ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ ನಲ್ಲಿ ನಡೆದ ಜಿ-20 ನಾಯಕರ ಶೃಂಗಸಭೆಯ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಪಾನ್ ಪ್ರಧಾನಮಂತ್ರಿ ಘನತೆವೆತ್ತ ಸಾನೇ ತಕೈಚಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಅಕ್ಟೋಬರ್ 29, 2025 ರಂದು ದೂರವಾಣಿ ಕರೆ ಮಾಡಿದ ನಂತರ ಪ್ರಧಾನಮಂತ್ರಿ ತಕೈಚಿ ಅವರೊಂದಿಗಿನ ಪ್ರಧಾನಮಂತ್ರಿ ಅವರ ಮೊದಲ ಮುಖಾಮುಖಿ ಸಭೆ ಇದಾಗಿದೆ.

ನಾಗರಿಕ ಸಂಪರ್ಕ, ಹಂಚಿಕೆಯ ಮೌಲ್ಯಗಳು, ಪರಸ್ಪರ ಸೌಹಾರ್ದತೆ ಮತ್ತು ಮುಕ್ತ ಇಂಡೋ-ಪೆಸಿಫಿಕ್‌ಗೆ ಬದ್ಧತೆಯನ್ನು ಆಧರಿಸಿದ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯ ಮಹತ್ವವನ್ನು ಉಭಯ ನಾಯಕರು ಪುನರುಚ್ಚರಿಸಿದರು. ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಗಾಗಿ ಭಾರತ-ಜಪಾನ್ ಪಾಲುದಾರಿಕೆಯನ್ನು ಗಾಢವಾಗಿಸುವುದಕ್ಕೆ ನಾಯಕರು ತಮ್ಮ ಬದ್ಧತೆಯ ಬಗ್ಗೆ ತಿಳಿಸಿದರು.

 

15ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ದ್ವಿಪಕ್ಷೀಯ ಸಂಬಂಧಗಳಲ್ಲಿ ಕಂಡುಬಂದ ಸ್ಥಿರ ಪ್ರಗತಿಯನ್ನು ನಾಯಕರು ಒಪ್ಪಿಕೊಂಡರು ಮತ್ತು ರಕ್ಷಣೆ, ಭದ್ರತೆ, ವ್ಯಾಪಾರ ಮತ್ತು ಹೂಡಿಕೆ, ಎಸ್.ಎಂ.ಎ ಗಳು, ಕೃತಕ ಬುದ್ಧಿಮತ್ತೆ, ನಿರ್ಣಾಯಕ ಖನಿಜಗಳು, ಅರೆವಾಹಕಗಳು, ಮೂಲಸೌಕರ್ಯ ಅಭಿವೃದ್ಧಿ, ತಂತ್ರಜ್ಞಾನ ಮತ್ತು ನಾವೀನ್ಯತೆ ಮತ್ತು ಜನರಿಂದ ಜನರ ವಿನಿಮಯದಂತಹ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಒಪ್ಪಿಕೊಂಡ ಫಲಿತಾಂಶಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಕರೆ ನೀಡಿದರು. ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಭಾರತ ಮತ್ತು ಜಪಾನ್ ನಡುವಿನ ಸಹಯೋಗದ ಅವಕಾಶಗಳ ಬಗ್ಗೆ ಚರ್ಚಿಸಿದರು ಮತ್ತು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಫೆಬ್ರವರಿ 2026ರಲ್ಲಿ ಭಾರತ ಆಯೋಜಿಸಲಿರುವ AI ಶೃಂಗಸಭೆಗೆ ಪ್ರಧಾನಮಂತ್ರಿ ತಕೈಚಿ ಬೆಂಬಲವನ್ನು ವ್ಯಕ್ತಪಡಿಸಿದರು.

ಭಾರತ ಮತ್ತು ಜಪಾನ್ ಮೌಲ್ಯಯುತ ಪಾಲುದಾರರು ಮತ್ತು ವಿಶ್ವಾಸಾರ್ಹ ಸ್ನೇಹಿತರು ಎಂದು ಇಬ್ಬರೂ ನಾಯಕರು ಪುನರುಚ್ಚರಿಸಿದರು. ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಗೆ ಎರಡೂ ದೇಶಗಳ ನಡುವಿನ ಬಲವಾದ ಸಂಬಂಧಗಳು ಅತ್ಯಗತ್ಯ.

