್ಲಿರುವ ಅಸಮಾನತೆ ನಿರ್ಮೂಲನೆ ಮಾಡುವಲ್ಲಿ ʻರಾಷ್ಟ್ರೀಯ ಡಿಜಿಟಲ್ ನೀಲನಕ್ಷೆʼ ಅಂದರೆ ʻಎನ್-ಡಿಯರ್‌ʼ (N-DEAR) ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ʻಯುಪಿಐʼ ವ್ಯವಸ್ಥೆಯು ಬ್ಯಾಂಕಿಂಗ್ ವಲಯದಲ್ಲಿ ಕ್ರಾಂತಿಗೆ ಕಾರಣವಾದ ರೀತಿಯಲ್ಲೇ ʻಎನ್-ಡಿಯರ್ʼ ವಿವಿಧ ಶೈಕ್ಷಣಿಕ ಚಟುವಟಿಕೆಗಳ ನಡುವೆ 'ಮಹಾ ಸಂಪರ್ಕ ವೇದಿಕೆʼಯಾಗಿ ಕಾರ್ಯನಿರ್ವಹಿಸುತ್ತದೆ.  ದೇಶವು ʻಟಾಕಿಂಗ್ ಬುಕ್ಸ್ʼ ಮತ್ತು ʻಆಡಿಯೋಬುಕ್‌ʼಗಳಂತಹ ತಂತ್ರಜ್ಞಾನವನ್ನು ಶಿಕ್ಷಣದ ಭಾಗವನ್ನಾಗಿ ಮಾಡುತ್ತಿದೆ ಎಂದು ಅವರು ಹೇಳಿದರು

ಪಠ್ಯಕ್ರಮ, ಬೋಧನಾ ಶಾಸ್ತ್ರ, ಮೌಲ್ಯಮಾಪನ, ಮೂಲಸೌಕರ್ಯ, ಸಮಗ್ರ ಅಭ್ಯಾಸಗಳು ಮತ್ತು ಆಡಳಿತ ಪ್ರಕ್ರಿಯೆಯಂತಹ ಆಯಾಮಗಳಿಗೆ ಸಾಮಾನ್ಯ ವೈಜ್ಞಾನಿಕ ಚೌಕಟ್ಟಿನ ಅನುಪಸ್ಥಿತಿಯ ಕೊರತೆಯನ್ನು ಇಂದು ಕಾರ್ಯರೂಪಕ್ಕೆ ತರಲಾದ ʻಶಾಲಾ ಗುಣಮಟ್ಟ ಮೌಲ್ಯಮಾಪನ ಮತ್ತು ಭರವಸೆ ಚೌಕಟ್ಟುʼ(ಎಸ್.ಕ್ಯೂ.ಎ.ಎ.ಎಫ್) ಪರಿಹರಿಸುತ್ತದೆ. ಈ ಅಸಮಾನತೆಯನ್ನು ನಿವಾರಿಸಲು ʻಎಸ್ .ಕ್ಯೂ.ಎ.ಎ.ಎಫ್ʼ ಸಹಾಯ ಮಾಡುತ್ತದೆ ಎಂದರು.