ನಾಯಕರು ಸಂಪರ್ಕದಲ್ಲಿರಲು ಮತ್ತು ಸಾಧ್ಯವಾದಷ್ಟು ಬೇಗ ಮತ್ತೆ ಭೇಟಿಯಾಗಿ ಮಾತುಕತೆ ನಡೆಸಲು ಒಪ್ಪಿಕೊಂಡರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Mapping the subsurface: How ICAR’s ‘Soil Intelligence’ is reshaping India’s mega infrastructure boom

Media Coverage

Mapping the subsurface: How ICAR’s ‘Soil Intelligence’ is reshaping India’s mega infrastructure boom
NM on the go

Nm on the go

Always be the first to hear from the PM. Get the App Now!
...
ಆಚಾರ್ಯ ವಿನೋಬಾ ಭಾವೆ ಅವರ ಜಯಂತಿಯಂದು ಪ್ರಧಾನಮಂತ್ರಿ ಅವರಿಂದ ಗೌರವ ನಮನ
September 11, 2026

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಚಾರ್ಯ ವಿನೋಬಾ ಭಾವೆ ಅವರ ಜಯಂತಿ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಆಚಾರ್ಯ ವಿನೋಬಾ ಭಾವೆ ಅವರ ಸ್ಫೂರ್ತಿದಾಯಕ 'ಜೈ ಜಗತ್' ಕರೆ ಎಲ್ಲ ಎಲ್ಲೆಗಳನ್ನು ಮೀರಿ, ಮಾನವೀಯತೆಗೆ ಎಲ್ಲಕ್ಕಿಂತ ಮಿಗಿಲಾದ ಸ್ಥಾನ ನೀಡಿತು ಎಂದು ಪ್ರಧಾನಮಂತ್ರಿಗಳು ಉದ್ಗರಿಸಿದ್ದಾರೆ.

ಆಚಾರ್ಯ ವಿನೋಬಾ ಭಾವೆ ಅವರು ಎಲ್ಲರ ಕಲ್ಯಾಣ ಮತ್ತು ಸಬಲೀಕರಣಕ್ಕಾಗಿ ವಿವಿಧ ಬಗೆಯ ಪ್ರಯತ್ನ ಮಾಡಿದ್ದರು ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಸಮಾನತೆ, ಘನತೆ ಮತ್ತು ಸೇವೆಯ ಬಗೆಗಿನ ಅವರ ಅಚಲ ನಂಬಿಕೆಯು ಅತ್ಯಂತ ತಳಮಟ್ಟದ ಹಾಗೂ ಅವಕಾಶ ವಂಚಿತ ವರ್ಗಗಳಿಗೆ ಬಲ ನೀಡಿತು ಎಂದು ಪ್ರಧಾನಮಂತ್ರಿಗಳು ಹೇಳಿದ್ದಾರೆ.

ಶ್ರೀ ಮೋದಿ ಅವರ ಎಕ್ಸ್ ಪೋಸ್ಟ್ ಹೀಗಿದೆ:

ಆಚಾರ್ಯ ವಿನೋಬಾ ಭಾವೆ ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು.

'ಜೈ ಜಗತ್' ಎಂಬ ಅವರ ಸ್ಫೂರ್ತಿದಾಯಕ ಕರೆಯು ಪ್ರತಿ ಗಡಿಯನ್ನೂ ಮೀರಿ ಮಾನವೀಯತೆಗೆ ಎಲ್ಲಕ್ಕಿಂತ ಮಿಗಿಲಾದ ಸ್ಥಾನವನ್ನು ನೀಡಿತು.

ತಮ್ಮ ವಿವಿಧ ಪ್ರಯತ್ನಗಳ ಮೂಲಕ ಅವರು ಎಲ್ಲರ ಕಲ್ಯಾಣ ಮತ್ತು ಸಬಲೀಕರಣಕ್ಕಾಗಿ ಶ್ರಮಿಸಿದರು.

ಸಮಾನತೆ, ಘನತೆ ಮತ್ತು ಸೇವೆಯ ಮೇಲಿನ ಅವರ ಅಚಲ ನಂಬಿಕೆಯು ಅತ್ಯಂತ ದುರ್ಬಲ ವರ್ಗದವರಲ್ಲಿ ಬಲ ತುಂಬಿತು.”