ವೇಗವಾಗಿ ಬದಲಾಗುತ್ತಿರುವ ಈ ಯುಗದಲ್ಲಿ, ನಮ್ಮ ಶಿಕ್ಷಕರು ಹೊಸ ವ್ಯವಸ್ಥೆಗಳು ಮತ್ತು ತಾಂತ್ರಿಕಗತೆಗಳ ಬಗ್ಗೆ ತ್ವರಿತವಾಗಿ ಕಲಿಯಬೇಕಾಗಿದೆ ಎಂದು ಅವರು ಕರೆ ನೀಡಿದರು. ಈ ಬದಲಾವಣೆಗಳಿಗೆ ದೇಶವು ತನ್ನ ಶಿಕ್ಷಕರನ್ನು 'ನಿಷ್ಠಾ' ತರಬೇತಿ ಕಾರ್ಯಕ್ರಮಗಳ ಮೂಲಕ ಸಿದ್ಧಪಡಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಭಾರತದ ಶಿಕ್ಷಕರು ಯಾವುದೇ ಜಾಗತಿಕ ಮಾನದಂಡವನ್ನು ಪೂರೈಸುವುದಷ್ಟೇ ಅಲ್ಲದೆ, ವಿಶೇಷ ಬಂಡವಾಳವೊಂದನ್ನು ಸಹ ಅವರು ಹೊಂದಿದ್ದಾರೆ ಎಂದು ಪ್ರಧಾನಿ ಹೇಳಿದರು. ಈ ವಿಶೇಷ ಬಂಡವಾಳವೆಂದರೆ, ಈ ವಿಶೇಷ ಶಕ್ತಿಯೆಂದರೆ ಅದು ಅವರೊಳಗಿನ ಭಾರತೀಯ ಸಂಸ್ಕೃತಿ. ನಮ್ಮ ಶಿಕ್ಷಕರು ತಮ್ಮ ಕೆಲಸವನ್ನು ಕೇವಲ ವೃತ್ತಿ ಎಂದು ಪರಿಗಣಿಸುವುದಿಲ್ಲ, ಬೋಧನೆಯನ್ನು ಅವರು ಮಾನವ ಸಹಾನುಭೂತಿ, ಪವಿತ್ರ ನೈತಿಕ ಕರ್ತವ್ಯವಾಗಿ ಗುರುತಿಸುತ್ತಾರೆ ಎಂದು ಪ್ರಧಾನಿ ಹೇಳಿದರು. ಆದ್ದರಿಂದಲೇ ನಾವು ಶಿಕ್ಷಕರು ಮತ್ತು ಮಕ್ಕಳ ನಡುವೆ ಕೇವಲ ವೃತ್ತಿಪರ ಸಂಬಂಧವನ್ನು ಹೊಂದಿಲ್ಲ, ಬದಲಿಗೆ ಕೌಟುಂಬಿಕ ಸಂಬಂಧವನ್ನು ಹೊಂದಿದ್ದೇವೆ. ಮತ್ತು ಈ ಸಂಬಂಧ ಇಡೀ ಜೀವನದುದ್ದಕ್ಕೂ ವ್ಯಾಪಿಸಿರುತ್ತದೆ ಎಂದು ಪ್ರಧಾನಿ ಹೇಳಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
Forex reserves surge by $58.38 bn in first half of FY22: RBI report

Media Coverage

Forex reserves surge by $58.38 bn in first half of FY22: RBI report
...

Nm on the go

Always be the first to hear from the PM. Get the App Now!
...
PM to visit Kedarnath on 5th November and inaugurate Shri Adi Shankaracharya Samadhi
October 28, 2021
ಶೇರ್
 
Comments

Prime Minister Shri Narendra Modi will visit kedarnath, Uttarakhand on 5th November.

Prime Minister will offer prayers at the Kedarnath Temple. He will thereafter inaugurate Shri Adi Shankaracharya Samadhi and unveil the statue of Shri Adi Shankaracharya. The Samadhi has been reconstructed after the destruction in the 2013 floods. The entire reconstruction work has been undertaken under the guidance of the Prime Minister, who has constantly reviewed and monitored the progress of the project.

Prime Minister will review and inspect the executed and ongoing works along the Saraswati Aasthapath.

Prime Minister will also address a public rally. He will inaugurate key infrastructure projects which have been completed, including Saraswati Retaining Wall Aasthapath and Ghats, Mandakini Retaining Wall Aasthapath, Tirth Purohit Houses and Garud Chatti bridge on river Mandakini. The projects have been completed at a cost of over Rs. 130 crore. He will also lay the foundation stone for multiple projects worth over Rs 180 crore, including the Redevelopment of Sangam Ghat, First Aid and Tourist Facilitation Centre, Admin Office and Hospital, two Guest Houses, Police Station, Command & Control Centre, Mandakini Aasthapath Queue Management and Rainshelter and Saraswati Civic Amenity Building.